ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಅಮೆರಿಕಾ ಹಿಂದಿಕ್ಕಿದ ಭಾರತ!!
ಇದೇ ಮೊದಲ ಸಾರಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.!!
ದಿನದಿಂದ ದಿನಕ್ಕೆ ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಬೃಹದಾಕಾರವಾಗಿ ಬೆಳೆಯುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಅಮೆರಿಕಾಕ್ಕಿಂತಲೂ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡಿರುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.! ಇದೇ ಮೊದಲ ಸಾರಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಅಮೆರಿಕಾವನ್ನು ಹಿಂದಿಕ್ಕಿ ವಿಶ್ವದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.!!
ಸಿಂಗಪುರ್ ಮೂಲದ ಟೆಕ್ನಾಲಜಿ ಮಾರುಕಟ್ಟೆ ವಿಶ್ಲೇಷಕ ಕ್ಯಾನಾಲಿಸ್ ತಯಾರಿಸಿದ ವರದಿಯ ಪ್ರಕಾರ, 2017 ರ ಮೂರನೇ ತ್ರೈಮಾಸಿಕದಲ್ಲಿ ಭಾರತ ಈ ಸಾಧನೆ ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಭಾರತದಲ್ಲಿ ಬರೋಬ್ಬರಿ 40 ಮಿಲಿಯನ್ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ ಎಂದು ವರದಿಯಲ್ಲಿ ಹೇಳಿದೆ.!!

ಇನ್ನು ನಿರೀಕ್ಷೆಯಂತೆಯೇ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟಗಾರ ದೇಶಗಳ ಪಟ್ಟಿಯಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿಯೇ ಮುಂದುವರೆದಿದ್ದು, ಚೀನಾದಲ್ಲಿ ಬರೋಬ್ಬರಿ 110 ಮಿಲಿಯನ್‌ಗಿಂತಲೂ ಹೆಚ್ಚು ಸ್ಮಾರ್ಟ್‌ಫೋನ್‌ಗಳು ಮಾರಾಟವಾಗಿವೆ ಎಂದು ಕ್ಯಾನಾಲಿಸ್ ತಯಾರಿಸಿದ ವರದಿಯಲ್ಲಿ ಹೇಳಲಾಗಿದೆ.!!

ಭಾರತದಲ್ಲಿ ಚೀನಾ ಬ್ರ್ಯಾಂಡ್ ಶಿಯೋಮಿ ಅತ್ಯಂತ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟಮಾಡಿದ ಕಂಪೆನಿಯಾಗಿ ಹೊರಹೊಮ್ಮಿದ್ದು, ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ ಎನ್ನಲಾಗಿದೆ. ನಂತರದ ಸ್ಥಾನಗಳು ಐಫೋನ್ ವಿವೋ, ಒಪೋ, ಲೆನೋವೋ ಮೊಬೈಲ್ ಕಂಪೆನಿಗಳ ಪಾಲಾಗಿದೆ.!!
ಓದಿರಿ: ದೇಶದಲ್ಲಿಯೇ ತಯಾರಾದ 'ಸೋನಿ ಎಕ್ಸ್‌ಪೀರಿಯಾ R1' ಫೋನ್ ಭರ್ಜರಿ ಬಿಡುಗಡೆ!!


Click it and Unblock the Notifications