Home
ಸುದ್ದಿಜಾಲ

ವಿಶ್ವಗುರು ಭಾರತ!..ತಂತ್ರಜ್ಞಾನ ವಲಯದಲ್ಲಿ ಗಮನಾರ್ಹ ಹೆಜ್ಜೆ ಗುರುತು ಮೂಡಿಸಿದೆ!

ಇತ್ತೀಚಿನ ಕಳೆದ ಕೆಲವು ವರ್ಷಗಳಲ್ಲಿ ಭಾರತ ದೇಶವು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಜಾಗತೀಕರಣ ಮತ್ತು ಡಿಜಿಟಲ್ ಕ್ರಾಂತಿಯ ಆಗಮನದೊಂದಿಗೆ, ದೇಶವು ಜಾಗತಿಕ ತಂತ್ರಜ್ಞಾನ ಮಾರುಕಟ್ಟೆಯಲ್ಲಿ ಪ್ರಮುಖ ದೇಶವಾಗಿ ಹೊರಹೊಮ್ಮಿದೆ. ಸಾಫ್ಟ್‌ವೇರ್ ಅಭಿವೃದ್ಧಿ ವಿಭಾಗದಿಂದ ಬಾಹ್ಯಾಕಾಶ ಪರಿಶೋಧನೆಯವರೆಗೆ, ಭಾರತವು ತಂತ್ರಜ್ಞಾನದ ವಿವಿಧ ವಲಯಗಳಲ್ಲಿ ವಿಶ್ವವೇ ಮೆಚ್ಚುವಂತಹ ಅಭಿವೃದ್ದಿಯನ್ನು ಸಾಧಿಸಿದೆ.

ಭಾರತವು ಅತ್ಯುತ್ತಮ ಪ್ರಗತಿಯನ್ನು ಸಾಧಿಸಿರುವ ಪ್ರಮುಖ ವಲಯಗಳಲ್ಲಿ ಮಾಹಿತಿ ತಂತ್ರಜ್ಞಾನ (Information Technology) ಸಹ ಕೂಡಾ ಸೇರಿದದೆ. ದೇಶವನ್ನು ಈಗ ಐಟಿ ಸೇವೆಗಳಿಗೆ ಜಾಗತಿಕ ಕೇಂದ್ರವೆಂದು ಪರಿಗಣಿಸಲಾಗಿದೆ. ಭಾರತೀಯ ಸಂಸ್ಥೆಗಳು ವಿಶ್ವದಾದ್ಯಂತ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಸೇವೆಗಳನ್ನು ನೀಡುತ್ತಿವೆ.

ವಿಶ್ವಗುರು ಭಾರತ!..ತಂತ್ರಜ್ಞಾನ ವಲಯದಲ್ಲಿ ಗಮನಾರ್ಹ ಹೆಜ್ಜೆ ಗುರುತು ಮೂಡಿಸಿದೆ!

ಭಾರತೀಯ ಐಟಿ ಉದ್ಯಮದ (IT industry) ಪ್ರಗತಿಗೆ ಹಲವಾರು ಅಂಶಗಳ ಕಾರಣವೆಂದು ಹೇಳಬಹುದು, ಇದರಲ್ಲಿ ಪರಿಣಿತ ವೃತ್ತಿಪರರ ದೊಡ್ಡ ಬಳಗ, ಉತ್ತಮ ಶಿಕ್ಷಣ ವ್ಯವಸ್ಥೆ ಮತ್ತು ತಂತ್ರಜ್ಞಾನ ವಲಯದಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ ಬೆಂಬಲ ಸರ್ಕಾರದ ನೀತಿ.

ಮಾಹಿತಿ ತಂತ್ರಜ್ಞಾನದ (Information Technology) ಇದರ ಜೊತೆಗೆ, ಜೈವಿಕ ತಂತ್ರಜ್ಞಾನ, ನ್ಯಾನೊ ತಂತ್ರಜ್ಞಾನ (nanotechnology) ಹಾಗೂ ನವೀಕರಿಸಬಹುದಾದ ಶಕ್ತಿಯಂತಹ (renewable energy) ತಂತ್ರಜ್ಞಾನದ ಅಭಿವೃದ್ಧಿಯ ಇತರ ವಿಭಾಗಗಳಲ್ಲಿ ದೇಶವು ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ. ಈ ವಿಭಾಗಗಳಲ್ಲಿ ಅತ್ಯಾಧುನಿಕ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಹಲವಾರು ವಿಶ್ವ ಮಟ್ಟದ ಸಂಶೋಧನಾ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳಿಗೆ ದೇಶವು ತಾಣವೆನಿಸಿದೆ.

ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಸರ್ಕಾರವು ಸಹ ಮುಖ್ಯ ಪಾತ್ರವನ್ನು ವಹಿಸಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಮೇಕ್ ಇನ್ ಇಂಡಿಯಾ (Make in India) ಅಭಿಯಾನ ಮತ್ತು ಡಿಜಿಟಲ್ ಇಂಡಿಯಾ (Digital India) ಕಾರ್ಯಕ್ರಮದಂತಹ ಉಪಕ್ರಮಗಳಿಗೆ ಚಾಲನೆ ನೀಡಿದೆ.

ಇನ್ನು ಮೇಕ್ ಇನ್ ಇಂಡಿಯಾ (Make in India) ಅಭಿಯಾನ ಹಾಗೂ ಡಿಜಿಟಲ್ ಇಂಡಿಯಾ ಈ ಅಭಿಯಾನಗಳು ತಂತ್ರಜ್ಞಾನ ಸಂಸ್ಥೆಗಳಿಗೆ ದೇಶದಲ್ಲಿ ಕಾರ್ಯಾಚರಣೆಗಳನ್ನು ಸ್ಥಾಪಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ನೆರವು ಮಾಡಿವೆ. ಇದು ನೂತನ ಉದ್ಯೋಗಗಳ ಸೃಷ್ಟಿಗೆ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಬಹುದು.

ಇತ್ತೀಚಿನ ಟೆಕ್ ಸ್ಟಾರ್ಟ್‌ಅಪ್‌ಗಳು (startups) ದೇಶದ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ದಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಕೃತಕ ಬುದ್ಧಿಮತ್ತೆ (artificial intelligence), ಬ್ಲಾಕ್‌ಚೈನ್ ಮತ್ತು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ವಿಭಾಗಗಳಲ್ಲಿ ತಂತ್ರಜ್ಞಾನದ ಮಿತಿಗಳನ್ನು ದಾಟುವ ಶಿಖರದಲ್ಲಿ ಈಗಿನ ಸ್ಟಾರ್ಟ್‌ಅಪ್‌ಗಳು ಇದ್ದು, ತಮ್ಮ ಕೊಡುಗೆಗಳ ಮೂಲಕ ದೇಶದ ಹೆಮ್ಮೆ ಹೆಚ್ಚಿಸುತ್ತಿವೆ.

ಈ ಯಶಸ್ಸುಗಳ ಹೊರತಾಗಿಯೂ, ತಂತ್ರಜ್ಞಾನ ಅಭಿವೃದ್ಧಿ ವಲಯದಲ್ಲಿ ಭಾರತ ಎದುರಿಸುತ್ತಿರುವ ಸವಾಲುಗಳು ಇನ್ನೂ ಇವೆ. ಪ್ರಮುಖ ಸವಾಲುಗಳಲ್ಲಿ ಒಂದು ಡಿಜಿಟಲ್ ವಿಭಜನೆಯಾಗಿದೆ. ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಮೂಲಭೂತ ತಂತ್ರಜ್ಞಾನ ಹಾಗೂ ಇಂಟರ್ನೆಟ್ ಕನೆಕ್ಟಿವಿಟಿಯ ಸಮಸ್ಯೆ ಇರುವುದು ಕಾಣಬಹುದು. ಹೀಗಾಗಿ ನೂತನ ತಂತ್ರಜ್ಞಾನ, ಆವಿಸ್ಕಾರಗಳು ನೀಡುವ ಅವಕಾಶಗಳಿಂದ ಎಲ್ಲಾ ಭಾರತೀಯರು ಪ್ರಯೋಜನ ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು ಈ ಸಮಸ್ಯೆ ಕಡಿಮೆ ಮಾಡುವುದು ನಿರ್ಣಾಯಕ ಎನಿಸಿದೆ.

ಭಾರತ ದೇಶವು ಸ್ವಾತಂತ್ರ್ಯ ದೊರೆತಾಗಿನಿಂದ ಇಲ್ಲಿಯವರೆಗೂ ತಂತ್ರಜ್ಞಾನ ಅಭಿವೃದ್ಧಿ ವಲಯದಲ್ಲಿ ಅತ್ಯುತ್ತಮ ಪ್ರಗತಿಯನ್ನು ಸಾಧಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಂತ್ರಜ್ಞಾನ ವಲಯದಲ್ಲಿ ಕೃತಕ ಬುದ್ಧಿಮತ್ತೆ (artificial intelligence) ಕೂಡಾ ಪೂರಕವಾಗಿದೆ. ಭಾರತ ದೇಶವು ಈಗ ಐಟಿ ಸೇವೆಗಳು ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿಶ್ವ ನಾಯಕನಾಗಿ ಗುರುತಿಸಿಕೊಂಡಿದೆ. ಸರಿಯಾದ ನೀತಿಗಳು ಮತ್ತು ಹೂಡಿಕೆಗಳೊಂದಿಗೆ, ಭಾರತವು ಮುಂಬರುವ ವರ್ಷಗಳಲ್ಲಿ ನಾವೀನ್ಯತೆ ಮತ್ತು ಬೆಳವಣಿಗೆಯನ್ನು ಮುಂದುವರೆಸುವ ಸಾಮರ್ಥ್ಯವನ್ನು ಒಳಗೊಂಡಿದೆ.

Best Mobiles in India

English summary
India at the Forefront of Technological Advancement. check out Technology growth in India and AI, startups contribution to india.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+