ಹೊಸ ಫೋನ್ ಖರೀದಿಸುವ ಪ್ಲ್ಯಾನ್ ಇದೆಯಾ?..ಹಾಗಿದ್ರೆ ಈ ಚಾನ್ಸ್ ಮಿಸ್ ಮಾಡ್ಕೋಬೇಡಿ!
ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅಗತ್ಯ ಡಿವೈಸ್ ಆಗಿದ್ದು, ಸಾಮಾನ್ಯವಾಗಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನೇ ಬಹುತೇಕರು ಖರೀದಿಸುತ್ತಾರೆ. ಅದರಲ್ಲಿಯೂ ಗ್ರಾಹಕರು ಬಜೆಟ್ ಬೆಲೆಯಲ್ಲಿ ಆಕರ್ಷಕ ಫೀಚರ್ಸ್‌ಗಳಿರುವ ಸ್ಮಾರ್ಟ್‌ಫೋನ್‌ಗಳತ್ತ ಮನಸ್ಸು ಮಾಡುತ್ತಾರೆ. ಸದ್ಯ ನೀವೆನಾದರೂ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಮಾಡಿದ್ದರೇ ಅದಕ್ಕೆ ಈಗ ಸಕಾಲ ಕೂಡಿ ಬಂದಿದೆ. ಏಕೆಂದರೇ ಇ-ಕಾಮರ್ಸ್ ದಿಗ್ಗಜ ಪ್ಲಾಟ್‌ಫಾರ್ಮ್ ಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ಗಳು ಈಗ ವಿಶೇಷ ಸೇಲ್ ಆಯೋಜಿಸಿವೆ.

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಇದೀಗ ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಆಯೋಜಿಸಿದೆ. ಅದೇ ರೀತಿ ಫ್ಲಿಪ್‌ಕಾರ್ಟ್ ಈಗ ಬಿಗ್ ಸೇವಿಂಗ್ಸ್ ಡೇ ಸೇಲ್ ಆಯೋಜಿಸಿದೆ. ಈ ಎರಡು ತಾಣಗಳಲ್ಲಿ ವಿಶೇಷ ಇಂದಿನಿಂದ ಸೇಲ್ ಚಾಲ್ತಿ ಆಗಿದ್ದು, ಇದೇ ಆಗಷ್ಟ್ 9ರ ವರೆಗೂ ಸೇಲ್ ಆಫರ್ ಅವಧಿ ಇರುತ್ತದೆ. ಈ ಎರಡು ಇ-ಕಾಮರ್ಸ್ ತಾಣಗಳು ಗ್ಯಾಡ್ಜೆಟ್ಸ್ ಉತ್ಪನ್ನಗಳಿಗೆ ವಿಶೇಷ ರಿಯಾಯಿತಿ ನೀಡಿವೆ. ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಲಭ್ಯ ಮಾಡಿವೆ.

ಸೇಲ್‌ನಲ್ಲಿ ಪ್ರತಿಷ್ಠಿತ ಬ್ರ್ಯಾಂಡ್‌ಗಳ ಇತ್ತೀಚಿಗೆ ಬಿಡುಗಡೆ ಆಗಿರುವ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಹಾಗೂ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಕೊಡುಗೆಗಳನ್ನು ಘೋಷಿಸಿವೆ. ಇದರೊಂದಿಗೆ ಬ್ಯಾಂಕ್‌ಗಳಿಂದ ಇಎಮ್‌ಐ ಆಯ್ಕೆಗಳು ಸಹ ಲಭ್ಯ ಇವೆ. ಹಾಗಾದರೇ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಈ ಎರಡು ತಾಣಗಳಲ್ಲಿ ಆಕರ್ಷಕ ರಿಯಾಯಿತಿ ಪಡೆದ ಕೆಲವು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೊ 30 5G
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್‌ಮಿ ನಾರ್ಜೊ 30 5G ಫೋನ್ 11% ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 128 ಜಿಬಿ + 6 ಜಿಬಿ ರಾಮ್ ಮಾಡೆಲ್ 15,999ರೂ. ಆಗಿದೆ. ಈ ಫೋನ್ ರೇಸಿಂಗ್ ಸಿಲ್ವರ್ ಬಣ್ಣದ ಆಯ್ಕೆಯಲ್ಲಿ ಲಭ್ಯ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಸ್ಯಾಮ್‌ಸಂಗ್ ಕಂಪನಿಯ ಹೊಸ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್ ಭಾರೀ ಡಿಸ್ಕೌಂಟ್‌ನಲ್ಲಿ ಲಭ್ಯ ಇದೆ. 6GB ಮತ್ತು 128GB ಸ್ಟೋರೇಜ್ ವೇರಿಯಂಟ್ 13,499ರೂ.ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಅದೇ ರೀತಿ 4GB ಮತ್ತು 64GB ಸ್ಟೋರೇಜ್ ವೇರಿಯಂಟ್ ಫೋನ್ 10,999ರೂ.ಗಳ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.

ಪೊಕೊ M3 ಫೋನ್
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಪೊಕೊ M3 ಭರ್ಜರಿ ರಿಯಾಯಿತಿಯಲ್ಲಿ ಲಭ್ಯವಿದೆ. ಈ ಫೋನ್ 4GB ಮತ್ತು 64GB ಸ್ಟೋರೇಜ್ ವೇರಿಯಂಟ್ ಮಾಡೆಲ್ ಬೆಲೆಯು 10,499ರೂ. ಆಗಿದೆ. ಅದೇ ರೀತಿ 6GB ಮತ್ತು 128GB ಸ್ಟೋರೇಜ್ ವೇರಿಯಂಟ್ ದರವು 12,999ರೂ. ಆಗಿದೆ. ಇನ್ನು 6GB ಮತ್ತು 64GB ಸ್ಟೋರೇಜ್ ವೇರಿಯಂಟ್ ಮಾಡೆಲ್ ದರದವು 11,499ರೂ. ಆಗಿದೆ.

ರೆಡ್ಮಿ ನೋಟ್ 10s
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಶಿಯೋಮಿ ಕಂಪನಿಯ ಇತ್ತೀಚಿಗಿನ ರೆಡ್ಮಿ ರೆಡ್ಮಿ ನೋಟ್ 10s ಫೋನ್ 6GB ಮತ್ತು 64GB ಸ್ಟೋರೇಜ್ ವೇರಿಯಂಟ್ 14,999ರೂ.ಗಳ ರಿಯಾಯಿತಿ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 6GB ಮತ್ತು 128GB ಸ್ಟೋರೇಜ್ ವೇರಿಯಂಟ್ 15,999ರೂ. ರಿಯಾಯಿತಿ ಬೆಲೆಯಲ್ಲಿ ಲಭ್ಯ ಇದೆ. ಇನ್ನು ಈ ಫೋನ್ ಮೀಡಿಯಾ ಟೆಕ್ ಹಿಲಿಯೋ G95 ಪ್ರೊಸೆಸರ್ ಬಲವನ್ನು ಪಡೆದಿದ್ದು, ಜೊತೆಗೆ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ.

ಒಪ್ಪೋ A12
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಒಪ್ಪೋ A12 ಆಕರ್ಷಕ ಡಿಸ್ಕೌಂಟ್ ಪಡೆದಿದೆ. ಈ ಫೋನ್ 3GB ಮತ್ತು 32GB ಸ್ಟೋರೇಜ್ ವೇರಿಯಂಟ್ ಮಾಡೆಲ್ ಬೆಲೆಯು 8,490ರೂ. ಆಗಿದೆ. ಅದೇ ರೀತಿ 4GB ಮತ್ತು 64GB ಸ್ಟೋರೇಜ್ ವೇರಿಯಂಟ್ ದರವು 9,490ರೂ. ಆಗಿದೆ. ಇನ್ನು ಈ ಫೋನ್ ಡ್ಯುಯಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ.

ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್
ಅಮೆಜಾನ್ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ ನಲ್ಲಿ ಶಿಯೋಮಿ ಕಂಪನಿಯ ಇತ್ತೀಚಿಗಿನ ರೆಡ್ಮಿ ನೋಟ್ 10 ಪ್ರೊ ಮ್ಯಾಕ್ಸ್ ಫೋನ್ 6GB ಮತ್ತು 128GB ಸ್ಟೋರೇಜ್ ವೇರಿಯಂಟ್ 19,999ರೂ. ರಿಯಾಯಿತಿ ಬೆಲೆಯಲ್ಲಿ ಲಭ್ಯ ಇದೆ. ಇನ್ನು ಈ ಫೋನ್ ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನು ಪಡೆದಿದ್ದು, 120Hz ರೀಫ್ರೇಶ್ ರೇಟ್ ಅನ್ನು ಪಡೆದಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್ 732 ಪ್ರೊಸೆಸರ್ ಬಲವನ್ನು ಪಡೆದಿದ್ದು, ಜೊತೆಗೆ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಪಡೆದಿದೆ.


Click it and Unblock the Notifications








