Subscribe to Gizbot

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೆಗಾ ಸೇಲ್: ಮಿಸ್‌ ಮಾಡಿದ್ರೆ ನಿಮಗೆ ಲಾಸ್‌...!

Written By:

ಫ್ಲಿಪ್‌ಕಾರ್ಟ್‌ ನ್ಯೂ ಪಿಂಚ್ ಡೇಸ್ ಸೇಲ್ ಭಾರೀ ಸದ್ದು ಮಾಡುತ್ತಿದೆ. ಇದೇ ಡಿಸೆಂಬರ್ 15 ರಿಂದ 17ರ ವರೆಗೆ ಈ ಸೇಲ್ ನಡೆಯಲಿದ್ದು, ಈ ಭಾರಿ ಸ್ಮಾರ್ಟ್‌ಫೋನ್ ಗಳ ಸೇಲ್ ಭರ್ಜರಿಯಾಗಿದೆ. ಮೊಬೈಲ್‌ಗಳ ಮೇಲೆ ಭಾರೀ ಡಿಸ್ಕೌಂಟ್ ಅನ್ನು ಕಾಣಬಹುದಾಗಿದ್ದು, ಮೂರು ದಿನಗಳ ಭರ್ಜರಿ ಸೇಲ್ ಇದಾಗಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೆಗಾ ಸೇಲ್: ಮಿಸ್‌ ಮಾಡಿದ್ರೆ ನಿಮಗೆ ಲಾಸ್

ಓದಿರಿ: ನಿಮ್ಮ ಮನೆಗೆ ಬೆಸ್ಟ್‌ TV ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ: ಕೇವಲ ರೂ.13,999ಕ್ಕೆ ಸ್ಮಾರ್ಟ್ LED TV..!

ಫ್ಲಿಪ್‌ಕಾರ್ಟ್‌ ನ್ಯೂ ಪಿಂಚ್ ಡೇಸ್ ಸೇಲ್ ನಲ್ಲಿ ಲೆನೊವೊ K8 ಪ್ಲಸ್, ಗ್ಯಾಲಾಕ್ಸಿ ಒನ್ 5, ಗ್ಯಾಲಕ್ಸಿ J3 ಪ್ರೊ ಮತ್ತು ಇತರ ಗ್ಯಾಲಕ್ಸಿ ಫೋನ್‌ಗಳ ಮೇಲೆ ಆಫರ್ ಅನ್ನು ಕಾಣಬಹುದಾಗಿದೆ. ಮುಂದೆ ಯಾವುದೇ ದಿನಗಳಲ್ಲಿ ಈ ಮಾದರಿಯ ಸೇಲ್‌ಗಳು ಕಾಣಿಸುವುದಿಲ್ಲ ಎನ್ನಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್‌ಫೋನ್:

ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್‌ಫೋನ್:

2 GB RAM ಹೊಂದಿರುವ ಗ್ಯಾಲಕ್ಸಿ J3 ಪ್ರೊ ಸ್ಮಾರ್ಟ್‌ಫೋನ್ ರೂ 6,990ಕ್ಕೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಈ ಹಿಂದೆ ರೂ 8,490ಕ್ಕೆ ದೊರೆಯುತ್ತಿತ್ತು ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ 1.2 GHz ಕ್ವಾಡ್ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 410 ಪ್ರೊಸೆಸರ್ ಕಾಣಬಹುದಾಗಿದೆ.

ಗ್ಯಾಲಕ್ಸಿ ಒನ್ 5 ಸ್ಮಾರ್ಟ್‌ಫೋನ್‌:

ಗ್ಯಾಲಕ್ಸಿ ಒನ್ 5 ಸ್ಮಾರ್ಟ್‌ಫೋನ್‌:

ಗ್ಯಾಲಕ್ಸಿ ಒನ್ 5 ಸ್ಮಾರ್ಟ್‌ಫೋನ್‌ ರೂ.6,490ಕ್ಕೆ ಫ್ಲಿಪ್‌ಕಾರ್ಟ್‌ನಲ್ಲಿ ನಡೆಲಿದೆ. 1.3GHz ಕ್ವಾಡ್-ಕೋರ್ ಎಕ್ಸಿನೋಸ್ 3475 ಪ್ರೊಸೆಸರ್ ಹೊಂದಿರುವ ಈ ಸ್ಮಾರ್ಟ್‌ಫೋನ್ 1.5GB RAM ನಲ್ಲಿ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 5.1 ಹಾಗೂ 2600mAh ಬ್ಯಾಟರಿಯನ್ನು ಹೊಂದಿದೆ.

ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್:

ಗ್ಯಾಲಕ್ಸಿ ಆನ್ ಮ್ಯಾಕ್ಸ್ ಸ್ಮಾರ್ಟ್‌ಫೋನ್:

4 GB RAM ಹೊಂದಿರುವ ಗ್ಯಾಲಕ್ಸಿ ಆನ್ ಮ್ಯಾಕ್ಸ್ ರೂ 14,900ಕ್ಕೆ ಇಲ್ಲಿ ದೊರೆಯಲಿದೆ. ಈ ಹಿಂದೆ ಗ್ಯಾಲಕ್ಸಿ ಆನ್ ಮ್ಯಾಕ್ಸ್ ರೂ.16,900ಕ್ಕೆ ದೊರೆಯುತ್ತಿತ್ತು ಎನ್ನಲಾಗಿದೆ. 1.69GHz ಆಕ್ಟಾ ಕೋರ್ ಮೀಡಿಯಾ ಟೆಕ್ MTK P25 ಪ್ರೊಸೆಸರ್ ಹಾಗೂ ಆಂಡ್ರಾಯ್ಡ್ ನ್ಯಾಗಾದಲ್ಲಿ ಈ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದೆ.

ಲೆನೊವೊ ಕೆ 8 ಪ್ಲಸ್ ಸ್ಮಾರ್ಟ್‌ಫೋನ್:

ಲೆನೊವೊ ಕೆ 8 ಪ್ಲಸ್ ಸ್ಮಾರ್ಟ್‌ಫೋನ್:

ಲೆನೊವೊ ಕೆ 8 ಪ್ಲಸ್ ಸ್ಮಾರ್ಟ್‌ಫೋನ್ ಈ ಹಿಂದೆ ರೂ. 10,999ಕ್ಕೆ ಮಾರಾಟವಾಗುತ್ತಿದ್ದು, ಈ ಸೇಲ್‌ನಲ್ಲಿ ರೂ.8,999ಕ್ಕೆ ದೊರೆಯಲಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೊ ಪಿ 25 ಪ್ರೊಸೆಸರ್ 3 GB RAM, 32 GB ಇಂಟರ್ನಲ್ ಮೆಮೊರಿ ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ.

ಒಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನ್:

ಒಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನ್:

ಒಪ್ಪೋ F3 ಪ್ಲಸ್ ಸ್ಮಾರ್ಟ್‌ಫೋನ್‌ ರೂ.17,990ಕ್ಕೆ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ ಬೆಲೆ ರೂ.22,990ಕ್ಕೆ ದೊರೆಯುತ್ತಿತ್ತು. 1.95GHz ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 653 ಪ್ರೊಸೆಸರ್ ಹಾಗೂ 4000mAh ಬ್ಯಾಟರಿ ಈ ಸ್ಮಾರ್ಟ್‌ಫೋನ್‌ನಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Flipkart announces New Pinch Days sale, big discounts on Lenovo K8 Plus, Mi Mix 2, Galaxy phones and more. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot