Subscribe to Gizbot

ಸೈಲೆಂಟಾಗಿ ಐಡಿಯಾದಿಂದ ಹೊಸ 8 ಪ್ಲಾನ್‌ ಘೋಷಣೆ: ಏರ್‌ಟೆಲ್‌-ವೊಡಾ ಆಫರ್‌ಗಳಿಗೆ ಕೌಂಟರ್...!

Written By:

ಸದ್ಯದ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿರುವ ವಿಚಾರ ತಿಳಿದಿರುವುದೇ, ಪ್ರೀಪೇಯ್ಡ್ ಗ್ರಾಹಕರನ್ನು ಸೆಳೆಯಲು ಎಲ್ಲಾ ಟೆಲಿಕಾಂ ಕಂಪನಿಗಳು ಸ್ಪರ್ಧೆಯನ್ನು ನಡೆಸುತ್ತಿದ್ದರೇ, ಐಡಿಯಾ ಕಂಪನಿ ಮಾತ್ರವೇ ಸೈಲೆಂಟ್ ಆಗಿ ಪೋಸ್ಟ್ ಪೇಯ್ಡ್ ಗ್ರಾಹಕರನ್ನು ಸೆಳೆಯಲು ಹೊಸ ಯೋಜನೆಯೊಂದನ್ನು ರೂಪಿಸಲು ಮುಂದಾಗಿದೆ.

ಸೈಲೆಂಟಾಗಿ ಐಡಿಯಾದಿಂದ ಹೊಸ 8 ಪ್ಲಾನ್‌ ಘೋಷಣೆ

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೆಗಾ ಸೇಲ್: ಮಿಸ್‌ ಮಾಡಿದ್ರೆ ನಿಮಗೆ ಲಾಸ್‌...!

ಐಡಿಯಾ ಹೊಸದಾಗಿ ನಿರ್ವಾಣ್ ಪೋಸ್ಟ್ ಪೇಯ್ಡ್ ಪ್ಲಾನ್ ಘೋಷಣೆ ಮಾಡಿದೆ. ಇದರಲ್ಲಿ ವಿವಿಧ ಶ್ರೇಣಿಯ ಎಂಟು ಪ್ಲಾನ್‌ಗಳನ್ನು ಕಾಣಬಹುದಾಗಿದೆ. ಈ ಪ್ಲಾನ್ ಸದ್ಯ ಮಾರುಕಟ್ಟೆಯಲ್ಲಿಯಲ್ಲಿರುವ ವೊಡಾಫೋನ್ ರೆಡ್ ಫೋಸ್ಟ್ ಪೇಯ್ಡ್ ಪ್ಲಾನ್ ಮತ್ತು ಏರ್‌ಟೆಲ್ ಮೈ ಪ್ಲಾನ್ ಇನ್ಫಿನಿಟಿ ಪೋಸ್ಟ್‌ ಪೇಯ್ಡ್ ಪ್ಲಾನ್‌ಗಳಿಗಿಂತಲೂ ಉತ್ತಮವಾಗಿದೆ ಅಲ್ಲದೇ ಗ್ರಾಹಕರಿಗೆ ಹೆಚ್ಚಿನ ಆಯ್ಕೆಯ ಸ್ವಾತಂತ್ರವನ್ನು ನೀಡಿದೆ ಎನ್ನುವ ಮಾತು ಕೇಳಿ ಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಟ್ಟು ಎಂಟು ಪ್ಲಾನ್‌ಗಳು ಲಭ್ಯ:

ಒಟ್ಟು ಎಂಟು ಪ್ಲಾನ್‌ಗಳು ಲಭ್ಯ:

ಐಡಿಯಾ ತನ್ನ ಬಳಕೆದಾರರಿಗೆ ಒಟ್ಟು ಎಂಟು ಆಫರ್ ಗಳನ್ನು ನೀಡುತ್ತಿದ್ದು, ರೂ. 398 ರಿಂದ ಆರಂಭವಾದರೆ, ರೂ.499. ರೂ.649, ರೂ.999, ರೂ.1299, ರೂ.1699, ರೂ.1999, ಮತ್ತು ರೂ. 2999 ವರೆಗಿನ ಪ್ಲಾನ್‌ ಗಳನ್ನು ನೀಡಲಾಗಿದ್ದು, ಗ್ರಾಹಕರು ತಮಗೆ ಬೇಕಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಎಲ್ಲಾ ಪ್ಲಾನ್‌ ಗಳಿಗೂ ಈ ಆಫರ್ ಲಭ್ಯ:

ಎಲ್ಲಾ ಪ್ಲಾನ್‌ ಗಳಿಗೂ ಈ ಆಫರ್ ಲಭ್ಯ:

ಐಡಿಯಾ ಲಾಂಚ್ ಮಾಡಿರುವ ಈ ಎಲ್ಲಾ ಪ್ಲಾನ್‌ ಗಳಲ್ಲೂ ಅನ್‌ಲಿಮಿಟೆಡ್ ವಾಯ್ಸ್ ಕರೆ ಗಳನ್ನು ಮಾಡುವ ಅವಕಾಶವನ್ನು ಮಾಡಿಕೊಡಲಾಗಿದೆ. ಅಲ್ಲದೇ ರೊಮಿಂಗ್ ನಲ್ಲಿಯೂ ಉಚಿತವಾಗಿ ಕರೆಗಳನ್ನು ಮಾಡಬಹುದಾಗಿದೆ. ಅಲ್ಲದೇ ಗ್ರಾಹಕರು ಪ್ರತಿ ದಿನ 100 ಮೇಸೆಜ್ ಉಚಿತವಾಗಿ ಕಳುಹಿಸಬಹುದಾಗಿದೆ. ಆದರೆ ಪ್ರತಿ ಪ್ಲಾನ್ ನಲ್ಲಿ ಡೇಟಾ ಆಫರ್ ಮಾತ್ರವೇ ಬದಲಾವಣೆಯನ್ನು ಹೊಂದಲಿವೆ.

ಡೇಟಾ ಬೆನಿಫಿಟ್ ಹೇಗಿದೆ..?

ಡೇಟಾ ಬೆನಿಫಿಟ್ ಹೇಗಿದೆ..?

ಐಡಿಯಾ ಪ್ಲಾನ್ ಮೌಲ್ಯಕ್ಕೆ ತಕ್ಕಂತೆ ಡೇಟಾ ಆಫರ್ ನೀಡುತ್ತಿದೆ ಎನ್ನಲಾಗಿದೆ. ರೂ. 398ಕ್ಕೆ 10GB ಡೇಟಾ, ರೂ.499ಕ್ಕೆ 20 GB ಡೇಟಾ, ರೂ.649ಕ್ಕೆ 35GB ಡೇಟಾ, ರೂ.999ಕ್ಕೆ 60 GB ಡೇಟಾ, ರೂ.1299 ಕ್ಕೆ 85GB ಡೇಟಾ, ರೂ.1699 ಕ್ಕೆ 110 GB ಡೇಟಾ, ರೂ.1999ಕ್ಕೆ 135 GB ಡೇಟಾ, ಮತ್ತು ರೂ. 2999ಕ್ಕೆ 220 GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ.

ಡೇಟಾ ಕ್ಯಾರಿ ಮಾಡಬಹುದು:

ಡೇಟಾ ಕ್ಯಾರಿ ಮಾಡಬಹುದು:

ಈ ಎಲ್ಲಾ ಪ್ಲಾನ್ ಗಳಲ್ಲೂ ತಿಂಗಳ ಕೊನೆಯಲ್ಲಿ ಉಳಿದ ಡೇಟಾವನ್ನು ಮುಂದಿನ ತಿಂಗಳ ಪ್ಲಾನ್ ನೊಂದಿಗೆ ಕ್ಯಾರಿ ಮಾಡಬಹುದಾಗಿದೆ. ಇದರಿಂದಾಗಿ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ. ಏರ್‌ಟೆಲ್ ಈ ಮಾದರಿಯ ಆಯ್ಕೆಯನ್ನು ಮೊದಲಿಗೆ ಪರಿಚಯ ಮಾಡಿತ್ತು ಎನ್ನಲಾಗಿದೆ. ಇದನ್ನೇ ಐಡಿಯಾ ಸಹ ಕಾಪಿ ಮಾಡಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Idea Cellular Silently Introduces Nirvana Postpaid Plans Offering Data Roll Over Benefit of Up to 500GB. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot