Gruhalakshmi scheme: ಗೃಹಲಕ್ಷ್ಮಿ ದುಡ್ಡು ಇನ್ನೂ ಬಂದಿಲ್ವಾ? ಮೊದಲು ನಿಮ್ಮ ಊರಿನಲ್ಲಿ ಇವರನ್ನು ಭೇಟಿ ಮಾಡಿ, ಹಣ ಜಮೆ ಆಗುತ್ತೆ!
ಕರ್ನಾಟಕ ಸರ್ಕಾರದ (Government of Karnataka) ಮಹತ್ವದ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ(gruhalakshmi) ಇತರೆ ಎಲ್ಲಾ ಯೋಜನೆಗಳಿಗಿಂತ ಹೆಚ್ಚು ಸದ್ದು ಮಾಡುತ್ತಿದೆ. ಈ ನಡುವೆ ಬಹುಪಾಲು ಮಂದಿ ಇದರ ಪ್ರಯೋಜನ ಪಡೆದರೆ ಇನ್ನೂ ಕೆಲವು ಮಹಿಳೆಯರು ಕೆಲವು ತಾಂತ್ರಿಕ ಸಮಸ್ಯೆ ಹಾಗೂ ದಾಖಲಾತಿಗಳ ಸಮಸ್ಯೆಗಳಿಂದ ಹಣ ಪಡೆದಿಲ್ಲ. ಅವರಿಗೆ ಈಗ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಹೌದು, ಕೆಲವರ ಫೋನ್‌ಗೆ ಮೆಸೆಜ್ ಬಂದಿದ್ದರೂ ಸಹ ಹಣ ಮಾತ್ರ ಜಮೆಯಾಗಿಲ್ಲ, ಇನ್ನೂ ಕೆಲವರಿಗೆ ಮೆಸೆಜ್ ಸಹ ಬಂದಿಲ್ಲ ಹಾಗೂ ಹಣವೂ ಜಮೆ ಆಗಿಲ್ಲ. ಇದರೊಂದಿಗೆ ಹಲವು ಮಹಿಳೆಯರು ತಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿಯನ್ನೇ ಮಾಡಿಸಿಲ್ಲ. ಅವರಿಗೆಲ್ಲಾ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಶುಭಸುದ್ದಿ ನೀಡಿದ್ದಾರೆ. ಜೊತೆಗೆ ನಿಮ್ಮ ಖಾತೆಗೆ ಹಣ ಜಮೆ ಆಗದಿದ್ರೆ ಈ ರೀತಿ ಮಾಡಿ ಎಂದು ಮಾಹಿತಿ ನೀಡಿದ್ದಾರೆ. ಹಾಗಿದ್ರೆ, ಸಚಿವೆ ಹೇಳಿದ್ದೇನು?, ಈ ಸಂಬಂಧ ನಿಮ್ಮ ಊರಿನಲ್ಲಿ ಯಾರನ್ನು ಭೇಟಿ ಮಾಡಬೇಕು? ಎಂಬ ಮಾಹಿತಿ ಇಲ್ಲಿದೆ ನೋಡಿ.

ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಇನ್ನೂ ಸಿಕ್ಕಿಲ್ವೇ...? ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿಯನ್ನು ಉತ್ತೇಜಿಸುವ ಹಿನ್ನೆಲೆ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದ್ದು, ಬ್ಯಾಂಕ್ ಖಾತೆ ಹಾಗೂ ಪಡಿತರ ಕಾರ್ಡ್ ಸಕ್ರಿಯವಾಗಿ ಇಟ್ಟಿರುವ ಹಲವಾರು ಮಹಿಳೆಯರು ಈ ಹಣ ಪಡೆದುಕೊಂಡಿದ್ದಾರೆ. ಅದಾಗ್ಯೂ ಕೆಲವು ಮಹಿಳೆಯರಿಗೆ ಈ ಹಣ ಸಂದಾಯವಾಗಿಲ್ಲ. ಇದರಿಂದಾಗಿ ಎಲ್ಲಿ ನಮಗೆ ಹಣ ಬರುವುದಿಲ್ಲವೋ ಎಂದು ಹಲವಾರು ಮಹಿಳೆಯರು ಆತಂಕಕ್ಕೆ ಒಳಗಾಗಿದ್ದಾರೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?: ಈ ಎಲ್ಲಾ ಮಹಿಳೆಯರ ಅತಂಕವನ್ನು ನಿವಾರಣೆ ಮಾಡುವ ಹಿನ್ನೆಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಯಾರೆಲ್ಲಾ ಖಾತೆಗೆ ಹಣ ಸಂದಾಯ ಆಗಿಲ್ಲವೋ ಅವರು ಶೀಘ್ರವೇ ಈ ಹಣ ಪಡೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಜೊತೆಗೆ ಈ ನೇರ ನಗದು ವರ್ಗಾವಣೆ ಮೂಲಕ ಮೊದಲ ಬಾರಿಗೆ ಜನರಿಗೆ ಕೊಡುತ್ತಿದ್ದೇವೆ. ಪರಿಣಾಮ ಆರ್ಬಿಐ ಮೂಲಕ ಹಂತ ಹಂತವಾಗಿ ಈ ಹಣ ವರ್ಗಾವಣೆ ಮಾಡಬೇಕು. ಇದರಿಂದಾಗಿ ಇನ್ನೂ ಕೆಲವರಿಗೆ ಹಣ ಪಾವತಿ ಆಗಿಲ್ಲ ಎಂದಿದ್ದಾರೆ.
ಅದರಲ್ಲೂ ಬರೋಬ್ಬರಿ ಎರಡು ತಿಂಗಳಿಗೆ ನೀಡಬೇಕಾದ ಹಣವನ್ನು ಈಗಾಗಲೇ ಸರ್ಕಾರ ಬಿಡುಗಡೆ ಮಾಡಲಾಗಿದ್ದು, ಬ್ಯಾಂಕ್‌ನ ನಿಗಮಗಳಿಂದಾಗಿ ಇದು ತಡವಾಗುತ್ತಿದೆ. ಆದರೆ, ಇದು ಪ್ರತಿ ತಿಂಗಳು ಸಂಭವಿಸುವ ಸಮಸ್ಯೆ ಅಲ್ಲ. ಬದಲಾಗಿ ಮೊದಲ ಬಾರಿ ಮಾತ್ರ ಈ ಸಮಸ್ಯೆ ಉಂಟಾಗಲಿದೆ. ಉಳಿದ ತಿಂಗಳಿನಿಂದ ಎಲ್ಲಾ ಮಹಿಳೆಯರ ಖಾತೆಗೆ ಒಂದೇ ಬಾರಿಗೆ ಹಣ ಜಮೆ ಆಗಲಿದೆ ಎಂದಿದ್ದಾರೆ.
ಹಣ ಜಮೆ ಆಗಿಲ್ಲ ಅಂದರೆ ನಿಮ್ಮ ಊರಲ್ಲಿ ಯಾರನ್ನು ಭೇಟಿ ಮಾಡಬೇಕು: ನೀವು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದು, ಆ ಅರ್ಜಿಯ ಬಗ್ಗೆ ನಿಮಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಂದಾದರೆ ಅಥವಾ ನಿಮ್ಮ ಸ್ಟೇಟಸ್ ಅನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದಾದರೆ, ಅಂಗನವಾಡಿ ಕಾರ್ಯಕರ್ತರ (Anganwadi workers) ನೆರವು ಪಡೆದುಕೊಳ್ಳಬಹುದು ಎಂದು ಸಚಿವೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ನೀವು ತಾಲೂಕು ಮಹಿಳಾ ಕಲ್ಯಾಣ ಇಲಾಖೆ ಸಿಡಿಪಿಓ ಅಧಿಕಾರಿಯ ಸಹಾಯವನ್ನು ಸಹ ಪಡೆಯಬಹುದು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಈ ಕೆಲಸ ಮಾಡಿ: ನಿಮ್ಮ ಅರ್ಜಿ ಸಲ್ಲಿಕೆ ಆದ ಮೇಲೆ ಹಣ ಬಂದಿದೆಯಾ ಇಲ್ಲವೇ ಎಂಬುದಕ್ಕಿಂತ ಮಿಗಿಲಾಗಿ ನೀವು ನೀಡಿದ ಬ್ಯಾಂಕ್ ಖಾತೆ ಸಕ್ರಿಯವಾಗಿದೆಯಾ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ತಕ್ಷಣವೇ ಬ್ಯಾಂಕ್‌ಗೆ ಹೋಗಿ ಇ-ಕೆವೈಸಿ ಮಾಡಿಸಿಕೊಳ್ಳಿ. ಈ ಸಮಸ್ಯೆಯಿಂದಲೂ ಸಹ ಹಲವಾರು ಮಹಿಳೆಯ ಖಾತೆಗೆ ಹಣ ಜಮೆ ಆಗಿಲ್ಲ ಎಂಬುದು ತಿಳಿದಿರಲಿ.
ಎಷ್ಟು ಜನರಿಗೆ ಹಣ ಸಂದಾಯವಾಗಿದೆ?: ಸರ್ಕಾರ ಈವರೆಗೆ ಸುಮಾರು 1.20 ಕೋಟಿ ಅರ್ಜಿಗಳಲ್ಲಿ ಸ್ವೀಕಾರ ಮಾಡಿದೆಯಾದರೂ 63 ಲಕ್ಷ ಮನೆಯೊಡತಿಯರ ಖಾತೆಗೆ ಮಾತ್ರ ಹಣ ಜಮೆ ಮಾಡಲಾಗಿದೆಯಂತೆ. ಉಳಿದ ಮಹಿಳೆಯ ಖಾತೆಗೆ ಹಣ ಜಮೆ ಮಾಡುವ ಕಾರ್ಯ ಈವರೆಗೂ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ತಾಂತ್ರಿಕ ಕಾರಣದಿಂದ 25 ಸಾವಿರ ಮನೆಯೊಡತಿಯರಿಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಉಳಿದಂತೆ ರೇಷನ್ ಕಾರ್ಡ್‌ನಲ್ಲಿ ಸಮಸ್ಯೆಗಳಿದ್ದರೆ ಅದನ್ನು ತಿದ್ದುಪಡಿ ಮಾಡಿಕೊಳ್ಳಲು ಸಹ ಸರ್ಕಾರ ಅನುಮತಿ ನೀಡಿದೆ. ಈ ಮೂಲಕ ಮನೆ ಯಜಮಾನಿ ಹೆಸರು ಮಹಿಳೆಯರದ್ದಾಗಿಲ್ಲದಿದ್ದರೆ ತಕ್ಷಣವೇ ಅದನ್ನು ಬದಲಾವಣೆ ಮಾಡಿ. ಈ ಮೂಲಕ ಗೃಹಲಕ್ಷ್ಮಿಯ ಹಣವನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿ. ಅಷ್ಟೇ ಅಲ್ಲದೆ ಈ ಬದಲಾವಣೆ ಮಾಡುವುದರಿಂದಾಗಿ ಅನ್ನಭಾಗ್ಯದ ಹೆಚ್ಚುವರಿ ಹಣವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








