Subscribe to Gizbot

ಜಿಯೋ ಎಫೆಕ್ಟ್!..100% ಎಫ್‌ಡಿಐಗಾಗಿ ಕೇಂದ್ರ ಸರ್ಕಾರಕ್ಕೆ ಐಡಿಯಾ ಟೆಲಿಕಾಂ ಮನವಿ!!

Written By:

ಜಿಯೋ ಎಫೆಕ್ಟ್ ಪರಿಣಾಮ ಈ ವರ್ಷ ಸಾವಿರಾರು ಕೋಟಿಗೂ ಹೆಚ್ಚು ನಿವ್ವಳ ಲಾಭವನ್ನು ಕಳೆದುಕೊಂಡಿರುವ ಐಡಿಯಾ ಇದೀಗ ಕಂಪೆನಿಯಲ್ಲಿ ಭಾರೀ ಬದಲಾವಣೆ ತರುತ್ತಿದೆ.! ನಷ್ಟದ ಪರಿಣಾಮದಿಂದಾಗಿ ಎಫ್‌ಡಿಐ ಮಿತಿಯನ್ನು ಶೇ 100ಕ್ಕೆ ಹೆಚ್ಚಿಸಲು ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.!!

ಭಾರತದಲ್ಲಿ ದೂರಸಂಪರ್ಕ ಕಂಪನಿಗಳಲ್ಲಿ ಶೇ 100ರಷ್ಟು ಎಫ್‌ಡಿಐಗೆ ಅವಕಾಶ ಲಭ್ಯವಿರುವುದರಿಂದ ಶೇ 100ಕ್ಕೆ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮಿತಿಯನ್ನು ಹೆಚ್ಚಿಸುವಂತೆ ಕೈಗಾರಿಕಾ ನೀತಿ ಮತ್ತು ಉತ್ತೇಜನ ಮಂಡಳಿಗೆ ಅರ್ಜಿ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ಈ ಬಗ್ಗೆ ತನ್ನ ಹೂಡಿಕೆದಾರರಿಗೆ ಮಾಹಿತಿ ನೀಡಿದೆ.!!

ಜಿಯೋ ಎಫೆಕ್ಟ್!..100% ಎಫ್‌ಡಿಐಗಾಗಿ ಕೇಂದ್ರ ಸರ್ಕಾರಕ್ಕೆ ಐಡಿಯಾ ಟೆಲಿಕಾಂ ಮನವಿ!!

ಐಡಿಯಾ ಟೆಲಿಕಾಂ ಕಂಪೆನಿಯಲ್ಲಿ ಸದ್ಯ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಪ್ರ,ಮಾಣ ಶೇ 27 ರಷ್ಟಿದ್ದು, ಶೇ 49 ರವರೆಗಿನ ಮೊತ್ತಕ್ಕೆ ಸರ್ಕಾರದ ಅನುಮತಿ ಅಗತ್ಯವಿಲ್ಲ. ಆದರೆ, ಶೇ 100ರಷ್ಟು ವಿದೇಶಿ ನೇರ ಹೂಡಿಕೆಯನ್ನು ಟೆಲಿಕಾಂ ಕಂಪೆನಿಗಳೂ ಎದುರು ನೋಡುತ್ತಿದ್ದರೆ ಅದಕ್ಕೆ ಸರ್ಕಾರದ ಅನುಮತಿ ಪಡೆಯಬೇಕಿದೆ.!!

ಜಿಯೋ ಎಫೆಕ್ಟ್!..100% ಎಫ್‌ಡಿಐಗಾಗಿ ಕೇಂದ್ರ ಸರ್ಕಾರಕ್ಕೆ ಐಡಿಯಾ ಟೆಲಿಕಾಂ ಮನವಿ!!

ಜಿಯೋ ಟೆಲಿಕಾಂ ಭಾರತದ ಮಾರುಕಟ್ಟೆಗೆ ಎಂಟ್ರಿ ನೀಡಿದ ನಂತರ ಐಡಿಯಾ ಭಾರೀ ನಿವ್ವಳ ನಷ್ಟ ಎದುರಿಸುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.! ಹಾಗಾಗಿ, ವೊಡಾಫೋನ್ ಜೊತೆ ವಿಲೀನವಾಗುತ್ತಿರುವ ಐಡಿಯಾ ಕಂಪೆನಿ ವಿದೇಶಿ ನೇರ ಹೂಡಿಕೆಯ ಪ್ರಮಾಣವನ್ನು ಶೇ 100ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.!!

ಓದಿರಿ: ವಿಶ್ವದ ಮೊದಲ 10GB RAM ಮತ್ತು 512GB ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನ್!!

English summary
Telecom operator Idea Cellular has approached the government for raising foreign direct investment (FDI) level in the company to 100 per cent. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot