Home
ಸುದ್ದಿಜಾಲ

ಡಿಜಿಟಲ್‌ ಅರೆಸ್ಟ್‌ ಆಗಿ ಬರೋಬ್ಬರಿ 7.28 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ!

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಬಂಧನ (digital arrest) ಸ್ಕ್ಯಾಮ್‌ಗಳು ಸೇರಿದಂತೆ ಸೈಬರ್ ವಂಚನೆಗಳ ಹೆಚ್ಚು ಸದ್ದು ಮಾಡ್ತಿವೆ. ವಿವಿಧ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳ ಮೂಲಕ, ಇಲ್ಲವೇ ಸರ್ಕಾರಿ ಇಲಾಖೆಗಳ ಅಧಿಕಾರಿಗಳೆಂದು ಹೇಳುವ ಮೂಲಕ ವಂಚಕರು ಬಲೆ ಬೀಸುವ ಘಟನೆಗಳು ಹೆಚ್ಚಾಗಿ ವರದಿ ಆಗುತ್ತಿವೆ. ಹೀಗೆ ಇದೀಗ ಐಐಟಿ ಬಾಂಬೆ (IIT Bombay) ಮೂಲದ ವಿದ್ಯಾರ್ಥಿಯೊಬ್ಬ ನಕಲಿ ಟ್ರಾಯ್ ಅಧಿಕಾರಿ ಬಲೆಗೆ ಸಿಲುಕಿ ಬರೋಬ್ಬರಿ 7.28 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಹೌದು, ಐಐಟಿ ಬಾಂಬೆ (IIT Bombay Student) ಮೂಲದ 25 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನಕಲಿ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳು ಹೆಣದ ಡಿಜಿಟಲ್‌ ಅರೆಸ್ಟ್‌ಗೆ ಸಿಲುಕಿ 7.28 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ. ಅಪರಿಚಿತ ನಂಬರ್‌ನಿಂದ ಕರೆ ಸ್ವೀಕರಿಸಿದ ವಿದ್ಯಾರ್ಥಿ ವಂಚಕರ ಬಲೆಗೆ ಬಿದ್ದಿದ್ದಾನೆ ಎಂದು ವರದಿಯಾಗಿದೆ.

ಡಿಜಿಟಲ್‌ ಅರೆಸ್ಟ್‌ ಆಗಿ ಬರೋಬ್ಬರಿ 7.28 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ!

ಜುಲೈನಲ್ಲಿ ಅಪರಿಚಿತ ನಂಬರ್‌ನಿಂದ ಬಂದ ಕರೆ ಸ್ವೀಕರಿಸಿದಾಗಿಂದ ವಿದ್ಯಾರ್ಥಿಗೆ ಸಮಸ್ಯೆ ಶುರುವಾಗಿದೆ. ಕರೆ ಮಾಡಿದ ವ್ಯಕ್ತಿ ತನ್ನನ್ನು ಟ್ರಾಯ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದು, ವಿದ್ಯಾರ್ಥಿಯ ಮೊಬೈಲ್ ನಂಬರ್‌ಗೆ 17 ಕಾನೂನುಬಾಹಿರ ಚಟುವಟಿಕೆಗಳ ದೂರುಗಳನ್ನು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ನಾವು ಹೇಳಿದ ಸೂಚನೆಗಳನ್ನು ಪಾಲಿಸದಿದ್ದರೆ, ಬಂಧನದ ಅಪಾಯವಿದೆ ಎಂದು ಸ್ಕ್ಯಾಮರ್‌ಗಳು ಭೀತಿ ಮೂಡಿಸಿದ್ದಾರೆ.

ಸ್ಕ್ಯಾಮರ್‌ಗಳನ್ನು ನಿಜಕ್ಕೂ ಅಧಿಕಾರಿಗಳು ಇರಬಹುದು ಎಂದು ನಂಬಿ, ಅವರು ಸೂಚನೆಗಳನ್ನು ಅನುಸರಿಸಲು ವಿದ್ಯಾರ್ಥಿ ಒಪ್ಪಿರುತ್ತಾರೆ. ಆಗ ಸ್ಕ್ಯಾಮರ್‌ಗಳು ಪ್ರಕರಣದಿಂದ ವಿದ್ಯಾರ್ಥಿಯ ಹೆಸರನ್ನು ತೆಗೆದುಹಾಕಲು ಹಾಗೂ ಬಂಧನ ತಪ್ಪಿಸಲು ಹಣ ವರ್ಗಾವಣೆ ಮಾಡಲು ಸೂಚನೆ ನೀಡಿದ್ದಾರೆ. ಭಯದಿಂದ ವಿದ್ಯಾರ್ಥಿಯು ಅಧಿಕಾರಿಗಳ ಸೋಗಿನಲ್ಲಿ ಮಾತನಾಡಿದ ಸ್ಕ್ಯಾಮರ್‌ಗಳಿಗೆ ಬರೋಬ್ಬರಿ 7.28 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ.

ಇತ್ತೀಚಿಗೆ ಡಿಜಿಟಲ್‌ ಅರೆಸ್ಟ್‌ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಸ್ಕ್ಯಾಮರ್‌ಗಳು ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಜನರಿಗೆ ಭಯ ಮೂಡಿಸಿ ಅವರಿಂದ ಹಣ ವರ್ಗಾಯಿಸುವ ಅನೇಕ ಘಟನೆಗಳನ್ನು ನೋಡುತ್ತಿದ್ದೆವೆ. ಮುಖ್ಯವಾಗಿ ಹಿರಿಯ ನಾಗರಿಕರು, ವಿದ್ಯಾರ್ಥಿಗಳು, ಡಿಜಿಟಲ್‌ ಸೆಕ್ಯುರಿಟಿ ಬಗ್ಗೆ ಕಡಿಮೆ ಮಾಹಿತಿ ಇರುವ ಸಾಮಾನ್ಯ ಜನರನ್ನೇ ಸ್ಕ್ಯಾಮರ್‌ಗಳು ಟಾರ್ಗೆಟ್‌ ಮಾಡುತ್ತಿರುವುದನ್ನು ಗಮನಿಸಬಹುದು.

ಡಿಜಿಟಲ್‌ ಅರೆಸ್ಟ್‌ ಸ್ಕ್ಯಾಮ್‌ನಿಂದ ಸುರಕ್ಷಿತವಾಗಿರಲು ಈ ಟಿಪ್ಸ್‌ ಅನುಸರಿಸಿ

* ನೀವರನಾದರೂ ಸರ್ಕಾರಿ ಅಧಿಕಾರಿ, ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ಕರೆ ಅಥವಾ ಎಸ್‌ಎಮ್‌ಎಸ್‌ ಸ್ವೀಕರಿಸಿದರೆ, ಭಯ ಬೀಳಬೇಡಿ.
* ನಿಮ್ಮ ಬ್ಯಾಂಕ್ ಖಾತೆ ಮಾಹಿತಿ ಅಥವಾ ಯಾವುದಾರೂ OTP ಅಥವಾ ಆಧಾರ್ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್‌ ಮಾಹಿತಿ ಕೇಳಿದರೆ ಯಾವುದೇ ಮಾಹಿತಿಯನ್ನು ಅಪರಿಚಿತರೊಂದಿಗೆ/ ಅಧಿಕಾರಿಗಳಂದೆ ಕರೆ ಮಾಡುವವರೊಂದಿಗೆ ಹಂಚಿಕೊಳ್ಳಬೇಡಿ.

* ಹಾಗೆಯೇ ವೈಯಕ್ತಿಕ ಮಾಹಿತಿ ಅಥವಾ ಸೂಕ್ಷ್ಮ ಸಂಗತಿಗಳನ್ನು ಫೋನ್ ಮೂಲಕ ಅಥವಾ ಅಪರಿಚಿತ ವ್ಯಕ್ತಿಗಳ ಜೊತೆಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಅಂದಹಾಗೆ ಕಾನೂನುಬದ್ಧ ಏಜೆನ್ಸಿಗಳು ಫೋನ್‌ ಮೂಲಕ ಸೂಕ್ಷ್ಮ ಮಾಹಿತಿಯನ್ನು ಎಂದಿಗೂ ಕೇಳುವುದಿಲ್ಲ.

* ಅಧಿಕಾರಿ ಸೋಗಿನಲ್ಲಿ ಬಂದ ಕರೆಗಳಿಗೆ ಭಯದಿಂದ ವರ್ತಿಸುವ ಅಥವಾ ನಿರ್ಧಾರ ತೆಗೆದುಕೊಳ್ಳುವ ಮೊದಲು, ಶಾಂತವಾಗಿ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಭಯ ಅಥವಾ ಒತ್ತಡದಲ್ಲಿ ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

* ಒಂದು ವೇಳೆ ಬಂದಿರುವ ಕರೆ ಸ್ಕ್ಯಾಮರ್‌ಗಳದ್ದು ಎಂದು ನಿಮಗೆ ಅನಿಸಿದರೆ, ಎಚ್ಚರ ವಹಿಸಿ ಹಾಗೂ ಯಾವುದೇ ಮಾಹಿತಿ ಕೊಡಬೇಡಿ. ಸಾಧ್ಯವಾದರೆ ಆ ಕರೆಯ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಳ್ಳಿ. ಕೂಡಲೇ ನಿಮ್ಮ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಕ್ರೈಮ್ ಸೆಲ್‌ಗೆ ಭೇಟಿ ನೀಡಿ ವರದಿ ಮಾಡಿರಿ.

Best Mobiles in India

English summary
IIT Bombay Student Scammed of Rs 7.28 Lakh by Fake Telecom Authority Call. check all details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+