Home
ಸುದ್ದಿಜಾಲ

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲವೇ ಚಿಂತೆ ಬೇಡ... ಈ ರೀತಿ ಮಾಡಿ!

ಕರ್ನಾಟಕ ಸರ್ಕಾರ ನಿನ್ನೆಯಷ್ಟೇ ರಾಜ್ಯಾದ್ಯಂತ ಏಕಕಾಲದಲ್ಲಿ ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ (Gruhalakshmi) ಅಧಿಕೃತ ಚಾಲನೆ ನೀಡಿದೆ. ಆ ವೇಳೆಯೇ ರಾಜ್ಯಾದ್ಯಂತ ಇರುವ ಎಲ್ಲಾ ಅರ್ಹ ಮಹಿಳೆಯರ ಖಾತೆಗೆ 2000ರೂ.ಹಣ ಜಮೆ ಆಗಿದೆ. ಆದರೆ ಇನ್ನೂ ಹಲವಾರು ಮಹಿಳೆಯರು ಈ ಹಣವನ್ನು ಸ್ವೀಕಾರ ಮಾಡಿಲ್ಲ.

ಹೌದು, ಗೃಹಲಕ್ಷ್ಮಿ ಯೋಜನೆಯಡಿ ನೀಡಲಾದ 2000ರೂ.ಗಳ ಹಣವನ್ನು ಹಲವಾರು ಮಹಿಳೆಯರು ಪಡೆದುಕೊಂಡಿದ್ದಾರೆ. ಈ ಮೂಲಕ ಕರ್ನಾಟಕ ಸರ್ಕಾರಕ್ಕೆ ತಮ್ಮದೇ ಆದ ರೀತಿಯಲ್ಲಿ ಹರಸಲು ಮುಂದಾಗಿದ್ದಾರೆ. ಆದರೆ, ಇನ್ನೂ ಕೆಲವು ಮಹಿಳೆಯರ ಖಾತೆಗೆ ಹಣ ಜಮೆ ಆಗಿಲ್ಲ.ಪರಿಣಾಮ ಎಲ್ಲಿ ನಮ್ಮ ಹೆಸರನ್ನು ಕೈ ಬಿಡಲಾಗಿದೆಯೋ?, ಅಥವಾ ಸರ್ಕಾರ ನಮಗೆ ಹಣ ಕೊಡುವುದಿಲ್ಲವೋ ಎಂಬ ಗೊಂದಲದಲ್ಲಿ ಸಾಕಷ್ಟು ಮಹಿಳೆಯರು ಇದ್ದಾರೆ. ಆದರೆ, ನೀವು ಚಿಂತೆ ಬೇಡ, ಈ ಸಣ್ಣ ಸಮಸ್ಯೆ ಬಗೆಹರಿಸಿಕೊಂಡರೆ ನೀವು ಸಹ ಈ ಹಣ ಸ್ವೀಕಾರ ಮಾಡಬಹುದು. ಹಾಗಿದ್ರೆ, ಏನಿದು ಸಮಸ್ಯೆ?, ಹಣ ಜಮೆ ಆಗಿದ್ದರೆ ಅದನ್ನು ಚೆಕ್‌ ಮಾಡುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲವೇ ಚಿಂತೆ ಬೇಡ... ಈ ರೀತಿ ಮಾಡಿ!

ಖಾತೆಗೆ ಹಣ ಜಮೆ ಆಗಿಲ್ಲ ಅಂದ್ರೆ ಹೀಗೆ ಮಾಡಿ: ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರೂ ಸಹ ನಿಮ್ಮ ಖಾತೆಗೆ ಹಣ ಬಂದಿಲ್ಲ ಎಂದರೆ ಈಗಲೇ ನೀವು ಇ-ಕೆವೈಸಿ ಅಪ್ ಡೇಟ್ ಮಾಡಿಸಿಕೊಳ್ಳಬೇಕು. ಈ ಮೊದಲೇ ಸರ್ಕಾರ ಎಲ್ಲರೂ ಇ ಕೆವೈಸಿ ಮಾಡಿಸಿಕೊಳ್ಳಿ ಎಂದು ಎಚ್ಚರಿಕೆ ನೀಡಿತ್ತು. ಇದನ್ನು ಅರಿತು ಕೆಲವರು ಇ-ಕೆವೈಸಿ ಮಾಡಿಸಿದ್ದಾರೆ. ಆದರೆ ಇನ್ನೂ ಕೆಲವು ಮಹಿಳೆಯರಿಗೆ ಇದು ಸಾಧ್ಯವಾಗಿಲ್ಲ. ಪರಿಣಾಮ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಮೂಲಕ ಇ-ಕೆವೈಸಿ ಅಪ್ ಡೇಟ್ ಮಾಡಿದ್ರೆ ಈ ಯೋಜನೆಯ ಹಣ ತಪ್ಪದೇ ನಿಮ್ಮ ಖಾತೆಗೆ ಜಮೆ ಆಗಲಿದೆ.

ಈಗಾಗಲೇ ಜಮೆ ಆಗಿದ್ದು, ಮೆಸೆಜ್ ‌ಬಾರದೆ ಇದ್ದರೆ ಅದನ್ನು ತಿಳಿಯುವುದು ಹೇಗೆ?: ಇನ್ನೂ ಕೆಲವೊಂದಿಷ್ಟು ಜನರಿಗೆ ಹಣ ಪಾವತಿ ಆಗಿದ್ದರೂ ಸಹ ಮೆಸೆಜ್‌ ಬಾರದ ಹಿನ್ನೆಲೆ ಹಣ ಪಾವತಿ ಆಗಿಲ್ಲ ಎಂದು ತಿಳಿದುಕೊಂಡಿರಬಹುದು. ವಿಷಯ ಏನೆಂದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಹೀಗೆ ಆಗಿರುವುದೂ ಉಂಟು. ಹೀಗಾಗಿ ನೀವು ಹತ್ತಿರದ ಬ್ಯಾಂಕ್‌ ಶಾಖೆಗೆ ಹೋಗಿ ಹಣ ಬಂದಿದೆಯಾ ಎಂದು ಚೆಕ್‌ ಮಾಡಿಸಿ.

ಅದೂ ಸಾಧ್ಯವಿಲ್ಲ, ಬ್ಯಾಂಕ್‌ ತುಂಬಾ ದೂರದಲ್ಲಿದೆ ಎಂದರೆ ನಿಮ್ಮ ಫೋನ್‌ ಮೂಲಕವೇ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ಯಾಕೆಂದರೆ ಸರ್ಕಾರ ಈ ಹಣವನ್ನು ಪಾವತಿ ಮಾಡಲು ಡಿಬಿಟಿ ಅನ್ನು ಬಳಕೆ ಮಾಡಿಕೊಂಡಿದೆ. ಡಿಬಿಟಿ ಎಂದರೆ ನೇರ ನಗದು ವರ್ಗಾವಣೆ ಎಂದರ್ಥ. ಈ ಯೋಜನೆಯಡಿ ಅರ್ಜಿ ಸಲ್ಲಿಕೆ ಮಾಡಲಾದ ಎಲ್ಲಾ ಫಲಾನುಭವಿಗಳ ಬ್ಯಾಂಕ್‌ ವಿವರವನ್ನು ಇಲ್ಲಿ ಕ್ರೂಡೀಕರಿಸಿರಲಾಗುತ್ತದೆ. ಇದಾದ ನಂತರದಲ್ಲಿ ಒಂದೇ ಕ್ಲಿಕ್‌ ಮೂಲಕ ಎಲ್ಲರ ಬ್ಯಾಂಕ್‌ ಖಾತೆಗೆ ಹಣ ಜಮೆ ಆಗುತ್ತದೆ.

ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಜಮೆ ಆಗಿಲ್ಲವೇ ಚಿಂತೆ ಬೇಡ... ಈ ರೀತಿ ಮಾಡಿ!

ಈ ಕಾರಣಕ್ಕೆ ನೀವು ನಿಮ್ಮ ಫೋನ್‌ನಲ್ಲಿ ಡಿಬಿಟಿ ಕರ್ನಾಟಕ ಆಪ್‌ ಬಳಕೆ ಮಾಡಿಕೊಂಡು ಇದರ ಬಗ್ಗೆ ಕುಂತಲ್ಲಿಯೇ ಮಾಹಿತಿ ಪಡೆದುಕೊಳ್ಳಬಹುದು. ಇದು ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯ ಇದ್ದು, ಇದನ್ನು ಇನ್‌ಸ್ಟಾಲ್‌ ಮಾಡಿದ ನಂತರ ನಿಮ್ಮ ಆಧಾರ್‌ ಸಂಖ್ಯೆಯನ್ನು ನಮೂದು ಮಾಡಬೇಕಿದೆ. ಬಳಿಕ ಲಿಂಕ್‌ ಆದ ನಂಬರ್‌ಗೆ ಓಟಿಪಿ ಬರಲಿದ್ದು, ಅದನ್ನು ಅಗತ್ಯ ಜಾಗದಲ್ಲಿ ಭರ್ತಿ ಮಾಡಿ. ಇದಾದ ಬಳಿಕ ನಾಲ್ಕು ಅಂಕಿಯ ಸೆಕ್ಯೂರ್‌ ಕೋಡ್ ಎಂಟ್ರಿ ಮಾಡಿ ಸಬ್‌ಮಿಟ್‌ ಮಾಡಿ. ನಿಮಗೆ ಅಗತ್ಯ ಇರುವ ಮಾಹಿತಿಯನ್ನು ಜಾಲಾಡಿ.

Best Mobiles in India

English summary
gruhalakshmi Money has not been deposited in the account so first go to your nearest bank account and do e-KYC by providing Aadhaar card.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+