ವಿಶ್ವದ ಮೊದಲ AC ಹೆಲ್ಮೆಟ್ ಲಾಂಚ್!..ಅಚ್ಚರಿ ಮೂಡಿಸುವ ವಿಶೇಷತೆಗಳು!

|

ಹಲವು ಬಗೆಯ ಸುರಕ್ಷತಾ ಹೆಲ್ಮೆಟ್‌ಗಳ ಬಗ್ಗೆ ನೀವು ನೋಡಿರುತ್ತಿರಿ. ಆದ್ರೆ ಇದೀಗ ಹವಾನಿಯಂತ್ರಿತ (AC) ಸುರಕ್ಷತಾ ಹೆಲ್ಮೆಟ್ ಲಾಂಚ್ ಆಗಿದೆ. ಇದು ವಿಶ್ವದಲ್ಲೇ ಮೊಟ್ಟ ಮೊದಲ ಎಸಿ ಸುರಕ್ಷತಾ ಹೆಲ್ಮೆಟ್ ಎನ್ನಲಾಗಿದೆ. ಇನ್ನು ಈ ಸುರಕ್ಷತಾ ಹೆಲ್ಮೆಟ್ ವಿಶೇಷತೆಗಳು ಅಚ್ಚರಿ ಮೂಡಿಸುವಂತಿದ್ದು, ಭಾರತೀಯ ಮೂಲಕದ ಸ್ಟಾರ್ಟ್‌ ಅಪ್‌ ಕಂಪನಿಯು ಇದನ್ನು ಪರಿಚಯಿಸಿದೆ.

ಭಾರತೀಯ

ಹೌದು, ದುಬೈನ ಎಕ್ಸ್‌ಪೋ 2020ರಲ್ಲಿ ಭಾರತೀಯ ಪೆವಿಲಿಯನ್‌ನಲ್ಲಿ ಈ ಎಸಿ ಹೆಲ್ಮೆಟ್‌ ಅನ್ನು ಅನಾವರಣಗೊಳಿಸಲಾಗಿದೆ. ಈ ಹೆಲ್ಮೆಟ್‌ಗಳ ಶ್ರೇಣಿಯನ್ನು ಭಾರತದ ಸ್ಟಾರ್ಟ್ ಅಪ್ ಕಂಪನಿ ಜಾರ್ಶ್ ಸೇಫ್ಟಿ ಅಭಿವೃದ್ಧಿಪಡಿಸಿದೆ. ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಕಂಪನಿಯಾದ ಎಲೆಕ್ಟ್ರಾನಿಕ್ಸ್ ವಿತರಕ ಎನ್‌ಐಎ (Nia) ಲಿಮಿಟೆಡ್ ಅನಾವರಣಗೊಳಿಸಿದೆ. ಇದು ಮುಖದ ಶೀಲ್ಡ್‌ನೊಂದಿಗೆ ಸಂಪೂರ್ಣವಾದ ವಿಶೇಷ ವೆಲ್ಡಿಂಗ್ ಹೆಲ್ಮೆಟ್ಟುಗಳು ನಾಲ್ಕು ಮಾರ್ಪಾಡುಗಳ ರಚನೆ ಪಡೆದಿದೆ.

ವಿವಿಧ

ಮುಖ್ಯವಾಗಿ ಈ AC ಹೆಲ್ಮೆಟ್ ವಿವಿಧ ಫ್ಯಾಕ್ಟಿರಿಗಳಲ್ಲಿನ ಮೆಷಿನ್ ಆಪರೇಟರ್‌ಗಳು, ನುರಿತ ತಂತ್ರಜ್ಞರು, ಸೈಟ್ ಮ್ಯಾನೇಜರ್‌ಗಳು, ಹಾಗೆಯೇ ಅಧಿಕ ಉಷ್ಣತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಇದು ಬಹಳ ಉಪಯುಕ್ತವಾಗಿದೆ ಎಂದು ಕಂಪನಿ ಹೇಳಿದೆ. ಈ ಹೆಲ್ಮೆಟ್ ಆವಿಷ್ಕಾರ ಮಾಡಿರುವ ಕೌಸ್ತುಬ್ ಕೌಂಡಿನ್ಯ, ಶ್ರೀಕಾಂತ್ ಕೊಮ್ಮುಲಾ ಮತ್ತು ಆನಂದ್ ಕುಮಾರ್ ಅವರು 2016 ರಲ್ಲಿ ಬಿಸಿ ವಾತಾವರಣದಲ್ಲಿ ಸುರಕ್ಷತಾ ಹೆಲ್ಮೆಟ್‌ಗಳನ್ನು ಬಳಸುವಾಗ ಅಸ್ವಸ್ಥತೆ ಅನುಭವಿಸಿದ ನಂತರ ಜಾರ್ಶ್ AC ಹೆಲ್ಮೆಟ್‌ನ ಮೂಲ ಮಾದರಿಯನ್ನು ತಯಾರಿಸಿದರು.

AC

ಇದನ್ನು ಅಭಿವೃದ್ಧಿಪಡಿಸಲು ಎರಡು ವರ್ಷಗಳಿಗಿಂತಲೂ ಹೆಚ್ಚು ಸಂಶೋಧನೆಯನ್ನು ತೆಗೆದುಕೊಂಡಿದೆ ಮತ್ತು ಈ ಹಂತಕ್ಕೆ ಉತ್ಪನ್ನವನ್ನು ಪಡೆಯಲು ಕೇವಲ 100,000 ಅಮೆರಿಕನ್‌ ಡಾಲರ್ ವೆಚ್ಚವಾಗಿದೆ ಎಂದು‌ ಕೌಸ್ತುಬ್‌ ಕೌಂಡಿನ್ಯ ಹೇಳಿದರು. ಇದು ಸಂಪೂರ್ಣವಾಗಿ ಪೋರ್ಟೆಬಲ್ ಎಸಿ - AC ಘಟಕವಾಗಿದೆ. ಹಾಗೆಯೇ ಇದು ಚಿಕ್ಕ ರಚನೆ ಆಗಿದೆ ಎಂದು ಅವರು ತಿಳಿಸಿದರು.

ತೆಗೆದುಕೊಳ್ಳುತ್ತದೆ

ಈ ಹೆಲ್ಮೆಟ್ ಸ್ವಲ್ಪ ಭಾರವಾಗಿರುತ್ತದೆ ಆದರೆ ಉಕ್ಕಿನ ಟೋ-ಕ್ಯಾಪ್ಡ್ ಸುರಕ್ಷತಾ ಬೂಟುಗಳನ್ನು ಧರಿಸುವ ರೀತಿಯಲ್ಲಿಯೇ ಹೆಚ್ಚುವರಿ ತೂಕಕ್ಕೆ ಹೊಂದಿಕೊಳ್ಳಲು ಬಳಕೆದಾರರಿಗೆ ಸುಮಾರು 5-6 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ನಮ್ಮ ಸಂಶೋಧನೆಯಿಂದ ಕಂಡುಕೊಳ್ಳಲಾಗಿದೆ ಎಂದು ಅವರು ಹೇಳಿದರು. 800 ಗ್ರಾಂಗಳಲ್ಲಿ, ಹೆಲ್ಮೆಟ್‌ಗಳು ಸಾಮಾನ್ಯ ನಿರ್ಮಾಣ ಹೆಲ್ಮೆಟ್‌ಗಿಂತ ಸುಮಾರು ಎರಡು ಪಟ್ಟು ತೂಗುತ್ತವೆ. ಆದರೆ ಪ್ರಮಾಣಿತ ಮೋಟಾರ್‌ ಸೈಕಲ್ ಕ್ರ್ಯಾಶ್ ಹೆಲ್ಮೆಟ್‌ನ ಅರ್ಧದಷ್ಟು ತೂಕವನ್ನು ಹೊಂದಿರುತ್ತವೆ.

ಫೇಸ್‌

ನಿರ್ಮಾಣ ಮತ್ತು ಕೈಗಾರಿಕಾ ಕಾರ್ಮಿಕರಿಗೆ ಬೇಸಿಗೆಯಲ್ಲಿ ದಿನದ ಅತ್ಯಂತ ಬಿಸಿಯಾದ ಸಮಯದಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಈ ಹೆಲ್ಮೆಟ್ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಎನಿಸಲಿದೆ ಎಂದು ಅವರು ಹೇಳಿದರು. ಅಂತರ್ನಿರ್ಮಿತ ಫೇಸ್‌ ಶಿಲ್ಡ್‌ ಸೂರ್ಯನ ಬೆಳಕಿನಿಂದ ಕಣ್ಣಿಗೆ ರಕ್ಷಣೆಯನ್ನು ಒದಗಿಸುತ್ತದೆ. ಅದರ ನಾಲ್ಕು ಅಂತರ್ನಿರ್ಮಿತ ಫ್ಯಾನುಗಳು ಧರಿಸಿದವರ ತಲೆಯ ಸುತ್ತಲೂ ಗಾಳಿಯನ್ನು ಪ್ರಸಾರ ಮಾಡುತ್ತವೆ.

ತಗ್ಗಿಸುತ್ತದೆ

ಇದರಲ್ಲಿ ಯಾವುದೇ ಶೀತಕ ದ್ರವಗಳನ್ನು ಬಳಸಲಾಗುವುದಿಲ್ಲ, ಬದಲಾಗಿ ತಂಪಾದ ಗಾಳಿಯನ್ನು ಪ್ರಸಾರ ಮಾಡುವ ತಂತ್ರಜ್ಞಾನ ಅಳವಡಿಸಲಾಗಿದೆ. ಹೆಲ್ಮೆಟ್‌ನ ಟರ್ಬೊ ಕೂಲಿಂಗ್ ಹೆಲ್ಮೆಟ್‌ನೊಳಗಿನ ತಾಪಮಾನವನ್ನು ಮೂರರಿಂದ ಐದು ನಿಮಿಷಗಳಲ್ಲಿ ಕೇವಲ 15 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿಸುತ್ತದೆ, ಹವಾನಿಯಂತ್ರಿತ ಹೆಲ್ಮೆಟ್‌ನಲ್ಲಿ ಒಂದೇ ಚಾರ್ಜ್ ಸುಮಾರು 10 ಗಂಟೆಗಳ ವರೆಗೆ ಇರುತ್ತದೆ.

ಶಾಖದಲ್ಲಿ

ಧರಿಸಿದವರನ್ನು ಬೆಚ್ಚಗಾಗಲು ಅಂತರ್ನಿರ್ಮಿತ ಹೀಟರ್‌ನೊಂದಿಗೆ ಹೆಲ್ಮೆಟ್‌ಗಳನ್ನು ಶೀತ ವಾತಾವರಣದಲ್ಲಿಯೂ ಬಳಸಬಹುದು ಎಂದು ಎಂದು ಕಂಪನಿ ಹೇಳಿದೆ. ಕಾರ್ಮಿಕರ ಆರೋಗ್ಯಕ್ಕಿಂತ ಮುಖ್ಯವಾದುದೇನೂ ಇಲ್ಲ, ಆದ್ದರಿಂದ ನೀವು ಅದಕ್ಕೆ ಬೆಲೆಯನ್ನು ಕಟ್ಟಲು ಸಾಧ್ಯವಿಲ್ಲ. ಆದರೆ ಇದು ಶಾಖದಲ್ಲಿ ಕೆಲಸ ಮಾಡುವವರಿಗೆ ಪರಿಣಾಮಕಾರಿ ಪರಿಹಾರವಾಗಿದೆ ಎಂದು ದಕ್ಷಿಣ ಭಾರತದ ತೆಲಂಗಾಣ ರಾಜ್ಯದಲ್ಲಿ ಉತ್ಪನ್ನವನ್ನು ಅಭಿವೃದ್ಧಿಪಡಿಸಿದ ಕೌಂಡಿನ್ಯ ಹೇಳಿದರು.

ಪ್ರದೇಶಕ್ಕೆ

ಈ ಎಸಿ ಹೆಲ್ಮೆಟ್‌ ಜನವರಿಯಲ್ಲಿ GCC ಮತ್ತು ಭಾರತ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮಾರಾಟವಾಗಲಿದೆ. ಇದರ ಬೆಲೆಯ ಮಾಹಿತಿ ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಸದ್ಯ ಕಟ್ಟಡ ಸೈಟ್‌ಗಳಲ್ಲಿ ಧರಿಸಿರುವ ಪ್ರಮಾಣಿತ ಸುರಕ್ಷತಾ ಹೆಲ್ಮೆಟ್‌ಗಳಿಗಿಂತ ಅಧಿಕ ದರವನ್ನು ಇದು ಹೊಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಕಾರ್ಯಪಡೆಯ ಕಲ್ಯಾಣ ಮಾನದಂಡಗಳನ್ನು ಮುನ್ನಡೆಸುವ ಯುಎಇ ಸರ್ಕಾರದ ಪ್ರಯತ್ನಗಳಿಗೆ ಅನುಗುಣವಾಗಿ, NIA ಲಿಮಿಟೆಡ್ ಯುಎಇ ಮತ್ತು ವಿಶಾಲ ಪ್ರದೇಶಕ್ಕೆ ಈ ಹೆಲ್ಮೆಟ್‌ ಅನ್ನು ಪರಿಚಯಿಸಲು ಹೆಮ್ಮೆಪಡುತ್ತದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಕಮ್ರಾನ್ ಖಾನ್ ಹೇಳಿದರು.

Best Mobiles in India

English summary
India Based Start Up NIA Announces the UAE launch of the world's first AC safety helmet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X