Home
ಸುದ್ದಿಜಾಲ

ವಿ ಟೆಲಿಕಾಂ ನಿಂದ ಸ್ವಾತಂತ್ರ್ಯ ದಿನದ ಆಫರ್: 50 GB ಹೆಚ್ಚುವರಿ ಡೇಟಾ, ಆಯ್ದ ರೀಚಾರ್ಜ್‌ ಪ್ಲ್ಯಾನ್‌ಗೆ ಡಿಸ್ಕೌಂಟ್

ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾಗಿರುವ ವೋಡಾಫೋನ್‌ ಐಡಿಯಾ (ವಿ ಟೆಲಿಕಾಂ) ಈಗಾಗಲೇ ಸಾಕಷ್ಟು ಹೊಸ ಪ್ಲ್ಯಾನ್‌ ಮೂಲಕ ಚಂದಾದಾರರನ್ನು ಸೆಳೆದಿದೆ. ಈ ನಡುವೆ ಸ್ವಾತಂತ್ರ್ಯ ದಿನದ ಹಿನ್ನೆಲೆ ಹೊಸ ಸೌಲಭ್ಯವೊಂದನ್ನು ಘೋಷಣೆ ಮಾಡಿದ್ದು, ಇದು ಹೆಚ್ಚುವರಿ 50GB ಡೇಟಾದೊಂದಿಗೆ ರೀಚಾರ್ಜ್ ಪ್ಲ್ಯಾನ್‌ನಲ್ಲಿ ಡಿಸ್ಕೌಂಟ್‌ ಸಹ ನೀಡಲು ಮುಂದಾಗಿದೆ.

ಹೌದು, ವೋಡಾಫೋನ್‌ ಐಡಿಯಾ (Vodafone Idea) ಇದೀಗ ಆಯ್ದ ರೀಚಾರ್ಜ್ ಪ್ಲ್ಯಾನ್‌ಗಳ ಮೇಲಿನ ರಿಯಾಯಿತಿಗಳ ಜೊತೆಗೆ ಅಂದರೆ 199ರೂ.ಗಳಿಗಳಿಗಿಂತ ಹೆಚ್ಚಿನ ರೀಚಾರ್ಜ್‌‌ ಪ್ಲ್ಯಾನ್‌ಗಳ ಮೇಲೆ 50GB ಡೇಟಾವನ್ನು ನೀಡಲು ಘೋಷಣೆ ಮಾಡಿದೆ. ಹಾಗಿದ್ರೆ, ಈ ವೊಡಾಫೋನ್ ಐಡಿಯಾದ ಸ್ವಾತಂತ್ರ್ಯ ದಿನದ ಕೊಡುಗೆಯಲ್ಲಿ ಇನ್ನೂ ಏನೆನೆಲ್ಲಾ ಸೌಲಭ್ಯ ಇವೆ, ಇವುಗಳನ್ನು ಗ್ರಾಹಕರು ಪಡೆದುಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

ವಿ ಟೆಲಿಕಾಂ ನಿಂದ ಸ್ವಾತಂತ್ರ್ಯ ದಿನದ ಆಫರ್: 50 GB ಹೆಚ್ಚುವರಿ ಡೇಟಾ..

ವೋಡಾಫೋನ್‌ ಐಡಿಯಾದಿಂದ ಕೊಡುಗೆ: ವಿ ಟೆಲಿಕಾಂ (Vi Telecom) ಇದೀಗ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ತನ್ನ ವಿಶೇಷ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ಅನಾವರಣಗೊಳಿಸಿದೆ. ಇದು ಆಗಸ್ಟ್ 18 ರವರೆಗೆ ಮಾನ್ಯವಾಗಿರಲಿದೆ ಎಂದು ಮಾಹಿತಿ ನೀಡಿದೆ. ಅಂದರೆ 199ರೂ.ಗಳು ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಎಲ್ಲಾ ಅನಿಯಮಿತ ಡೇಟಾ ರೀಚಾರ್ಜ್‌ ಪ್ಲ್ಯಾನ್‌ಗಳ ಮೇಲೆ ಹೆಚ್ಚುವರಿ 50GB ಡೇಟಾ ಪ್ರಯೋಜನಗಳನ್ನು ನೀಡಲಿದೆ.

ಇದರೊಂದಿಗೆ ವೋಡಾಫೋನ್‌ ಐಡಿಯಾ ಗ್ರಾಹಕರು ಈ ಸಮಯದಲ್ಲಿ 1,449ರೂ.ಗಳು ಹಾಗೂ 3,099 ರೂ.ಗಳ ರೀಚಾರ್ಜ್‌ ಪ್ಲ್ಯಾನ್‌ಗಳ ಮೇಲೆ 50ರೂ.ಗಳು ಹಾಗೂ 75ರೂ.ಗಳ ತ್ವರಿತ ಡಿಸ್ಕೌಂಟ್‌ (Instant discount) ಪಡೆದುಕೊಳ್ಳಲಿದ್ದಾರೆ. ಈ ಮೂಲಕ ಕಡಿಮೆ ದರದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಬಳಕೆ ಮಾಡಲು ವೋಡಾಫೋನ್‌ ಐಡಿಯಾ ಅನುವು ಮಾಡಿಕೊಟ್ಟಿದೆ.

ಮೇಲೆ ತಿಳಿಸಿದ ಅಷ್ಟೂ ಕೊಡುಗೆಗಳ ಜೊತೆಗೆ, ವಿ ಆಪ್‌ನಲ್ಲಿ ವಿಶೇಷವಾದ ಸ್ಪಿನ್ ದಿ ವೀಲ್ (Spin the Wheel) ಎಂಬ ಸ್ಪರ್ಧೆಯನ್ನು ಆಯೋಜನೆ ಮಾಡಿದೆ. ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಗ್ರಾಹಕರು ಈ ಗೇಮ್‌ ಮೂಲಕ ಇನ್ನೂ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಅಂದರೆ, ಈ ಸ್ಪರ್ಧೆಯು ಪ್ರತಿ ಗಂಟೆಗೆ ಅದೃಷ್ಟಶಾಲಿ ವಿಜೇತರನ್ನು ಖಾತರಿಪಡಿಸುತ್ತದೆ.

ಈ ಸ್ಪರ್ಧೆಯಲ್ಲಿ ಒಂದು ವರ್ಷದವರೆಗೆ ಮಾನ್ಯವಾಗಿರುವ 3,099ರೂ.ಗಳ ಮೌಲ್ಯದ ಕಾಂಪ್ಲಿಮೆಂಟರಿ ರೀಚಾರ್ಜ್ ಪ್ಯಾಕ್ ವಿಜೇತರಿಗೆ ನೀಡುತ್ತದೆ. ಇದರೊಂದಿಗೆ ಈ ಸ್ಪರ್ಧೆಯಲ್ಲಿ 1GB ಅಥವಾ 2GB ಹೆಚ್ಚುವರಿ ಡೇಟಾ ಮತ್ತು ಸೋನಿಲಿವ್‌ಗೆ ಚಂದಾದಾರಿಕೆಯಂತಹ ಹೆಚ್ಚುವರಿ ಬಹುಮಾನಗಳನ್ನು ಸಹ ಈ ಗೇಮ್‌ನಲ್ಲಿ ಭಾಗಿಯಾಗಿರುವವರು ಪಡೆದುಕೊಳ್ಳಬಹುದು. ಇದಕ್ಕಾಗಿ ನೀವು ಒಂದೇ ನಿಮ್ಮ ಫೋನ್‌ನಲ್ಲಿ ವಿ ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಈ ನಡುವೆ ಜಿಯೋ ಸಹ ಆಫರ್ ಒಂದು ವಿಶೇಷ ಪ್ಲ್ಯಾನ್‌ ಘೋಷಣೆ ಮಾಡಿದೆ. ಜಿಯೋದ 2,999ರೂ.ಗಳ ಪ್ಲ್ಯಾನ್‌ನಲ್ಲಿ ಗ್ರಾಹಕರು 365 ದಿನಗಳ ಮಾನ್ಯತೆ ಅವಧಿಯನ್ನು ಪಡೆಯಲಿದ್ದು, ಅನಿಯಮಿತ ಕರೆ ಪ್ರಯೋಜನ, ನಿತ್ಯವೂ 100 SMS ಹಾಗೂ 2.5GB ದೈನಂದಿನ ಡೇಟಾ ಪ್ರಯೋಜನ ಪಡೆಯಲಿದ್ದಾರೆ. ಆದರೆ, ಇಷ್ಟೇ ಪ್ರಯೋಜನ ಮಾತ್ರವಲ್ಲದೆ ಈ ಸೌಲಭ್ಯ ಸಹ ಲಭ್ಯ.

ಇದರೊಂದಿಗೆ ಈ ಸ್ವಿಗ್ಗಿಯಲ್ಲಿ 249ರೂ.ಗಳು ಅಥವಾ ಅದಕ್ಕಿಂತ ಹೆಚ್ಚಿನ ಆರ್ಡರ್ ಮೌಲ್ಯದ ಮೇಲೆ 100ರೂ.ಗಳ ರಿಯಾಯಿತಿ ಸಿಗಲಿದೆ ಹಾಗೂ ಯಾತ್ರಾ ಮೂಲಕ ಫ್ಲೈಟ್ ಬುಕ್ಕಿಂಗ್‌ನಲ್ಲಿ 1,500ರೂ.ಗಳ ವರೆಗೆ ರಿಯಾಯಿತಿ ಮತ್ತು ದೇಶೀಯ ಹೋಟೆಲ್ ಬುಕಿಂಗ್‌ನಲ್ಲಿ 4,000ರೂ.ಗಳ ವರೆಗೆ ರಿಯಾಯಿತಿ ಸಿಗಲಿದೆ. ಅಜಿಯೋನಲ್ಲಿ 999ರೂ.ಗಳ ಆರ್ಡರ್‌ ಮೇಲೆ 200ರೂ.ಗಳ ಡಿಸ್ಕೌಂಟ್‌ ಸಿಗಲಿದೆ.

ವಿ ಟೆಲಿಕಾಂ ನಿಂದ ಸ್ವಾತಂತ್ರ್ಯ ದಿನದ ಆಫರ್: 50 GB ಹೆಚ್ಚುವರಿ ಡೇಟಾ..

ಜೊತೆಗೆ ನೆಟ್ಮೆಡ್ಸ್ ನಲ್ಲಿ 999+NMS ಸೂಪರ್‌ಕ್ಯಾಶ್‌ನ ಆರ್ಡರ್‌ಗಳ ಮೇಲೆ 20% ರಿಯಾಯಿತಿ ಹಾಗೂ ರಿಲಯನ್ಸ್ ಡಿಜಿಟಲ್‌ನಲ್ಲಿ ಆಯ್ದ ಆಡಿಯೋ ಟೂಲ್ಸ್ ಮೇಲೆ ಫ್ಲಾಟ್ 10% ಡಿಸ್ಕೌಂಟ್‌ ಸಿಗಲಿದ್ದು, ಆಯ್ದ ಗೃಹೋಪಯೋಗಿ ಉಪಕರಣಗಳ ಮೇಲೆ ಫ್ಲಾಟ್ 10% ಡಿಸ್ಕೌಂಟ್‌ ಸಹ ಲಭ್ಯ ಆಗಲಿದೆ.

Best Mobiles in India

English summary
Vodafone Idea will now offer 50GB data on recharge plans above Rs 199 along with discounts on select recharge plans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+