Subscribe to Gizbot

ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು: ನಿಮ್ಮ ಫೋನಿನಲ್ಲಿ ಲಭ್ಯವಿಲ್ಲವೇ? ಹಾಗಿದ್ರೆ ಹೀಗೇ ಮಾಡಿ

Written By:

ದೇಶದಲ್ಲಿ ನೋಟು ನಿ‍ಷೇಧದ ನಂತರದಲ್ಲಿ ಡಿಜಿಟಲ್ ವ್ಯವಹಾರವು ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದು, ಅಲ್ಲದೇ ವ್ಯಾಲೆಟ್ ಆಪ್ ಗಳು ಮತ್ತು ಪೇಮೆಂಟ್ ಆಪ್ ಗಳು ಹೆಚ್ಚು ಬಳಕೆಗೆ ಬಂದವು, ಇದೇ ಮಾದರಿಯಲ್ಲಿ ಜನಪ್ರಿಯ ಸೋಶಿಯಲ್ ಮೆಸೆಜಿಂಗ್ ಆಪ್ ವಾಟ್ಸ್‌ಆಪ್ ಸಹ ಈ ದಿಸೆಯಲ್ಲಿ ಕಾರ್ಯಚರಣೆಗೆ ಮುಂದಾಗಿತ್ತು.

ನೀವು ವಾಟ್ಸ್‌ಆಪ್‌ ನಲ್ಲೇ ಪೇಮೆಂಟ್ ಮಾಡಬಹುದು:

ಓದಿರಿ: ಆಗಸ್ಟ್ 21ಕ್ಕೆ ರೆಡ್‌ಮಿ ನೋಟ್ 5A ಬಿಡುಗಡೆ: ವಿಶೇಷತೆ ಕೇಳಬೇಡಿ, ಕೇಳಿದ್ರೆ ಖರೀದಿಸುವುದು ಗ್ಯಾರೆಂಟಿ.!

ಈ ಹಿಂದೆಯೇ ವಾಟ್ಸ್ಆಪ್ ಪೇಮೆಂಟ್ ಆಯ್ಕೆಯನ್ನು ನೀಡಬೇಕಾಗಿತ್ತು, ಆದರೆ ಕೊಂಚ ತಡವಾಗಿ ಪೇಮೆಂಟ್ ಆಯ್ಕೆಯನ್ನು ಬಳಕೆದಾರಿಗೆ ಮುಕ್ತವಾಗಿಸಿದೆ. ಸದ್ಯ ಈ ಆಯ್ಕೆಯೂ ಬಿಟಾ ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ. ಪರೀಕ್ಷಾ ಹಂತವನ್ನು ಪೂರ್ಣಗೊಳಿಸಿದ ನಂತರದಲ್ಲಿ ಇದು ಸಾಮಾನ್ಯ ಬಳಕೆದಾರಿಗೂ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್‌ಆಪ್ ನಲ್ಲಿ UPI ಆಯ್ಕೆ:

ವಾಟ್ಸ್‌ಆಪ್ ನಲ್ಲಿ UPI ಆಯ್ಕೆ:

ವಾಟ್ಸ್‌ಆಪ್ ಕೊನೆಗೂ UPI ಆಯ್ಕೆಯನ್ನು ನೀಡಲು ಮುಂದಾಗಿದೆ. P2P ಸೇವೆಯನ್ನು ಇದು ನೀಡಲಿದೆ ಎನ್ನಲಾಗಿದೆ. ಅಲ್ಲದೇ ಇದು ಬ್ಯಾಂಕ್ ಟು ಬ್ಯಾಂಕ್ ಟ್ರಾನ್ಸಫರ್ ಆಯ್ಕೆಯನ್ನು ಹೊಂದಿದೆ. ಸದ್ಯ ಪೇಮೆಂಟ್ ಆಯ್ಕೆಯನ್ನು ಬಿಡುಗಡೆ ಮಾಡಿರುವ ವಾಟ್ಸ್‌ಆಪ್ ಆವೃತ್ತಿ 2.17.295 ನಲ್ಲಿ ದೊರೆಯಲಿದೆ.

ನೀವು ಬಿಟಾ ಆವೃತ್ತಿಯನ್ನು ಬಳಸಬೇಕೆ:

ನೀವು ಬಿಟಾ ಆವೃತ್ತಿಯನ್ನು ಬಳಸಬೇಕೆ:

ವಾಟ್ಸ್‌ಆಪ್ ಹೊಸದಾಗಿ ನೀಡುವ ಯಾವುದೇ ಆಯ್ಕೆಯನ್ನು ನೀವೇ ಮೊದಲು ಬಳಕೆ ಮಾಡಿಕೊಳ್ಳಬೇಕಾಗಿದೆ, ಪ್ಲೇ ಸ್ಟೋರಿನಲ್ಲಿ ವಾಟ್ಸ್ಆಪ್ ಆಪ್‌ ಓಪನ್ ಮಾಡಿ ಅಲ್ಲಿ ಬಿಟಾ ಬಳಕೆದಾರರಾಗಿ ಸೇರ್ಪಡೆಗೊಳ್ಳಿರಿ.

ಈಗಾಗಲೇ ಅಮೆರಿಕಾದಲ್ಲಿ ಸೇವೆ ಆರಂಭ:

ಈಗಾಗಲೇ ಅಮೆರಿಕಾದಲ್ಲಿ ಸೇವೆ ಆರಂಭ:

ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ವಿಶ್ವದಲ್ಲೇ ಅತೀ ಹೆಚ್ಚು ಬಳಕೆ ಮಾಡುವ ಸೋಶಿಯಲ್ ಮೆಸೆಜಿಂಗ್ ಆಪ್ ಆಗಿದ್ದು, ಈಗಾಗಲೇ ಅಮೆರಿಕಾದಲ್ಲಿ ವಾಟ್ಸ್ಆಪ್ ಪೇಮೆಂಟ್ ಸೇವೆಯನ್ನು ಆರಂಭಿಸಿದೆ ಎನ್ನಲಾಗಿದೆ.

ಹೈಕ್ ಈಗಾಗಲೇ ಪೇಮೆಂಟ್ ಆಯ್ಕೆಯನ್ನು ನೀಡಿದೆ:

ಹೈಕ್ ಈಗಾಗಲೇ ಪೇಮೆಂಟ್ ಆಯ್ಕೆಯನ್ನು ನೀಡಿದೆ:

ವಾಟ್ಸ್‌ಆಪ್ ಪ್ರತಿ ಸ್ಪರ್ಧಿ ಹೈಕ್ ಈಗಾಗಲೇ ಪೇಮೆಂಟ್ ಆಯ್ಕೆಯನ್ನು ಜೂನ್ ತಿಂಗಳಿನಲ್ಲಿಯೇ ಬಿಡುಗಡೆ ಮಾಡಿತ್ತು. ಹೀಗಾಗಿ ವಾಟ್ಸ್‌ಆಪ್ ಸಹ ವೇಗವಾಗಿ ತನ್ನ ಬಳಕೆದಾರಿಗೆ ಪೇಮೆಂಟ್ ಆಯ್ಕೆಯನ್ನು ನೀಡಲು ಮುಂದಾಗಿದೆ.

ಬೇರೆ ಆಪ್‌ಗಳಿಗೆ ಹೊಡೆತ:

ಬೇರೆ ಆಪ್‌ಗಳಿಗೆ ಹೊಡೆತ:

ವಾಟ್ಸ್ಆಪ್ ಪೇಮೆಂಟ್ ಸೇವೆಯನ್ನು ಆರಂಭಿಸುವುದರಿಂದ ಬೇರೆ ಪೇಮೆಂಟ್ ಆಪ್ ಗಳಿಗೆ ಹೊಡೆತ ಬೀಳಲಿದೆ. ಏಕೆಂದರೆ ವಾಟ್ಸ್‌ಆಪ್ ಬಳಕೆ ಮಾಡುವ ಜನರು ಬೇರೆ ಆಪ್ ಗಳನ್ನು ಸುಮ್ಮನೆ ಇನ್‌ಸ್ಟಾಲ್ ಮಾಡಿಕೊಳ್ಳುವುದಿಲ್ಲ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
The messaging platform is building its payments service on the UPI system. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot