Subscribe to Gizbot

6 ವರ್ಷದ ಫೋರ ಯೂಟ್ಯೂಬ್‌ನಲ್ಲಿ ಗಳಿಸುತ್ತಿರುವುದು ವರ್ಷಕ್ಕೆ 70 ಕೋಟಿಗೂ ಅಧಿಕ..!

Written By:

ದೇಶದಲ್ಲಿ ಕಡಿಮೆ ಬೆಲೆಗೆ 4G ಡೇಟಾ ಬಳಕೆ ಸಿಕ್ಕ ನಂತರದಲ್ಲಿ ಗೂಗಲ್ ಒಡೆತನದ ಯೂಟ್ಯೂಬ್ ಬಳಕೆದಾರರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ಇದೇ ಮಾದರಿಯಲ್ಲಿ ಯೂಟ್ಯೂಬ್‌ಗಾಗಿಯೇ ವಿಡಿಯೋಗಳನ್ನು ಮಾಡಿ, ಆಪ್‌ಲೋಡ್ ಮಾಡಿ ಆ ಮೂಲಕ ಹಣ ಸಂಪಾದಿಸಲು ಮುಂದಾಗಿರುವ ಸಂಖ್ಯೆಯೂ ಏರಿಕೆಯಾಗುತ್ತಿದೆ. ಇದೇ ಮಾದರಿಯಲ್ಲಿ 6 ವರ್ಷದ ಬಾಲಕನೋರ್ವ ಸದ್ಯ ಸುದ್ದಿಯಲ್ಲಿದ್ದಾನೆ.

6 ವರ್ಷದ ಫೋರ ಯೂಟ್ಯೂಬ್‌ನಲ್ಲಿ ಗಳಿಸುತ್ತಿರುವುದು ವರ್ಷಕ್ಕೆ 70 ಕೋಟಿಗೂ ಅಧಿಕ..!

ಓದಿರಿ: ದಿನಕ್ಕೆ 1GB ಸಾಲುತ್ತಿಲ್ಲವೇ? ಏರ್‌ಟೆಲ್‌ ಹಾಗೂ ಜಿಯೋದಿಂದ ಪ್ರತಿನಿತ್ಯ 3.5 GB ಡೇಟಾ: ಪಡೆಯವುದು ಹೇಗೆ?

ಯೂಟ್ಯೂಬ್‌ನಲ್ಲಿ ವಿವಿಧ ವಸ್ತುಗಳನ್ನು -ಸೇವೆಗಳನ್ನು ರಿವ್ಯೂ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ರಿಯಾನ್ ಎನ್ನುವ ಕೇವಲ 6 ವರ್ಷದ ಹುಡುಗ ಯೂಟ್ಯೂಬ್‌ನಲ್ಲಿ ತಾನು ಆಟವಾಡುವ ಟಾಯ್ಸ್‌ಗಳನ್ನು ರಿವ್ಯೂ ಮಾಡುವ ವಿಡಿಯೋಗಳನ್ನು ಪೋಸ್ಟ್ ಮಾಡುವ ಮೂಲಕ ವರ್ಷಕ್ಕೆ 11 ಮಿಲಿಯನ್ ಡಾಲರ್ ಸಂಪಾದಿಸುತ್ತಿದ್ದಾನೆ ಎಂದರೆ ನೀವು ನಂಬಲೇ ಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
10,136,117 ಚಂದಾದಾರರು:

10,136,117 ಚಂದಾದಾರರು:

ಇಂದಿನ ದಿನದಲ್ಲಿ ಸಾವಿರ ಜನರನ್ನು ಚಂದಾದಾರನ್ನಾಗಿಸುವುದು ಕಷ್ಟದ ಕೆಲಸ ಇಂತಹ ಸಂದರ್ಭದಲ್ಲಿ ರಿಯಾನ್ ಟ್ಯಾಯ್ಸ್ ರಿವ್ಯೂ ಚಾನಲ್ ಎಂಬ ತನ್ನ ಚಾನಲ್‌ನಲ್ಲಿ ರಿಯಾನ್ ಮಕ್ಕಳ ಆಟಿಕೆಗಳ ರಿವ್ಯೂ ಮಾಡಿಕೊಂಡು, ಸುಮಾರು 10,136,117 ಚಂದಾದಾರರನ್ನು ಹೊಂದಿದ್ದಾನೆ ಎನ್ನಲಾಗಿದೆ. ಇತನ ಪ್ರತಿ ವಿಡಿಯೋಗಳು ಮಿಲಿಯನ್ ಗಟ್ಟಲೆ ವಿಕ್ಷಣೆಯನ್ನು ಪಡೆಯಲಿದ್ದು, ಇದರಿಂದಾಗಿ ಪ್ರತಿ ವರ್ಷ ಈತ ಸರಿ ಸುಮಾರು 11 ಮಿಲಿಯನ್ ಡಾಲರ್ ಆದಾಯವನ್ನು ಗಳಿಸುತ್ತಿದ್ದಾನೆ.

Redmi 5A ದೇಶ್‌ ಕಾ ಸ್ಮಾರ್ಟ್‌ಫೋನ್ ಸೇಲ್ ಶುರು: ಇಲ್ಲಿದೇ ನೋಡಿ ಕಂಪ್ಲೀಟ್ ಡಿಟೈಲ್ಸ್..!
ಪೋರ್ಬ್‌ ಪಟ್ಟಿಯಲ್ಲಿ 8 ನೇ ಸ್ಥಾನ:

ಪೋರ್ಬ್‌ ಪಟ್ಟಿಯಲ್ಲಿ 8 ನೇ ಸ್ಥಾನ:

ಈ ಬಾರಿ ಅತೀ ಹೆಚ್ಚು ಯೂಟ್ಯೂಬ್‌ನಿಂದ ಆದಾಯವನ್ನು ಗಳಿಸಿಕೊಂಡವರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಪ್ರತಿಷ್ಠಿತ ಪೋರ್ಬ್, ಅದರಲ್ಲಿ ರಿಯಾನ್ ಟ್ಯಾಯ್ಸ್ ರಿವ್ಯೂ ಚಾನಲ್ ನ ರಿಯಾನ್‌ಗೆ 8ನೇ ಸ್ಥಾನವನ್ನು ನೀಡಿದೆ ಎನ್ನಲಾಗಿದೆ. ಈ ಮೂಲಕ ಈತನ ಖ್ಯಾತಿಯೂ ಮತ್ತಷ್ಟು ಏರಿಕೆಯಾಗಿದೆ.

2015ರಲ್ಲಿ ಆರಂಭ:

2015ರಲ್ಲಿ ಆರಂಭ:

ರಿಯಾನ್ ಟ್ಯಾಯ್ಸ್ ರಿವ್ಯೂ ಚಾನಲ್ ಅನ್ನು ಕೇವಲ ಎರಡು ವರ್ಷದಗಳ ಹಿಂದೆ ಆರಂಭಿಸಲಾಗಿದೆ ಎನ್ನಲಾಗಿದ್ದು, ಕೇವಲ ಎರಡು ವರ್ಷದಲ್ಲಿ 10,136,117 ಚಂದಾದಾರರನ್ನು ಗಳಿಸಿಕೊಂಡಿರುವುದಲ್ಲದೇ ಈತನ ಅನೇಕ ವಿಡಿಯೋಗಳನ್ನು ವೈರಲ್ ಸಹ ಆಗಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
6-year-old makes $11 mn a year reviewing toys on YouTube. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot