Subscribe to Gizbot

ಜಿಯೋ-ಏರ್‌ಟೆಲ್‌ ಗಿಂತ ಭಿನ್ನ: 3G ಗ್ರಾಹಕರನ್ನು ಸೆಳೆಯಲು ಐಡಿಯಾದಿಂದ ಅನ್‌ಲಿಮಿಟೆಡ್ ಆಫರ್..!

Written By:

ಏರ್‌ಟೆಲ್‌-ಜಿಯೋ ಎರಡು ಟೆಲಿಕಾಂ ಮಾರುಕಟ್ಟೆಯಲ್ಲಿ ಒಂದರ ಹಿಂದೆ ಒಂದರಂತೆ ಆಫರ್ ಗಳನ್ನು ಲಾಂಚ್ ಮಾಡುತ್ತಿರುವ ಸಂದರ್ಭದಲ್ಲಿಯೇ ಈ ಎರಡು ಕಂಪನಿಗಳಿಗೆ ಸೆಡ್ಡು ಹೊಡೆಯುವಂತೆ ಆಫರ್ ವೊಂದನ್ನು ಐಡಿಯಾ ಲಾಂಚ್ ಮಾಡಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ತನ್ನದೇ ಗ್ರಾಹಕರನ್ನು ಮತ್ತೆ ಸೆಳೆಯಲು ಮುಂದಾಗಿದೆ.

3G ಗ್ರಾಹಕರನ್ನು ಸೆಳೆಯಲು ಐಡಿಯಾದಿಂದ ಅನ್‌ಲಿಮಿಟೆಡ್ ಆಫರ್..!

ಓದಿರಿ: 6 ವರ್ಷದ ಫೋರ ಯೂಟ್ಯೂಬ್‌ನಲ್ಲಿ ಗಳಿಸುತ್ತಿರುವುದು ವರ್ಷಕ್ಕೆ 70 ಕೋಟಿಗೂ ಅಧಿಕ..!

ಈಗಾಗಲೇ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿರುವ ಐಡಿಯಾ, ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಮತ್ತು ಇರುವ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹೊಸ ಆಫರ್ ಲಾಂಚ್ ಮಾಡಿದೆ. ಈ ಮೂಲಕ ಗ್ರಾಹಕರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡಲು ಮುಂದಾಗಿದೆ. ಐಡಿಯಾ ಲಾಂಚ್ ಮಾಡಿರುವ ಹೊಸ ಆಫರ್ ಬಗ್ಗೆ ಸಂಫೂರ್ಣ ಮಾಹಿತಿ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಡಿಯಾ ರೂ. 509 ಆಫರ್:

ಐಡಿಯಾ ರೂ. 509 ಆಫರ್:

ಜಿಯೋ-ಏರ್‌ಟೆಲ್ ಸೆಡ್ಡು ಹೊಡೆಯುವ ಮಾದರಿಯಲ್ಲಿ ರೂ. 509 ಆಫರ್ ಘೋಷಣೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ ಐಡಿಯಾ ಡೇಟಾ ಮತ್ತು ಉಚಿತ ಕರೆ ಮಾಡುವ ಸೇವೆಯನ್ನು ನೀಡಲಿದ್ದು, ಇದಲ್ಲದೇ ಇದರಲ್ಲಿ ಪ್ರತಿ ನಿತ್ಯ 100 SMS ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿದೆ.

84 ದಿನಗಳ ವ್ಯಾಲಿಡಿಟಿ:

84 ದಿನಗಳ ವ್ಯಾಲಿಡಿಟಿ:

ಐಡಿಯಾ ಈ ಬಾರಿ ಒಟ್ಟು 84 ದಿನಗಳ ವ್ಯಾಲಿಡಿಟಿಯ ಆಪರ್ ಅನ್ನು ನೀಡಿದ್ದು, ಇದರಲ್ಲಿ ಪ್ರತಿ ನಿತ್ಯ 1 GB ಡೇಟಾವನ್ನು ಬಳಕೆಗೆ ನೀಡಲಿದೆ. ಆದರೆ ಇದು 3G ಇಂಟರ್ನೆಟ್ ಅನ್ನು ನೀಡುತ್ತಿದ್ದು, ಬೇರೆ ಕಂಪನಿಗಳು 4G ಡೇಟಾವನ್ನು ನೀಡುತ್ತಿವೆ. ಐಡಿಯಾ ಹೆಚ್ಚಾಗಿ 3G ಬಳಕೆದಾರರನ್ನು ಸೆಳೆಯಲು ಮುಂದಾಗಿದೆ.

3G ಬಳಕೆದಾರರಿಗೆ:

3G ಬಳಕೆದಾರರಿಗೆ:

ಈಗಾಗಲೇ ಮಾರುಕಟ್ಟೆಯಲ್ಲಿ ಏರ್‌ಟೆಲ್ ಮತ್ತು ಜಿಯೋ 4G ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಾರ್ಯತಂತ್ರವನ್ನು ರೂಪಿಸುತ್ತಿದ್ದರೇ, ಐಡಿಯಾ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿರುವ 3G ಬಳಕೆದಾರರನ್ನು ಸೆಳೆಯಲು ಮುಂದಾಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Idea offers unlimited free calls, 84GB 3G data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot