ಸೈಬರ್ ಭದ್ರತೆಗಾಗಿ ಒಂದಾದವು ಭಾರತ, ಅಮೆರಿಕಾ ಮತ್ತು ಚೀನಾ!!

ಮೂರು ದೇಶಗಳ ಪ್ರತಿನಿಧಿಗಳ ತೃಪಕ್ಷೀಯ ಜಂಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವಿಶ್ವದ ಬಲಾಢ್ಯ ಶಕ್ತಿಗಳು ಒಂದಾಗಿವೆ.!!

|

ರಾಜಕೀಯ, ಆರ್ಥಿಕ ಮತ್ತು ಭೌಗೋಳಿಕ ಕಾರಾಣಗಳಿಂದ ಕಿತ್ತಾಡುತ್ತಿದ್ದ ಭಾರತ, ಅಮೆರಿಕಾ ಮತ್ತು ಚೀನಾ ದೇಶಗಳು ಇದೀಗ ಸೈಬರ್ ಭದ್ರತೆಗಾಗಿ ಒಂದಾಗಿವೆ.! ಹೌದು, ಮೂರು ದೇಶಗಳ ಪ್ರತಿನಿಧಿಗಳ ತೃಪಕ್ಷೀಯ ಜಂಟಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ವಿಶ್ವದ ಬಲಾಢ್ಯ ಶಕ್ತಿಗಳು ಒಂದಾಗಿವೆ.!!

ದೆಹಲಿಯ ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಶನ್‌ ನಲ್ಲಿ ನಿನ್ನೆ ನಡೆದ ಮೂರು ದೇಶಗಳ ಪ್ರತಿನಿಧಿಗಳ ತೃಪಕ್ಷೀಯ ಜಂಟಿ ಸಭೆಯಲ್ಲಿ ಈ ನಿರ್ಧಾರ ಹೊರಬಿದ್ದಿದ್ದು, ಪ್ರಸ್ತುತ ಸಮಯದಲ್ಲಿ ಸೈಬರ್ ಭದ್ರತೆ ಮತ್ತು ಸುರಕ್ಷತೆ ಜಗತ್ತಿನ ಸಮಸ್ಯೆಯಾಗಿದೆ. ಸೈಬರ್ ಭದ್ರತೆಗೆ ಗಮನ ಹರಿಸದಿದ್ದರೆ ಅದರ ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳು ಗಂಭೀರವಾಗಬಹುದು ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.!!

ಸೈಬರ್ ಭದ್ರತೆಗಾಗಿ ಒಂದಾದವು ಭಾರತ, ಅಮೆರಿಕಾ ಮತ್ತು ಚೀನಾ!!

ಸೈಬರ್ ಎಂಬುದು ಕೇವಲ ಭದ್ರತೆಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಆರ್ಥಿಕ, ಸಾಮಾಜಿಕ ವಿಷಯಗಳಿಗೆ ಕೂಡ ಸಂಬಂಧಿಸಿದ್ದಾಗಿದೆ. ಅದರಲ್ಲಿ ರಾಜಕೀಯ, ಕೈಗಾರಿಕೆ, ಆರೋಗ್ಯ, ಶಿಕ್ಷಣ ಹಾಗೂ ಇತರ ಪ್ರಮುಖ ಮೂಲ ಅಂಶಗಳನ್ನು ಅದು ಒಳಗೊಂಡಿದೆ ಎಂದು ವಿವೇಕಾನಂದ ಇಂಟರ್ ನ್ಯಾಷನಲ್ ಫೌಂಡೇಶನ್ ನಿರ್ದೇಶಕ ಡಾ.ಅರವಿಂದ್ ಗುಪ್ತಾ ಹೇಳಿದ್ದಾರೆ.!!

ಸೈಬರ್ ಭದ್ರತೆಗಾಗಿ ಒಂದಾದವು ಭಾರತ, ಅಮೆರಿಕಾ ಮತ್ತು ಚೀನಾ!!

ಭಾರತ ಮತ್ತು ಚೀನಾ ದೊಡ್ಡ ಮಾರುಕಟ್ಟೆಗಳಾಗಿದ್ದು ಮತ್ತು ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದು, ಅಂತರ್ಜಾಲದಲ್ಲಿ ಯುಎಸ್ ಅತ್ಯಂತ ಶಕ್ತಿಯುತ ರಾಷ್ಟ್ರವಾಗಿದೆ. ಹಾಗಾಗಿ, ಸೈಬರ್ ಭದ್ರತೆಯನ್ನು ಚರ್ಚಿಸಲು ಈ ಮೂರು ದೇಶಗಳು ಒಟ್ಟಿಗೆ ಸೇರುತ್ತವೆ ಎಂದು ಚೀನಾದ ಕಂಪ್ಯೂಟರ್ ನೆಟ್ವರ್ಕ್ ಎಮರ್ಜೆನ್ಸಿ ನಿರ್ದೇಶಕ ಯಾನ್ ಹನ್ಬಿಂಗ್ ತಿಳಿಸಿದ್ದಾರೆ.!!

ಓದಿರಿ: ಮಾರುಕಟ್ಟೆಯನ್ನೇ ದಂಗಾಗಿಸಿದ ಹಾಂಕಾಂಗ್ ಮೂಲದ ಹೊಸ ಸ್ಮಾರ್ಟ್‌ಫೋನ್!..ರೆಡ್‌ಮಿ ನೋಟ್ 4 ವೇಸ್ಟ್!!

Best Mobiles in India

English summary
in a first, the United States, India and China have agreed to work together to make cyberspace a safer and secured place to live and work. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X