IKODOO ಬಡ್ಸ್ Z , ಬಡ್ಸ್ ಒನ್ ಅನಾವರಣ: ಬೆಲೆ ಎಷ್ಟು!?
ಭಾರತದಲ್ಲಿ IKODOO ತನ್ನದೇ ಆದ ತಂತ್ರಜ್ಞಾನದ ಮೂಲಕ ವಿಭಿನ್ನ ಆಡಿಯೋ ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡಲು ಮುಂದಾಗಿದ್ದು, ಅದರಂತೆ ಈಗ ಹೊಸ ಇಯರ್‌ಬಡ್ಸ್ ಅನ್ನು ಲಾಂಚ್ ಮಾಡಿದೆ. ಇವು 50dB ANC ಫೀಚರ್ಸ್ ಹೊಂದಿದ್ದು, ಇವುಗಳ ತಯಾರಿಕೆಯಲ್ಲಿ ಡ್ಯಾನಿಶ್ ಸೌಂಡ್ ಟೆಕ್ನಾಲಜಿ ಬ್ರ್ಯಾಂಡ್ ವಿಫಾ ಸೌಂಡ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.
ಹೌದು, ಭಾರತದ ಮಾರುಕಟ್ಟೆಯಲ್ಲಿ ವಿಭಿನ್ನವಾಗಿ ತನ್ನದೇ ಆಡಿಯೋ ಬ್ರ್ಯಾಂಡ್‌ಗಳ ಮೂಲಕ ಗುರುತಿಸಿಕೊಳ್ಳಲು ಸಜ್ಜಾಗಿರುವ IKODOO ಇದೀಗ ಮೊದಲ ಉತ್ಪನ್ನವಾಗಿ ಬ್ರ್ಯಾಂಡ್ ಬಡ್ಸ್ Z ಇಯರ್‌ಬಡ್(IKODOO Buds Z) ಹಾಗೂ ಬಡ್ಸ್ ಒನ್ (IKODOO Buds One) ಅನ್ನು ಅನಾವರಣ ಮಾಡಿದೆ. ಇವು ವಿಭಿನ್ನ ಫೀಚರ್ಸ್‌ಗಳನ್ನು ಪಡೆದುಕೊಂಡಿದ್ದು, ಅತ್ಯಾಕರ್ಷಕ ಶೈಲಿಯನ್ನು ಹೊಂದಿವೆ. ಹಾಗಿದ್ರೆ, ಇವುಗಳ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಬೆಲೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

IKODOO ಬಡ್ಸ್ ಒನ್ ಫೀಚರ್ಸ್: IKODOO ಬಡ್ಸ್ ಒನ್, ಟ್ರಾನ್ಸ್ಪರೆನ್ಸ್ ಮೋಡ್ ಹೊಂದಿದ್ದು, ಈ ಮೂಲಕ ನಿಮಗೆ ಅಗತ್ಯ ಎಂದಾಗ ನಿಮ್ಮ ಸುತ್ತಲಿನ ಶಬ್ದಗಳನ್ನು ಆಲಿಸಬಹುದು. ಹಾಗೆಯೇ ಬಡ್ಸ್‌ಗಳು ಹೊರಗಿನ ಶಬ್ದಗಳನ್ನು 50dB ರಷ್ಟು ಕಡಿಮೆ ಮಾಡುವ ಸಾಮರ್ಥ್ಯ ಪಡೆದುಕೊಂಡಿವೆ. ಇದಕ್ಕಾಗಿ ಸ್ಮಾರ್ಟ್ ಆಂಟಿ-ವಿಂಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.
ಇದರೊಂದಿಗೆ ಸಮತೋಲಿತ ಬೇಸ್ ಮತ್ತು ಟ್ರೆಬಲ್ ಔಟ್‌ಪುಟ್‌ಗಾಗಿ ಇಯರ್‌ಬಡ್‌ಗಳು 13.4 ಎಂಎಂ ಸಂಯೋಜಿತ ಡೈನಾಮಿಕ್ ಡ್ರೈವರ್ ಅನ್ನು ಹೊಂದಿದ್ದು, ಇದಕ್ಕಾಗಿ IKODOO ಡ್ಯಾನಿಶ್ ಸೌಂಡ್ ಟೆಕ್ ಬ್ರ್ಯಾಂಡ್ ವಿಫಾ ಸೌಂಡ್ ಜೊತೆಗೆ ಬೆಂಬಲದೊಂದಿಗೆ ಪಾಲುದಾರಿಕೆ ಪಡೆದುಕೊಂಡಿದೆ. ಹಾಗೆಯೇ ಈ ಮೂಲಕ ಧ್ವನಿ ವರ್ಧನೆ ತಂತ್ರಜ್ಞಾನ ಮತ್ತು ಹೆಚ್ಚಿನ ಆಡಿಯೊ ವರ್ಧನೆಗಳಿಗಾಗಿ ಟ್ರಿಪಲ್-ಮೋಡ್ ಆಯ್ಕೆ ಲಭ್ಯವಾಗಲಿದೆ.
ಇದಿಷ್ಟೇ ಅಲ್ಲದೆ ಟ್ರಿಪಲ್-ಮೈಕ್ ಆಯ್ಕೆಯನ್ನು ನೀಡಲಾಗಿದ್ದು, ಇವು AI ಸಕ್ರಿಯಗೊಳಿಸಿದ ENC ಬೆಂಬಲದೊಂದಿಗೆ ನಿಮಗೆ ಯಾವುದೇ ಹಿನ್ನೆಲೆ ಶಬ್ದಗಳಿಲ್ಲದೆ ಸ್ಪಷ್ಟ ಕರೆ ಅನುಭವವನ್ನು ಪಡೆದುಕೊಳ್ಳಲು ಸಹಕಾರ ನೀಡಲಿವೆ. ಹಾಗೂ ಫೈಂಡ್ ಮೈ ಬಡ್ಸ್ ಫೀಚರ್ಸ್ ಅನ್ನು ಪಡೆದುಕೊಂಡಿದ್ದು, IKODOO ಆಪ್ ಮೂಲಕ ಇದನ್ನು ಸಕ್ರಿಯಗೊಳಿಸಬಹುದಾಗಿದೆ. ಇನ್ನುಳಿದಂತೆ ಬ್ಲೂಟೂತ್ ಆವೃತ್ತಿ 5.2, 48ms ಕಡಿಮೆ ಲೇಟೆನ್ಸಿ ಮೋಡ್ ಹೊಂದಿದ್ದು, IP55 ರೇಟಿಂಗ್ ಪಡೆದಿದೆ.

ಇದರ ಬ್ಯಾಟರಿ ವಿಚಾರಕ್ಕೆ ಬರುವುದಾದರೆ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಬರೋಬ್ಬರಿ 27 ಗಂಟೆಗಳ ಕಾಲ ಬ್ಯಾಕಪ್ ನೀಡಲಿದ್ದು, ಇದಕ್ಕಾಗಿ ಈ ಕೇಸ್ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದರೊಂದಿಗೆ ವೇಗದ ಚಾರ್ಜಿಂಗ್ ತಂತ್ರಜ್ಞಾನ ಸಹ ಇದ್ದು, ಈ ಮೂಲಕ 10 ನಿಮಿಷಗಳಲ್ಲಿ 2 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡುತ್ತದೆ.
IKODOO ಬಡ್ಸ್ Z ಫೀಚರ್ಸ್: ಇನ್ನು IKODOO ಬಡ್ಸ್ Z ಫೀಚರ್ಸ್ ಗಮನಿಸುವುದಾದರೆ ಇದು ಅಗ್ಗದ ದರದಲ್ಲಿ ಲಭ್ಯವಾಗುತ್ತಿದ್ದು, ಈ ಮೂಲಕ ಬಡ್ಸ್ ಒನ್‌ಗಿಂತ ಕಡಿಮೆ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಅಂದರೆ ಇದು ಪೆಬ್ಬಲ್-ಆಕಾರದ ಇಯರ್‌ಬಡ್‌ಗಳನ್ನು ಹೊಂದಿದ್ದು, 10mm ಪೀಕ್+ಪಿಯು ಡ್ರೈವರ್‌ಗಳೊಂದಿಗೆ ಪ್ಯಾಕ್ ಆಗಿದೆ.
ಹಾಗೆಯೇ 3D ಸೌಂಡ್ ಆಯ್ಕೆ ಹೊಂದಿರುವುದು ಮತ್ತಷ್ಟು ಮತ್ತೊಂದು ವಿಶೇಷವಾಗಿದ್ದು, ಇದರೊಂದಿಗೆ ಕರೆ ಸಮಯದಲ್ಲಿ ಕಡಿಮೆ ಸುತ್ತುವರಿದ ಶಬ್ದಗಳಿಗಾಗಿ ಎಐ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲಿಂಗ್ ಫೀಚರ್ಸ್ ಅನ್ನು ಹೊಂದಿದೆ. ಜೊತೆಗೆ ಟಚ್ ಕಂಟ್ರೋಲ್ ಆಯ್ಕೆಯ ಮೂಲಕ ಮ್ಯೂಸಿಕ್, ಕರೆ ಹಾಗೂ ಇನ್ನಿತರೆ ವಿಷಯಗಳನ್ನು ಕಂಟ್ರೋಲ್ ಮಾಡಬಹುದಾಗಿದ್ದು, ಇಷ್ಟೆಲ್ಲಾ ಫೀಚರ್ಸ್‌ನೊಂದಿಗೆ IPX4 ರೇಟಿಂಗ್ ಪಡೆದಿದೆ.
ಇದರ ಬ್ಯಾಟರಿ ಸಾಮರ್ಥ್ಯದ ಕಡೆ ಗಮನಹರಿಸುವುದಾದರೆ ಇದು ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 28 ಗಂಟೆಗಳ ವರೆಗೆ ಬ್ಯಾಕಪ್ ನೀಡುತ್ತದೆ. ಹಾಗೆಯೇ ಫಾಸ್ಟ್ ಚಾರ್ಜಿಂಗ್ ಆಯ್ಕೆ ಹೊಂದಿದ್ದು, ಈ ಮೂಲಕ ಕೇವಲ 10 ನಿಮಿಷಗಳಲ್ಲಿ 90 ನಿಮಿಷಗಳ ಪ್ಲೇಬ್ಯಾಕ್ ಟೈಮ್ ನೀಡಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಇನ್ನುಳಿದಂತೆ ಬ್ಲೂಟೂತ್ ಆವೃತ್ತಿ 5.3 ನೊಂದಿಗೆ IKODOO ಆಪ್‌ಗೆ ಬೆಂಬಲ ನೀಡಲಿದೆ.

IKODOO ಬಡ್ಸ್ Z ಹಾಗೂ ಬಡ್ಸ್ ಒನ್ ಬೆಲೆ: ಭಾರತದಲ್ಲಿ IKODOO ಬಡ್ಸ್ ಒನ್‌ಗೆ 4,999 ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಈ ಇಯರ್‌ಬಡ್ಸ್ ಪ್ರಮುಖ ಬ್ರ್ಯಾಂಡ್ ಆಗಿರುವ ರಿಯಲ್‌ಮಿ, ನಥಿಂಗ್ ಇಯರ್‌ಬಡ್ಸ್‌ಗಳ ಜೊತೆ ಸ್ಪರ್ಧಿಸಲಿದೆ. ಹಾಗೆಯೇ ಬಡ್ಸ್ Z ಗೆ ಭಾರತದಲ್ಲಿ 999 ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಇವುಗಳನ್ನು ಇದೇ ತಿಂಗಳ 31 ರಿಂದ ಅಮೆಜಾನ್ ಮೂಲಕ ಖರೀದಿ ಮಾಡಬಹುದಾಗಿದೆ.


Click it and Unblock the Notifications








