Home
ಸುದ್ದಿಜಾಲ

ವಿವಿಧ ಹೇರ್‌ ಸ್ಟೈಲ್‌ನಲ್ಲಿ ಹೇಗೆ ಕಾಣುತ್ತೀರಿ ತಿಳಿಸುವ 'ಇಮೇಜ್‌ ಸಾಫ್ಟ್‌ವೇರ್‌'

By Suneel

ಹೊಸ ವಯಕ್ತಿಕಗೊಳಿಸಿದ ಇಮೇಜ್‌ ಸರ್ಚ್‌ ಇಂಜಿನ್‌ ಒಂದು ಫೋಟೋವನ್ನು ಇನ್‌ಪುಟ್‌ ಕೊಟ್ಟರೆ ಅದು ವಿವಿಧ ಹೇರ್‌ ಸ್ಟೈಲ್‌, ವಿವಿಧ ಬಣ್ಣ, ವಿವಿಧ ರೀತಿಯಲ್ಲಿ ಹೇಗೆ ಕಾಣುತ್ತೀರಿ ಎಂದು ಸಂಯೋಜಿಸಿ ಪ್ರದರ್ಶಿಸುತ್ತದೆ.

ಸಾಫ್ಟ್‌ವೇರ್‌ ಉಪಯೋಗದಿಂದ ಕಾನೂನಾತ್ಮಕವಾಗಿಯಾದರೂ ಕಾಣೆಯಾದ ಮಕ್ಕಳು, ವ್ಯಕ್ತಿಗಳನ್ನು ಮತ್ತು ವ್ಯಕ್ತಿಗಳು ವಿವಿಧ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತಾರೆ, ವಿವಿಧ ಬಣ್ಣದಲ್ಲಿ ಹೇಗೆ ಕಾಣುತ್ತಾರೆ ಎಂದು ತಿಳಿಯಲು ಸಹಾಯವಾಗುತ್ತದಂತೆ. ವಿ‍ಶೇಷ ಅಂದ್ರೆ ವಿವಿಧ ಹೇರ್‌ ಸ್ಟೈಲ್‌ ಮಾಡಿಸುವವರು ತಾವು ಆ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತೀವಿ ಎಂದು ಮೊದಲೇ ನೋಡಿಕೊಳ್ಳಬಹುದಂತೆ. ಈ ವಿಶೇಷ ಸರ್ಚ್‌ ಇಂಜಿನ್‌ ಯಾವುದು, ಫೀಚರ್‌ಗಳೇನು, ಬಳಸುವುದು ಹೇಗೆ ಎಂಬ ಮಾಹಿತಿಯನ್ನು ಲೇಖನದ ಸ್ಲೈಡರ್‌ ಕ್ಲಿಕ್ಕಿಸಿ ಓದಿರಿ.

ಇಂಟರ್ನೆಟ್‌ ಬಗೆಗಿನ ವಿಸ್ಮಯ ಸತ್ಯಾಂಶಗಳು ನಿಮಗೆಷ್ಟು ಗೊತ್ತು?

 ಇಮೇಜ್‌ ಸರ್ಚ್‌ ಇಂಜಿನ್‌

ಇಮೇಜ್‌ ಸರ್ಚ್‌ ಇಂಜಿನ್‌

ಹೊಸ ವಯಕ್ತಿಕಗೊಳಿಸಿದ ಇಮೇಜ್‌ ಸರ್ಚ್‌ ಇಂಜಿನ್‌ ಒಂದು ಫೋಟೋವನ್ನು ಇನ್‌ಪುಟ್‌ ಕೊಟ್ಟರೆ ಅದು ವಿವಿಧ ಹೇರ್‌ ಸ್ಟೈಲ್‌, ವಿವಿಧ ಬಣ್ಣ, ವಿವಿಧ ರೀತಿಯಲ್ಲಿ ಹೇಗೆ ಕಾಣುತ್ತೀರಿ ಎಂದು ಸಂಯೋಜಿಸುತ್ತದೆ.

ಇಂಟರ್ನೆಟ್  ಬಳಕೆ

ಇಂಟರ್ನೆಟ್ ಬಳಕೆ

ಇಂಟರ್ನೆಟ್‌ ಮೂಲಕ ನೀವು ನಿಮ್ಮ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಉದಾಹರಣೆಗೆ ಫೋಟೋ ನೋಡಿ. ಪ್ರಶ್ನೆಗಳು ' ಕರ್ಲ್‌ ಹೇರ್‌" (ಮೇಲಿನ ಸಾಲು), 'ಇಂಡಿಯಾ' (ಎರಡನೇ ಸಾಲು), "1930" (ಮೂರನೇ ಸಾಲು). ಫೋಟೋ ವಾಷಿಂಗ್ಟನ್‌ ವಿಶ್ವವಿದ್ಯಾಲಯದ 'ಇರಾ ಕೆಮೆಲ್ಮಚೆರ್- ಶ್ಲಿಜರ್‌ಮ್ಯಾನ್‌'.

 ಹೇರ್‌ ಸ್ಟೈಲಿಸ್ಟ್

ಹೇರ್‌ ಸ್ಟೈಲಿಸ್ಟ್

ಹೇರ್‌ ಸ್ಟೈಲಿಸ್ಟ್‌ಗಳ ಬಳಿ ಹೋದಲ್ಲಿ ಹಲವಾರ್‌ ಸ್ಟಾರ್‌ಗಳ ಹೇರ್‌ ಸ್ಟೈಲ್‌ ಕುರಿತ ಮ್ಯಾಗಜೀನ್‌ ಅನ್ನು ನೀಡುತ್ತಾರೆ. ಅದರಲ್ಲಿ ಇಷ್ಟವಾದದನ್ನು ನೋಡಿ ಹೇರ್‌ ಸ್ಟೈಲ್ ಮಾಡಿಸಬಹುದು. ಅದರೆ ನಾವು ಇಷ್ಟ ಪಟ್ಟ ಹೇರ್‌ ಸ್ಟೈಲ್‌ ನಮಗೆ ಹೇಗೆ ಕಾಣುತ್ತದೆ ಎಂದು ತಿಳಿಯಲು ಸಾಧ್ಯವಿಲ್ಲ. ಅಥವಾ ಕಾಣೆಯಾದ ಮಕ್ಕಳು ವಿವಿಧ ಹೇರ್‌ ಸ್ಲೈಲ್‌ನಲ್ಲಿ ಹೇಗೆ ಕಾಣುತ್ತಾರೆ ಎಂದು ತಿಳಿಯಲು ಹೊಸ ಇಮೇಜ್‌ ಸರ್ಚ್ ಸಾಫ್ಟ್‌ವೇರ್‌ ಇನ್ನುಮುಂದೆ ಸಹಾಯವಾಗಲಿದೆ.

ವ್ಯಯಕ್ತಿಕಗೊಳಿಸಿದ ಇಮೇಜ್‌ ಸರ್ಚ್‌ ಇಂಜಿನ್‌

ವ್ಯಯಕ್ತಿಕಗೊಳಿಸಿದ ಇಮೇಜ್‌ ಸರ್ಚ್‌ ಇಂಜಿನ್‌

ವ್ಯಯಕ್ತಿಕಗೊಳಿಸಿದ ಇಮೇಜ್‌ ಸರ್ಚ್‌ ಇಂಜಿನ್‌ ಅನ್ನು ವಾಷಿಂಗ್ಟನ್‌ ವಿಶ್ವವಿದ್ಯಾಲಯದ ಕಂಪ್ಯೂಟರ್‌ ವಿಷನ್‌ ಸಂಶೋಧಕರು ಅಭಿವೃದ್ದಿಪಡಿಸಿದ್ದು, "ಡ್ರೀಮ್‌ಬಿಟ್‌(Dreambit)" ಎಂದು ಕರೆಯಲಾಗುತ್ತದೆ.

ಡ್ರೀಮ್‌ಬಿಟ್‌ ಫೀಚರ್‌

ಡ್ರೀಮ್‌ಬಿಟ್‌ ಫೀಚರ್‌

ಡ್ರೀಮ್‌ಬಿಟ್‌ ಸರ್ಚ್‌ ಇಂಜಿನ್‌ ಮೂಲಕ ಒಬ್ಬ ವ್ಯಕ್ತಿಯು ವಿವಿಧ ಹೇರ್‌ಸ್ಟೈಲ್‌, ಬಣ್ಣ, ವಿವಿಧ ವಯಸ್ಸು, ವಿವಿಧ ದೇಶಗಳಲ್ಲೂ ಸಹ ಹೇಗೆಲ್ಲಾ ಕಾಣಬಹುದು ಎಂಬುದನ್ನು ಸರ್ಚ್‌ ಇಂಜಿನ್‌ನಲ್ಲಿ ಫೋಟೋ ಇನ್‌ಪುಟ್‌ ಮಾಡಿ ಉತ್ತರ ಪಡೆಯಬಹುದಾಗಿದೆಯಂತೆ.

 ಫೋಟೋ ಅಪ್‌ಲೋಡ್‌

ಫೋಟೋ ಅಪ್‌ಲೋಡ್‌

ಫೋಟೋ ಅಪ್‌ಲೋಡ್‌ ಮಾಡಿದ ನಂತರ ಸರ್ಚ್‌ ಬಾರ್‌ನಲ್ಲಿ "curly hair," "India" or "1930s" ಎಂದು ಟೈಪಿಸಿದರೆ ಸಾಫ್ಟ್‌ವೇರ್‌ ಕ್ರಮಾವಳಿಗಳ ಮೂಲಕ ಹೋಲಿಕೆಯ ಫೋಟೋಗಳು ವಿವಿಧ ವರ್ಗದಲ್ಲಿ ಪ್ರದರ್ಶನವಾಗುತ್ತವೆ.

SIGGRAPH 2016

SIGGRAPH 2016

ಅಂದಹಾಗೆ ಪ್ರಾಥಮಿಕವಾಗಿ 'ಡ್ರೀಮ್‌ಬಿಟ್‌' ರಿಸಲ್ಟ್‌ ಜುಲೈ 25 ರಂದು 'SIGGRAPH 2016' ಪ್ರಪಂಚದ ಅತಿದೊಡ್ಡ ಕಾನ್ಫರೆನ್ಸ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿದೆಯಂತೆ.

ಸಾರ್ವಜನಿಕರಿಗೆ ಡ್ರೀಮ್‌ಬಿಟ್‌

ಸಾರ್ವಜನಿಕರಿಗೆ ಡ್ರೀಮ್‌ಬಿಟ್‌

ಜನರು ತಮ್ಮನ್ನು ತಾವು ವಿವಿಧ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತಾರೆ ಎಂಬುದನ್ನು ನೋಡಿಕೊಳ್ಳಬಹುದಾದ ಈ ಸಿಸ್ಟಮ್‌ ಅನ್ನು ಸಾರ್ವಜನಿಕರ ಬಳಕೆಗೆ ಇದೇ ವರ್ಷದಲ್ಲಿ ತಡವಾಗಿ ನೀಡಲು ಯೋಜನೆ ರೂಪಿಸಲಾಗುತ್ತಿದೆಯಂತೆ.

ಡ್ರೀಮ್‌ಬಿಟ್‌ ಅಭಿವೃದ್ದಿ

ಡ್ರೀಮ್‌ಬಿಟ್‌ ಅಭಿವೃದ್ದಿ

ಅಂದಹಾಗೆ ವಾಷಿಂಗ್ಟನ್‌ ವಿಶ್ವವಿದ್ಯಾಲಯದ 'ಇರಾ ಕೆಮೆಲ್ಮಛೆರ್‌-ಶ್ಲಿಜರ್‌ಮ್ಯಾನ್‌' ಡ್ರೀಮ್‌ಬಿಟ್ ಸರ್ಚ್‌ ಇಂಜಿನ್‌ ಅನ್ನು ಅಭಿವೃದ್ದಿಪಡಿಸಿದ್ದು, ಅವರ ಟೀಮ್‌ ಈ ಹಿಂದೆ 'ಸ್ವಯಂಚಾಲಿತ ವಯಸ್ಸಿನ ಪ್ರಗತಿಯ ತಂತ್ರಾಂಶ'ವನ್ನು ಅಭಿವೃದ್ದಿಪಡಿಸಿತ್ತು. ಈ ಸಾಫ್ಟ್‌ವೇರ್‌ ಕೇವಲ ವ್ಯಕ್ತಿಯ ಮುಖವನ್ನು ಮಾತ್ರ ಗಮನ ಹರಿಸುತ್ತಿತ್ತು ಎನ್ನಲಾಗಿದೆ.

ಸಾಫ್ಟ್‌ವೇರ್‌ ಉಪಯೋಗ

ಈ ಸಾಫ್ಟ್‌ವೇರ್‌ ಉಪಯೋಗದಿಂದ ಕಾನೂನಾತ್ಮಕವಾಗಿಯಾದರೂ ಕಾಣೆಯಾದ ಮಕ್ಕಳು, ವ್ಯಕ್ತಿಗಳನ್ನು ಮತ್ತು ವ್ಯಕ್ತಿಗಳು ವಿವಿಧ ಹೇರ್‌ಸ್ಟೈಲ್‌ನಲ್ಲಿ ಹೇಗೆ ಕಾಣುತ್ತಾರೆ, ವಿವಿಧ ಬಣ್ಣದಲ್ಲಿ ಹೇಗೆ ಕಾಣುತ್ತಾರೆ ಎಂದು ತಿಳಿಯಲು ಸಹಾಯವಾಗುತ್ತದಂತೆ. ಡ್ರೀಮ್‌ಬಿಟ್‌ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವೀಡಿಯೊ ನೋಡಿರಿ.

Best Mobiles in India

English summary
Imaging software predicts how you look with different hair styles, colors, appearances.Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+