Home
ಸುದ್ದಿಜಾಲ

Inbuilt camera:ಆಪಲ್‌ ಏರ್‌ಪಾಡ್ಸ್‌ನಲ್ಲಿ ಇನ್‌ಬಿಲ್ಟ್‌ ಕ್ಯಾಮೆರಾ, ಆರೋಗ್ಯ ಸಂಬಂಧಿ ಸೆನ್ಸರ್!

ಸ್ಮಾರ್ಟ್‌ಫೋನ್‌ನೊಂದಿಗೆ ಬೆಂಬಲ ಪಡೆದು ಕಾರ್ಯನಿರ್ವಹಿಸುವ ಏರ್‌ಪಾಡ್ಸ್‌(AirPods) , ಸ್ಮಾರ್ಟ್‌ವಾಚ್‌ ಸೇರಿದಂತೆ ಸಾಕಷ್ಟು ಡಿವೈಸ್‌ಗಳು ದಿನೇ ದಿನೇ ಭಿನ್ನ ಫೀಚರ್ಸ್‌ ಆಯ್ಕೆ ಪಡೆಯುತ್ತಿವೆ. ಈ ಮೂಲಕ ಹೊಸ ಹೊಸ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿವೆ. ಈ ಬೆಳವಣಿಗೆ ನಡುವೆ ಆಪಲ್‌ ಏರ್‌ಪಾಡ್ಸ್‌ ಇನ್ಮುಂದೆ ಇನ್‌ಬಿಲ್ಟ್‌ ಕ್ಯಾಮೆರಾ (Inbuilt camera) ಹೊಂದಿರಲಿದೆ ಎಂದು ತಿಳಿದುಬಂದಿದೆ.

ಹೌದು, ಈ ವಿಷಯ ಕೇಳಿ ನಿಮಗೆ ಖಂಡಿತಾ ಅಚ್ಚರಿ ಎನಿಸಿರಬಹುದು. ಆದರೆ ಆಪಲ್‌ಗೆ ಇದ್ಯಾವುದೂ ದೊಡ್ಡ ಕೆಲಸವಲ್ಲ. ಈ ಕಾರಣಕ್ಕೆ ಆಪಲ್‌ನ ಭವಿಷ್ಯದ ಏರ್‌ಪಾಡ್ಸ್‌ನಲ್ಲಿ ಇನ್‌ಬಿಲ್ಟ್‌ ಕ್ಯಾಮೆರಾ ನೋಡಬಹುದಾಗಿದೆ. ಈ ಮೂಲಕ ಆಪಲ್‌ ಧರಿಸಬಹುದಾದ ಡಿವೈಸ್‌ಗಳ ಶ್ರೇಣಿಯನ್ನು ವಿಸ್ತರಣೆ ಮಾಡುವ ಕೆಲಸ ಮಾಡುತ್ತದೆ ಎನ್ನಲಾಗಿದೆ. ಈ ಮೂಲಕ ಆದಾಯದ ವಿಚಾರದಲ್ಲಿ ಗಮನಾರ್ಗ ಬದಲಾವಣೆ ಆಗಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಏನಿದು ಇಯರ್‌ಪಾಡ್ಸ್‌ನಲ್ಲಿ ಕ್ಯಾಮೆರಾ, ಬನ್ನಿ ಇನ್ನಷ್ಟು ತಿಳಿಯೋಣ.

ಆಪಲ್‌ ಏರ್‌ಪಾಡ್ಸ್‌ನಲ್ಲಿ ಇನ್‌ಬಿಲ್ಟ್‌ ಕ್ಯಾಮೆರಾ, ಆರೋಗ್ಯ ಸಂಬಂಧಿ ಸೆನ್ಸರ್!

ಆಪಲ್‌ ಏರ್‌ಪಾಡ್ಸ್‌ನಲ್ಲಿ ಕ್ಯಾಮೆರಾ: ಮುಂದಿನ ದಿನಗಳಲ್ಲಿ ನಿಮ್ಮ ಕಿವಿಯಿಂದಲೇ ಫೋಟೋಗಳು ಮತ್ತು ವಿಡಿಯೋಗಳನ್ನು ಸೆರೆಹಿಡಿಯುವ ಕಾಲ ಬರಲಿದೆ. ಇಷ್ಟೇ ಅಲ್ಲ ಫಿಟ್‌ನೆಸ್ ರಿಂಗ್ ಮತ್ತು ಸ್ಮಾರ್ಟ್ ಗ್ಲಾಸ್‌ಗಳ ಬಗ್ಗೆಯೂ ಆಪಲ್‌ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ. ಈ ಸಂಭಾವ್ಯ ಗ್ಯಾಜೆಟ್‌ಗಳು ತನ್ನ ಧರಿಸಬಹುದಾದ ಡಿವೈಸ್‌‌ಗಳ ಶ್ರೇಣಿಯನ್ನು ವಿಸ್ತರಿಸುವ ಆಪಲ್‌ನ ಪ್ರಮುಖ ಯೋಜನೆಯ ಭಾಗವಾಗಿದೆ.

ಏರ್‌ಪಾಡ್ಸ್ ನಲ್ಲಿ ಕೇವಲ ಕ್ಯಾಮೆರಾ ಆಷ್ಟೇ ನೀಡದೆ ಸುಧಾರಿತ ಎಐ ಫೀಚರ್ಸ್‌ ಅನ್ನೂ ಸಹ ನೀಡಲಿದೆ ಎನ್ನಲಾಗಿದೆ. ಜೊತೆಗೆ ಆರೋಗ್ಯ ಸೆನ್ಸರ್‌ಗಳನ್ನೂ ಈ ಡಿವೈಸ್‌ನಲ್ಲಿ ಕಾಣಬಹುದಾಗಿದೆ ಎಂದು ಮಾರ್ಕ್ ಗುರ್ಮನ್ ವರದಿ ಮಾಡಿದೆ. ಇದರ ಜೊತೆಗೆ ಫಿಟ್‌ನೆಸ್ ರಿಂಗ್‌ನ ಕಲ್ಪನೆ ಸಹ ಆಪಲ್‌ ಮುಂದೆ ಇದ್ದು, ನಿಮ್ಮ ಆರೋಗ್ಯದ ಮೆಟ್ರಿಕ್‌ಗಳನ್ನು ಟ್ರ್ಯಾಕ್ ಮಾಡುತ್ತದೆ.

ಸ್ಮಾರ್ಟ್‌ವಾಚ್‌ ಧರಿಸಲು ಉತ್ಸುಕರಾಗಿಲ್ಲದವರಿಗೆ ಅಥವಾ ಕಡಿಮೆ ಇಷ್ಟ ಇರುವವರು ಈ ರಿಂಗ್‌ ಬಳಕೆ ಮಾಡಬಹುದಾಗಿದೆ. ಇದು ಗೇಮ್‌ ಚೇಂಜರ್‌ ಆಗಿದ್ದು, ಮುಂದಿನ ದಿನಗಳಲ್ಲಿ ನಿಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿರಲಿದೆ. ಇದರೊಂದಿಗೆ ಸ್ಮಾರ್ಟ್ ಗ್ಲಾಸ್‌ಗಳ ವಿಚಾರದಲ್ಲೂ ಆಪಲ್‌ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ನಿಜವಾದ ವರ್ಧಿತ ರಿಯಾಲಿಟಿ ಗ್ಲಾಸ್‌ಗಳು ಲಬ್ಯವಾಗಲು ಇನ್ನೂ ಕೆಲವು ವರ್ಷಗಳಷ್ಟು ದೂರವಿದ್ದರೂ, ಈಗಾಗಲೇ ಈ ಸಂಬಂಧ ಕ್ರೇಜ್‌ ಹೆಚ್ಚಾಗಿದೆ.

ಈ ಗ್ಲಾಸ್‌ಗಳು ಕೇವಲ ಗ್ಲಾಸ್‌ ಆಗಿ ಮಾತ್ರವೇ ಇರದೆ ಆಡಿಯೊ ಅಸಿಸ್ಟೆಂಟ್‌, ಎಐ ಏಕೀಕರಣ ಮತ್ತು ಆರೋಗ್ಯ ಮೇಲ್ವಿಚಾರಣೆಯಂತಹ (Audio assistant, AI integration and health monitoring) ಫೀಚರ್ಸ್ ಅನ್ನೂ ಸಹ ಹೊಂದಿರಬಹುದು ಎನ್ನಲಾಗಿದೆ. ಈ ಮೂಲಕ ಬಳಕೆದಾರರು ಮುಖದ ಮೇಲೆ ಚಿಕ್ಕ ಕಂಪ್ಯೂಟರ್ ಅನ್ನೇ ಇಟ್ಟುಕೊಂಡಿರುವ ಅನುಭವ ಪಡೆಯಬಹುದಾಗಿದೆ.

ಆಪಲ್‌ ಏರ್‌ಪಾಡ್ಸ್‌ನಲ್ಲಿ ಇನ್‌ಬಿಲ್ಟ್‌ ಕ್ಯಾಮೆರಾ, ಆರೋಗ್ಯ ಸಂಬಂಧಿ ಸೆನ್ಸರ್!

ಇನ್ನು ಕ್ಯಾಮೆರಾಗಳೊಂದಿಗೆ ಬರಲಿದೆ ಎನ್ನಲಾಗುತ್ತಿರುವ ಏರ್‌ಪಾಡ್ಸ್‌ಗಳು ಕಲ್ಪನೆಯು ಫ್ಯೂಚರಿಸ್ಟಿಕ್ ಎಂದು ತೋರುತ್ತದೆಯಾದರೂ, ಆಪಲ್ ಈಗಾಗಲೇ ಅದನ್ನು ಅನ್ವೇಷಿಸಲು ಪ್ರಾರಂಭಿಸಿದೆ. ಇಂಜಿನಿಯರ್‌ಗಳು ಕ್ಯಾಮೆರಾ ಸೆನ್ಸರ್‌ಗಳನ್ನು ಅವುಗಳ ವಿನ್ಯಾಸ ಅಥವಾ ಕಾರ್ಯಚಟುವಟಿಕೆಗೆ ಧಕ್ಕೆಯಾಗದಂತೆ ಸಣ್ಣ ಇಯರ್‌ಬಡ್‌ಗಳಿಗೆ ಹೇಗೆ ಹೊಂದಿಸುವುದು ಎಂಬುದನ್ನು ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ. ಇದು ಯಶಸ್ವಿಯಾದರೆ, ಈ ಏರ್‌ಪಾಡ್ಸ್‌ಗಳು ನೀವು ಪ್ರಯಾಣದಲ್ಲಿರುವಾಗ ಉತ್ತಮ ಕ್ಷಣಗಳನ್ನು ಸೆರೆಹಿಡಿಯಲು ಸಹಕಾರ ಮಾಡಲಿವೆ.

ಒಟ್ಟಾರೆಯಾಗಿ, ಆಪಲ್‌ನ ಈ ಪರಿಕಲ್ಪನೆಗಳ ಪರಿಶೋಧನೆಯು ನಾವೀನ್ಯತೆ ಮತ್ತು ನಾವು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ವಿಧಾನವನ್ನು ಸುಧಾರಿಸುವ ಅವರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಮೇಲೆ ತಿಳಿಸಿದ ಅಷ್ಟೂ ಆಲೋಚನೆಗಳಲ್ಲಿ ಯಾವುದು ಕಾರ್ಯರೂಪಕ್ಕೆ ಬರುತ್ತವೆ ಎಂಬುದು ಇನ್ನೂ ಅನಿಶ್ಚಿತವಾಗಿರುವಾಗಿದೆ. ಅದರೂ ಆಪಲ್‌ ಮುಂದಿನ ದಿನಗಳಲ್ಲಿ ಇಷ್ಟೇ ಅಲ್ಲದೆ ಇನ್ನೂ ಬೇರೆ ರೀತಿಯ ಪರಿಕಲ್ಪನೆಗಳನ್ನು ಕಾರ್ಯರೂಪಕ್ಕೆ ತರುತ್ತದೆ ಅನ್ನೋದರಲ್ಲಿ ಎರಡು ಮಾತಿಲ್ಲ.

Best Mobiles in India

English summary
It is known that inbuilt camera will be available in Apple AirPods. Through this, users will be able to capture photos and videos right from your ears in the near future.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+