ಏರ್‌ಟೆಲ್ ಬಳಕೆದಾರರಿಗೆ ಮಾತ್ರ: ಅದೃಷ್ಠ ತರಲಿದೆ ಈ ಆಪ್..!
ಟೆಲಿಕಾಂ ದೈತ್ಯ ಏರ್‌ಟೆಲ್ ಕಂಪನಿ ಜಿಯೋ ಆರಂಭದ ನಂತರದಲ್ಲಿ ಸಾಕಷ್ಟು ಎಚ್ಚೆತ್ತುಕೊಂಡಿದ್ದು, ಗ್ರಾಹಕರಿಗೆ ಹೆಚ್ಚಿನ ಸೇವೆಯನ್ನು ನೀಡಲು ಮುಂದಾಗಿದೆ. ಇದೇ ಮಾದರಿಯಲ್ಲಿ ಲಾಂಚ್ ಮಾಡಿರುವ ಮೈ ಏರ್‌ಟೆಲ್ ಆಪ್ ಅನ್ನು ಏರ್‌ಟೆಲ್ ಬಳಕೆದಾರರು ತಮ್ಮ ಸ್ಮಾರ್ಟ್‌ಪೋನಿನಲ್ಲಿ ಹೊಂದರಲೇಬೇಕು ಎನ್ನಲಾಗಿದೆ.

ಓದಿರಿ: ರೂ.499ಕ್ಕೆ LED ಟಿವಿ ಎಂದರೆ ನೀವು ನಂಬಲ್ಲ ಅಲ್ವಾ? ಅಮೆಜಾನ್‌ನಲ್ಲಿ ದೊರೆಯುತ್ತಿದೆ ಎಂದ ಮೇಲೆ ನಂಬಬೇಕು.!
ಮೈ ಏರ್‌ಟೆಲ್ ಆಪ್‌ನಲ್ಲಿ ಬಳಕೆದಾರರಿಗೆ ಏರ್‌ಟೆಲ್ ಹಲವಾರು ಆಯ್ಕೆಗಳನ್ನು ನೀಡಿದೆ. ಈ ಆಪ್ ಅನ್ನು ಪೋಸ್ಟ್‌ಪೇಯ್ಡ್ ಮತ್ತು ಪ್ರೀಪೇಯ್ಡ್ ಬಳಕೆದಾರರು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಬಳಕೆಯಿಂದಾಗಿ ಸಾಕಷ್ಟು ಲಾಭವನ್ನು ಪಡೆಯಬಹುದಾಗಿದ್ದು. ಈ ಕುರಿತ ಮಾಹಿತಿಯೂ ಇಲ್ಲಿದೆ.

ನಿಮ್ಮ ಬಳಕೆಯನ್ನು ಟ್ರಾಕ್ ಮಾಡಬಹುದು:
ನೀವು ಪ್ರೀಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ನಲ್ಲಿ ಬಳಕೆ ಮಾಡುತ್ತಿರುವ ಡೇಟಾವನ್ನು ಟ್ರಾಕ್ ಮಾಡಬಹುದಾಗಿದೆ. ಅಲ್ಲದೇ ಬ್ಯಾಲೆನ್ಸ್ ಚೆಕ್ ಮಾಡಬಹುದಾಗಿದೆ. ಅಲ್ಲದೇ ತೊಂದರೆ ಎದುರಾದರೆ ರೀಪೋರ್ಟ್ ಸಹ ಮಾಡಬಹುದಾಗಿದೆ.

ಫ್ಯಾಮಿಲಿ ಪ್ಲಾನ್ ಪಡೆದುಕೊಳ್ಳಲು:
ಇದಲ್ಲದೇ ಈ ಆಪ್ ಮೂಲಕ ನಿಮ್ಮ ಕುಟುಂಬಕ್ಕೆ ಒಂದೇ ಪ್ಲಾನ್ ಪಡೆದುಕೊಳ್ಳಬಹುದಾಗಿದೆ. ಅಲ್ಲದೇ ಇದರ ಮೂಲಕ ಪೋಸ್ಟ್ ಪೇಯ್ಡ್ ಬಿಲ್‌ನಲ್ಲಿ ಕಡಿತವನ್ನು ಪಡೆಯಬಹುದಾಗಿದೆ. ಇದರಿಂದಾಗಿ ಒಂದೇ ಬಿಲ್‌ನಲ್ಲಿ ಎಲ್ಲಾವನ್ನು ಪಾವತಿ ಮಾಡಬಹುದಾಗಿದೆ.

ಅನೇಕ ಫ್ರೀ ಕೊಡುಗೆ:
ಇದಲ್ಲದೇ ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳುವುದರಿಂದ ಸಾಕಷ್ಟು ಲಾಭಗಳಿದ್ದು, ಅನೇಕ ಫೀ ಆಫರ್‌ಗಳು ಇದರಲ್ಲಿ ದೊರೆಯಲಿದೆ ಎನ್ನಲಾಗಿದೆ. ಡೇಟಾ ಮತ್ತು ಕರೆಗಳ ಲಾಭವನ್ನು ಪಡೆಯುವ ಸಾಧ್ಯತೆಗಳು ಇಲ್ಲಿದೆ. ಅಲ್ಲದೇ ನಿಮ್ಮ DTH ಮತ್ತು ಬ್ರಾಡ್ ಬ್ಯಾಂಡ್ ಅನ್ನು ಲಿಂಕ್ ಮಾಡಿಕೊಳ್ಳಬಹುದಾಗಿದೆ.

ನೆಟ್‌ವರ್ಕ್ ಕವರೇಜ್ ತಿಳಿಯಬಹುದು:
ಇದಲ್ಲದೇ ಮೈ ಏರ್‌ಟೆಲ್ ಆಪ್‌ನ ಮೂಲಕ ನಿಮ್ಮ ಏರಿಯಾದಲ್ಲಿ ನೆಟ್‌ವರ್ಕ್ ಹೇಗಿದೆ ಎಂಬುದನ್ನು ನೀವು ಟ್ರಾಕ್ ಮಾಡಬಹುದಾಗಿದೆ. ಅಲ್ಲದೇ ಇದರಿಂದ ನೆಟ್‌ವರ್ಕ್ ಸಮಸ್ಯೆಯನ್ನು ರೀಪೋರ್ಟ್ ಮಾಡುವ ಅವಕಾಶವನ್ನು ನೀಡಲಾಗಿದೆ.

ಪೇಮೆಂಟ್ ಬ್ಯಾಂಕ್-ರೀಚಾರ್ಜ್:
ಇದಲ್ಲದೇ ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಸೇವೆಯನ್ನು ಪಡೆಯಬಹುದಾಗಿದೆ. ಅಲ್ಲದೇ ಎಲ್ಲಾ ರಿಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಮೈ ಏರ್‌ಟೆಲ್ ಆಪ್‌ನಲ್ಲಿ ನೀಡಲಾಗಿದೆ. ಇದರಿಂದಾಗಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ಅದೃಷ್ಠ ತರಲಿದೆ ಈ ಆಪ್..!
ಏರ್‌ಟೆಲ್ ತನ್ನ ಆಪ್ ಬಳಸುವರಿಗಾಗಿಯೇ ಹಲವು ಬಾರಿ ಆಫರ್ ಗಳನ್ನು ನೀಡಲಿದೆ. ಕಡಿಮೆ ಬೆಲೆಗೆ ಡೇಟಾ, ಉಚಿತ ಡೇಟಾ, ಕ್ಯಾಷ್ ಬ್ಯಾಕ್ ಸೇರಿದಂತೆ ಹಲವು ಆಫರ್ ಗಳನ್ನು ನೀಡಲಿದೆ ಎನ್ನಲಾಗಿದೆ.


Click it and Unblock the Notifications








