ಏರ್‌ಟೆಲ್ ಹಿಂದೆ ಬಿದ್ದ ಐಡಿಯಾ!..ಗ್ರಾಹಕರಿಗೆ ಆಫರ್ ಮೇಲೆ ಆಫರ್!?

|

ಜಿಯೋ ಆಟಕ್ಕೆ ತಾಳ ಹಾಕಲೇಬೇಕಾದ ಪರಿಸ್ಥಿತಿ ಇತರ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ಬಂದಿದೆ. ಮಾರ್ಚ್‌ವರೆಗೂ ಜಿಯೋ ಫ್ರೀ ಆಫರ್‌ ಮುಂದುವರೆಸಿದ ನಂತರ ಮತ್ತೆ ಎಲ್ಲಾ ಟೆಲಿಕಾಂ ಕಂಪೆನಿಗಳು ಹೆದರಿವೆ ಎನ್ನಬಹುದು. ಹೌದು ಐಡಿಯಾ ತನ್ನ ನೂತನ ಆಫರ್‌ ಬಿಡುಗಡೆ ಮಾಡಿದ್ದು, 148 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಲೋಕಲ್ ಕಾಲ್ ಮತ್ತು ಮತ್ತು 1 GB ಮೊಬೈಲ್ ಡೇಟಾ ಮತ್ತು 348 ರೂಪಾಯಿಗಳಿಗೆ ಎಲ್ಲಾ ಎಸ್‌ಟಿಡಿ ಕರೆ ಮತ್ತು 1GB ಡೇಟಾ ಆಫರ್ ನೀಡಿದೆ.

ಏರ್‌ಟೆಲ್ ಹಿಂದೆ ಬಿದ್ದ ಐಡಿಯಾ!..ಗ್ರಾಹಕರಿಗೆ ಆಫರ್ ಮೇಲೆ ಆಫರ್!?

ಜಿಯೋ ಎಫೆಕ್ಟ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ತಿಳಿಯದ ಐಡಿಯಾ ಕೂಡ ಏರ್‌ಟೆಲ್ ಹಿಂಬಾಲಿಸುತ್ತಿದ್ದು, ಗುರುವಾರ ಏರ್‌ಟೆಲ್ ಬಿಡುಗಡೆ ಮಾಡಿರುವ ರೀತಿಯಲ್ಲಿಯೇ ತನ್ನ ನೂತನ ಆಫರ್‌ ಬಿಡುಗಡೆ ಮಾಡಿದೆ. ಈ ಮೂಲಕ ಏರ್‌ಟೆಲ್ ಮತ್ತು ಜಿಯೋವನ ಪೈಪೋಟಿಯನ್ನು ನೋಡಿ ತನ್ನ ಮುಂದಿನ ಹೆಜ್ಜೆ ಇಡಲು ಐಡಿಯಾ ತೀರ್ಮಾನಿಸಿದೆ.

ಏರ್‌ಟೆಲ್ ಹಿಂದೆ ಬಿದ್ದ ಐಡಿಯಾ!..ಗ್ರಾಹಕರಿಗೆ ಆಫರ್ ಮೇಲೆ ಆಫರ್!?

ಮೊದಲಿಗಿಂತಲೂ ಸುರಕ್ಷಿತವಾದ ಪೇಟಿಎಂ!! ಇ-ವಾಲೆಟ್ ಹೊಸ ಫೀಚರ್ ಏನು?

ತನ್ನ ಇತಿಹಾಸದಲ್ಲಿಯೇ ಮೊದಲ ಬಾರಿ ದರ ಸಮರಕ್ಕೆ ಸಿದ್ದವಾಗಿರುವ ಏರ್‌ಟೆಲ್ ಜಿಯೋ ಜೊತೆಯಲ್ಲಿ ಪೂರ್ಣ ಪ್ರಮಾಣದ ದರ ಸಮರಕ್ಕೆ ನಿಂತಿದೆ. ಅತ್ಯುತ್ತಮ ನೆಟ್‌ವರ್ಕ್ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ಏರ್‌ಟೆಲ್‌ಗೆ ಈ ಬಾರಿ ನಡುಕ ಉಂಟಾಗಿದೆ. ಹಾಗಾಗಿ ಏರ್‌ಟೆಲ್ 148 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಉಚಿತ ಕರೆ ಮತ್ತು 1GB ಡೇಟಾ ಆಫರ್ ನೀಡಿ ಜಿಯೋಗೆ ಸೆಡ್ಡು ಹೊಡೆದು ನಿಂತಿತ್ತು.

ಏರ್‌ಟೆಲ್ ಹಿಂದೆ ಬಿದ್ದ ಐಡಿಯಾ!..ಗ್ರಾಹಕರಿಗೆ ಆಫರ್ ಮೇಲೆ ಆಫರ್!?

ಬದಲಾಗುತ್ತಿರುವ ಸಂದರ್ಭದಲ್ಲಿ ನೋಕಿಯಾದಂತಹ ಮೊಬೈಲ್‌ ಕಂಪೆನಿಯೇ ಭಾರತೀಯ ಮಾರುಕಟ್ಟೆಯಲ್ಲಿ ಮುಳುಗಿಹೊದ ಉದಾಹಣೆಯಿರುವಾಗ ಇನ್ನು ಏರ್‌ಟೆಲ್ ಮೊಂಡುತನ ಮಾಡುತ್ತಿದ್ದರೆ ಉಳಿಯುವುದು ಕಷ್ಟ ಎನ್ನುವ ಮಾತು ಟೆಲಿಕಾಂ ಕ್ಷೇತ್ರದಲ್ಲಿ ಕೇಳಿಬರುತ್ತಿವೆ. ಏನೆ ಆದರೂ ಈ ದರ ಸಮರ ಗ್ರಾಹಕರಿಗೆ ಖುಷಿತಂದಿದ್ದು, ಏರ್‌ಟೆಲ್ ಹೆಚ್ಚು ಹಣವನ್ನು ನಮ್ಮಿಂದ ವಸೂಲು ಮಾಡಿದೆ ಎನ್ನುವ ಕೊರಗು ಇರುವವರನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Idea Cellular, following the lead of market leader Airtel, To Know More Visit To Kannada.Gizbot.Com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X