Home
ಸುದ್ದಿಜಾಲ

ಐಫೋನ್‌ ಬಳಕೆದಾರರಿಗೆ ಮಾತ್ರ ಈ ಸ್ಪರ್ಧೆ... ಚಿನ್ನದ ಬಹುಮಾನ!

ಯಾರೆಲ್ಲಾ ಐಫೋನ್‌ (iPhone) ಬಳಕೆ ಮಾಡುತ್ತಾರೋ ಅವರೆಲ್ಲರಿಗೂ ಇದು ಗುಡ್‌ ನ್ಯೂಸ್‌. ಯಾಕೆಂದರೆ ಪ್ರಪಂಚದಾದ್ಯಂತ ಪ್ರತಿದಿನವೂ ಐಫೋನ್‌ ಬಳಕೆ ಮಾಡಿಕೊಂಡು ಲಕ್ಷಾಂತರ ಚಿತ್ರಗಳನ್ನು ಕ್ಲಿಕ್ ಮಾಡಲಾಗುತ್ತದೆ. ಚಿತ್ರ ಸೆರೆಹಿಡಿಯುವವರಲ್ಲಿ ನೀವು ಒಬ್ಬರಾಗಿದ್ದರೆ ಈ ಚಿತ್ರಗಳೇ ಈಗ ನಿಮಗೆ ಭಾರೀ ಬಹುಮಾನ ಸಿಗುವಂತೆ ಮಾಡಲಿವೆ.

ಹೌದು, ಐಫೋನ್ ಫೋಟೋಗ್ರಫಿ ಅವಾರ್ಡ್ಸ್ (IPPA) ಗೆ ಪ್ರತಿ ವರ್ಷದಂತೆ ಈ ವರ್ಷವೂ ಸ್ಪರ್ಧಿಗಳನ್ನು ಆಹ್ವಾನ ಮಾಡಲಾಗಿದೆ. ಈ ಮೂಲಕ ಪ್ರಪಂಚದಾದ್ಯಂತ ಐಫೋನ್ ಬಳಕೆದಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಹಾಗಿದ್ರೆ, ಈ ಸ್ಪರ್ಧೆಯಲ್ಲಿ ಭಾಗಿಯಾಗುವುದು ಹೇಗೆ? ಬಹುಮಾನಗಳನ್ನು ಗೆಲ್ಲಲು ಯಾವೆಲ್ಲಾ ರೀತಿಯ ಚಿತ್ರಗಳನ್ನು ಸೆರೆಹಿಡಿಯಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

 ಐಫೋನ್‌ ಬಳಕೆದಾರರಿಗೆ ಮಾತ್ರ ಈ ಸ್ಪರ್ಧೆ... ಚಿನ್ನದ ಬಹುಮಾನ!

ಈ ಸ್ಪರ್ಧೆಗೆ ಯಾರೆಲ್ಲಾ ಅರ್ಹರು?: ಮೊದಲೇ ಉಲ್ಲೇಖಿಸಿದಂತೆ IPPA ಪ್ರಕಾರ, ಐಫೋನ್ ಅಥವಾ ಐಪ್ಯಾಡ್‌(iPhone, iPad) ಅನ್ನು ಬಳಸುವ ಛಾಯಾಗ್ರಾಹಕರು ಅರ್ಹರಾಗಿದ್ದಾರೆ. ಆದರೆ, ಇದರಲ್ಲಿ ಷರತ್ತುಗಳಿದ್ದು, ನೀವು ಕಳುಹಿಸುವ ಫೋಟೋಗಳು ಈ ಹಿಂದೆ ಎಲ್ಲಿಯೂ ಪ್ರಕಟ ಆಗಿರಬಾರದು. ಅದಾಗ್ಯೂ ಫೇಸ್‌ಬುಕ್‌ ಅಥವಾ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ.

ಎಡಿಟಿಂಗ್‌ ಮಾಡಿರಬಾರದು: ಇನ್ನು ಈ ವಿಭಾಗದಲ್ಲಿನ ಮತ್ತೊಂದು ಮಾನದಂಡ ಎಂದರೆ ಫೋಟೋಶಾಪ್‌ನಂತಹ ಯಾವುದೇ ಡೆಸ್ಕ್‌ಟಾಪ್ ಇಮೇಜ್ ಪ್ರೊಸೆಸಿಂಗ್ ಪ್ರೋಗ್ರಾಂನಲ್ಲಿ ಫೋಟೋಗಳನ್ನು ಎಡಿಟ್‌ ಮಾಡಿರಬಾರದು. ಆದರೆ, ಬಳಕೆದಾರರು ತಮ್ಮ ಫೋಟೋಗಳನ್ನು ಐಓಎಸ್‌ ಆಪ್‌ಗಳನ್ನು ಬಳಕೆ ಮಾಡಿಕೊಂಡು ಮಾತ್ರ ಎಡಿಟ್‌ ಮಾಡಲು ಅನುಮತಿಸಲಾಗಿದೆ. ಇದರೊಂದಿಗೆ ಐಫೋನ್ ಆಡ್-ಆನ್ ಲೆನ್ಸ್‌ಗಳನ್ನು ಸಹ ಬಳಕೆ ಮಾಡಿದ್ದರೂ ಯಾವುದೇ ಸಮಸ್ಯೆ ಇರುವುದಿಲ್ಲ.

ಬಹುಮಾನಗಳೇನು?: ಇನ್ನು ಪ್ರಮುಖ ವಿಷಯಕ್ಕೆ ಬರೋಣ. ಈ ಸ್ಪರ್ಧೆಯಲ್ಲಿ ಅಗ್ರಸ್ಥಾನ ಪಡೆದವರು ಐಪ್ಯಾಡ್ ಏರ್ (iPad Air) ಅನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಅಗ್ರ ಮೂರು ವಿಜೇತರು ಆಪಲ್ ವಾಚ್ ಅನ್ನು ಪಡೆಯಲಿದ್ದಾರೆ. ಹಾಗೆಯೇ IPPA ಪ್ರಕಾರ, 14 ವಿಭಾಗಗಳಲ್ಲಿ ಮೊದಲ ಸ್ಥಾನ ಪಡೆಯುವ ವಿಜೇತರಿಗೆ ಗೋಲ್ಡ್ ಬಾರ್ (Gold bar) ಅನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅಷ್ಟು ಮಾತ್ರವಲ್ಲದೆ ಈ 14 ವಿಭಾಗಗಳಲ್ಲಿ 2 ಮತ್ತು 3 ನೇ ಸ್ಥಾನಪಡೆದುಕೊಳ್ಳುವ ವಿಜೇತರು ವಿಶ್ವದ ಅತ್ಯಂತ ಗುರುತಿಸಬಹುದಾದ ಖಾಸಗಿ ಚಿನ್ನದ ಮಿಂಟ್‌ನಿಂದ ಪ್ಲಾಟಿನಂ ಬಾರ್ (Platinum bar) ಅನ್ನು ಗೆಲ್ಲುತ್ತಾರೆ ಎಂದು ತಿಳಿಸಲಾಗಿದೆ. ಹಾಗಿದ್ರೆ, ತಡ ಯಾಕೆ ಬನ್ನಿ ಯಾವ ವರ್ಗದಲ್ಲಿ ಫೋಟೋಗಳನ್ನು ಸೆಂಡ್‌ ಮಾಡಬಹುದು, ಪ್ರವೇಶ ಶುಲ್ಕ ಎಷ್ಟು ಎಂದು ನೋಡೋಣ.

ಯಾವೆಲ್ಲಾ ವರ್ಗಗಳಿವೆ?: ಈ ಸ್ಪರ್ಧೆಯಲ್ಲಿ ಪ್ರಮುಖವಾಗಿ ಅಮೂರ್ತ(Abstract), ಪ್ರಾಣಿಗಳು, ವಾಸ್ತುಶಿಲ್ಪ, ಮಕ್ಕಳು, ನಗರ ಜೀವನ/ನಗರದೃಶ್ಯ, ಭೂದೃಶ್ಯ, ಜೀವನಶೈಲಿ, ಪ್ರಕೃತಿ, ಜನರು, ಭಾವಚಿತ್ರ(Portrait), ಸರಣಿ (3 ಚಿತ್ರಗಳು), ಸ್ಟಿಲ್ ಲೈಫ್, ಟ್ರಾವೆಲ್‌, ಹಾಗೂ ಇತರೆ ವಿಭಾಗಗಳ ಆಯ್ಕೆ ನೀಡಲಾಗಿದೆ. ಈ ವಿಭಾಗದಲ್ಲಿ ನೀವು ಯಾವುದರಲ್ಲಿ ನಿಪುಣರು ಎಂಬುದನ್ನು ಕಂಡುಕೊಳ್ಳಿ.

ಸ್ಪರ್ಧೆಗೆ ಪ್ರವೇಶಿಸಲು ಪ್ರವೇಶ ಶುಲ್ಕ ಎಷ್ಟು?: ನೀವು ಎಷ್ಟು ಚಿತ್ರಗಳನ್ನು ಸಬ್‌ಮಿಟ್‌ ಮಾಡಲು ಇಚ್ಚಿಸುತ್ತೀರಾ ಎಂಬುದರ ಆಧಾರದ ಮೇಲೆ ಪ್ರತಿ ಚಿತ್ರಕ್ಕೆ ಶುಲ್ಕವನ್ನು ಪಾವತಿ ಮಾಡಬೇಕು. ಒಂದು ಚಿತ್ರವನ್ನು ಸಲ್ಲಿಸಲು ಬಳಕೆದಾರರು $5.50 ಅನ್ನು ಪಾವತಿ ಮಾಡಬೇಕು. ಅಂದರೆ ಸುಮಾರು 470 ರೂ.ಗಳು. ಹಾಗೆಯೇ 50 ಚಿತ್ರಗಳನ್ನು ಸಲ್ಲಿಸಲು $135.50 ಪಾವತಿ ಮಾಡಬೇಕು ಅಂದರೆ 11,172ರೂ.ಗಳು.

 ಐಫೋನ್‌ ಬಳಕೆದಾರರಿಗೆ ಮಾತ್ರ ಈ ಸ್ಪರ್ಧೆ... ಚಿನ್ನದ ಬಹುಮಾನ!

ಇನ್ನು ಈ ವಿಶೇಷ ಸ್ಪರ್ಧೆಗೆ ಸಾಕಷ್ಟು ಸಮಯ ನೀಡಲಾಗಿದೆ. ಇದಕ್ಕೆ ನೀವು ಈಗಿನಿಂದಲೇ ತಯಾರಿ ನಡೆಸಬಹುದು. ಅಂದರೆ ಕೊನೆಯ ದಿನಾಂಕ ಮಾರ್ಚ್ 31, 2024 ನಿಗದಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಅಥವಾ ನಿಮ್ಮ ಫೋಟೋಗಳನ್ನು ಸಬ್‌ಮಿಟ್‌ ಮಾಡಲು ಮುಂದಾದರೆ ಈ https://www.ippawards.com/gallery/?v=c86ee0d9d7ed ಲಿಂಕ್‌ ಅನ್ನು ಬಳಕೆ ಮಾಡಿಕೊಳ್ಳಬಹುದು.

ಈ ನಡುವೆ ಬಹುಪಾಲು ಮಂದಿ ಐಫೋನ್‌ ಮುಂದಿನ ಸರಣಿ ಫೋನ್ ಆಗಿರುವ ಐಫೋನ್ 15ಗೆ ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಈ ಫೋನ್‌ ಸಂಬಂಧ ಕೆಲವು ಪ್ರಮುಖ ಫೀಚರ್ಸ್‌ಗಳು ಲೀಕ್‌ ಆಗಿದ್ದು, ಬೆಲೆಯಲ್ಲಿ ಕೊಂಚ ಹೆಚ್ಚಳ ಆಗಲಿದೆ ಎನ್ನಲಾಗಿದೆ. ಅದರಲ್ಲೂ ಡಿಸೈನ್‌ ಹಾಗೂ ಡಿಸ್‌ಪ್ಲೇ ವಿಚಾರದಲ್ಲಿ ಈ ಫೋನ್‌ಗಳು ಸಾಕಷ್ಟು ಬದಲಾವಣೆ ಪಡೆದುಕೊಂಡಿವೆ ಎಂದು ಹೇಳಲಾಗುತ್ತಿದೆ.

Best Mobiles in India

English summary
As every year, contestants have been invited for the iPhone Photography Awards (IPPA). Through this iPhone users all over the world can participate in this competition.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+