Subscribe to Gizbot

ಆಪಲ್ ಸಿಇಓ ಟೀಮ್ ಕುಕ್‌ಗೆ ಪತ್ರ ಬರೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಯಾಕೆ ಗೊತ್ತಾ..?

Written By:

ಮೆಟ್ರೋದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಡಿ, ಕೊನೆಗೂ ಹಿಂದಿ ನಾಮಫಲಕಗಳನ್ನು ತೆಗೆಸುವಲ್ಲಿ ಯಶಸ್ವಿಯಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬ್ಯಾಂಕ್ ನೌಕರರು ಆರು ತಿಂಗಳಿನಲ್ಲಿ ಕನ್ನಡ ಕಲಿಯುವಂತೆ ಸೂಚನೆಯನ್ನು ನೀಡಿತ್ತು. ಇದಾದ ಬಳಿಕ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ.

ಆಪಲ್ ಸಿಇಓ ಟೀಮ್ ಕುಕ್‌ಗೆ ಪತ್ರ ಬರೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರ: ಯಾಕೆ ಗೊತ್ತ

ಓದಿರಿ: ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮೊಬೈಲ್ ತಯಾರಿಕಾ ಕಂಪನಿ ಆಪಲ್ ಸಿಇಓ ಟಿಮ್ ಕುಕ್‌ಗೆ ಪತ್ರವೊಂದನ್ನು ಬರೆದಿದೆ. ಆಪಲ್ ಕನ್ನಡ ಫಾಂಟ್ ಮತ್ತು ಕೀ ಬೋರ್ಡ್ ಅನ್ನು ಡೆವಲಪ್ ಮಾಡುವಂತೆ ಮನವಿಯನ್ನು ಮಾಡಿದೆ. ಇದರಿಂದ ನಮ್ಮ ಸ್ಥಳೀಯ ಇಂಜಿನಿಯರ್‌ಗಳಿಗೆ ಸಹಾಯವಾಗಲಿದೆ ಎಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕನ್ನಡಿಗರಿಗೂ ಸಹಾಯ:

ಕನ್ನಡಿಗರಿಗೂ ಸಹಾಯ:

ಆಪಲ್ ಈಗಾಗಲೇ ಬೆಂಗಳೂರಿನಲ್ಲಿ ತನ್ನ ತಯಾರಿಕೆಯನ್ನು ಆರಂಭಿಸಿದೆ ಈ ಹಿನ್ನಲೆಯಲ್ಲಿ ಕನ್ನಡ ಫಾಂಟ್ ಗಳನ್ನು ಆಪಲ್ ಅಭಿವೃದ್ಧಿ ಪಡಿಸಿದರೆ ಇದು ಕನ್ನಡಿಗರಿಗೂ ಸಹಾಯವಾಗಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಈಗಾಗಲೇ ಕನ್ನಡ ಫಾಂಟ್ ಇದೆ:

ಈಗಾಗಲೇ ಕನ್ನಡ ಫಾಂಟ್ ಇದೆ:

ಕಳೆದ ಜೂನ್ ನಲ್ಲಿಯೇ ಆಪಲ್ ಕನ್ನಡ ಫಾಂಟ್ ಅನ್ನು ಪರಿಚಯಿಸಿತ್ತು. ಇದಕ್ಕಾಗಿ ಕೀಬೋರ್ಡ್ ವೊಂದನ್ನು ನೀಡಿತ್ತು. ಆದರೆ ಈಗ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡಿಗರನ್ನು ಬಳಕೆ ಮಾಡಿಕೊಂಡು ಫಾಂಟ್ ತಯಾರಿಸುವಂತೆ ಮನವಿಯನ್ನು ಮಾಡಿದೆ.

ಕನ್ನಡ ಕಂಪು ಹೆಚ್ಚಿಸಲು:

ಕನ್ನಡ ಕಂಪು ಹೆಚ್ಚಿಸಲು:

ಹಿಂದೆ ಸಾಹಿತ್ಯದಲ್ಲಿ ಕನ್ನಡ ಬಳೆಯಾದರೆ ಭಾಷೆ ಬೆಳಯಲಿದೆ ಎನ್ನುವ ಮಾತು ಇತ್ತು. ಆದರೆ ಈಗ ಬದಲಾವಣೆ ಹೆಚ್ಚಾಗಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಬಳಕೆಯಾದರೆ ಮಾತ್ರವೇ ಕನ್ನಡದ ಕಂಪನ್ನು ಹೆಚ್ಚಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Kannada Development Authority chairman G Siddaramaiah said that such a move will help local engineers in Karnataka. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot