ಐಫೋನ್ ರೀತಿಯಲ್ಲಿ ಇರುವ ಈ ಫೋನ್‌ನ ಆಫರ್ ಬೆಲೆ 4,499ರೂ.ಗಳು!
ಸ್ಮಾರ್ಟ್‌ಫೋನ್‌ಗಳು (Smartphones) ಇಂದು ಮನುಷ್ಯರ ಅವಿಭಾಜ್ಯ ಅಂಗದಂತೆ ಆಗಿವೆ. ಈ ನಡುವೆ ಪ್ರಮುಖ ಕಂಪೆನಿಗಳು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಇವುಗಳಿಗೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಆಫರ್ ಅನ್ನೂ ಸಹ ಘೋಷಣೆ ಮಾಡಲಾಗುತ್ತಿದೆ.
ಹೌದು, ಸ್ಮಾರ್ಟ್‌ಫೋನ್‌ಗಳು ಒಂದು ಹೆಚ್ಚು ಬೇಡಿಕೆ ಇರುವ ಡಿವೈಸ್‌ಗಳಾಗಿವೆ. ಬಜೆಟ್ ಬೆಲೆಯಿಂದ ದುಬಾರಿ ಬೆಲೆಯ ಐಫೋನ್‌ಗಳಿಗೆ ಅವುಗಳದೇ ಆದ ಬೇಡಿಕೆ ಇದೆ. ಈ ನಡುವೆ ನೀವೇನಾದರೂ ಐಫೋನ್ ವಿನ್ಯಾಸ ಇರುವ ಫೋನ್ ಖರೀದಿ ಮಾಡಲು ಇಚ್ಚಿಸಿದ್ರೆ ಈ ಲೇಖನ ನಿಮಗೆ ಅನುಕೂಲ ಆಗಲಿದೆ. ಅಂದರೆ ನಾವಿಲ್ಲಿ ತಿಳಿಸಲು ಹೊರಟಿರುವ ಫೋನ್ ಥೇಟ್ ಐಫೋನ್ ಹೋಲುತ್ತದೆ. ಆದರೆ ಇದರ ಬೆಲೆ ಕೇವಲ 4,499ರೂ.ಗಳು. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಹಾಗೂ ಇತರೆ ಆಫರ್ ವಿಚಾರಗಳನ್ನು ತಿಳಿಯೋಣ.

ಐಕಾಲ್ K510 ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್‌ನ (iKall K510 smartphone) ಸಾಮಾನ್ಯ ದರ 6,599 ರೂ.ಗಳಾಗಿದೆ. ಆದರೆ, ಅಮೆಜಾನ್ ಈ ಫೋನ್‌ಗೆ 32% ರಿಯಾಯಿತಿ ಘೋಷಣೆ ಮಾಡಿದ್ದು, ಇದರಿಂದಾಗಿ ನೀವು ಇದನ್ನು ಈಗ ಕೇವಲ 4,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಅನ್ನು ನೀವು ಇಎಮ್‌ಐ ಮೂಲಕವೂ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಅಂದರೆ ತಿಂಗಳಿಗೆ 218 ರೂ.ಗಳನ್ನು ಪಾವತಿ ಮಾಡಿದ್ರೆ ಸಾಕು.
ಹಾಗೆಯೇ ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ಸ್ 1 ಆಫರ್‌ನಲ್ಲಿ 202 ವರೆಗೆ ಇಎಮ್‌ಐ ಬಡ್ಡಿ ಉಳಿತಾಯ, ಆಯ್ದ ಕ್ರೆಡಿಟ್ ಕಾರ್ಡ್‌ಗಳಲ್ಲಿ 850ರೂ. ವರೆಗೆ ರಿಯಾಯಿತಿ ಸಿಗಲಿದೆ. ಈ ಮೂಲಕ ಅಗ್ಗದ ಬೆಲೆಯಲ್ಲಿ ಲಭ್ಯ ಆಗುತ್ತಿರುವ ಫೋನ್ ಇನ್ನೂ ಕಡಿಮೆ ದರದಲ್ಲಿ ನಿಮ್ಮ ಕೈ ಸೇರಲಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಪಡೆದಿದೆ ಅನ್ನೋದನ್ನು ತಿಳಿಯೋಣ ಬನ್ನಿ.

ಐಕಾಲ್ K510 ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: 5 ಇಂಚಿನ ಎಲ್‌ಇಸಿ ಡಿಸ್‌ಪ್ಲೇ ಹೊಂದಿದ್ದು, 480 x 854 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರ ಜೊತೆಗೆ 196 ಪಿಪಿಐ ಸಾಂದ್ರತೆ ಹೊಂದಿದೆ. ಈ ಮೂಲಕ ಬೆಲೆಗೆ ತಕ್ಕ ಫೀಚರ್ಸ್ ಎನ್ನಬಹುದು.
ಐಕಾಲ್ K510 ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಆಂಡ್ರಾಯ್ಡ್ v13 ಓಎಸ್ ನಲ್ಲಿ ರನ್ ಆಗಲಿದ್ದು, 1.3 GHz, ಕ್ವಾಡ್ ಕೋರ್ ಪ್ರೊಸೆಸರ್ ಬಲ ಹಾಗೂ 2 GB RAM ಮತ್ತು 32 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದುಕೊಂಡಿದೆ. ಅಲ್ಲದೆ ಡೆಡಿಕೇಟೆಡ್ ಮೆಮೊರಿ ಕಾರ್ಡ್ ಸ್ಲಾಟ್ ಆಯ್ಕೆ ಸಹ ಇದ್ದು, ಈ ಮೂಲಕ ನೀವು 256 GB ವರೆಗೆ ಸ್ಟೋರೇಜ್ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.
ಐಕಾಲ್ K510 ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಫೋನ್‌ನ ಕ್ಯಾಮೆರಾ ವಿಚಾರಕ್ಕೆ ಬಂದರೆ 13 ಮೆಗಾಪಿಕ್ಸೆಲ್‌ನ ಸಿಂಗಲ್ ರಿಯರ್ ಕ್ಯಾಮೆರಾ ಕಾಣಬಹುದು. ಫೋನ್ ನೋಡಿದ್ರೆ ಟ್ರಿಪಲ್ ರಿಯರ್‌ಕ್ಯಾಮೆರಾ ಆಯ್ಕೆಯಲ್ಲಿ ಕಾಣಿಸುತ್ತದೆ. ಆದರೆ ಅದು ಶೈಲಿಗಷ್ಟೇ. ಇನ್ನು ಈ ಕ್ಯಾಮೆರಾ ಬಳಕೆ ಮಾಡಿಕೊಂಡು 1080p FHD ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದೆ. ಉಳಿದಂತೆ ಈ ಫೋನ್ 5 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಐಕಾಲ್ K510 ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 3000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು 4G, VoLTE ಬ್ಲೂಟೂತ್, ವೈಫೈ, ಮೈಕ್ರೋ ಯುಎಸ್‌ಬಿ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.


Click it and Unblock the Notifications








