Home
ಸುದ್ದಿಜಾಲ

ಹೊಸ ವರ್ಷದಲ್ಲಿ ಸಂಭ್ರಮದಲ್ಲಿ ಜಿಯೋ ಬಳಕೆದಾರರಿಗೆ ಕಾದಿದೆ ಶಾಕ್..!

By Srinidhi

ರಿಲಯನ್ಸ್ ಮಾಲೀಕತ್ವದ ಜಿಯೋ ದೇಶದಲ್ಲಿ ಮೊದಲ ಬಾರಿಗೆ 4G VoLTE ಸೇವೆಯನ್ನು ಆರಂಭಿಸಿತ್ತು. ಆರಂಭದಿಂದಲೇ ಆಕರ್ಷಕ ಆಫರ್ ನೀಡುವ ಮೂಲಕ ಉಚಿತ ಡೇಟಾ ಮತ್ತು ಕರೆಗಳನ್ನು ಮಾಡುವ ಅವಕಾಶ ಮಾಡಿಕೊಟ್ಟ ಜಿಯೋ ದೇಶಿಯ ಟೆಲಿಕಾಂ ಮಾರುಕಟ್ಟೆಯ ಅಡಿ ಪಾಯವನ್ನೇ ಅಲ್ಲಾಡಿಸಿತ್ತು. ಬೇರೆ ಟೆಲಿಕಾಂ ಕಂಪನಿಗಳ ಯೋಜನೆಯನ್ನು ತಲೆ ಕೆಳಗೆ ಮಾಡಿ ಹೊಸದೊಂದು ಸಾಧ್ಯತೆಯನ್ನು ಜನರಿಗೆ ತೋರಿಸಿಕೊಟ್ಟಿತ್ತು.

ಹೊಸ ವರ್ಷದಲ್ಲಿ ಸಂಭ್ರಮದಲ್ಲಿ ಜಿಯೋ ಬಳಕೆದಾರರಿಗೆ ಕಾದಿದೆ ಶಾಕ್..!


ಓದಿರಿ: ಮಿಸ್‌ಕಾಲ್‌ ಕೊಟ್ರೆ ಸಾಕು: ಕುಮಾರಣ್ಣನ ಪ್ರತಿ ಸುದ್ಧಿ ನಿಮ್ಮ ಮೊಬೈಲ್‌ನಲ್ಲಿ..!

ದೇಶದಲ್ಲಿ 4G ಟ್ರೆಂಡ್ ಅನ್ನು ಹುಟ್ಟಿ ಹಾಕಿದೆ ಜಿಯೋ, ದೇಶದಲ್ಲಿ 4G ಕ್ರಾಂತಿಯನ್ನು ಮಾಡಿತ್ತು ಎಂದರೆ ತಪ್ಪಾಗುವುದಿಲ್ಲ. ಈ ಹಿನ್ನಲೆಯಲ್ಲಿ 2018ರಲ್ಲಿ ದೇಶದಲ್ಲಿ ಸಂಪೂರ್ಣವಾಗಿ 4G ಸೇವೆ ಎಲ್ಲಾ ಕಡೆಗಳಲ್ಲೂ ಆವರಿಸಿಕೊಳ್ಳಲಿದೆ. ಎಲ್ಲಾ ಟೆಲಿಕಾಂ ಕಂಪನಿಗಳು 4G ಸೇವೆಯನ್ನು ಈಗಾಗಲೇ ಗ್ರಾಹಕರಿಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಅದನ್ನು ವಿಸ್ತಿಸಲು ಯೋಜನೆಯನ್ನು ರೂಪಿಸಿವೆ. ಈ ಹಿನ್ನಲೆಯಲ್ಲಿ ಹೊಸ ವರ್ಷದ ಆರಂಭದಲ್ಲಿ ಟೆಲಿಕಾಂ ಸೇವೆಯ ಬೆಲೆಗಳು ಏರಿಕೆಯಾಗುವ ಸಾಧ್ಯತೆ.

4G ಬಳಕೆದಾರರ ಸಂಖ್ಯೆ ಏರಿಕೆ:

4G ಬಳಕೆದಾರರ ಸಂಖ್ಯೆ ಏರಿಕೆ:

ಮುಂದಿನ ವರ್ಷದಲ್ಲಿ 4G ಬಳಕೆದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಅಲ್ಲದೇ 4G ಇಂಟರ್‌ನೆಟ್ ವೇಗವೂ ಏರಿಕೆಯಾಗಲಿದ್ದು, ಬಳಕೆದಾರರಿಗೆ ಗುಣಮಟ್ಟದ ಸೇವೆಗಳು ಮುಂದಿನ ದಿನಗಳಲ್ಲಿ ದೊರೆಯಲಿದೆ. ಜೊತೆಗೆ ದರ ಏರಿಕೆಯ ಬಿಸಿಯೂ ತಟ್ಟಲಿದೆ.

ಜಿಯೋ ಬೆಲೆ ಏರಿಕೆ ಸಾಧ್ಯತೆ:

ಜಿಯೋ ಬೆಲೆ ಏರಿಕೆ ಸಾಧ್ಯತೆ:

ಸದ್ಯದ ಟೆಲಿಕಾಂ ಮಾರುಕಟ್ಟೆಯ ಪರಿಸ್ಥಿತಿಯನ್ನು ಅವಲೋಕಿಸಿರುವ ಒಪನ್ ಸಿಗ್ನಲ್, ಮುಂದಿನ ದಿನದಲ್ಲಿ ಜಿಯೋ ಸೇವೆಗಳ ದರವೂ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮೂರು ತಿಂಗಳಿಗೊಮ್ಮೆ ಜಿಯೋ ಬೆಲೆಗಳು ಏರಿಕೆಯಾಗುತ್ತಿದ್ದು, ಮುಂದಿನ ವರ್ಷದ ಆರಂಭದಲ್ಲಿಯೇ ಜಿಯೋ ಬಳಕೆದಾರರಿಗೆ ಶಾಕ್ ಕಾದಿದೆ ಎನ್ನಲಾಗಿದೆ.

ಎಲ್ಲಾ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ:

ಎಲ್ಲಾ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ:

ಈಗಾಗಲೇ ಟೆಲಿಕಾಂ ಕಂಪನಿಗಳು ಜಿಯೋ ಮಾದರಿಯಲ್ಲಿ ಕಡಿಮೆ ಬೆಲೆಗೆ ಸೇವೆಗಳನ್ನು ನೀಡುವ ಮೂಲಕ ನಷ್ಟದ ಹಾದಿಯಲ್ಲಿ ಸಾಗುತ್ತಿವೆ. ಈ ಹಿನ್ನಲೆಯಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಬೆಲೆಗಳನ್ನು ಏರಿಕೆ ಮಾಡಿಡಲಿದೆ ಎನ್ನುವ ವರದಿ ಬಂದಿದೆ.

Best Mobiles in India

English summary
India to become a full-grown 4G power in 2018, Jio may raise price. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+