Home
ಸುದ್ದಿಜಾಲ

ICICI ಬ್ಯಾಂಕ್ ಮಾನ್ಸೂನ್ ಆಫರ್‌: ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಮೇಲೆ ದೊಡ್ಡ ಡಿಸ್ಕೌಂಟ್‌!

ಸ್ವಾತಂತ್ರ್ಯ ದಿನಾಚರಣೆ ಸನಿಹದಲ್ಲಿದ್ದು, ಈ ನಡುವೆ ಪ್ರಮುಖ ಇ-ಕಾಮರ್ಸ್‌ ಸೈಟ್‌ಗಳು ದೊಡ್ಡ ಮಟ್ಟದಲ್ಲಿ ವಿಶೇಷ ಸೇಲ್‌ ಆಯೋಜನೆ ಮಾಡಿವೆ. ಈ ಮೂಲಕ ಗ್ರಾಹಕರು ತಮ್ಮ ಇಷ್ಟದ ಸ್ಮಾರ್ಟ್‌ ಡಿವೈಸ್‌ಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಈ ನಡುವೆ ICICI ಬ್ಯಾಂಕ್ ಮಾನ್ಸೂನ್ ಕೊಡುಗೆ ಸೇಲ್‌ ಪ್ರಾರಂಭ ಮಾಡಿದೆ.

ಹೌದು, ICICI ಬ್ಯಾಂಕ್ ಕಾರ್ಡ್‌ ಹೊಂದಿರುವವರು ಈ ಸೇಲ್‌ನಲ್ಲಿ ಭರ್ಜರಿ ಹಣ ಉಳಿತಾಯ ಮಾಡಬಹುದಾಗಿದೆ. ಅಂದರೆ ICICI ಬ್ಯಾಂಕ್ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಎಲೆಕ್ಟ್ರಾನಿಕ್ಸ್ ಡಿವೈಸ್‌ ಖರೀದಿ ಮಾಡಿದರೆ 26,000ರೂ.ವರೆಗೂ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದೆ. ಅಷ್ಟು ಮಾತ್ರವಲ್ಲದೆ ಇತರೆ ಟ್ರಾವೆಲ್‌ ಬುಕಿಂಗ್‌ನಲ್ಲೂ ಸಹ 20,000ರೂ.ಗಳ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಡಿವೈಸ್‌ಗಳಿಗೆ ಏನೆಲ್ಲಾ ಆಫರ್‌ ಘೋಷಣೆ ಮಾಡಲಾಗಿದೆ ತಿಳಿಯೋಣ.

ICICI ಬ್ಯಾಂಕ್ ಮಾನ್ಸೂನ್ ಆಫರ್‌: ಫೋನ್‌, ಸ್ಮಾರ್ಟ್‌ಟಿವಿ ಮೇಲೆ ಡಿಸ್ಕೌಂಟ್‌!

ICICI ಬ್ಯಾಂಕ್ ಕಾರ್ಡ್‌ ಹೊಂದಿರುವವರು ಎಲೆಕ್ಟ್ರಾನಿಕ್ಸ್, ಟ್ರಾವೆಲ್, ಆನ್‌ಲೈನ್ ಶಾಪಿಂಗ್, ಡೈನಿಂಗ್ ಮತ್ತು ಫುಡ್ ಆರ್ಡರ್, ಆರೋಗ್ಯ ಮತ್ತು ಸೌಂದರ್ಯ, ಉಡುಗೊರೆ ಸೇರಿದಂತೆ ಇನ್ನೂ ಅನೇಕ ವಿಭಾಗಗಳಲ್ಲಿ 'ಮಾನ್ಸೂನ್ ಬೊನಾಂಜಾ' ಮೂಲಕ ಆಕರ್ಷಕ ರಿಯಾಯಿತಿ ಪಡೆದುಕೊಳ್ಳಬಹುದು. ಅದರಲ್ಲೂ ಈ ವಿಭಾಗದಲ್ಲಿ 50 % ವರೆಗಿನ ಕ್ಯಾಶ್‌ಬ್ಯಾಕ್ ಲಭ್ಯ ಆಗಲಿದೆ ಎಂದರೆ ನೀವು ನಂಬಲೇ ಬೇಕು.

ಎಲ್ಲೆಲ್ಲಿ ಈ ಆಫರ್‌ ಪಡೆಯಬಹುದು?: ICICI ಬ್ಯಾಂಕ್ ಕಾರ್ಡ್‌ ಬಳಕೆ ಮಾಡಿಕೊಂಡು ಗ್ರಾಹಕರು ಫ್ಲಿಪ್‌ಕಾರ್ಟ್, ಆಪಲ್, ಡೆಲ್, ಸ್ಯಾಮ್‌ಸಂಗ್, ಎಲ್‌ಜಿ, ಮೇಕ್‌ಮೈಟ್ರಿಪ್, ಒನ್‌ಪ್ಲಸ್, ಕತಾರ್ ಏರ್‌ವೇಸ್, ಟಾಟಾ ಕ್ಲಿಕ್, ಯಾತ್ರಾ ಸೇರಿದಂತೆ ಇನ್ನೂ ಹೆಚ್ಚಿನ ಬ್ರಾಂಡ್‌ಗಳಿಂದ ವಿಶೇಷ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಭಾರೀ ಹಣ ಉಳಿತಾಯ ಮಾಡಬಹುದಾಗಿದೆ.

ಎಲ್ಲೆಲ್ಲಿ ಎಷ್ಟು ಡಿಸ್ಕೌಂಟ್‌?: ಇನ್ನು ICICI ಬ್ಯಾಂಕ್ ಕಾರ್ಡ್‌ ಬಳಕೆ ಮಾಡಿಕೊಂಡು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್‌ನಲ್ಲಿ ಫ್ಲಾಟ್ 10% ರಿಯಾಯಿತಿ, ಕ್ರೋಮಾದಲ್ಲಿ 10% ರಿಯಾಯಿತಿ, ಯಾತ್ರಾದಲ್ಲಿ 6,017ರೂ.ವರೆಗೂ ರಿಯಾಯಿತಿ, ಅರ್ಬನ್ ಲ್ಯಾಡರ್ ಮೇಲೆ 7.5% ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ ಎಂದು ICICI ಮಾಹಿತಿ ನೀಡಿದೆ.

ಯಾವೆಲ್ಲಾ ಡಿವೈಸ್‌ಗಳಿಗೆ ಎಷ್ಟು ಆಫರ್‌?: ಡಿವೈಸ್‌ಗಳ ವಿಚಾರಕ್ಕೆ ಬರುವುದಾದರೆ ಆಯ್ದ ಆಪಲ್‌ ಮರುಮಾರಾಟಗಾರರ ಸ್ಟೋರ್‌ನಲ್ಲಿ ತಿಂಗಳಿಗೆ 2,934ರೂ.ಗಳ ಇಎಮ್‌ಐ ಪಾವತಿ ಮಾಡುವ ಮೂಲಕ ಮ್ಯಾಕ್‌ಬುಕ್ ಏರ್ ಅನ್ನು ಖರೀದಿ ಮಾಡಬಹುದು. ಜೊತೆಗೆ ಆಯ್ದ ಹೆಚ್‌ಪಿ ಲ್ಯಾಪ್‌ಟಾಪ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ 10,000ರೂ.ವರೆಗೆ ಕ್ಯಾಶ್‌ಬ್ಯಾಕ್, ಡೆಲ್ ಲ್ಯಾಪ್‌ಟಾಪ್‌ಗಳ ಮೇಲೆ 10,000ರೂ. ವರೆಗೆ ರಿಯಾಯಿತಿ ಸಿಗಲಿದೆ.

ಮೊಬೈಲ್‌ಗಳು: ಇದರೊಂದಿಗೆ ಆಯ್ದ ಆಪಲ್ ಮರುಮಾರಾಟಗಾರರ ಸ್ಟೋರ್‌ನಲ್ಲಿ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದ ಇಎಮ್‌ಐ ಮೂಲಕ ಐಫೋನ್‌ 14 (iPhone 14) ಅನ್ನು ಖರೀದಿ ಮಾಡಬಹುದಾಗಿದೆ. ಅಂದರೆ ನೀವು ತಿಂಗಳಿಗೆ 2,341 ರೂ. ಪಾವತಿ ಮಾಡಬಹುದು. ಜೊತೆಗೆ ಒನ್‌ಪ್ಲಸ್‌ ಮೊಬೈಲ್‌ಗಳು, ಟಿವಿ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (IoT) ಡಿವೈಸ್‌ಗಳಲ್ಲಿ 5,000ರೂ.ಗಳ ಡಿಸ್ಕೌಂಟ್‌ ಲಭ್ಯ ಹಾಗೂ ವಿವೋ, ಶಿಯೋಮಿ ಮತ್ತು ಮೊಟೊರೊಲಾ ಮೊಬೈಲ್‌ಗಳಲ್ಲಿ 8,500ರೂ.ಗಳ ವರೆಗೆ ಕ್ಯಾಶ್‌ಬ್ಯಾಕ್ ಸಿಗಲಿದೆ.

ICICI ಬ್ಯಾಂಕ್ ಮಾನ್ಸೂನ್ ಆಫರ್‌: ಫೋನ್‌, ಸ್ಮಾರ್ಟ್‌ಟಿವಿ ಮೇಲೆ ಡಿಸ್ಕೌಂಟ್‌!

ಉಳಿದಂತೆ ಎಲ್‌ಜಿ, ಸ್ಯಾಮ್‌ಸಂಗ್, ಹೈಯರ್, ಪ್ಯಾನಸೋನಿಕ್‌ ಸೇರಿದಂತೆ ಇನ್ನೂ ಹೆಚ್ಚಿನ ಬ್ರಾಂಡ್‌ಗಳ ಡಿವೈಸ್‌ ಮೇಲೆ 26,000ರೂ.ವರೆಗೆ ಕ್ಯಾಶ್‌ ಬ್ಯಾಕ್ ಲಭ್ಯ ಇದ್ದು, ಟಿಸಿಎಲ್‌ ಮತ್ತು ಶಿಯೋಮಿ ಸ್ಮಾರ್ಟ್‌ಟಿವಿ ಮೇಲೆ 10,000ರೂ.ವರೆಗೆ ರಿಯಾಯಿತಿ ಸಿಗಲಿದೆ ಹಾಗೂ ವರ್ಲ್‌ಪೂಲ್, ಹಿಟಾಚಿ, ಕ್ಯಾರಿಯರ್ ಮಿಡಿಯಾ, ಎಲೆಕ್ಟ್ರೋಲಕ್ಸ್ ಮತ್ತು ಯುರೇಕಾ ಫೋರ್ಬ್ಸ್‌ನಲ್ಲಿ ಸಹ 10,000ರೂ. ವರೆಗೆ ರಿಯಾಯಿತಿ ಲಭ್ಯ ಆಗಲಿದೆ.

ಇನ್ನುಳಿದಂತೆ ಸೋನಿ ಲಿವ್‌ ವಾರ್ಷಿಕ ಪ್ರೀಮಿಯಂ ಮೊಬೈಲ್‌ ಪ್ಲ್ಯಾನ್‌ಗೆ ತ್ವರಿತ 40% ರಿಯಾಯಿತಿ ಸಿಗಲಿದ್ದು, ಪೇಟಿಎಮ್‌ ಮೂಲಕ ಚಲನಚಿತ್ರ ಟಿಕೆಟ್ ಬುಕಿಂಗ್ ಮೇಲೆ ಫ್ಲಾಟ್ 100 ರೂ.ಗಳ ತ್ವರಿತ ಡಿಸ್ಕೌಂಸ್‌ ಸಹ ಲಭ್ಯ ಇರಲಿದೆ. ಇದರೊಂದಿಗೆ ಈ ಆಫರ್‌ಗಳನ್ನು ಅನ್ವಯಿಸುವ ಮೊದಲು ನೀವು ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಬೇಕು.

Best Mobiles in India

English summary
ICICI Bank card holders can avail huge discounts on smart devices. ICICI Bank has launched Monsoon Offer Sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+