Smartwatch: ಇಮೋ ವಾಚ್ ಫೋನ್ Z7 ಸ್ಮಾರ್ಟ್‌ವಾಚ್ ಲಾಂಚ್! ಜಿಪಿಎಸ್,ಇನ್‌ಬಿಲ್ಟ್ ಕ್ಯಾಮೆರಾ.. ಬೆಲೆ ಎಷ್ಟು?
ಸ್ಮಾರ್ಟ್‌ವಾಚ್‌ಗಳ (Smartwatch) ವಿಭಾಗದಲ್ಲಿ ನೀವು ಭಿನ್ನ ವಿಭಿನ್ನ ವಾಚ್‌ಗಳನ್ನು ನೋಡಿರಬಹುದು. ಆದರೆ, ಈ ವಾಚ್ ಮಾತ್ರ ಎಲ್ಲಾ ಭಿನ್ನ ವಾಚ್‌ಗಳಿಗಿಂತ ವಿಶೇಷವಾಗಿ ಗುರುತಿಸಿಕೊಳ್ಳಲಿದೆ. ಈ ಮೂಲಕ ಮಕ್ಕಳಿಗೆ ಹಾಗೂ ಪೋಷಕರಿಗೆ ಅಚ್ಚುಮೆಚ್ಚಿನ ವಾಚ್ ಆಗಿ ಜನಪ್ರಿಯತೆ ಪಡೆಯಲಿದೆ.
ಹೌದು, ಇದೀಗ ಇಮೋ ವಾಚ್ ಫೋನ್ Z7 ಸ್ಮಾರ್ಟ್‌ವಾಚ್ ( imoo Watch Phone Z7) ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ ಕೇವಲ ಸಮಯಕ್ಕಷ್ಟೇ ಸೀಮಿತವಲ್ಲ ಬದಲಾಗಿ, 4G ಕಾಲಿಂಗ್ ಫೀಚರ್ಸ್, ಜಿಪಿಎಸ್, ಬಿಲ್ಟ್ ಕ್ಯಾಮೆರಾ ಆಯ್ಕೆ ಸಹ ಇದೆ. ಹಾಗಿದ್ರೆ, ಈ ಸ್ಮಾರ್ಟ್‌ವಾಚ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ಎಷ್ಟು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇಮೋ ವಾಚ್ ಫೋನ್ Z7 ಸ್ಮಾರ್ಟ್‌ವಾಚ್: ಇಮೋ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ವಾಚ್‌ಫೋನ್ ಇಮೋ Z7 ಅನ್ನು ಬಿಡುಗಡೆ ಮಾಡಿದ್ದು, ಇದು ನಯವಾದ ಮತ್ತು ಹಗುರವಾದ ವಿನ್ಯಾಸ ಪಡೆದಿದೆ. ಅದರಲ್ಲೂ ಕೇವಲ 65g ತೂಕ ಹೊಂದಿದೆ. ಅಷ್ಟೇ ಅಲ್ಲದೆ ಈ ವಾಚ್ ಅನ್ನು ಕಠಿಣ ಪರೀಕ್ಷೆಗೆ ಒಳಪಡಿಸಲಾಗಿದ್ದು, ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು 150 ಕ್ಕೂ ಹೆಚ್ಚು ಗುಣಮಟ್ಟ ಮತ್ತು ಬಾಳಿಕೆ ಪರಿಶೀಲನೆಗಳನ್ನು ಮಾಡಲಾಗಿದೆ.
ಈ ವಾಚ್ 1.3 ಇಂಚಿನ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಮಕ್ಕಳ ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸಲು ಕಂಪ್ಯಾನಿಯನ್ ಆಪ್ ಆಯ್ಕೆ ನೀಡಲಾಗಿದೆ. ಇನ್ನು ಎಐ ಇಂಟೆಲಿಜೆಂಟ್ ಮೋಡ್ ಸೌಲಭ್ಯವನ್ನೂ ಸಹ ನೀಡಲಾಗಿದ್ದು, ಪಿಪಿಜಿ ಆರೋಗ್ಯ ಮೇಲ್ವಿಚಾರಣೆ, ಇಡೀ ದಿನದ ತಾಪಮಾನ ಮತ್ತು ಹೃದಯ ಬಡಿತ ಟ್ರ್ಯಾಕಿಂಗ್‌ನಂತಹ ಸುಧಾರಿತ ಫೀಚರ್ಸ್ ಅನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ. ಕ್ಲಾಸ್ ಮೋಡ್, ಚಾಟ್ ಮತ್ತು ಫ್ಯಾಮಿಲಿ ಚಾಟ್, ಸ್ನೇಹಿತರನ್ನು ಸೇರಿಸಿ, ಭಾವನೆ ಗುರುತಿಸುವಿಕೆ, ಹೃದಯ ಬಡಿತ, ದೇಹದ ಉಷ್ಣತೆ, ರಕ್ತದ ಆಮ್ಲಜನಕ ಸೇರಿದಂತೆ ಅನೇಕ ಕಾರ್ಯಗಳನ್ನು ಈ ವಾಚ್ ಮಾಡಲಿದೆ.

ಇದರೊಂದಿಗೆ ಈ ವಾಚ್‌ನಲ್ಲಿ ಇನ್‌ಬಿಲ್ಟ್ ಕ್ಯಾಮೆರಾ ಆಯ್ಕೆ ಸಹ ನೀಡಲಾಗಿದೆ. ಅಂದರೆ ಕ್ರಿಸ್ಟಲ್ ನಿಂದ ರಕ್ಷಿಸಲ್ಪಟ್ಟ 2 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಮತ್ತು 5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಈ ವಾಚ್‌ನಲ್ಲಿ ಕಾಣಬಹುದಾಗಿದೆ. ಈ ಕ್ಯಾಮೆರಾಗಳು ಸುರಕ್ಷತಾ ಫೀಚರ್ಸ್‌ನೊಂದಿಗೆ ಸಂಯೋಜನೆಗೊಂಡಿದ್ದು, ವಿಡಿಯೋ ಕರೆಯನ್ನು ಮಾಡಲು ಅನುಕೂಲವಾಗಿವೆ. ಇದರ ಜೊತೆಗೆ ಸ್ಥಳ ಟ್ರ್ಯಾಕಿಂಗ್ ಆಯ್ಕೆ ಸಹ ಇದೆ. ಎಲ್ಲಕ್ಕಿಂತ ಮಿಗಿಲಾಗಿ14 ದಿನಗಳ ಟ್ರ್ಯಾಕಿಂಗ್ ಹಿಸ್ಟ್ರಿಯನ್ನೂ ಸಹ ಇದರಲ್ಲಿ ನೋಡಬಹುದು.
ಈ ಸ್ಮಾರ್ಟ್‌ವಾಚ್ 4GB ಇನ್‌ಬಿಲ್ಟ್ ಸ್ಟೋರೇಜ್ ಆಯ್ಕೆ ಪಡೆದಿದ್ದು, ರನ್ನಿಂಗ್ ಮೋಡ್, ಈಜು ಮತ್ತು ನಿರಂತರ ಕಲಿಕೆಗಾಗಿ ಎಐ ಸ್ಕ್ಯಾನರ್‌ನಂತಹ ಚಟುವಟಿಕೆಯ ಮೇಲ್ವಿಚಾರಣೆಯನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ 4G ಸಂಪರ್ಕ, ವೈ-ಫೈ, ಚಾಟ್ ಆಯ್ಕೆಗಳು ಮತ್ತು ಅಪರಿಚಿತ ಕರೆ ನಿರಾಕರಣೆ ಜೊತೆಗೆ ಶೈಕ್ಷಣಿಕ ಸಮಯದಲ್ಲಿ ನಿಮ್ಮ ಮಗುವಿನ ಸುರಕ್ಷತೆ ಮತ್ತು ಗಮನವನ್ನು ಈ ವಾಚ್ ಖಚಿತಪಡಿಸುತ್ತದೆ. ಮಿಗಿಲಾಗಿ ಈ ವಾಚ್ IPX8 ರೇಟಿಂಗ್ ಪಡೆದಿದೆ. ಈ ವಾಚ್ 740mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 100 ಗಂಟೆಗಳವರೆಗೆ ಬ್ಯಾಕಪ್ ನೀಡಲಿದೆ.

ಇಮೋ ವಾಚ್ ಫೋನ್ Z7 ಸ್ಮಾರ್ಟ್‌ವಾಚ್ ಬೆಲೆ ಮತ್ತು ಲಭ್ಯತೆ: ಈ ಸ್ಮಾರ್ಟ್‌ವಾಚ್ ಇಷ್ಟೆಲ್ಲಾ ೪ಫೀಚರ್ಸ್ ಆಯ್ಕೆ ಪಡೆದಿದೆ ಎಂದರೆ ಬೆಲೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ. ಅಂದರೆ ಇದಕ್ಕೆ 14,990 ರೂ.ಗಳ ದರ ನಿಗದಿ ಮಾಡಲಾಗಿದ್ದು, ಇದನ್ನು ನೀವು ಅಮೆಜಾನ್, ಇಮೋಸ್ಟೋರ್, ಫ್ಲಿಪ್‌ಕಾರ್ಟ್ ಸೇರಿದಂತೆ ಅನೇಕ ರಿಟೇಲರ್ ಸ್ಟೋರ್ ಮೂಲಕವೂ ಖರೀದಿ ಮಾಡಬಹುದಾಗಿದೆ. ಈ ವಾಚ್ ನಿಮಗೆ ನೀಲಿ ಮತ್ತು ಗುಲಾಬಿ ಬಣ್ಣಗಳಲ್ಲಿ ಲಭ್ಯವಿದೆ.


Click it and Unblock the Notifications








