Home
ಸುದ್ದಿಜಾಲ

ನಿಮ್ಮ ಫೋನ್ ಬ್ಯಾಟರಿ ದೀರ್ಘತೆಗಾಗಿ ಹೊಸ ವಿಧಾನ

By Shwetha

ಹೊಸ ROM ಅನ್ನು ಇನ್‌ಸ್ಟಾಲ್ ಮಾಡಿದಾಗ ಅಥವಾ ನಮ್ಮ ಫೋನ್ ಅಪ್‌ಡೇಟ್ ಮಾಡಿದಾಗ, ಬ್ಯಾಟರಿ ಡ್ರೈನಿಂಗ್‌ನಂತಹ ಮುಖ್ಯ ಸಮಸ್ಯೆಯನ್ನು ನಾವು ಎದುರುಗೊಳ್ಳುತ್ತೇವೆ ನಿಮ್ಮ ಫೋನ್‌ನ ಬ್ಯಾಟರಿ ದೀರ್ಘತೆ ಮತ್ತು ಮೊಬೈಲ್‌ನ ಲೈಫ್‌ಗಾಗಿ ಫೋನ್ ಅನ್ನು ಕ್ಯಾಲಿಬರೇಟಿಂಗ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ಓದಿರಿ: ಆಂಡ್ರಾಯ್ಡ್ ಡಿವೈಸ್ ಸ್ನೇಹಿ ಬ್ಯಾಟರಿ ಟಿಪ್ಸ್

ಆಂಡ್ರಾಯ್ಡ್ ಫೋನ್ ಬ್ಯಾಟರಿ ಇಲ್ಲದೆ ನಿಮ್ಮ ಫೋನ್ ನಿರ್ಜೀವ. ನಿಮ್ಮ ಫೋನ್‌ನಲ್ಲಿ ಬ್ಯಾಟರಿ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದೀರಿ ಎಂದಾದಲ್ಲಿ, ಆದಷ್ಟು ಬೇಗ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. ಹಾಗಿದ್ದರೆ ಫೋನ್ ಕ್ಯಾಲಿಬರೇಟ್ ಏನು ಎಂಬುದನ್ನು ತಿಳಿದುಕೊಂಡು ಇದನ್ನು ನಿರ್ವಹಿಸುವ ವಿಧಾನವನ್ನು ಅರಿತುಕೊಳ್ಳೋಣ.

ಬ್ಯಾಟರಿ ಸ್ಥಿತಿ

ಬ್ಯಾಟರಿ ಸ್ಥಿತಿ

ನಿಮ್ಮ ಬ್ಯಾಟರಿ ಸ್ಥಿತಿಯನ್ನು ರೀಸೆಟ್ ಮಾಡುವುದು ಮತ್ತು ಹೊಸ ಬ್ಯಾಟರಿಯನ್ನು ಜನರೇಟ್ ಮಾಡುವುದಾಗಿದೆ ಇದು ಎಲ್ಲಾ ಸುಳ್ಳು ಮಾಹಿತಿಯನ್ನು ಸ್ವಚ್ಛಮಾಡುತ್ತದೆ ಮತ್ತು ಸರಿಯಾದ ಡೇಟಾವನ್ನು ತೋರಿಸಲು ಆರಂಭಿಸುತ್ತದೆ.

ಆಂಡ್ರಾಯ್ಡ್ ಮೊಬೈಲ್

ಆಂಡ್ರಾಯ್ಡ್ ಮೊಬೈಲ್

ನೀವು ರೂಟೆಡ್ ಆಂಡ್ರಾಯ್ಡ್ ಮೊಬೈಲ್ ಬಳಕೆದಾರರು ಎಂದಾದಲ್ಲಿ, ನಿಮಗಿದು ಇದು ತುಂಬಾ ಸರಳ. ಗೂಗಲ್ ಪ್ಲೇ ಸ್ಟೋರ್‌ನಿಂದ ಕ್ಯಾಲಿಬರೇಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಬರೇ ಸೆಕೆಂಡ್‌ಗಳಲ್ಲಿ ಫೋನ್ ಕ್ಯಾಲಿಬರೇಟ್ ಅನ್ನು ನಿಮಗೆ ಮಾಡಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌

ಗೂಗಲ್ ಪ್ಲೇ ಸ್ಟೋರ್‌ನಿಂದ ಬ್ಯಾಟರಿ ಕ್ಯಾಲಿಬರೇಶನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ

ಕ್ಯಾಲಿಬರೇಶನ್ ಅಪ್ಲಿಕೇಶನ್

ಕ್ಯಾಲಿಬರೇಶನ್ ಅಪ್ಲಿಕೇಶನ್

ಫೋನ್‌ನಲ್ಲಿ ಬ್ಯಾಟರಿ ಕ್ಯಾಲಿಬರೇಶನ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿ.

ಕ್ಯಾಲಿಬರೇಟ್ ಬಟನ್

ಕ್ಯಾಲಿಬರೇಟ್ ಬಟನ್

ಕ್ಯಾಲಿಬರೇಟ್ ಬಟನ್ ಅನ್ನು ಸ್ಪರ್ಶಿಸಿ. ರೂಟ್ ಆಕ್ಸೆಸ್‌ಗಾಗಿ ಅಪ್ಲಿಕೇಶನ್ ಅನುಮತಿ ನೀಡಿ.

ರೀಬೂಟ್ ಮಾಡಿ

ರೀಬೂಟ್ ಮಾಡಿ

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೀಬೂಟ್ ಮಾಡಿ ಹಾಗೂ ಸೊನ್ನೆ ಶೇಕಡಾಕ್ಕೆ ಇದು ತಲುಪವವರೆಗೂ ಅದನ್ನು ಸಾಮಾನ್ಯವಾಗಿ ಬಳಸಿ.

100% ಕ್ಕೆ ಚಾರ್ಜ್

100% ಕ್ಕೆ ಚಾರ್ಜ್

ನಿಮ್ಮ ಫೋನ್ ಅನ್ನು 100% ಕ್ಕೆ ಚಾರ್ಜ್ ಮಾಡಿ.

ಆಂಡ್ರಾಯ್ಡ್ ಓಎಸ್‌

ಆಂಡ್ರಾಯ್ಡ್ ಓಎಸ್‌

ಇದೀಗ ಆಂಡ್ರಾಯ್ಡ್ ಓಎಸ್‌ನಿಂದ ನೀವು ಸರಿಯಾದ ರೀಡಿಂಗ್ ಅನ್ನು ಪಡೆದುಕೊಳ್ಳುತ್ತೀರಿ.

ಫೋನ್ ರೂಟ್

ಫೋನ್ ರೂಟ್

ಫೋನ್ ರೂಟ್ ಮಾಡದೇ ಇರುವವರು ಬ್ಯಾಟರಿ ಲೋ ಆಗುವವರೆಗೂ ಕಾಯಿರಿ.

100% ಕ್ಕೆ ಚಾರ್ಜ್

100% ಕ್ಕೆ ಚಾರ್ಜ್

ನಿಮ್ಮ ಫೋನ್ ಅನ್ನು 100% ಕ್ಕೆ ಚಾರ್ಜ್ ಮಾಡಿ. ಫೋನ್ ಚಾರ್ಜ್ ಆಗುತ್ತಿರುವಾಗ ಡಿವೈಸ್ ಆನ್ ಮಾಡಬೇಡಿ.

ಚಾರ್ಜರ್ ಅನ್‌ಪ್ಲಗ್ ಮಾಡಿ

ಚಾರ್ಜರ್ ಅನ್‌ಪ್ಲಗ್ ಮಾಡಿ

ಚಾರ್ಜರ್ ಅನ್‌ಪ್ಲಗ್ ಮಾಡಿ ಮತ್ತು ಫೋನ್ ಆನ್ ಮಾಡಿ.

30 ನಿಮಿಷ

30 ನಿಮಿಷ

30 ನಿಮಿಷಗಳಷ್ಟು ಸಮಯ ಹಾಗೆಯೇ ಬಿಡಿ. ನಂತರ 30 ನಿಮಿಷಗಳಷ್ಟು ಕಾಲ ಪುನಃ ಚಾರ್ಜ್ ಮಾಡಿ. ಪ್ಲಗ್ ಇನ್ ಆಗಿರುವಾಗ ಫೋನ್ ಬಳಸಬೇಡಿ.

Best Mobiles in India

English summary
When we installed a new ROM or update our phone, we face some major problems like battery draining. In this post, we write how can you fix your mobile battery and increase the life of your mobile battery from calibrating.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+