ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹಾನಿಯಾಗಿದ್ದರೆ, ಕೂಡಲೇ ಹೀಗೆ ಮಾಡಿರಿ!
ಕಾರ ಚಾಲನೆ, ಬೈಕ್ ಚಾಲನೆ ಅಥವಾ ಯಾವುದೇ ವಾಹನ ಚಾಲನೆ ಮಾಡಲು ಸೂಕ್ತ ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಅಗತ್ಯ ಆಗಿದೆ. ಇದರೊಂದಿಗೆ ಡ್ರೈವಿಂಗ್ ಲೈಸೆನ್ಸ್ ಗುರುತಿನ ಪುರಾವೆಯ ದಾಖಲೆಯು ಆಗಿದೆ. ಈ ನಿಟ್ಟಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಅನ್ನು ಸುರಕ್ಷಿತವಾಗಿ ಕಾಯ್ದಿರಿಸುವುದು ಅಗತ್ಯ ಆಗಿದೆ. ಅದಾಗ್ಯೂ, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಹಾನಿಯಾಗಿದ್ದರೆ, ಮತ್ತೆ ಪಡೆಯಲು ಹೀಗೆ ಮಾಡಿ.
ಹೌದು, ಓರಿಜಿನಲ್ ಡ್ರೈವಿಂಗ್ ಲೈಸೆನ್ಸ್ ಹಾನಿಯಾದರೆ, ಹರಿದುಹೋಗಿದ್ದರೆ ಅಥವಾ ಅದು ಕಳೆದುಹೋದರೆ ಬಳಕೆದಾರರು ಸಾರಿಗೆ ಇಲಾಖೆಯಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ (Duplicate Driving Licence) ಪಡೆಯಬಹುದು. ಆದರೆ ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿದಾರರು ಕೆಲವು ಸೂಕ್ತ ಕ್ರಮಗಳನ್ನು ಅನುಸರಿಸಬೇಕಿದೆ.

ಒಂದು ವೇಳೆ ಡ್ರೈವಿಂಗ್ ಲೈಸೆನ್ಸ್ ಕಳೆದುಹೋಗಿದ್ದರೆ, ಆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಬೇಕಿರುತ್ತದೆ. ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಎಫ್‌ಐಆರ್ ಪ್ರತಿ ಅಗತ್ಯ ಇರುತ್ತದೆ. ಹಾಗಾದರೆ ಆನ್‌ಲೈನ್ ಮೂಲಕ ಡುಬ್ಲಿಕೇಟ್ ಡ್ರೈವಿಂಗ್ ಲೈಸೆಸ್ಸ್ ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.
ಡುಬ್ಲಿಕೇಟ್ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಈ ಹಂತಗಳನ್ನು ಫಾಲೋ ಮಾಡಿರಿ:
- ರಸ್ತೆ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ (https://parivahan.gov.in/parivahan/) ತೆರೆಯಿರಿ
- ಬಳಿಕ ಅಲ್ಲಿನ ಡ್ರಾಪ್ ಡೌನ್ ಮೆನುವಿನಲ್ಲಿ ಕರ್ನಾಟಕ ರಾಜ್ಯವನ್ನು ಸೆಲೆಕ್ಟ್ ಮಾಡಬೇಕು
- ನಂತರದ ವಿಂಡೋದಲ್ಲಿ, 'ಸರ್ವಿಸ್ ಆನ್ ಡ್ರೈವಿಂಗ್ ಲೈಸೆನ್ಸ್' ಆಯ್ಕೆಯನ್ನು ಕ್ಲಿಕ್ ಮಾಡುವುದು
- ಆ ಬಳಿಕ 'ಆನ್‌ಲೈನ್‌ನಲ್ಲಿ ಅನ್ವಯಿಸು' ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಕ್ಲಿಕ್ ಮಾಡಿರಿ

- ಕೆಳಗಿನ ಸ್ಕ್ರೀನ್‌ನಲ್ಲಿ ವಿವರಗಳನ್ನು ಓದಿ ಮತ್ತು ಮುಂದಿನ ಸ್ಕ್ರೀನ್ ಅನ್ನು ಪಡೆಯಲು 'ಮುಂದುವರಿಸಿ' ಆಯ್ಕೆ ಸೆಲೆಕ್ಟ್ ಮಾಡಿ
- ಎಲ್ಲಾ ಮಾಹಿತಿಗಳನ್ನು ತುಂಬಿದ ಬಳಿಕ, LLD ಫಾರ್ಮ್ ಅನ್ನು ತುಂಬಿರಿ
- ಫಾರ್ಮ್ ಅನ್ನು ತುಂಬಿದ ನಂತರ, ಪ್ರಿಂಟ್ ಔಟ್ ತೆಗೆದುಕೊಳ್ಳಬೇಕು
- ನಂತರ ಅವಶ್ಯ ದಾಖಲೆಗಳನ್ನು ಲಗತ್ತಿಸಿದ ಬಳಿಕ ಈ ಫಾರ್ಮ್ ಅನ್ನು ಹತ್ತಿರದ RTO ಕಚೇರಿಗೆ ಹೋಗಿ ಸಲ್ಲಿಸುವುದು.
- ಸ್ವೀಕೃತಿ ಸೇರಿದಂತೆ ಅರ್ಜಿ ನಮೂನೆಯ ಪ್ರಿಂಟೌಟ್ ಸೇರಿಸಿ ಸನಿಹದ RTO ಕಚೇರಿಗೆ ಮತ್ತು RTO ಅಧಿಕಾರಿಗೆ ಅರ್ಜಿಯನ್ನು ಸಲ್ಲಿಸುವುದು.
- ಆಗ, ಅವರು ನೀವು ಪಾವತಿಸಬೇಕಾದ ಶುಲ್ಕದ ಬಗ್ಗೆ ಹೇಳುತ್ತಾರೆ.
- ಆ ಬಳಿಕ RTO ಕೌಂಟರ್‌ನಲ್ಲಿ ಶುಲ್ಕವನ್ನು ಪಾವತಿಸುವುದು. ಹಾಗೆಯೇ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಪೂರ್ಣ ಮಾಡಲು ಅರ್ಜಿ ಹಾಗೂ ದಾಖಲೆಗಳನ್ನು ಸಲ್ಲಿಸುವುದು.
- ಅರ್ಜಿ ಪ್ರಕ್ರಿಯೆ ಮುಗಿದ ಸುಮಾರು 30 ದಿನಗಳ ಬಳಿಕ, ಡುಬ್ಲಿಕೆಟ್ ಡಿಎಲ್ ಲಭ್ಯವಾಗಲಿದೆ.
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಹೀಗೆ ಮಾಡಿ:
ಡುಬ್ಲಿಕೇಟ್ ಡಿಎಲ್ ಪಡೆಯಲು ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ, ಮೊದಲು RTO ಆಫೀಸ್‌ಗೆ ಭೇಟಿ ನೀಡಿ. ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಬೇಕು. ನೀವು RTO ಕಚೇರಿಗೆ ಹೋಗಿ ಶುಲ್ಕವನ್ನು ಪಾವತಿಸುವ ಮೂಲಕ ಎಲ್‌ಎಲ್‌ಡಿ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
ಅರ್ಜಿ ಪ್ರಕ್ರಿಯೆಯಲ್ಲಿ 30 ದಿನಗಳ ನಂತರ ನಿಮ್ಮ ಡುಬ್ಲಿಕೆಟ್ ಚಾಲನಾ ಪರವಾನಗಿಯನ್ನು ಲಭ್ಯವಾಗುವುದು. ಈ ಅವಧಿಯಲ್ಲಿ, ನೀವು ರಶೀದಿಯನ್ನು ಸಹ ಪಡೆಯುತ್ತೀರಿ, ಅದನ್ನು ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳುವುದು ಅವಶ್ಯ. ಡುಬ್ಲಿಕೆಟ್ ಡಿಎಲ್ ಅನ್ನು ಸ್ವೀಕರಿಸಿದಾಗ, ಈ ರಶೀದಿಯ ಅಗತ್ಯವಿರುತ್ತದೆ. ಈ ರಸೀದಿಯ ಮೂಲಕ ನಿಮ್ಮ ಡುಬ್ಲಿಕೆಟ್ ಡಿಎಲ್ ಅನ್ನು ಸಹ ನೀವು ಟ್ರ್ಯಾಕ್ ಮಾಡಬಹುದಾಗಿದೆ.


Click it and Unblock the Notifications








