ಜಿಯೋ ವಿರುದ್ಧ ಸಮರ: ವೊಡೋಪೋನ್‌ನೊಂದಿಗೆ ಐಡಿಯಾ ವಿಲೀನ
ಮಾರುಕಟ್ಟೆಯಲ್ಲಿ ಉಳಿಯಲು ಮತ್ತು ಹೊಸ ತಂತ್ರಕ್ಕೆ ಮೊರೆಹೋಗುವ ಸಲುವಾಗಿ ಐಡಿಯಾ ಸೆಲುಲಾರ್ ವೊಡಾಫೋನ್‌ನೊಂದಿಗೆ ವಿಲೀನಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ಕೆಲದಿನಗಳ ಹಿಂದೆ ಕೇಳಿ ಬಂದಿದ್ದ ಗಾಳಿ ಮಾತೊಂದು ಸದ್ಯ ನಿಜವಾಗಿದ್ದು, ಸ್ಪೆಸ್ ಸೇವೆಯನ್ನು ತನ್ನದಾಗಿಸಿಕೊಂಡು ಐಡಿಯಾ ಎಂದು ಭಾರತೀಯ ಟೆಲಿಕಾಮ್ ವಲಯದಲ್ಲಿ ಹೊಸ ಅಲೆ ಎಬ್ಬಿಸಿದ್ದ ಐಡಿಯಾ ಮತ್ತು ಹಚ್ ಸೇವೆಯನ್ನು ಖರೀದಿಸಿದ ವೊಡೋಪೋನ್ ಡೊಡ್ಡ ಮಟ್ಟಕ್ಕೆ ಬೆಳೆದಿದ್ದು ಎಲ್ಲಾರಿಗೂ ತಿಳಿದಿರುವು ವಿಚಾರ ಸದ್ಯ ಈ ಎರಡು ಸಂಸ್ಥೆಗಳು ವಿಲೀನವಾಗುತ್ತಿವೆ ಎನ್ನಲಾಗಿದೆ.

ಓದಿರಿ: ಆಪಲ್ ಪೋನಿನ ಬೆಲೆಯಲ್ಲೇ ಭಾರೀ ಕಡಿತ: ರೂ. 19,999ಕ್ಕೆ ಐಪೋನ್ ಲಭ್ಯ..!!
ಸದ್ಯ ದೇಶಿಯ ಟೆಲಿಕಾಮ್ ವಲಯದಲ್ಲಿ ರಿಲಯನ್ಸ್ ಮಾಲೀಕತ್ವದ ಜಿಯೋ ತನ್ನ ಸೇವೆಯನ್ನು ಆರಂಭಿಸಿದ ಬೆನ್ನಲ್ಲೇ ಇತರೆ ಕಂಪನಿಗಳು ತಮ್ಮ ಅಸ್ತಿತ್ವಕ್ಕೆ ಪರದಾಡುತ್ತಿದ್ದು, ಗ್ರಾಹಕರನ್ನು ಕಳೆದುಕೊಂಡು ನಷ್ಟ ಅನುಭವಿಸುತ್ತಿವೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿ ಉಳಿಯಲು ಮತ್ತು ಹೊಸ ತಂತ್ರಕ್ಕೆ ಮೊರೆಹೋಗುವ ಸಲುವಾಗಿ ಐಡಿಯಾ ಸೆಲುಲಾರ್ ವೊಡಾಫೋನ್‌ನೊಂದಿಗೆ ವಿಲೀನಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.
ಬ್ರಿಟನ್ ಮೂಲದ ವೊಡಾಫೋನ್ ಸಮೂಹದ ವೊಡಾಫೋನ್ ಇಂಡಿಯಾ ಲಿಮಿಟೆಡ್(ವಿಐಎಲ್) ಹಾಗೂ ವೊಡಾಫೋನ್ ಮೊಬೈಲ್ ಸರ್ವೀಸಸ್ ಲಿಮಿಟೆಡ್ ಜತೆಗಿನ ಒಪ್ಪಂದಕ್ಕೆ ಐಡಿಯಾ ಸೆಲುಲಾರ್ ನಿರ್ದೇಶಕರ ಮುಂದಾಗಿದ್ದಾರೆ.
ದೇಶದಲ್ಲಿ 20.46 ಕೋಟಿ ಗ್ರಾಹಕರನ್ನು ಹೊಂದಿರುವ ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ.18.16 ಪಾಲುದಾರಿಕೆಯನ್ನು ತನ್ನದಾಗಿಸಿಕೊಂಡಿದ್ದರೇ, 19.05 ಕೋಟಿ ಗ್ರಾಹಕರಿವ ಐಡಿಯಾ, ಶೇ.16.9 ಮಾರುಕಟ್ಟೆ ಪಾಲುದಾರಿಕೆ ಹೊಂದಿದೆ. ವೊಡಾಫೋನ್-ಐಡಿಯಾ ವಿಲೀನದ ಮೂಲಕ 40 ಕೋಟಿ ಗ್ರಾಹಕರನ್ನು ಹೊಂದಿರುವ ಬೃಹತ್ ದೂರಸಂಪರ್ಕ ಸಂಸ್ಥೆಯಾಗಲಿದೆ.

ಓದಿರಿ: ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?
ಈ ವಿಲೀನದ ನಂತರ ಸಂಯೋಜನೆಗೊಂಡ ಸಂಸ್ಥೆಯಲ್ಲಿ ವೊಡಾಫೋನ್ ಶೇ.45.1 ಪಾಲು ಹೊಂದಿರಲಿದೆ ಎನ್ನಲಾಗಿದೆ. ಈ ಮೂಲಕ ದೇಶದ ಟೆಲಿಕಾಂ ವಲಯದಲ್ಲಿ ದೊಡ್ಡದೊಂದು ಟೆಲಿಕಾಂ ಸಂಸ್ಥೆಯ ಉದಯವಾಗಲಿದ್ದು, ದೇಶದ ಅರ್ಧದಷ್ಟು ಜನರಿಗೆ ಈ ಕಂಪನಿ ಸೇವೆಯನ್ನು ನೀಡಲಿದೆ ಎನ್ನಲಾಗಿದೆ.


Click it and Unblock the Notifications








