ಐಡಿಯಾ ಸೆಲ್ಯುಲಾರ್ 3ಜಿ ಸೇವೆ ಇನ್ನು ದೆಹಲಿಯಲ್ಲಿ
ಆದಿತ್ಯಾ ಬಿರ್ಲಾ ಗ್ರೂಪ್ ಕಂಪೆನಿ ಐಡಿಯಾ ಸೆಲ್ಯುಲಾರ್ ತನ್ನ 3ಜಿ ಸೇವೆಯಾದ 900 MHz ಸ್ಪೆಕ್ಟ್ರಮ್ ಬ್ಯಾಂಡ್ ಅನ್ನು ದೆಹಲಿ ವಲಯದಲ್ಲಿ ಲಾಂಚ್ ಮಾಡಿದೆ ಎಂದು ಕಂಪೆನಿ ವರದಿ ಮಾಡಿದೆ.

ದೆಹಲಿಯಲ್ಲಿ 3 ಜಿಯನ್ನು ಲಾಂಚ್ ಮಾಡುವುದರ ಮೂಲಕ, ದೇಶದುದ್ದಕ್ಕೂ 12 ವಲಯಗಳಲ್ಲಿ ಐಡಿಯಾ ತನ್ನ ಪ್ರಸಿದ್ಧಿಯನ್ನು ವಿಸ್ತರಿಸಿಕೊಳ್ಳುವುದು ಮಾತ್ರವಲ್ಲದೆ ಭಾರತದ ಉತ್ತರ ಭಾಗದಲ್ಲೂ ಪ್ರಸಿದ್ಧಿಯನ್ನು ಪಡೆದುಕೊಳ್ಳಲಿದೆ. ಎಂದು ಐಡಿಯಾ ಸೆಲ್ಯುಲಾರ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಅಂಬರೀಶ್ ಜೈನ್ ತಿಳಿಸಿದ್ದಾರೆ. [ಪೋಲಾಗುವ ದುಡ್ಡಿಗೆ ಬ್ರೇಕ್ ಹಾಕುವ ಸೂಪರ್ ಅಪ್ಲಿಕೇಶನ್]

ಭಾರತೀಯ ಟೆಲಿಫೋನ್ ಮಾರುಕಟ್ಟೆಯಲ್ಲಿ ಐಡಿಯಾ ಅಭಿವೃದ್ಧಿಯನ್ನು ಇಷ್ಟು ವೇಗದಲ್ಲಿ ಪಡೆದುಕೊಂಡಿದ್ದು ತನ್ನ ಕಾರ್ಯತತ್ಪರತೆ ಮತ್ತು ಅನ್ವೇಷಣೆಯಿಂದಾಗಿದೆ. ದೆಹಲಿಯಲ್ಲಿ 900 MHZ ಸ್ಪೆಕ್ಟ್ರಮ್ 3ಜಿಯನ್ನು ಲಾಂಚ್ ಮಾಡುವುದು ಐಡಿಯಾ ಹಿರಿಮೆಗೆ ಇನ್ನೊಂದು ಗರಿಯನ್ನು ಮೂಡಿಸಿದಂತಿದೆ.


Click it and Unblock the Notifications