ಮೊದಲಿಗಿಂತಲೂ ಸುರಕ್ಷಿತವಾದ ಪೇಟಿಎಂ!! ಇ-ವಾಲೆಟ್ ಹೊಸ ಫೀಚರ್ ಏನು?

ಆನ್‌ಲೈಮ್ ವ್ಯವಹಾರ ತಿಳಿದವರು ಸಹ ಆನ್‌ಲೈನ್‌ ಪ್ರಪಂಚದಲ್ಲಿರುವ ಮೋಸಕ್ಕೆ ಹೆದರುತ್ತಿದ್ದಾರೆ.

|

ಸಾಮಾನ್ಯವಾಗಿ ಹೆಚ್ಚು ಜನರಿಗೆ ಆನ್‌ಲೈನ್ ವ್ಯವಹಾರ ತಿಳಿದಿಲ್ಲ. ಇನ್ನು ಆನ್‌ಲೈಮ್ ವ್ಯವಹಾರ ತಿಳಿದವರು ಸಹ ಆನ್‌ಲೈನ್‌ ಪ್ರಪಂಚದಲ್ಲಿರುವ ಮೋಸಕ್ಕೆ ಹೆದರುತ್ತಿದ್ದಾರೆ. ಆನ್‌ಲೈನ್ ಕ್ರಿಮಿನಲ್‌ಗಳು ನಮ್ಮ ಹಣಕ್ಕೆ ಕನ್ನ ಹಾಕಬಹುದು ಎನ್ನು ಹೆದರಿಕೆಯಂದಲೇ ಆನ್‌ಲೈನ್ ಪ್ರಪಂಚಕ್ಕೆ ಅವರಿನ್ನು ಕಾಲಿಟ್ಟಿಲ್ಲ!!

ನೋಟು ನಿಷೇದದ ನಂತರ ದೇಶದ ನಂಬರ್ ಒನ್ ಇ-ವಾಲೆಟ್ ಕಂಪೆನಿ ಪೇಟಿಎಂ 1000 ಕ್ಕೂ ಹೆಚ್ಚು ಪಟ್ಟು ಬೆಳವಣಿಗೆ ಹೊಂದಿದೆ. ಹಣ ರದ್ದಾದ ಸಮಯದಲ್ಲಿ ಕೇವಲ ಒಂದೆ ದಿನದಲ್ಲಿ 24,000 ಕೋಟಿಗೂ ಹೆಚ್ಚು ಹಣ ಪೇಟಿಎಂನಲ್ಲಿ ವಿನಿಮಯವಾಗಿರುವುದು ಪೇಟಿಎಂನ ಬೆಳವಣಿಗೆಗೆ ಸಾಕ್ಷಿ!

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!? ಗೋವಾ ಇದಕ್ಕೆ ಟೆಸ್ಟ್‌ ಪ್ಲೇಸ್ ಅಷ್ಟೆ!!

ಪೇಟಿಎಂ ಬೆಳವಣಿಗೆ ಹೊಂದಿದ್ದೇನೊ ನಿಜ. ಆದರೆ, ಪೇಟಿಎಂ ಗ್ರಾಹಕರು ತಮ್ಮ ಆನ್‌ಲೈನ್ ವಯಕ್ತಿಕ ವಿವರ ಮತ್ತು ತಮ್ಮ ಹಣದ ರಕ್ಷಣೆ ಹೆದರಿಕೆ ಹೊಂದಿದ್ದಾರೆ. ಹಾಗಾಗಿ, ಪೇಟಿಎಂ ತನ್ನ ಗ್ರಾಹಕರಿಗೆ ಹೊಸದೊಂದು ಸೆಕ್ಯುರಿಟಿ ಫೀಚರ್‌ ಬಿಡುಗಡೆ ಮಾಡಿದೆ! ಯಾವುವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪೇಟಿಎಂ ಲಾಕ್!?

ಪೇಟಿಎಂ ಲಾಕ್!?

ಈ ಮೊದಲು ಒಬ್ಬರ ಸ್ಮಾರ್ಟ್‌ಫೊನ್ ಮೂಲಕ ಯಾರು ಬೇಕಾದರು ಪೇಟಿಎಂ ಉಪಯೋಗಿಸುವ ಅವಕಾಶವಿತ್ತು. ಆದರೆ, ಈಗ ಪೇಟಿಎಂ ಆಪ್ ಲಾಕ್ ಫೀಚರ್ ನಿಡಿದ್ದು, ಬಳಕೆದಾರರನ್ನು ಬಿಟ್ಟು ಬೇರೆ ಯಾರೂ ಕೂಡ ಆಪ್‌ ತೆರೆಯಲು ಸಾಧ್ಯವಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಂಡ್ರಾಯ್ಡ್ ಅಥಾರಿಟಿ.

ಆಂಡ್ರಾಯ್ಡ್ ಅಥಾರಿಟಿ.

ಪೆಟಿಎಂ ಇದೀಗ ಆಂಡ್ರಾಯ್ಡ್ ಅಥಾರಿಟಿ ಮೆಕಾನಿಸಮ್ ಫೀಚರ್ ಹೊಂದಿದೆ. ಹಾಗೆಂದರೆ, ಇದು ಕೇವಲ ಸ್ಕ್ರೀನ್ ಲಾಕ್ ಇರುವ ಸ್ಮಾರ್ಟ್‌ಫೊನ್‌ಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ.

ಪೇಟಿಎಂ ಲಾಕ್ ಮಾಡುವುದು ಹೇಗೆ?

ಪೇಟಿಎಂ ಲಾಕ್ ಮಾಡುವುದು ಹೇಗೆ?

ಪೇಟಿಎಂ ಲಾಕ್ ಆಕ್ಟಿವೇಟ್ ಮಾಡಲು ಮೊದಲು ನೀವು ನೂತನ ಪೇಟಿಎಂ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕಿದೆ. ನಂತರ ಆಪ್‌ಗೆ ಲಾಗಿನ್ ಆಗಿ "PaY ಅಥವಾ "Passbook" ಐಕಾನ್ ಕ್ಲಿಕ್ ಮಾಡಿ. ನಿಮಗೆ ಹಲವು ಫೀಚರ್‌ಗಳು ತರೆದುಕೊಳ್ಳುತ್ತವೆ. ಅವುಗಳಲ್ಲಿ " ADD security Feature" ಐಕಾನ್ ಕ್ಲಿಕ್ ಮಾಡಿ. ನಂತರ ನಿಮ್ಮ ಪಿನ್ ನೀಡಿ ಖಚಿತಪಡಿಸಿಕೊಳ್ಳಿ.

ಉಪಯೋಗ ಏನು?

ಉಪಯೋಗ ಏನು?

ಈ ರೀತಿ ಲಾಕ್ ಮಾಡುವುದರಿಂದ ನಿಮ್ಮ ಸ್ಮಾರ್ಟ್‌ಫೊನ್ ಪೆಟಿಎಂ ಮೂಲಕ ಬೇರೆ ಯಾರೂ ವ್ಯವಹರಿಸಲು ಸಾಧ್ಯವಿಲ್ಲ. ನಿಮ್ಮ ಪ್ರತಿ ವ್ಯವಹಾರದ ನಂತರ ಪೇಟಿಎಂ ತಾನಾಗಿಯೇ ಲಾಕ್ ಆಗುತ್ತದೆ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Paytm's security feature will add a secondary layer of security to the app. To know More visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X