Subscribe to Gizbot

ಪ್ರತಿ ಸೆಕುಂಡಿಗೆ ಐಡಿಯಾ ಪ್ರಿ-ಪೈಡ್ ಬಿಲ್ ಪಾವತಿ

Written By:

ಪ್ರತಿ ನಿಮಿಷ ಬಿಲ್ಲಿಂಗ್ ಯೋಜನೆಯನ್ನು ಅನುಸರಿಸುತ್ತಿದ್ದ ತನ್ನ 1.5 ಮಿಲಿಯನ್ ಪ್ರಿಪೈಡ್ ಗ್ರಾಹಕರನ್ನು ಪ್ರತಿ ಸೆಕುಂಡು ಬಿಲ್ಲಿಂಗ್‌ಗೆ ಐಡಿಯಾ ಸೆಲ್ಯುಲಾರ್ ವರ್ಗಾಯಿಸಿದ್ದು, ನೆಟ್‌ವರ್ಕ್ ಅನ್ನು ಬಳಸುತ್ತಿರುವ ಸಮಯದಲ್ಲಿ ಮಾತ್ರವೇ ಪಾವತಿಸುವಂತೆ ತನ್ನ ಪ್ರಿ -ಪೈಡ್ ಬಳಕೆದಾರರಿಗೆ ಇದು ಖಾತ್ರಿಪಡಿಸಿದೆ.

ಓದಿರಿ: ಫೋನ್ ಬ್ಯಾಟರಿ ಖಾಲಿಯಾಗುತ್ತಿದೆಯೇ? ಏನಿರಬಹುದು ಕಾರಣ

ಇನ್ನುಳಿದ ಐಡಿಯಾ ಬಳಕೆದಾರರು ಈಗಾಗಲೇ ಪ್ರತಿ ಸೆಕುಂಡು ಬಿಲ್ಲಿಂಗ್‌ನಲ್ಲಿದ್ದಾರೆ. ಇನ್ನು ತನ್ನ ಸಂಪೂರ್ಣ 166 ಮಿಲಿಯನ್ ಗ್ರಾಹಕರಲ್ಲಿ, ಹತ್ತಿರ ಹತ್ತಿರ 157 ಮಿಲಿಯನ್ ಬಳಕೆದಾರರು ಪ್ರಿಪೈಡ್ ಬಳಕೆದಾರರಾಗಿದ್ದಾರೆ. ಹೆಚ್ಚಿನ ಮಾಹಿತಿ ಕೆಳಗಿನ ಸ್ಲೈಡರ್‌ಗಳಲ್ಲಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ರಿಪೈಡ್ ಗ್ರಾಹಕ

ಪ್ರಿಪೈಡ್ ಗ್ರಾಹಕ

ಏರ್‌ಟೆಲ್ ಕೂಡ ತನ್ನ ಪ್ರಿಪೈಡ್ ಗ್ರಾಹಕರಿಗೆ ಪ್ರತಿ ಸೆಕುಂಡ್ ಬಿಲ್ಲಿಂಗ್ ಅನ್ನು ಯೋಜಿಸಿದೆ.

ಟಿಆರ್ಎಐ

ಟಿಆರ್ಎಐ

ಟಿಆರ್ಎಐ ನ ಯೋಜನೆಗಳಿಗೆ ಬದ್ದವಾಗುವಂತಹ ನೀತಿಗಳನ್ನು ಸಂಸ್ಥೆ ಯೋಜಿಸಿದ್ದು ಕರೆ ಡ್ರಾಪ್ ಯೋಜನೆಗಳು ಕಂಪೆನಿಗಳಿಗೆ ಲಾಭಕರವಾಗಿ ಪರಿಣಮಿಸಲಿದೆ.

ಗ್ರಾಹಕ ಕೇಂದ್ರಿತ

ಗ್ರಾಹಕ ಕೇಂದ್ರಿತ

ನಮ್ಮ ಯೋಜನೆಗಳನ್ನು ಗ್ರಾಹಕ ಕೇಂದ್ರಿತವಾಗಿ ನಾವು ಯೋಜಿಸಿದ್ದು, ಗ್ರಾಹಕರಿಗೆ ಆಯ್ಕೆ ಮತ್ತು ಅನುಕೂಲತೆಯನ್ನು ನಾವು ಒದಗಿಸಿರುವೆವು.

ಕಾಲ್ ಡ್ರಾಪ್ಸ್ ಸಮಸ್ಯೆಗಳು

ಕಾಲ್ ಡ್ರಾಪ್ಸ್ ಸಮಸ್ಯೆಗಳು

ಕಳೆದ 3-4 ತಿಂಗಳಲ್ಲಿ ಕಾಲ್ ಡ್ರಾಪ್ಸ್ ಸಮಸ್ಯೆಗಳು ತೀವ್ರವಾಗಿದ್ದು ಈ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ನಾವು ಸರ್ವ ಪ್ರಯತ್ನವನ್ನು ಮಾಡುತ್ತಿದ್ದೇವೆ ಎಂದು ಕಂಪೆನಿ ತಿಳಿಸಿದೆ.

ವೆಚ್ಚ

ವೆಚ್ಚ

ಇನ್ನು ಭಾರತವು 2014-15 ರಲ್ಲಿ 4,050 ಕೋಟಿಯನ್ನು ವೆಚ್ಚ ಮಾಡಿದ್ದು ಇದನ್ನು 6,000-6,500 ಕೋಟಿಗೆ ಏರಿಸಿದೆ.

ನೆಟ್‌ವರ್ಕ್ ವಿಸ್ತರಣೆ

ನೆಟ್‌ವರ್ಕ್ ವಿಸ್ತರಣೆ

ಇನ್ನು ಕಂಪೆನಿಯು ತನ್ನ ನೆಟ್‌ವರ್ಕ್ ವಿಸ್ತರಣೆಯನ್ನು 1,50,000 ಸೆಲ್ ಸೈಟ್‌ಗಳಿಗೆ ವಿಸ್ತರಿಸಿದ್ದು ಇದು 3,60,000 ಪಟ್ಟಣಗಳು ಮತ್ತು ಹಳ್ಳಿಗಳನ್ನು ಒಳಗೊಂಡಿದೆ.

ವಾಯ್ಸ್ ಮತ್ತು ಡೇಟಾ ಕೊಡುಗೆ

ವಾಯ್ಸ್ ಮತ್ತು ಡೇಟಾ ಕೊಡುಗೆ

ಇನ್ನು ತನ್ನ 2ಜಿ ಮತ್ತು 3ಜಿ ಡೇಟಾ ಕೊಡುಗೆಗಳಲ್ಲಿ ವಾಯ್ಸ್ ಮತ್ತು ಡೇಟಾ ಕೊಡುಗೆಗಳನ್ನು ಒದಗಿಸುತ್ತಿದೆ.

4ಜಿ ಎಲ್‌ಟಿಇ ಸೇವೆ

4ಜಿ ಎಲ್‌ಟಿಇ ಸೇವೆ

ಇನ್ನು 2016 ರ ಆರಂಭದಲ್ಲಿ 10 ಪ್ರಮುಖ ಮಾರುಕಟ್ಟೆಗಳಲ್ಲಿ 4ಜಿ ಎಲ್‌ಟಿಇ ಸೇವೆಗಳನ್ನು ಆರಂಭಿಸುತ್ತಿದೆ.

ಕೋಟಿಯನ್ನು ಹೂಡಿಕೆ

ಕೋಟಿಯನ್ನು ಹೂಡಿಕೆ

ಇದುವರೆಗೆ ಭಾರತೀಯ ಟೆಲಿಫೋನ್ ಮಾರುಕಟ್ಟೆಯಲ್ಲಿ ಕಂಪೆನಿಯು 65,094.7 ಕೋಟಿಯನ್ನು ಹೂಡಿಕೆ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea Cellular has shifted its 1.5 million pre-paid customers who were on per minute billing (PMB) plan to per second billing (PSB), thus ensuring all its pre-paid users pay only for the time they use the network.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot