Subscribe to Gizbot

ಮುಗಿದಿಲ್ಲ ಜಿಯೋ ಎಫೆಕ್ಟ್..ಐಡಿಯಾ, ವೊಡಾಫೋನ್ಗೆ ಜುಲೈನಲ್ಲಿಯೂ ಪೆಟ್ಟು!!

Written By:

ಜಿಯೋಯಿಂದಾಗಿ ಭಾರಿ ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಇತರ ಟೆಲಿಕಾಂ ಕಂಪೆನಿಗಳಿಗೆ ಜುಲೈ ತಿಂಗಳೂ ಸಹ ವರದಾನವಾಗಿಲ್ಲ.! ಜಿಯೋ ತನ್ನ ಸೇವೆಯ ಬೆಲೆಯನ್ನು ಏರಿಸಿದ ನಂತರವೂ ಐಡಿಯಾ ಮತ್ತು ವೊಡಾಫೋನ್ ಕಂಪೆನಿಗಳ ಗ್ರಾಹಕರು ಬಿಟ್ಟುಹೋಗುತಗತಿರುವುದು ಮುಂದುವರೆದಿದೆ.!!

ನಾಲ್ಕು ಖಾಸಗಿ ಟೆಲಿಕಾಂಗಳು ಐಡಿಯಾ ವೊಡಾಫೋನ್ ಸೇರಿದಂತೆ ಏರ್ಸೆಲ್ ಮತ್ತು ಟೆಲಿನಾರ್ ಜುಲೈ ತಿಂಗಳಿನಲ್ಲಿ 43.7 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.! ಆದರೆ, ಈ ತಿಂಗಳಿನಲ್ಲಿ ಮಾತ್ರ ಏರ್‌ಟೆಲ್ ನಿಟ್ಟುಸಿರು ಬಿಟ್ಟಿದ್ದು, ಜುಲೈ 2017 ರಲ್ಲಿ 6 ಲಕ್ಷ ಹೊಸ ಬಳಕೆದಾರರನ್ನು ಸೇರಿಸಿಕೊಂಡಿದೆ.!

ಮುಗಿದಿಲ್ಲ ಜಿಯೋ ಎಫೆಕ್ಟ್..ಐಡಿಯಾ, ವೊಡಾಫೋನ್ಗೆ ಜುಲೈನಲ್ಲಿಯೂ ಪೆಟ್ಟು!!

ಈಗಲೂ ಜಿಯೋ ಪ್ರಭಾವ ಟೆಲಿಕಾಂನಲ್ಲಿ ಮುಂದುವರೆದಿದ್ದು, ಐಡಿಯಾ 23 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದರೆ, 13.89 ಲಕ್ಷ ಗ್ರಾಹಕರನ್ನು ವೊಡಾಫೋನ್ ಕಳೆದುಕೊಂಡಿದೆ. ಏರ್ಸೆಲ್ 3.91 ಲಕ್ಷ ಮತ್ತು ಟೆಲಿನಾರ್ 2.75 ಲಕ್ಷ ಗ್ರಾಹಕರನ್ನು ಕಳೆದುಕೊಂಡಿವೆ.!!

ಮುಗಿದಿಲ್ಲ ಜಿಯೋ ಎಫೆಕ್ಟ್..ಐಡಿಯಾ, ವೊಡಾಫೋನ್ಗೆ ಜುಲೈನಲ್ಲಿಯೂ ಪೆಟ್ಟು!!

ಇನ್ನು ಈ ಬಗ್ಗೆ ಮಾತನಾಡಿರುವ COAI ನಿರ್ದೇಶಕ ಜನರಲ್ ರಾಜನ್ ಎಸ್ ಮಾಥ್ಯೂಸ್, ಉದ್ಯಮದಿಂದ ಅನುಭವಿಸುತ್ತಿರುವ ತೀವ್ರ ಆರ್ಥಿಕ ಒತ್ತಡವು ಗ್ರಾಹಕರ ಇಳಿಮುಖ ಸಂಖ್ಯೆಯಲ್ಲಿ ಪ್ರಭಾವವನ್ನು ತೋರಿಸುತ್ತದೆ. ಈ ಉದ್ಯಮವು ಹೆಚ್ಚು ಪೈಪೋಟಿ ಹಂತದಲ್ಲಿದೆ ಎಂದು ಹೇಳಿದ್ದಾರೆ.!!

ಓದಿರಿ: ಯುಎಸ್‌ಬಿ ಕೇಬಲ್ ಮೂಲಕನೂ ಹ್ಯಾಕ್ ಮಾಡ್ತಾರೆ!!

English summary
However, Airtel registered a growth of about 6 lakh new customers in July.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot