Home
ಸುದ್ದಿಜಾಲ

ಹೆಸರೇ ಹೊಂದಿಲ್ಲದ ಕಂಪೆನಿ ಇದೀಗ ಭಾರತದ ನಂಬರ್ 1 ಟೆಲಿಕಾಂ!..ಏರ್‌ಟೆಲ್, ಜಿಯೋ ಕಂಗಾಲು!!

ವಿಲೀನದ ನಂತರ ಹುಟ್ಟಿಕೊಳ್ಳುವ ಟೆಲಿಕಾಂ ಹೆಸರು ಇನ್ನು ನಿಗದಿಯಾಗಿಲ್ಲ.

By Bhaskar N J

ದೂರಸಂಪರ್ಕ ರಂಗದಲ್ಲಿನ ಅತಿದೊಡ್ಡ ವಿಲೀನವಾಗಿರುವ ವೊಡಾಫೋನ್ ಮತ್ತು ಐಡಿಯಾ ವಿಲೀನ ಯೋಜನೆಗೆ ಐಡಿಯಾ ಸಂಸ್ಥೆಯು ಷೇರುದಾರರು ಒಪ್ಪಿಗೆ ನೀಡಿದ್ದಾರೆ.! ಹಾಗಾಗಿ, ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹೊಸ ದೂರಸಂಪರ್ಕ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬರಲಿದೆ.!!

ಮುಂಬೈ ಷೇರುಪೇಟೆಗೆ ಆದಿತ್ಯ ಬಿರ್ಲಾ ಸಮೂಹ ಸಂಸ್ಥೆಯು ಶುಕ್ರವಾರ ಈ ಬಗ್ಗೆ ಮಾಹಿತಿ ನೀಡಿದ್ದು, ಗುರುವಾರ ನಡೆದ ಸಭೆಯಲ್ಲಿ ಶೇ 99 ರಷ್ಟು ಷೇರುದಾರರು ವಿಲೀನದ ಪರವಾಗಿ ಮತ ಚಲಾಯಿಸಿದ್ದಾರೆ. ಕೇವಲ ಒಂದರಷ್ಟು ಷೇರುದಾರರು ಮಾತ್ರ ವಿಲೀನಕ್ಕೆ ಸಹಮತ ವ್ಯಕ್ತಪಡಿಸಿಲ್ಲ ಎಂದು ಎಂದು ಆದಿತ್ಯ ಬಿರ್ಲಾ ಸಮೂಹ ಸಂಸ್ಥೆ ತಿಳಿಸಿದೆ.!!

ಹೆಸರೇ ಹೊಂದಿಲ್ಲದ ಕಂಪೆನಿ ಇದೀಗ ಭಾರತದ ನಂಬರ್ 1 ಟೆಲಿಕಾಂ!..ಏರ್‌ಟೆಲ್, ಜಿಯೋ?

ಪ್ರಸ್ತುತ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್ ಮೊದಲ ಸ್ಥಾನದಲ್ಲಿದ್ದರೆ, ವೊಡಾಪೋನ್ ಮತ್ತು ಐಡಿಯಾ ಟೆಲಿಕಾಂಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿ ಮುಂದುವರೆದಿವೆ.!! ಆದರೆ, ಈ ಒಪ್ಪಂದದಿಂದಾಗಿ ದೇಶದಲ್ಲಿ ಶೇಕಡ 35% ಗ್ರಾಹಕರನ್ನು ಹೊಂದುವ ಮೂಲಕ ಭಾರತೀಯ ಟೆಲಿಕಾಂನಲ್ಲಿ ಮತ್ತೊಂದು ಬೃಹತ್ ಟೆಲಿಕಾಂ ರೂಪುಗೊಳ್ಳಲಿದೆ.

ವೊಡಾಫೋನ್ ಮತ್ತು ಐಡಿಯಾ ವಿಲೀನಕ್ಕೆ ಒಪ್ಪಿಗೆ ನೀಡುವಂತೆ ಎರಡೂ ಸಂಸ್ಥೆಗಳು ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಮಂಡಳಿಗೆ ಅರ್ಜಿಸಲ್ಲಿಸಿ ಈಗಾಗಲೇ ಒಪ್ಪಿಗೆ ಪಡೆದಿವೆ.ಇನ್ನು ಭಾರತೀಯ ದೂರಸಂಪರ್ಕ ಪ್ರಾಧಿಕಾರದಿಂದ ಅಂತಿಮ ಒಪ್ಪಿಗೆ ಸಿಗಬೇಕಿದ್ದು, ಒಪ್ಪಿಗೆ ಸಿಕ್ಕರೆ ಭಾರತದ ಬಹುದೊಡ್ಡ ಟೆಲಿಕಾಂ ಹುಟ್ಟಿಕೊಳ್ಳುತ್ತದೆ.!!

ಹೆಸರೇ ಹೊಂದಿಲ್ಲದ ಕಂಪೆನಿ ಇದೀಗ ಭಾರತದ ನಂಬರ್ 1 ಟೆಲಿಕಾಂ!..ಏರ್‌ಟೆಲ್, ಜಿಯೋ?

ಇನ್ನು ಈ ವಿಲೀನದಿಂದಾಗಿ ವೊಡಾಫೋನ್‌ಗೆ 82,800 ಕೋಟಿ ಮತ್ತು ಐಡಿಯಾಗೆ 72,200 ಕೋಟಿ ಮೌಲ್ಯ ಸಿಗಲಿದ್ದು, ವಿಲೀನದ ನಂತರ ಹುಟ್ಟಿಕೊಳ್ಳುವ ಟೆಲಿಕಾಂ ಹೆಸರು ಇನ್ನು ನಿಗದಿಯಾಗಿಲ್ಲ. ಆದರೆ, ವೊಡಾಫೋನ್ ಹೆಸರು ಹೊಸದಾಗಿ ಹುಟ್ಟಿಕೊಳ್ಳುವ ಟೆಲಿಕಾಂಗೆ ಸೂಕ್ತವಾಗಿದೆ ಎಂದು ಹೇಳಲಾಗಿದೆ.!!

ಓದಿರಿ: ಫೇಸ್‌ಬುಕ್‌ನಲ್ಲಿ ಶುಭಕೋರಿದಕ್ಕೆ ಮುರಿದುಬಿತ್ತು ಮದುವೆ!..ಯುವತಿ ಪಾರು!!

Best Mobiles in India

English summary
Idea, Vodafone merger: things you need to know about the deal.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+