Home
ಸುದ್ದಿಜಾಲ

ಸದ್ಯ ಐಫೋನ್‌ 12 ಖರೀದಿಸುವ ಪ್ಲ್ಯಾನ್‌ ಇದೆಯಾ?..ಇದ್ರೆ ಕೈ ಬಿಡಿ!

ಮೊಬೈಲ್‌ ಮಾರುಕಟ್ಟೆಯಲ್ಲಿ ಆಪಲ್ ಸಂಸ್ಥೆಯ ಐಫೋನ್‌ಗಳ ಸ್ಥಾನ ಬೇರೆಯೇ ಇದೆ. ಭಿನ್ನ ಹಾಗೂ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಆಗಿ ಗುರುತಿಸಿಕೊಂಡಿರುವ ಐಫೋನ್‌ ಎಂದರೇ ಬಹುತೇಕ ಎಲ್ಲರಿಗೂ ಇಷ್ಟ. ಕಂಪನಿಯು ಬಿಡುಗಡೆ ಮಾಡಿರುವ ಐಫೋನ್‌ 12 ಸರಣಿಯ ಐಫೋನ್‌ಗಳು ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯ ಪಡೆದಿವೆ. ಹಲವರು ಐಫೋನ್‌ ಖರೀದಿಸಲು ಮನಸ್ಸು ಮಾಡಿರುತ್ತಾರೆ. ನೀವೇನಾದರೂ ಹೊಸದಾಗಿ ಐಫೋನ್‌ 12 ಅಥವಾ ಐಫೋನ್ 11 ಖರೀದಿಸುವ ಯೋಚನೆ ಮಾಡಿದ್ರೆ, ಆ ಪ್ಲ್ಯಾನ್‌ ಸದ್ಯ ಕೈ ಬಿಡೋದು ಉತ್ತಮ!..ಏಕೆಂದರೇ ಆಪಲ್‌ನ ಬಹುನಿರೀಕ್ಷಿತ ಐಫೋನ್‌ 13 ಸರಣಿ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.

ಐಫೋನ್‌

ಅರೇ..ಐಫೋನ್‌ 13 ಸರಣಿ ಬಿಡುಗಡೆ ಆಗುವುದಕ್ಕೂ ಐಫೋನ್‌ 12 ಅಥವಾ ಐಫೋನ್ 11 ಖರೀದಿಗೂ ಏನ್ ಕನೆಕ್ಷನ್ ಅಂತೀರಾ?...ಐಫೋನ್‌ 13 ಸರಣಿ ಲಾಂಚ್ ಆದ ಬಳಿಕ ಐಫೋನ್‌ 12 ಅಥವಾ ಐಫೋನ್ 11 ಸರಣಿಯ ಮಾಡೆಲ್‌ಗಳ ಬೆಲೆಯಲ್ಲಿ ಸ್ವಲ್ಪ ಇಳಿಕೆ ಆಗುವ ಸಾಧ್ಯತೆಗಳು ಹೆಚ್ಚು. ಈ ನಿಟ್ಟಿನಲ್ಲಿ ಬಿಡುಗಡೆ ನಂತರ ಐಫೋನ್‌ 12 ಅಥವಾ ಐಫೋನ್ 11 ಖರೀದಿಸಿದರೇ ರಿಯಾಯಿತಿ ಸಿಗುವ ಚಾನ್ಸ್‌ ಇವೆ.

ಕಾರ್ಯಕ್ರಮ

ಹೌದು, ಆಪಲ್‌ನ ಮುಂದಿನ ಲಾಂಚ್ ಕಾರ್ಯಕ್ರಮ ಇದೇ ಸೆಪ್ಟೆಂಬರ್ 14ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಐಫೋನ್ 13 ಸರಣಿ ಅನಾವರಣ ಆಗಲಿದೆ. ಇನ್ನು ಹೊಸ ಐಫೋನ್ 13 ಮಾರಾಟವು ಅಕ್ಟೋಬರ್ 1 ರಂದು ಎಂದು ಹೇಳಲಾಗಿದೆ. ಐಫೋನ್ 13 ಲಾಂಚ್ ಬಳಿಕ ಆಪಲ್ ತನ್ನ ಐಫೋನ್‌ 12 ಅಥವಾ ಐಫೋನ್ 11 ಫೋನ್‌ಗಳ ಬೆಲೆಯಲ್ಲಿ ಕಡಿಮೆ ಮಾಡುವ ನಿರೀಕ್ಷೆಗಳು ಹೆಚ್ಚಿವೆ. ಹಾಗಾದರೇ ಆಪಲ್‌ ಐಫೋನ್‌ 12 ಮತ್ತು ಐಫೋನ್ 11 ಫೋನ್‌ಗಳ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಐಫೋನ್ 12 ಫೀಚರ್ಸ್‌

ಐಫೋನ್ 12 ಫೀಚರ್ಸ್‌

ಐಫೋನ್ 12 OLED ಡಿಸ್‌ಪ್ಲೇ ಹೊಂದಿದ್ದು, A14 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ. ಐಫೋನ್ 12 ಫೋನ್ ಎರಡು ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾಪಿಕ್ಸೆಲ್ ವೈಡ್-ಆಂಗಲ್ ಸಂವೇದಕಗಳನ್ನು ಹೊಂದಿವೆ. ನೈಟ್‌ ಮೋಡ್‌ ಆಯ್ಕೆ ಇದ್ದು ಕಡಿಮೆ ಬೆಳಕಿನಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ.

ಐಫೋನ್ 12 ಪ್ರೊ ಫೀಚರ್ಸ್‌

ಐಫೋನ್ 12 ಪ್ರೊ ಫೀಚರ್ಸ್‌

ಐಫೋನ್ 12 ಪ್ರೊ 6.1-ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದರೊಂದಿಗೆ ಮುಖ್ಯವಾಗಿ ಐಫೋನ್ 12 ಪ್ರೊ ಕ್ಯಾಮೆರಾ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್‌ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, ಎರಡು ವೈಡ್-ಆಂಗಲ್ ಸೆನ್ಸರ್‌ಗಳು ಮತ್ತು ಟೆಲಿಫೋಟೋ ಸಂವೇದಕವನ್ನು ಒಳಗೊಂಡಿದೆ.

ಐಫೋನ್ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ ಫೀಚರ್ಸ್‌

ಐಫೋನ್ 12 ಮಿನಿ 5.4-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯು ಸೂಪರ್ ರೆಟಿನಾ XRD ಡಿಸ್‌ಪ್ಲೇ ಮಾದರಿಯಲ್ಲಿದೆ. ಇದು ಸಹ A14 ಬಯೋನಿಕ್ ಎಸ್‌ಒಸಿ ಹಾಗೂ, 5G ಸಪೋರ್ಟ್ ಪಡೆದಿದೆ. ಐಫೋನ್ 12 ಮಿನಿ ಬಹುತೇಕ ಐಫೋನ್ 12 ಫೀಚರ್ಸ್‌ಗಳನ್ನು ಹೊಂದಿದ್ದು, ಗಾತ್ರದಲ್ಲಿ ಮಾತ್ರ ವ್ಯತ್ಯಾಸವಿದೆ.

ಐಫೋನ್ 11 ಫೀಚರ್ಸ್‌

ಐಫೋನ್ 11 ಫೀಚರ್ಸ್‌

ಆಪಲ್ ಸಂಸ್ಥೆಯು ಐಫೋನ್ 11 ಫೋನ್ 6.1 ಇಂಚಿನ ಡಿಸ್‌ಪ್ಲೇ ಮತ್ತು ಡ್ಯುಯಲ್ ಕ್ಯಾಮೆರಾ ಆಯ್ಕೆಯನ್ನು ಒಳಗೊಂಡಿದೆ. ವೇಗದ ಚಿಪ್‌ಸೆಟ್‌ ಬೆಂಬಲದೊಂದಿಗೆ A13 ಬಯೋನಿಕ್ ಪ್ರೊಸೆಸರ್‌ ಪಡೆದುಕೊಂಡಿದೆ. ಆಪಲ್‌ ಎಕ್ಸ್‌ಆರ್‌ಗಿಂತ ಇದರ ಬ್ಯಾಟರಿ ಲೈಫ್ ಅಧಿಕವಾಗಿದೆ. ಹಿಂಬದಿಯ ಎರಡು ಕ್ಯಾಮೆರಾಗಳು 12ಎಂಪಿ ಸೆನ್ಸಾರ್‌ ಬೆಂಬಲವನ್ನು ಪಡೆದಿದ್ದು, ಇದರೊಂದಿಗೆ ನೈಟ್‌ಮೋಡ್‌, 4K ವಿಡಿಯೊ, ಸ್ಲೋ ಮೋಶನ್ ಫೀಚರ್ಸ್‌ಗಳನ್ನು ಪಡೆದಿದೆ.

Best Mobiles in India

English summary
If You Buying iPhone 12 Or iphone 11? Wait Till iPhone 13 launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+