Home
ಸುದ್ದಿಜಾಲ

ಟೆಲಿಕಾಂನ ದೊಡ್ಡ ಸಮ್ಮಿಲನಕ್ಕೆ ಮೊದಲ ಯಶಸ್ಸು..ಐಡಿಯಾಗೆ ಕೂಡಿಬಂತು ಅದೃಷ್ಟ!

By Bhaskar N J

ಐಡಿಯಾ ಸೆಲ್ಯೂಲಾರ್ ಮತ್ತು ವೊಡಾಫೋನ್ ಎರಡೂ ಕಂಪನಿಗಳ ವಿಲೀನಕ್ಕೆ ಭಾರತೀಯ ಪ್ರಸಾರ ಇಲಾಖೆ ಷರತ್ತು ಬದ್ಧ ಒಪ್ಪಿಗೆ ಸೂಚಿಸಿದ ನಂತರ ಐಡಿಯಾ ಸೆಲ್ಯೂಲಾರ್ ಷೇರುಗಳು ಗಗನಮುಟ್ಟಿದೆ. ವಿಲೀನದ ನಂತರ ಐಡಿಯಾದ ಷೇರುಗಳು ಶೇ 16.68 ರಷ್ಟು ಏರಿಕೆ ದಾಖಲಿಸುವ ಮೂಲಕ ಒಂದು ತಿಂಗಳಲ್ಲಿ ಅತಿ ಹೆಚ್ಚು ಏರಿಕೆ ದಾಖಲೆ ಮಾಡಿದ ಸಾಧನೆ ಮಾಡಿದೆ.

ಭಾರತದಲ್ಲಿ ಈ ಬಹುದೊಡ್ಡ ವಿಲೀನಕ್ಕೆ ಟೆಲಿಕಾಂ ಇಲಾಖೆ ಷರತ್ತುಬದ್ಧ ಅನುಮತಿ ನೀಡಿದ ನಂತರ, ಷೇರುದಾರರು ಐಡಿಯಾದತ್ತ ಮುಖ ಮಾಡಿದ್ದಾರೆ. ವೊಡಾಫೋನ್ ಇಂಡಿಯಾ ಹಾಗೂ ಐಡಿಯಾ ಸೆಲ್ಯುಲರ್‌ಗಳ ಸಮ್ಮಿಲನ ಪ್ರಕ್ರಿಯೆ ಆಗಸ್ಟ್‌ ವೇಳೆಗೆ ಸಂಪೂರ್ಣವಾಗಿ ಮುಕ್ತಾಯವಾಗುವುದು ಖಚಿತವಾದ ನಂತರ ಷೇರುದಾರರು ಐಡಿಯಾ ಶೇರು ಖರೀದಿಸಲು ಮುಗಿಬಿದ್ದಿದ್ದಾರೆ.

ಟೆಲಿಕಾಂನ ದೊಡ್ಡ ಸಮ್ಮಿಲನಕ್ಕೆ ಮೊದಲ ಯಶಸ್ಸು..ಐಡಿಯಾಗೆ ಕೂಡಿಬಂತು ಅದೃಷ್ಟ!

ಟೆಲಿಕಮ್ಯೂನಿಕೇಷನ್​ ಡಿಪಾರ್ಟ್​ಮೆಂಟ್​ಗೆ ಕಟ್ಟಬೇಕಾದ ಹಣ ಕಟ್ಟದ ಹಿನ್ನೆಲೆಯಲ್ಲಿ ವೋಡೋಫೋನ್​ನ ಇಂಡಿಯಾಗೆ ಐಡಿಯಾದ ವಿಲೀನವಾಗುವ ಪ್ರಕ್ರಿಯೆಗೆ ಅಡ್ಡಿಯಾಗಿತ್ತು. ಇದೀಗ ಕಂಪನಿ ಎಲ್ಲ ಬಾಕಿಯನ್ನು ಚುಕ್ತಾ ಮಾಡಿರುವುದರಿಂದ ಈ ಎಲ್ಲ ಪ್ರಕ್ರಿಯೆಗಳು ಸುಗಮವಾದಂತಾಗಿದೆ. ಹೀಗಾಗಿ ಎರಡೂ ಕಂಪನಿಗಳ ವಿಲೀನಕ್ಕೆ ಇದ್ದ ಅಡೆತಡೆಗಳೆಲ್ಲವೂ ನಿವಾರಣೆ ಆದಂತಾಗಿದೆ.

ವಿಲೀನ ಪ್ರಕ್ರಿಯೆ ಮುಗಿದಿದ್ದು, ಕೆಲವೇ ವಾರಗಳಲ್ಲಿ ಹೊಸ ಕಂಪನಿ ತನ್ನ ಕಾರ್ಯನಿರ್ವಹಣೆಯನ್ನು ಪ್ರಾರಂಭ ಮಾಡಲಿದೆ. ಹೊಸ ಕಂಪನಿಯ ಬ್ರಾಂಡಿಂಗ್, ಜಾಹೀರಾತುಗಳ ಬಗ್ಗೆ ಇನ್ನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಬಿರ್ಲಾ ಹೇಳಿದ್ದಾರೆ. ಆದರೆ, ಅವರ ಮಾತಿನಲ್ಲಿ ಜಿಯೋವನ್ನು ಎದುರಿಸಲು ಈ ಸಮ್ಮಿಲನ ನಡೆದಿದೆ ಎಂಬುದನ್ನು ತಿಳಿಯಬಹುದಾಗಿದೆ.

ಟೆಲಿಕಾಂನ ದೊಡ್ಡ ಸಮ್ಮಿಲನಕ್ಕೆ ಮೊದಲ ಯಶಸ್ಸು..ಐಡಿಯಾಗೆ ಕೂಡಿಬಂತು ಅದೃಷ್ಟ!

2017ರ ಮಾರ್ಚ್‌ನಲ್ಲಿಯೇ ಘೋಷಣೆ ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಕಂಪನಿಗಳು 2017ರ ಮಾರ್ಚ್‌ನಲ್ಲಿಯೇ ವಿಲೀನ ಪ್ರಕ್ರಿಯೆಯನ್ನು ಘೋಷಿಸಿದ್ದವು. ಉಚಿತ ವಾಯ್ಸ್‌ ಕಾಲ್ ಮತ್ತು ಅಗ್ಗದ ದರದಲ್ಲಿ ಡೇಟಾ ನೀಡಿ ಭಾರತೀಯ ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿದ್ದ ಮುಖೇಶ್ ಅಂಬಾನಿಯ ಭಯಕ್ಕೆ ಈ ಕಂಪೆನಿಗಳು ಒಂದಾದವು ಎಂಬ ಮಾತಿದೆ.!

ಓದಿರಿ: ಭಾರತದ ನಂ.1 ಟೆಲಿಕಾಂ ಪಟ್ಟದಿಂದ ಇದೇ ಮೊದಲ ಬಾರಿ ಇಳಿಯಿತು 'ಏರ್‌ಟೆಲ್'!!

Best Mobiles in India

English summary
Idea shares surge 16.6 percent as merger with Vodafone India clears government hurdle. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+