Subscribe to Gizbot

ಆಪಲ್ ಪೋನಿನ ಬೆಲೆಯಲ್ಲೇ ಭಾರೀ ಕಡಿತ: ರೂ. 19,999ಕ್ಕೆ ಐಪೋನ್ ಲಭ್ಯ..!!

Written By:

ಆಪಲ್ ಐಪೋನುಕೊಳ್ಳಬೇಕು ಎಂದು ಪ್ಲಾನ್ ಮಾಡುತ್ತಿರುವವರಿಗೆ ಇದು ಸರಿಯಾದ ಸಮಯ. ಭಾರತೀಯ ಮಾರುಕಟ್ಟೆಯಲ್ಲಿ ಆಪಲ್ ಬಿಡಗಡೆ ಮಾಡಿರುವ ಐಪೋನ್ ಎಸ್‌ಇ ಬೆಲೆ ಸದ್ಯ ಭಾರೀ ಕಡಿತಗೊಂಡಿದ್ದು, 19,999 ರೂಗಳಿಗೆ ಲಭ್ಯವಿದ್ದು, ಹಾಗಾಗಿ ಐಪೋನ್ ಖರೀದಿ ಮಾಡಲು ಇದು ಸುಸಮಯ.

ಆಪಲ್ ಪೋನಿನ ಬೆಲೆಯಲ್ಲೇ ಭಾರೀ ಕಡಿತ: ರೂ. 19,999ಕ್ಕೆ ಐಪೋನ್ ಲಭ್ಯ..!!

ಓದಿರಿ: ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?

2016ರಲ್ಲಿ ಮಾರುಕಟ್ಟೆಗೆ ಪರಿಚಯಿಸಲಾದ 16 GB ಮೆಮೊರಿ ಐಪೋನ್ ಎಸ್‌ಇ ರೂ.39,000ಕ್ಕೆ ಹಾಗೂ 64 GB ಮೆಮೊರಿ ಹೊಂದಿರುವ ಐಪೋನ್ ಎಸ್‌ಇ ಬೆಲೆ 44,000 ರೂಗಳಾಗಿತ್ತು. ಆದರೆ ಇಂದು ಮಾರುಕಟ್ಟೆಯಲ್ಲಿ ಈ ಪೋನಿನ ಬೆಲೆ ಅರ್ಧದಷ್ಟು ಕಡಿಮೆಯಾಗಿದೆ. ಹಾಗಾಗಿ ಇದು ಐಫೋನ್‌ ಪ್ರಿಯರಿಗೆ ಸಿಹಿ ಸುದ್ದಿ.

ಆಪಲ್ ಪೋನಿನ ಬೆಲೆಯಲ್ಲೇ ಭಾರೀ ಕಡಿತ: ರೂ. 19,999ಕ್ಕೆ ಐಪೋನ್ ಲಭ್ಯ..!!

ಸದ್ಯ 16 GB ಮೆಮೊರಿ 16 GB ಮೆಮೊರಿ ಐಪೋನ್ ಎಸ್‌ಇ ರೂ. 19,990ಕ್ಕೆ ಮಾರಾಟವಾದರೆ, 63GB ಮೆಮೊರಿ ಹೊಂದಿರುವ ಐಪೋನ್ ಎಸ್‌ಇ 24,999 ರೂ.ಗಳಿಗೆ ಮಾರಾಟವಾಗುತ್ತಿದೆ. ಆದರೆ ಈ ಬೆಲೆ ಇಳಿಕೆ ಆಪಲ್ ಮಾಡಿರುವುದಲ್ಲ. ಬದಲಿಗೆ ಐಪೋನ್ ಮಾರಾಟ ಮಾಡುವ ರೀಟೆರ್‌ಗಳು ಈ ಆಫರ್ ನೀಡಿದ್ದಾರೆ ಎನ್ನಲಾಗಿದೆ.

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಮೂಲಕ ಐಪೋನ್ ಎಸ್‌ಇ ಫೋನು ಖರೀದಿಸುವವರಿಗೆ 5,000 ರೂ ಕ್ಯಾಷ್‌ ಬ್ಯಾಕ್ ನೀಡಲಾಗುತ್ತಿದೆ. ಸದ್ಯ 16 GB ಮೆಮೊರಿ ಇರುವ ಐಪೋನ್ ಎಸ್‌ಇ ಬೆಲೆ ರೂ. 24,999 ಆಗಿದ್ದು, ಕ್ಯಾಷ್‌ಬ್ಯಾಕ್ 5000 ಕಟ್ ಮಾಡಿದರೆ 19,990ಕ್ಕೆ ದೊರೆಯಲಿದೆ. ಇದೇ ಮಾದರಿಯಲ್ಲಿ 64GB ಐಪೋನ್ ಎಸ್‌ಇ ಬೆಲೆ ರೂ. 29,999 ಇದ್ದು, 5000 ರೂ ಕ್ಯಾಷ್ ಬ್ಯಾಕ್ ಆದಲ್ಲಿ ರೂ 24,999 ಗಳಾಗಲಿದೆ.

ಆಪಲ್ ಪೋನಿನ ಬೆಲೆಯಲ್ಲೇ ಭಾರೀ ಕಡಿತ: ರೂ. 19,999ಕ್ಕೆ ಐಪೋನ್ ಲಭ್ಯ..!!

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ಐಪೋನ್ ಎಸ್‌ಇ ಪೋನಿನಲ್ಲಿ 4 ಇಂಚಿನ ರೆಟಿನಾ ಡಿಸ್‌ಪ್ಲೇ ಇದ್ದು, A9 SoC ಜೊತೆಗೆ M9 ಕೋ-ಪ್ರೋಸೆಸರ್ ಇದ್ದು, 2GB RAM ಜೊತೆಯಲ್ಲಿ ಸಿರಿ ಬಳಕೆ ಮಾಡಬಹುದಾಗಿದೆ. ಹಿಂಭಾಗದಲ್ಲಿ 12 MP ಕ್ಯಾಮೆರಾ ಜೊತೆಗೆ ಡುಯಲ್ LED ಫ್ಲಾಷ್ ನೀಡಲಾಗಿದ್ದು, ಮುಂಭಾದಲ್ಲಿ 1.2 MP ಕ್ಯಾಮೆರಾ ಇದೆ. 4G VoLET ಸಪೋರ್ಟ್ ಮಾಡಲಿರುವ ಈ ಪೋನಿನಲ್ಲಿ 1,715mAh ಬ್ಯಾಟರಿ ಇದೆ.

Read more about:
English summary
If you’ve been waiting for an affordable iPhone, this could be the right time to buy one. Here’s everything you need to know. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot