Home
ಸುದ್ದಿಜಾಲ

E-Cigarettes ಕುರಿತು ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ, ಏನಿದು ಇ-ಸಿಗರೇಟ್?

ಇ-ಸಿಗರೇಟ್(E-Cigarettes ) ಅನ್ನು ಇತ್ತೀಚಿನ ದಿನಗಳಲ್ಲಿ ಕದ್ದು ಮುಚ್ಚಿ ಜನ ಬಳಕೆ ಮಾಡುತ್ತಿದ್ದಾರೆ. ಇದನ್ನು ಇ-ಸಿಗಾರ್, ವೇಪ್ ಅಥವಾ ಎಲೆಕ್ಟ್ರಾನಿಕ್ ಸಿಗರೇಟ್ ಎಂದೂ ಕರೆಯುತ್ತಾರೆ. ಇದು ಬ್ಯಾಟರಿ-ಚಾಲಿತ ಡಿವೈಸ್ ಆಗಿದ್ದು ನಿಕೋಟಿನ್, ಸುವಾಸನೆ ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುವ ದ್ರವವನ್ನು ಬಿಸಿ ಮಾಡುತ್ತದೆ. ಜೊತೆಗೆ ದ್ರವವನ್ನು ಏರೋಸಾಲ್ ಅಥವಾ ಆವಿಯಾಗಿ ಪರಿವರ್ತಿಸಲಾಗುತ್ತದ. ಈ ನಡುವೆ ಈ ಇ-ಸಿಗರೇಟ್ ಸಂಬಂಧ ಸರ್ಕಾರ ಮಹತ್ವ ಎಚ್ಚರಿಕೆ ನೀಡಿದೆ

ಹೌದು, ಇ-ಸಿಗರೆಟ್‌ಗಳನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ತಂಬಾಕು ಸಿಗರೇಟ್‌ಗಳಿಗೆ(Tobacco cigarettes) ಪರ್ಯಾಯವಾಗಿ ಪರಿಗಣಿಸಲಾಗುತ್ತದೆ. ಇವು ಹಾನಿಕಾರಕ ರಾಸಾಯನಿಕಗಳನ್ನು ಉತ್ಪಾದಿಸದ ಕಾರಣ ಕಡಿಮೆ ಹಾನಿಕಾರಕವೆಂದು ಪ್ರಚಾರ ಮಾಡಲಾಗುತ್ತದೆ. ಆದಾಗ್ಯೂ, ಇದರಲ್ಲಿ ಅಪಾಯಗಳು ಇಲ್ಲ ಎಂದೇನಿಲ್ಲ. ಈ ಕಾರಣಕ್ಕಾಗಿಯೇ ಭಾರತದ ಸರ್ಕಾರ ಇ-ಸಿಗರೇಟ್‌ಗಳ ಕುರಿತು ರಾಜ್ಯಗಳಿಗೆ ಕೇಂದ್ರವು ಪ್ರಮುಖ ಸಲಹೆಯನ್ನು ಕೇಳಿದ್ದು, ಜೊತೆಗೆ ಇ-ಕಾಮರ್ಸ್‌ ಸೈಟ್‌ಗಳಿಗೆ ಎಚ್ಚರಿಕೆ ಸಹ ನೀಡಿದೆ. ಹಾಗಿದ್ರೆ, ಬನ್ನಿ ಈ ಸಂಬಂಧ ಸಂಪೂರ್ಣ ವಿವರ ತಿಳಿಯೋಣ.

ಇ-ಸಿಗರೇಟ್‌ ಕುರಿತು ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ, ಏನಿದು ಇ-ಸಿಗರೇಟ್?

ಸಲಹೆ ನೀಡಿದ ಸರ್ಕಾರ: ಇ-ಸಿಗರೇಟ್ ಕುರಿತು ಕೇಂದ್ರ ಸರ್ಕಾರ (Central Govt) ರಾಜ್ಯಗಳಿಗೆ ಸಲಹೆಯನ್ನು ನೀಡಿದೆ. ಅಂದರೆ ಆನ್‌ಲೈನ್ ಶಾಪಿಂಗ್ ಸೈಟ್‌ಗಳು ಮತ್ತು ಚಿಲ್ಲರೆ ಅಂಗಡಿಗಳಲ್ಲಿ ಇ-ಸಿಗರೇಟ್‌ಗಳ ಲಭ್ಯತೆಯ ಕುರಿತು ತನ್ನ ಪೋರ್ಟಲ್ ಮಾಹಿತಿಯನ್ನು ವರದಿ ಮಾಡಲು ಕೇಂದ್ರ ಸರ್ಕಾರವು ರಾಜ್ಯಗಳನ್ನು ಕೇಳಿಕೊಂಡಿದೆ. ಯಾಕೆಂದರೆ ಭಾರತದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್‌ಗಳ ಮಾರಾಟ ಮತ್ತು ಬಳಕೆಯನ್ನು ಕೇಂದ್ರ ಸರ್ಕಾರ 2019 ರಲ್ಲಿ ನಿಷೇಧ ಮಾಡಿದೆ.

ಈ ನಡುವೆ ಸರ್ಕಾರವು ಈ ವರ್ಷದ ಮೇ ತಿಂಗಳಲ್ಲಿ www.violation-reporting.in ಪೋರ್ಟಲ್ ಅನ್ನು ಪ್ರಾರಂಭಿಸಿದ್ದು. ಕೇಂದ್ರ ಆರೋಗ್ಯ ಸಚಿವಾಲಯವು ಮಾಹಿತಿಯನ್ನು ಸಂಗ್ರಹಿಸಲು ಮತ್ತು ವರದಿಯಾದ ಉಲ್ಲಂಘನೆಗಳ ಮೇಲೆ ತ್ವರಿತ ಕ್ರಮ ತೆಗೆದುಕೊಳ್ಳಲು ಸಹಾಯ ಮಾಡುವ ಗುರಿಯನ್ನು ಹೊಂದಿದೆ. COTPA-2003 ಮತ್ತು PECA-2019 ರ ಅಡಿಯಲ್ಲಿ ಆನ್‌ಲೈನ್ ಉಲ್ಲಂಘನೆಗಳನ್ನು www.violation-reporting.in ಗೆ ವರದಿ ಮಾಡಬಹುದು ಎಂದು ಉಲ್ಲೇಖಿಸಲಾಗಿದೆ.

ಎಲ್ಲಾ ಉತ್ಪಾದಕರು, ತಯಾರಕರು, ಆಮದುದಾರರು, ರಫ್ತುದಾರರು, ವಿತರಕರು, ಜಾಹೀರಾತುದಾರರು, ಕೊರಿಯರ್‌ಗಳು, ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳು, ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ಗಳು, ಚಿಲ್ಲರೆ ವ್ಯಾಪಾರಿಗಳು ಇತ್ಯಾದಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಉತ್ಪಾದಿಸಬಾರದು ಅಥವಾ ಆಮದು ಮಾಡಿಕೊಳ್ಳಬಾರದು ಅಥವಾ ರಫ್ತು ಮಾಡಬಾರದು ಅಥವಾ ಮಾರಾಟ ಮಾಡಬಾರದು ಅಥವಾ ಇ-ಸಿಗರೆಟ್‌ಗಳ ಸಂಪೂರ್ಣ ಭಾಗವಾಗಿ ಅಥವಾ ಮಾರಾಟ ಮಾಡಬಾರದು ಅಥವಾ ಸಂಗ್ರಹಿಸಬಾರದು ತಿಳಿಸಲಾಗಿದೆ.

ಇದರೊಂದಿಗೆ ಸಾರ್ವಜನಿಕರಿಗೆ PECA ಮತ್ತು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ-2003 ರ ಉಲ್ಲಂಘನೆಗಳನ್ನು ವರದಿ ಮಾಡುವ ಬಗ್ಗೆ ಮಾಹಿತಿ ತಿಳಿದಿಲ್ಲ. ಈ ಸಂಬಂಧ ಇರುವ ವೆಬ್‌ಸೈಟ್ ಕುರಿತು ಅರಿವಿನ ಕೊರತೆ ಕಂಡುಬರುತ್ತಿದೆ. ಹೀಗಾಗಿ ಇ-ಸಿಗರೇಟ್ ನಿಯಂತ್ರಣಕ್ಕೆ ಸರ್ಕಾರಗಳು ಪ್ರಮುಖ ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ ಜನರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಸರ್ಕಾರ ತಿಳಿಸಿದೆ. ಅಷ್ಟು ಮಾತ್ರವಲ್ಲದೆ ಇ-ಸಿಗರೇಟ್‌ಗಳನ್ನು ಮಾರಾಟ ಮಾಡುವ 15 ಆನ್‌ಲೈನ್ ವೆಬ್‌ಸೈಟ್‌ಗಳಿಗೆ ಸರ್ಕಾರ ಎಚ್ಚರಿಕೆ ಸಹ ನೀಡಿದೆ.

ಈ ತಿಂಗಳ ಆರಂಭದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯವು ಇ-ಸಿಗರೇಟ್‌ಗಳನ್ನು ಮಾರಾಟ ಮಾಡುವ 15 ವೆಬ್‌ಸೈಟ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ನಿಷೇಧಿತ ಉತ್ಪನ್ನಗಳ ಜಾಹೀರಾತು ಮತ್ತು ಮಾರಾಟವನ್ನು ನಿಲ್ಲಿಸುವಂತೆ ಆದೇಶ ನೀಡಿದೆ. ಇದರೊಂದಿಗೆ ಉಳಿದ ಆರು ವೆಬ್‌ಸೈಟ್‌ಗಳು ರಾಡಾರ್‌ನಲ್ಲಿವೆ ಎಂದು ವರದಿಯಾಗಿದೆ. ಆರೋಗ್ಯ ಸಚಿವಾಲಯವು ಸಾಮಾಜಿಕ ಮಾಧ್ಯಮಗಳಲ್ಲಿ ಇ-ಸಿಗರೇಟ್‌ಗಳ ಜಾಹೀರಾತು ಮತ್ತು ಮಾರಾಟವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವರಿಗೆ ನೋಟಿಸ್‌ಗಳನ್ನು ಸಹ ನೀಡಬಹುದು ಎಂದೂ ಸಹ ಹೇಳಲಾಗುತ್ತದೆ.

ಇ-ಸಿಗರೇಟ್‌ ಕುರಿತು ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸಲಹೆ, ಏನಿದು ಇ-ಸಿಗರೇಟ್?

ಸರ್ಕಾರದ ನಿರ್ದೇಶನವನ್ನು ಅನುಸರಿಸುವಲ್ಲಿ ವಿಫಲವಾದರೆ ಅಂತಹ ಕಾನೂನುಬಾಹಿರ ಮಾಹಿತಿಯ ಪ್ರಸರಣಕ್ಕೆ ಅಥವಾ ಅಂತಹ ಕಾನೂನುಬಾಹಿರ ಚಟುವಟಿಕೆಯ ನಡವಳಿಕೆಗೆ ಸಹಾಯ/ಉತ್ತೇಜಿಸಲು ಕಾರಣವಾಗಬಹುದು ಹಾಗೂ ಅಂತಹ ಮಾಹಿತಿ, ಡೇಟಾ ಅಥವಾ ಸಂವಹನ ಲಿಂಕ್‌ಗಳನ್ನು ಹೋಸ್ಟ್ ಮಾಡಿದ್ದಕ್ಕಾಗಿ ನಿಮ್ಮನ್ನು ಕಾನೂನು ಕ್ರಮಕ್ಕೆ ಒಳಪಡಿಸಬಹುದು ಎಂದು ವೆಬ್‌ಸೈಟ್‌ಗಳಿಗೆ ನೀಡಲಾದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Best Mobiles in India

English summary
e-cigarettes are often considered an alternative to traditional tobacco cigarettes. These are advertised as less harmful as they do not produce harmful chemicals. In particular, e-cigarettes have been banned in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+