ಜಿಯೋ ಗ್ರಾಹಕರಿಗೆ ಸ್ವಾತಂತ್ರ್ಯ ದಿನದ ಕೊಡುಗೆ, ಈ ಪ್ಲ್ಯಾನ್‌ನಲ್ಲಿ ವರ್ಷದ ಮಾನ್ಯತೆ, ಸಾಕು ಎನಿಸುವಷ್ಟು ಸೌಲಭ್ಯ!
ಜಿಯೋ ಟೆಲಿಕಾಂ (Jio Telecom) ವಲಯದಲ್ಲಿ ಹೆಚ್ಚಿನ ಚಂದಾದಾರನ್ನು ಪಡೆದುಕೊಂಡಿದೆ. ಅದರಲ್ಲೂ ಆಗಾಗ್ಗೆ ಹೊಸ ಹೊಸ ಪ್ಲ್ಯಾನ್‌ಗಳನ್ನು ಘೋಷಣೆ ಮಾಡುವ ಮೂಲಕ ಗ್ರಾಹಕರಿಗೆ ಭಾರೀ ಪ್ರಯೋಜನಗಳನ್ನು ನೀಡುತ್ತಿರುವ ಜಿಯೋ ಇದೀಗ 365 ದಿನಗಳ ವ್ಯಾಲಿಡಿಟಿ ಇರುವ ಈ ಪ್ಲ್ಯಾನ್ ಮೂಲಕ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿದೆ.
ಹೌದು, ಏರ್‌ಟೆಲ್, ವೊಡಾಫೋನ್ ಐಡಿಯಾ, ಬಿಎಸ್‌ಎನ್‌ಎಲ್‌ನಂತಹ (Airtel, Vodafone Idea, BSNL) ಪ್ರಮುಖ ಟೆಲಿಕಾಂ ಕಂಪನಿಗಳು ದೇಶದಲ್ಲಿ ತಮ್ಮದೇ ಆದ ಪ್ರಭಾವ ಬೀರಿದ್ದರೂ ಸಹ ಜಿಯೋ ಇವುಗಳಿಂದ ಹಿಂಜರಿದಿಲ್ಲ. ಈ ಕ್ಷಣಕ್ಕೂ ಸಹ ಜಿಯೋ ಗ್ರಾಹಕರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಜಿಯೋದ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಪ್ಲ್ಯಾನ್‌ಗಳು ಇತರ ಯಾವುದೇ ಕಂಪನಿಗಳಿಗೆ ಹೋಲಿಸಿದರೆ ಉತ್ತಮವಾದ ಬೆಲೆಯನ್ನು ಹೊಂದಿವೆ. ಹಾಗಿದ್ರೆ, ಬನ್ನಿ ಸ್ವಾತಂತ್ರ್ಯ ದಿನದ ಕೊಡುಗೆ ಏನು ಎಂಬುದನ್ನು ನೋಡೊಣ.

ಜಿಯೋ ಪ್ರಸ್ತುತ ಕೇವಲ ಎರಡು ಪ್ರಿಪೇಯ್ಡ್ ಪ್ಲ್ಯಾನ್‌ಗಳನ್ನು (Prepaid Plan) ದೀರ್ಘ ಕಾಲದ ಮಾನ್ಯತೆಯೊಂದಿಗೆ ನೀಡುತ್ತದೆ. ಆದರೆ ಈ ದೀರ್ಘಾವಧಿಯ ಯೋಜನೆಗಳಲ್ಲಿ ಈ ಪ್ಲ್ಯಾನ್ ಸ್ವಾತಂತ್ರ್ಯ ದಿನಾಚರಣೆ 2023 ಆಫರ್‌ನೊಂದಿಗೆ ಕಾಣಿಸಿಕೊಳ್ಳುತ್ತಿದ್ದು, ಇದು ಜಿಯೋ ಗ್ರಾಹಕರಿಗೆ ಅನಿಯಮಿತ ಕರೆ ಸೌಲಭ್ಯ, ಡೇಟಾ ಸೌಲಭ್ಯ ಸೇರಿದಂತೆ ಹಲವು ಪ್ರಯೋಜನಗಳನ್ನು ನೀಡಲು ಮುಂದಾಗಿದೆ.
365 ದಿನಗಳ ವ್ಯಾಲಿಡಿಟಿಯೊಂದಿಗೆ 2,999ರೂ.ಗಳ ಪ್ಲ್ಯಾನ್: ಈ ಪ್ಲ್ಯಾನ್ ಪ್ರಸ್ತುತ ಜಿಯೋ ನೀಡುವ ಅತ್ಯಂತ ದುಬಾರಿ ಪ್ಲ್ಯಾನ್ ಆಗಿದೆ. ಇದು 365 ದಿನಗಳ ಮಾನ್ಯತೆಯೊಂದಿಗೆ ಕಾಣಿಸಿಕೊಳ್ಳಲಿದ್ದು, ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕಾಲ್, 100 ಎಸ್‌ಎಮ್‌ಎಸ್, 2.5GB ದೈನಂದಿನ ಡೇಟಾವನ್ನು ಆಯ್ಕೆಯನ್ನು ನೀಡುತ್ತದೆ. ಈ ಪ್ಲ್ಯಾನ್‌ನಲ್ಲಿ ಬಳಕೆದಾರರು ಪಡೆಯುವ ಒಟ್ಟು ಡೇಟಾ 912.5GB ಆಗಿದೆ. ಇಷ್ಟು ಮಾತ್ರವಲ್ಲದೆ ಹಲವಾರು ಪ್ರಯೋಜನ ಇದರಲ್ಲಿವೆ.
ಇದರ ಹೆಚ್ಚುವರಿ ಪ್ರಯೋಜನಗಳ ಕಡೆ ಕಣ್ಣಾಯಿಸುವುದಾದರೆ ಗ್ರಾಹಕರು ಯಾತ್ರಾ ಟ್ರಾವೆಲ್ ಏಜೆನ್ಸಿ (Yatra Travel Agency) ಮೂಲಕ ವಿಮಾನ ಟಿಕೆಟ್‌ಗಳಲ್ಲಿ 1,500 ರೂ.ಗಳ ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಭಾರತದಲ್ಲಿ ಎಲ್ಲಿಯಾದರೂ ಸರಿ ಹೋಟೆಲ್ ಬುಕ್ ಮಾಡಿದರೆ ನಿಮಗೆ 4,000 ರೂ.ವರೆಗೂ ಡಿಸ್ಕೌಂಟ್ ಲಭ್ಯ ಆಗಲಿದೆ.
ಇದರೊಂದಿಗೆ ಅಜಿಯೋ ಸೈಟ್‌ನಲ್ಲಿ ಆರ್ಡರ್ ಮಾಡಿದ ಪ್ರೊಡಕ್ಟ್‌ಗಳ ಮೇಲೆ 200ರೂ.ಗಳ ರಿಯಾಯಿತಿ ಲಭ್ಯವಾಗಲಿದ್ದು, ಈ ಆಫರ್ 900ರೂ.ಗಳ ಮೇಲೆ ಇರುವ ಪ್ರೊಡಕ್ಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಜೊತೆಗೆ ಆನ್‌ಲೈನ್ ಔಷಧ ಮಾರಾಟದ ಪ್ಲಾಟ್‌ಫಾರ್ಮ್ ಆಗಿರುವ ನೆಟ್‌ಮೆಡ್ಸ್ ಮೂಲಕ ನೀವು ಯಾವುದೇ ಔಷಧಿಯನ್ನು ಆರ್ಡರ್ ಮಾಡಿದರೂ ಶೇಕಡಾ 20 % ರಿಯಾಯಿತಿ ನೀಡಲಾಗುತ್ತದೆ.
ಇದಿಷ್ಟು ಸಾಲದು ಎಂಬಂತೆ ನೆಟ್‌ಮೆಡ್ಸ್ NMS ಸೂಪರ್‌ಕ್ಯಾಶ್ ಕೊಡುಗೆಯೂ ಲಭ್ಯವಿದೆ. ಇದರೊಂದಿಗೆ ರಿಲಯನ್ಸ್ ಡಿಜಿಟಲ್‌ನಲ್ಲಿ ಆಡಿಯೊ ಪ್ರೊಡಕ್ಟ್(Audio product) ಮೇಲೆ ಶೇಕಡಾ 10 % ರಿಯಾಯಿತಿ ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ ಶೇಕಡಾ 10 % ರಿಯಾಯಿತಿಯನ್ನು ಈ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಜಿಯೋ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.
ಪ್ರಮುಖವಾಗಿ ಈ ಪ್ಲ್ಯಾನ್‌ನಲ್ಲಿ 365 ದಿನಗಳವರೆಗೆ ಜಿಯೋಟಿವಿ, ಜಿಯೋಸಿನಿಮಾ ಮತ್ತು ಜಿಯೋ ಕ್ಲೌಡ್ ಅನ್ನು ಸೌಲಭ್ಯ ಪಡೆದುಕೊಳ್ಳಲಿದ್ದು, ನೀವು ನಿಮ್ಮ ಮಾಸಿಕ ವೆಚ್ಚವನ್ನು ಕಡಿಮೆ ಮಾಡಲು ನೀವು ಇಚ್ಚಿಸಿದರೆ ಈ ಪ್ಲ್ಯಾನ್ ಉತ್ತಮ ಆಯ್ಕೆಯಾಗಿದೆ. ಇದು ದೊಡ್ಡ ಮೊತ್ತ ಹೊಂದಿದ್ದರೂ ಸಹ ಅದಕ್ಕೆ ತಕ್ಕಂತ ಸೌಲಭ್ಯ ನೀಡುತ್ತಿರುವುದು ಹಲವಾರು ಗ್ರಾಹಕರಿಗೆ ಖುಷಿ ನೀಡುವ ವಿಚಾರವಾಗಿದೆ.
ದೆಹಲಿಯಲ್ಲಿ 5G ಸೇವೆ ಡೇಟಾ ವೇಗ ಪರೀಕ್ಷೆಯಲ್ಲಿ ಯಶಸ್ವಿ: ಈ ನಡುವೆ ರಿಲಯನ್ಸ್ ಜಿಯೋ ದೆಹಲಿ ಸೇವಾ ಪ್ರದೇಶದಲ್ಲಿ 26 GHz ಮತ್ತು 3300 MHz ಸ್ಪೆಕ್ಟ್ರಮ್ ಬ್ಯಾಂಡ್‌ಗಳನ್ನು ಬಳಸಿಕೊಂಡು 5G ಸೇವೆಗಳು ಮತ್ತು ಡೇಟಾ ವೇಗಕ್ಕಾಗಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ರಿಲಯನ್ಸ್ ಜಿಯೋದ ಕನಿಷ್ಠ ರೋಲ್‌ಔಟ್ ಜವಾಬ್ದಾರಿಗಳನ್ನು ಪರಿಶೀಲಿಸಲು ದೂರಸಂಪರ್ಕ ಇಲಾಖೆ ಈ ಪರೀಕ್ಷೆ ನಡೆಸಿದೆ.

ಜುಲೈ 2022 ರ ಹರಾಜಿನಲ್ಲಿ ಸ್ಪೆಕ್ಟ್ರಮ್ ಅನ್ನು ಸ್ವಾಧೀನಪಡಿಸಿಕೊಂಡ ಮೊದಲ ವರ್ಷದೊಳಗೆ 5G ನಿಯೋಜನೆಗಾಗಿ ಜಿಯೋ ತನ್ನ ಕನಿಷ್ಠ ರೋಲ್‌ಔಟ್ ಜವಾಬ್ದಾರಿಗಳನ್ನು ಪೂರ್ಣಗೊಳಿಸಿದೆ. ಈ ಸಂಬಂಧ ದೂರಸಂಪರ್ಕ ಇಲಾಖೆಗೆ ಟೆಲಿಕಾಂ ಅಗತ್ಯ ಅರ್ಜಿಗಳನ್ನೂ ಸಲ್ಲಿಸಿದೆ. ಹಿಂದಿನ ವಾರಗಳಲ್ಲಿ ಮುಂಬೈ, ಗುಜರಾತ್ ಮತ್ತು ಕೋಲ್ಕತ್ತಾ ಸೇವಾ ಪ್ರದೇಶಗಳಲ್ಲಿ ಇದೇ ರೀತಿಯ ಪರೀಕ್ಷೆಗಳನ್ನು ನಡೆಸಲಾಗಿತ್ತು.


Click it and Unblock the Notifications








