Home
ಸುದ್ದಿಜಾಲ

ವಿಶ್ವ IFA ಟೆಕ್‌ ಮೇಳಕ್ಕೆ ಬರ್ಲಿನ್‌ನಲ್ಲಿ ವೇದಿಕೆ ಸಜ್ಜು!

ಪ್ರತಿ ವರ್ಷ ಟೆಕ್‌ ವಲಯದಲ್ಲಿಯೂ ಹಲವು ಸಮ್ಮೇಳನಗಳು, ಮೇಳಗಳು ನಡೆಯುತ್ತವೆ. ಈ ಮೇಳಗಳು ಹೊಸ ಟೆಕ್‌ ಆವಿಷ್ಕಾರಗಳಿಗೆ, ಹೊಸ ಗ್ಯಾಜೆಟ್‌ ಉತ್ಪನ್ನಗಳ ಅನಾವರಣಕ್ಕೆ ವೇದಿಕೆಯಾಗಲಿವೆ. ಈ ನಿಟ್ಟಿನಲ್ಲಿ ಯುರೋಪ್‌ನಲ್ಲಿ ವಿಶ್ವ IFA 2019 (Internationale Funkausstellung) ಮೇಳವು ಸಕಲ ರೀತಿ ಸಜ್ಜಾಗಿದೆ. ಈ ಮೇಳದಲ್ಲಿ ಡೆವಲಪರ್ಸ್‌, ಟೆಕ್ ಕಂಪನಿಗಳು ತಮ್ಮ ಮುಂಬರುವ ಮತ್ತು ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ಉತ್ಪನ್ನಗಳನ್ನು ಪ್ರದರ್ಶಿಸುತ್ತಾರೆ.

IFA ಮೇಳ

ಹೌದು, IFA ಮೇಳವು ಯೋರೋಪ್‌ನ ಅತೀ ದೊಡ್ಡ ಟೆಕ್ ಕಾರ್ಯಕ್ರಮವಾಗಿದ್ದು, ಈ ವರ್ಷದ 2019 IFA ಕಾರ್ಯಕ್ರಮವು ಬರ್ಲಿನ್ ನಗರದಲ್ಲಿ ನಡೆಯಲಿದೆ. ಇದೇ ಸೆಪ್ಟಂಬರ್ 6 ರಿಂದ ಶುರುವಾಗುವ ಈ ಕಾರ್ಯಕ್ರಮವು ಸೆಪ್ಟಂಬರ್ 11ರ ವರೆಗೂ ನಡೆಯಲಿದೆ. ಆಸೂಸ್‌, ಡೆಲ್, ಫಿಟ್‌ಬೀಟ್‌, ನೋಕಿಯಾ, ಗಾರ್ಮಿನ, ಫೋಸಿಲ್, ಸೇರಿದಂತೆ ಹಲವು ವಿಶ್ವ ಮಟ್ಟದ ಕಂಪನಿಗಳಿಂದ ಹೊಸ ಉತ್ಪನ್ನಗಳ ಅನಾವರಣವಾಗಲಿದೆ. ಹಾಗಾದರೇ ಮೇಳದಲ್ಲಿ ಯಾವೆಲ್ಲಾ ಕಂಪನಿಗಳು ಹೊಸ ಉತ್ಪನ್ನಗಳನ್ನು ಪರಿಚಯಿಸಲಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ನೋಕಿಯಾ 7.2

ನೋಕಿಯಾ HMD ಗ್ಲೋಬಲ್ ಸಂಸ್ಥೆಯು IFA2019 ಕಾರ್ಯಕ್ರಮದಲ್ಲಿ ನೋಕಿಯಾ 7.2 ಸ್ಮಾರ್ಟ್‌ಫೋನ್‌ ಅನಾವರಣ ಮಾಡಲಿದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದ್ದು, ಪ್ರಮುಖ ಕ್ಯಾಮೆರಾವು 48ಎಂಪಿ ಸೆನ್ಸಾರ್‌ ಹೊಂದಿರಲಿದ್ದು, ಸೆಕೆಂಡರಿ ಕ್ಯಾಮೆರಾವು 120 ಡಿಗ್ರಿ ವೈಲ್ಡ್‌ ಆಂಗಲ್ ಲೆನ್ಸ್‌ ಒಳಗೊಂಡಿರಲಿದೆ. ಹಾಗೆಯೇ ZEISS ಬ್ರ್ಯಾಂಡ್‌ ಲೆನ್ಸ್‌ಗಳು ಇರಲಿವೆ ಎನ್ನಲಾಗಿದೆ.

ಎಲ್‌ಜಿ ಕಂಪನಿ

ಎಲ್‌ಜಿ ಕಂಪನಿಯು ಸಹ IFA 2019 ಕಾರ್ಯಕ್ರಮದಲ್ಲಿ ಕೆ50ಎಸ್‌ ಮತ್ತು ಕೆ40ಎಸ್‌ ಹೆಸರಿನ ಎರಡು ಮಿಡ್‌ರೇಂಜ್ ಸ್ಮಾರ್ಟ್‌ಫೋನ್‌ಗಳನ್ನು ಪ್ರದರ್ಶಿಸಲಿದೆ. ಇದರೊಂದಿಗೆ 4K UHD ಸಿನಿಬೀಮ್ ಹೋಮ್ ಪ್ರೊಜೆಕ್ಟರ್ ಸಹ ಅನಾವರಣ ಮಾಡುವ ಸಾಧ್ಯತೆಗಳು ಇವೆ. ಹಾಗೆಯೇ ಬಹುನಿರೀಕ್ಷಿತ ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್‌ಫೋನ್ ಸಹ ಅದೇ ವೇದಿಕೆಯಲ್ಲಿ ಪರಿಚಯಿಸಲಿದೆ.

ಹುವಾವೆ IFA

ಬರ್ಲಿನ್‌ನಲ್ಲಿ ನಡೆಯುವ IFA 2019 ಕಾರ್ಯಕ್ರಮದಲ್ಲಿ ಹುವಾವೆ ಸಹ ಅಚ್ಚರಿ ನೀಡಲು ಸಜ್ಜಾಗಿದೆ. ಹುವಾವೆ ಗೂಗಲ್ ಅಸಿಸ್ಟಂಟ್ ಬೆಂಬಲಿತ ಸ್ಪಿಕರ್, ಹುವಾವೆ ಮೇಟ್ 30 ಸ್ಮಾರ್ಟ್‌ಫೋನ್ ಸರಣಿ, ಹಾಗೂ ಮುಂದಿನ ಪೀಳಿಗೆಯ ಹೊಸ 'ಕಿರನ್' ಪ್ರೊಸೆಸರ್ ಚಿಪ್‌ಸೆಟ್‌ ಅನ್ನು ಪ್ರದರ್ಶಿಸಲಿದೆ ಎನ್ನಲಾಗಿದೆ. ಇದರೊಂದಿಗೆ ಹುವಾವೆ ಪಿ40 ಫೋನ್‌ ಸಹ ಅನಾವರಣ ಸಾಧ್ಯತೆ ಇದೆ.

ಗಾರ್ಮಿನ್ ಸಂಸ್ಥೆ

ವಿಶ್ವ ಮಟ್ಟದ ಗಾರ್ಮಿನ್ ಕಂಪನಿಯ ವೆನ್ಯೂ, ವಿವೊಆಕ್ಟಿವ್ 4, ವಿವೊಆಕ್ಟಿವ್ ಎಸ್‌4 ಮತ್ತು ಹೊಸ ವಿವೊಆಕ್ಟಿವ್ ರೇಂಜ್ 3 ಸ್ಮಾರ್ಟ್‌ವಾಚ್‌ಗಳು ಇತ್ತೀಚಿಗೆ ಆನ್‌ಲೈನ್‌ನಲ್ಲಿ ಸದ್ದು ಮಾಡಿವೆ. ಹಾಗೆಯೇ ಇತ್ತೀಚಿಗೆ ಕಂಪನಿಯು ಹೊಸ 'ಫೆನಿಕ್ಸ್ 6' ಅನ್ನು ಆಫೀಶಿಯಲ್‌ ಆಗಿ ಘೋಷಿಸಿದ್ದು, IFA ಕಾರ್ಯಕ್ರಮದಲ್ಲಿ ಸಂಸ್ಥೆಯು ಈ ಎಲ್ಲ ಉತ್ಪನ್ನಗಳನ್ನು ಪ್ರದರ್ಶಿಸಲಿದೆ ಎನ್ನಲಾಗಿದೆ.

ಫಿಟ್‌ಬಿಟ್‌

ಫಿಟ್ನೆಸ್‌ ಉತ್ಪನ್ನಗಳ ಜನಪ್ರಿಯ ಕಂಪನಿಗಳಲ್ಲಿ ಒಂದಾದ ಫಿಟ್‌ಬಿಟ್ ಸಂಸ್ಥೆಯು IFA ಕಾರ್ಯಕ್ರಮದಲ್ಲಿ ಹೊಸ ಗ್ಯಾಜೆಟ್‌ ಉತ್ಪನ್ನಗಳ ಅನಾವರಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಫಿಟ್‌ಬಿಟ್‌ ವಾಚ್‌ಗಳು ಫಿಟ್ನೆಸ್‌ ಪ್ರಿಯರ್ ಮನಗೆದ್ದಿದ್ದು, ಈ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ 'ವರ್ಸಾ 2 ಸ್ಮಾರ್ಟ್‌ವಾಚ್‌' ಪ್ರದರ್ಶಿಸಲಿದೆ. ಈ ವಾಚ್‌ ಅಲೆಕ್ಸಾ ವಾಯಿಸ್‌ ಅಸಿಸ್ಟಂಟ್ ಬೆಂಬಲ ಪಡೆದಿರಲಿದೆ.

Best Mobiles in India

English summary
IFA,is Europe's biggest tech show. IFA 2019 is held in Berlin from 6-11 September. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+