Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ನಲ್ಲಿ ಸಮಸ್ಯೆಯೇ? ರಿಪೇರಿ ಅಂಗಡಿಗೆ ಹೋಗುವ ಮೊದಲು ಈ ಕೆಲಸ ಮಾಡಿ

ಇತ್ತೀಚೆಗೆ ಲಾಂಚ್‌ ಆಗುತ್ತಿರುವ ಕೆಲವು ಫೋನ್‌ಗಳು ದೀರ್ಘ ಬಾಳಿಕೆ ಬರುವುದಿಲ್ಲ. ಬದಲಾಗಿ ಕೆಲವು ತಿಂಗಳು ಅಥವಾ ವರ್ಷಗಳ ನಂತರ ತೊಂದರೆ ಕೊಡಲು ಮುಂದಾಗುತ್ತವೆ. ಈ ವೇಳೆ ಬಳಕೆದಾರರಿಗೆ ಖಂಡಿತಾ ಆತಂಕ ಮನೆ ಮಾಡುತ್ತದೆ. ಯಾಕೆಂದರೆ ಫೋನ್‌ ಏನಾದರೂ ದಿಢೀರನೆ ಸಮಸ್ಯೆಗೆ ಸಿಲುಕಿದರೆ ಭಾರಿ ಸಮಸ್ಯೆಗಳು ನಿರ್ಮಾಣ ಆಗುವುದು ಖಚಿತ ಎಂದು.

ಹೌದು, ಸ್ಮಾರ್ಟ್‌ಫೋನ್ ಬಹುಪಾಲು ಜನರ ಜೀವನದ ಬಹುಮುಖ್ಯ ಭಾಗವಾಗಿದೆ. ಇತ್ತೀಚೆಗಂತೂ ಅರ್ಧಕ್ಕಿಂತ ಹೆಚ್ಚು ಕೆಲಸವನ್ನು ಮನೆಯಲ್ಲಿ ಕುಳಿತು ಸ್ಮಾರ್ಟ್‌ಫೋನ್ ಮೂಲಕ ಮಾಡಲಾಗುತ್ತದೆ. ಈ ನಡುವೆ ನಿಮ್ಮ ಫೋನ್‌ ಹಾಳಾಗಿದ್ದರೆ ಅಥವಾ ಹಾಳಾಗುತ್ತಿವೆ ಎನ್ನುವ ಸಂಭವ ಇದ್ದರೆ ಮೊದಲು ಈ ಕೆಲಸ ಮಾಡಿ. ಈ ಮೂಲಕ ನಿಮ್ಮ ಫೋನ್‌ನಲ್ಲಿನ ಮಾಹಿತಿ ರಕ್ಷಿಸಿಕೊಳ್ಳುವುದರ ಜೊತೆಗೆ ಮುಂದಾಗುವ ಸಮಸ್ಯೆಗಳಿಂದ ಪಾರಾಗಬಹುದು.

ಸ್ಮಾರ್ಟ್‌ಫೋನ್‌ನಲ್ಲಿ ಸಮಸ್ಯೆಯೇ? ರಿಪೇರಿ ಅಂಗಡಿಗೆ ಹೋಗುವ ಮೊದಲು ಈ ಕೆಲಸ ಮಾಡಿ

ಫೋನ್‌ ಅನ್ನು ರಿಪೇರಿ ಅಂಗಡಿಗೆ ಕೊಂಡೊಯ್ಯುವ ಮೊದಲು ಈ ಕೆಲಸ ಮಾಡಿ: ಫೋನ್‌ನಲ್ಲಿ ಏನೇ ಸಮಸ್ಯೆ ಕಾಣಿಸಿಕೊಂಡರೂ ಸಹ ಮೊದಲು ಸ್ಮಾರ್ಟ್‌ಫೋನ್‌ ರಿಪೇರಿ ಮಾಡುವ ಅಂಗಡಿಗಳಿಗೆ ಕೊಂಡೊಯ್ಯುವುದು ವಾಡಿಕೆ. ಆದರೆ, ನಿಮ್ಮ ಫೋನ್ ಹಾನಿಗೊಳಗಾಗಿದ್ದರೂ ಫೋನ್ ಆನ್ ಆಗಿದ್ದರೆ ಮತ್ತು ಅದನ್ನು ಸರಿಪಡಿಸಲು ನಿಮ್ಮ ಡಿವೈಸ್‌ ಅನ್ನು ಮನೆಯ ಸಮೀಪವಿರುವ ಮೊಬೈಲ್ ಸೇವಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಲು ನೀವು ಯೋಜಿಸುತ್ತಿದ್ದರೆ ತಪ್ಪು ಮಾಡುತ್ತಿದ್ದೀರಿ ಎಂದರ್ಥ.

ನಿಮ್ಮ ಫೋನ್ ಹಾನಿಗೊಳಗಾದರೂ ಇನ್ನೂ ಆನ್ ಆಗಿದ್ದರೆ ಮತ್ತು ನಿಧಾನವಾಗಿ ಚಾಲನೆಯಲ್ಲಿದ್ದರೆ ಮಾಡಬೇಕಾದ ಮೊದಲ ಕೆಲಸವೆಂದರೆ ನಿಮ್ಮ ಫೋನ್‌ನಲ್ಲಿರುವ ಡೇಟಾವನ್ನು ಬ್ಯಾಕಪ್ ಮಾಡುವುದು.ಜನರು ಆಗಾಗ್ಗೆ ಆತುರದಲ್ಲಿ ಫೋನ್‌ನಲ್ಲಿರುವ ಡೇಟಾವನ್ನು ಕಳೆದುಕೊಳ್ಳುತ್ತಾರೆ.ಅದರಲ್ಲೂ ಈ ವೇಳೆ ಬಹುಪಾಲು ಮಂದಿ ಬ್ಯಾಕಪ್ ಮಾಡಲು ಮರೆತುಹೋಗುತ್ತಾರೆ.ಜೊತೆಗೆ ಫೋನ್ ರಿಪೇರಿ ಮಾಡುವಾಗ ನಿಮ್ಮ ಹ್ಯಾಂಡ್‌ಸೆಟ್ ಡೇಟಾ ಕಳೆದುಹೋಗಬಹುದು ಎಂದು ಸೇವಾ ಕೇಂದ್ರದ ವ್ಯಕ್ತಿ ಸಹ ನಿಮಗೆ ಸೂಚಿಸುವುದನ್ನು ಗಮನಿಸಬಹುದು. ಈ ಎಲ್ಲಾ ಕಾರಣಕ್ಕೆ ಕಡ್ಡಾಯವಾಗಿ ಬ್ಯಾಕಪ್‌ ಮಾಡಿ.

ಸ್ಮಾರ್ಟ್‌ಫೋನ್‌ನಲ್ಲಿ ಸಮಸ್ಯೆಯೇ? ರಿಪೇರಿ ಅಂಗಡಿಗೆ ಹೋಗುವ ಮೊದಲು ಈ ಕೆಲಸ ಮಾಡಿ

ಅಕಸ್ಮಾತ್‌ ಬ್ಯಾಕಪ್‌ ಮಾಡದೆ ಹೋದರೆ ನಿಮ್ಮ ಪ್ರಮುಖ ಫೋಟೋಗಳು, ವಿಡಿಯೋಗಳು, ಡಾಕ್ಯುಮೆಂಟ್‌ಗಳು ಇತ್ಯಾದಿಗಳು ಕಾಣೆಯಾಗಬಹುದು. ಈ ಕಾರಣಕ್ಕಾಗಿಯೇ ಎಲ್ಲ ಮಾಹಿತಿಯನ್ನು ಲ್ಯಾಪ್‌ಟಾಪ್‌ನಲ್ಲೋ ಅಥವಾ ಪೆನ್ ಡ್ರೈವ್‌ನಲ್ಲೋ, ಹಾರ್ಡ್ ಡಿಸ್ಕ್‌ನಲ್ಲೋ ಸ್ಟೋರೇಜ್‌ ಮಾಡಿ. ಇದನ್ನು ಮಾಡಿದ ಬಳಿಕ ನೀವು ಫೋನ್ ಅನ್ನು ಮತ್ತೆ ರಿಪೇರಿಗೆ ಕೊಡಿ. ಫೋನ್‌ ರಿಪೇರಿಯಾದ ನಂತರ ಇವುಗಳನ್ನು ನಿಮ್ಮ ಫೋನ್‌ಗೆ ಮತ್ತೆ ವರ್ಗಾವಣೆ ಮಾಡಬಹುದು.

ಈ ವಿಷಯಗಳ ಬಗ್ಗೆ ಕಡ್ಡಾಯವಾಗಿ ಗಮನಹರಿಸಿ: ಸೇವಾ ಕೇಂದ್ರಕ್ಕೆ ಹೋಗುವ ಮೊದಲು ನಿಮ್ಮ ಎಲ್ಲಾ ಬ್ಯಾಂಕಿಂಗ್ ಆಪ್‌ಗಳನ್ನು ಫೋನ್‌ಗಳಿಂದ ಕಡ್ಡಾಯವಾಗಿ ತೆಗೆದುಹಾಕಿ. ಯಾಕೆಂದರೆ ಇಂದು ಎಲ್ಲವೂ ಡಿಜಿಟಲೀಕರಣ ಆಗುತ್ತಿರುವುದರಿಂದ ಈ ರೀತಿಯ ಬಹು ಆಪ್‌ಗಳ ಬಳಕೆ ಹೆಚ್ಚಾಗಿದೆ. ಅದರಲ್ಲೂ ನೀವು ಗೂಗಲ್‌ ಪೇ, ಫೋನ್‌ ಪೇ, ಪೇಟಿಎಮ್‌ ಸೇರಿದಂತೆ ವಿವಿಧ ಆಪ್‌ಗಳನ್ನು ಬಳಕೆ ಮಾಡುತ್ತಿದ್ದರೆ ಕಡ್ಡಾಯವಾಗಿ ಅನ್‌ಇನ್‌ಸ್ಟಾಲ್ ಮಾಡಿ.

ಸ್ಮಾರ್ಟ್‌ಫೋನ್‌ನಲ್ಲಿ ಸಮಸ್ಯೆಯೇ? ರಿಪೇರಿ ಅಂಗಡಿಗೆ ಹೋಗುವ ಮೊದಲು ಈ ಕೆಲಸ ಮಾಡಿ

ಇಷ್ಟೆಲ್ಲಾ ಪ್ರಕ್ರಿಯೆ ಮುಗಿಸಿದ ನಂತರ ನಿಮ್ಮ ಸಿಮ್ ಕಾರ್ಡ್ ತೆಗೆದುಹಾಕಿ, ಭದ್ರತಾ ಲಾಕ್‌ಗಳನ್ನು ತೆಗೆದುಹಾಕಿ, ನಿಮ್ಮ IMEI ನಂಬರ್‌ ಅನ್ನು ಬರೆದಿಟ್ಟುಕೊಳ್ಳಿ, ಫ್ಯಾಕ್ಟರಿ ರೀಸೆಟ್ ಮಾಡಿ. ಅದೆಲ್ಲಕ್ಕೂ ಮಿಗಿಲಾಗಿ ಗೂಗಲ್‌ ಖಾತೆಯನ್ನು ತೆಗೆದುಹಾಕಿ ಮತ್ತು ಫ್ಯಾಕ್ಟರಿ ರೀಸೆಟ್‌ ಪ್ರೊಟೆಕ್ಟ್‌ ಅನ್ನು ನಿಷ್ಕ್ರಿಯಗೊಳಿಸಿ. ಈ ರೀತಿ ಮಾಡುವುದರಿಂದ ಸ್ಮಾರ್ಟ್‌ಫೋನ್‌ ರಿಪೇರಿ ಮಾಡುವವರಿಗೆ ನಿಮ್ಮ ಖಾಸಗಿ ವಿಚಾರ ತಿಳಿಯಲು ಸಾಧ್ಯವಾಗುವುದಿಲ್ಲ.

ಅದಾಗ್ಯೂ ಆಯಾ ಕಂಪೆನಿಗಳು ತಮ್ಮದೇ ಮೊಬೈಲ್‌ ಸೇವಾ ಕೇಂದ್ರಗಳನ್ನು ತೆರೆದಿರುತ್ತಾರೆ. ಆ ರೀತಿಯ ಅಂಗಡಿಗಳಿಗೆ ಮಾತ್ರ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ಕೊಡಿ. ಕಡಿಮೆ ಅಥವಾ ಹತ್ತಿರದ ಅಂಗಡಿ ಎಂದು ಯಾರ್ಯಾರಿಗೋ ನಿಮ್ಮ ಸ್ಮಾರ್ಟ್‌ಫೋನ್‌ ಅನ್ನು ನೀಡಬೇಡಿ. ಈ ಮೂಲಕ ನಿಮ್ಮ ಫೋನ್‌ನಲ್ಲಿ ಇನ್ನಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

Best Mobiles in India

English summary
Do this first if your phone is damaged or in danger of being damaged. By this you can protect your phone data.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+