Home
ಸುದ್ದಿಜಾಲ

smartphone brand: ತನ್ನದೇ ಸ್ವಂತ ಸ್ಮಾರ್ಟ್‌ಫೋನ್ ಬ್ರಾಂಡ್ ಅಭಿವೃದ್ಧಿಪಡಿಸಲು ಭಾರತದ ಚಿಂತನೆ!

ಸ್ಮಾರ್ಟ್‌ಫೋನ್‌ (smartphone) ವಲಯದಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ ಕಂಪೆನಿಗಳನ್ನು ಕಾಣಬಹುದು. ಈ ವಿಭಾಗದಲ್ಲಿ ಬಜೆಟ್‌ ಬೆಲೆಯಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳು ಲಭ್ಯ ಇವೆ. ಆದರೆ ಈಗ ಭಾರತ ಸ್ವಂತ ಸ್ಮಾರ್ಟ್‌ಫೋನ್ ಬ್ರಾಂಡ್ ಅಭಿವೃದ್ಧಿಪಡಿಸಲು ಚಿಂತನೆ ನಡೆಸುತ್ತಿದೆ.

ಹೌದು, ಈವರೆಗೂ ಖಾಸಗಿ ಕಂಪೆನಿಗಳು ಅದರಲ್ಲೂ ವಿದೇಶದ ಕಂಪೆನಿಗಳು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ದೊಡ್ಡ ಪ್ರಬಾವ ಬೀರಿವೆ. ಆದರೆ ಈಗ ಸ್ವಂತ ಸ್ಮಾರ್ಟ್‌ಫೋನ್ ಬ್ರಾಂಡ್ ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದ್ದು, ಈ ಮೂಲಕ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡಲು ಸಜ್ಜಾಗಿದೆ ಎಂದು ತೋರುತ್ತದೆ. ಹಾಗಿದ್ರೆ ಏನಿದು ಹೊಸ ವಿಷಯ?, ಕೇಂದ್ರ ಐಟಿ ಮತ್ತು ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Telecom Minister Ashwini Vaishnav) ಹೇಳಿದ್ದೇನು ಅನ್ನೋದನ್ನು ಇಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ತನ್ನದೇ ಸ್ವಂತ ಸ್ಮಾರ್ಟ್‌ಫೋನ್ ಬ್ರಾಂಡ್ ಅಭಿವೃದ್ಧಿಪಡಿಸಲು ಭಾರತದ ಚಿಂತನೆ!

ಭಾರತದಲ್ಲಿ ಸ್ವಂತ ಸ್ಮಾರ್ಟ್‌ಫೋನ್ ಬ್ರಾಂಡ್: ಆನ್‌ಲೈನ್ ಪಾವತಿ ಸೇವಾ ಪೂರೈಕೆದಾರ ಫೋನ್‌ಪೇ ಪರವಾಗಿ ಇಂಡಸ್ ಆಪ್ ಸ್ಟೋರ್ ಅನ್ನು ಲಾಂಚ್‌ ಮಾಡುವ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ್ದು, ಸರ್ಕಾರವು ಎರಡು-ಮೂರು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳನ್ನು ಶೀಘ್ರದಲ್ಲೇ ಅನುಮೋದಿಸಬಹುದು ಎಂದು ಹೇಳಿದರು. ಜೊತೆಗೆ ನಾವು ನಮ್ಮದೇ ಆದ ಭಾರತೀಯ ಮೊಬೈಲ್ ಫೋನ್ ಬ್ರಾಂಡ್ ಅನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ದೇಶದಲ್ಲಿ ಸಂಪೂರ್ಣ ಹ್ಯಾಂಡ್‌ಸೆಟ್ ಪರಿಸರ ವ್ಯವಸ್ಥೆಯನ್ನು ರಚಿಸಲು ಮುಂದಾಗುತ್ತೇವೆ ಎಂದಿದ್ದಾರೆ

ಇನ್ನು ಸ್ಮಾರ್ಟ್‌ಫೋನ್‌ ಪ್ರಮುಖ ಮಾತ್ರ ವಹಿಸುವುದು ಸೆಮಿಕಂಡಕ್ಟರ್ (Semiconductor)‌. ಈ ವಿಭಾಗದಲ್ಲಿ OEM ಹಾಗೂ TSMC (ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ) ಅಥವಾ ಸ್ಯಾಮ್‌ಸಂಗ್ ಅನ್ನು ಸಂಪರ್ಕಿಸಬೇಕಾಗುತ್ತದೆ. ಸೆಮಿಕಂಡಕ್ಟರ್‌ಗಳು ದುಬಾರಿಯಾಗಿದ್ದು, ಇವುಗಳನ್ನು ಪ್ರತಿ ಕಂಪೆನಿಗಳು ಪ್ರತ್ಯೇಕವಾಗಿ ತಯಾರಿ ಮಾಡಲು ಆಗುವುದಿಲ್ಲ. ಈ ಕಾರಣಕ್ಕಾಗಿ ಈಗಾಗಲೇ ಯಾವೆಲ್ಲಾ ಕಂಪೆನಿಗಳು ಇದನ್ನು ತಯಾರಿ ಮಾಡುತ್ತಿವೆಯೋ ಅವುಗಳ ಸಹಕಾರದ ಮೂಲಕ ಹೊಸ ಫೋನ್‌ಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತಿವೆ.

ತನ್ನದೇ ಸ್ವಂತ ಸ್ಮಾರ್ಟ್‌ಫೋನ್ ಬ್ರಾಂಡ್ ಅಭಿವೃದ್ಧಿಪಡಿಸಲು ಭಾರತದ ಚಿಂತನೆ!

ಆದಾಗ್ಯೂ, ಭಾರತವು ದೀರ್ಘಾವಧಿಯಲ್ಲಿ ಸ್ವಾವಲಂಬಿಯಾಗಲು ಮತ್ತು ತನ್ನದೇ ಆದ ಸ್ಮಾರ್ಟ್‌ಫೋನ್ ಬ್ರಾಂಡ್ ಅನ್ನು ಹೊಂದಲು ನಿಜವಾಗಿಯೂ ಬಯಸಿದ್ದೇ ಆದರೆ ಅದು ತನ್ನದೇ ಆದ ಸೆಮಿಕಂಡಕ್ಟರ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಹೊಂದಿರಬೇಕಿದೆ. ಈ ಕಾರಣಕ್ಕೆ ಸರ್ಕಾರವು 2 ರಿಂದ 3 ಸೆಮಿಕಂಡಕ್ಟರ್ ಪ್ಲಾಂಟ್‌ಗಳನ್ನು ಶೀಘ್ರದಲ್ಲೇ ಅನುಮೋದಿಸುವ ಸಾಧ್ಯತೆಯಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಪಿಟಿಐ ವರದಿಯ ಪ್ರಕಾರ, ವೈಷ್ಣವ್ ಭಾರತದಲ್ಲಿ ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮೈಕ್ರಾನ್ ಯೋಜನೆಯ ಬಗ್ಗೆ ಮಾತನಾಡಿದ್ದಾರೆ. ಮೈಕ್ರಾನ್ ಒಂದು ಅಮೇರಿಕನ್ ಸೆಮಿಕಂಡಕ್ಟರ್ ದೈತ್ಯನಾಗಿದ್ದು, ಈ ವಿಭಾಗದಲ್ಲಿ ಭಾರತವು ಇನ್ನೂ ಎರಡು ಅಥವಾ ಮೂರು ಅನುಮೋದನೆಗಳನ್ನು ನೀಡಲಿದೆ ಎಂದು ಐಟಿ ಸಚಿವರು ಇದೇ ವೇಳೆ ತಿಳಿಸಿದ್ದಾರೆ. ಇದು ದೇಶವನ್ನು ವಿನ್ಯಾಸ ಪರಿಸರ ವ್ಯವಸ್ಥೆಯಿಂದ ಫ್ಯಾಬ್ ಮತ್ತು ಎಟಿಎಂಪಿ (ಅಸೆಂಬ್ಲಿ, ಟೆಸ್ಟ್ ಮತ್ತು ಮ್ಯಾನುಫ್ಯಾಕ್ಚರಿಂಗ್) ಪರಿಸರ ವ್ಯವಸ್ಥೆಗೆ ಕರೆದೊಯ್ಯುತ್ತದೆ ಎಂದು ತಿಳಿಸಿದ್ದಾರೆ.

ತನ್ನದೇ ಸ್ವಂತ ಸ್ಮಾರ್ಟ್‌ಫೋನ್ ಬ್ರಾಂಡ್ ಅಭಿವೃದ್ಧಿಪಡಿಸಲು ಭಾರತದ ಚಿಂತನೆ!

ಭಾರತವು ಕನಿಷ್ಠ ಮೂರರಿಂದ ನಾಲ್ಕು ಹೆಚ್ಚಿನ ಪ್ರಮಾಣದ ಫ್ಯಾಬ್ರಿಕೇಶನ್ ಪ್ಲಾಂಟ್‌ಗಳನ್ನು ಹೊಂದಲು ಸರ್ಕಾರ ಬಯಸುತ್ತದೆ. ಭಾರತವು ಈಗಾಗಲೇ ಲಾವಾ ಮತ್ತು ಮೈಕ್ರೋಮ್ಯಾಕ್ಸ್ (Lava and Micromax) ಸೇರಿದಂತೆ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳನ್ನು ಹೊಂದಿದೆ. ಆದರೆ, ಈ ಯಾವುದೇ ಬ್ರ್ಯಾಂಡ್‌ಗಳು ಚೈನೀಸ್, ದಕ್ಷಿಣ ಕೊರಿಯಾ ಅಥವಾ ಅಮೇರಿಕನ್ ಬ್ರಾಂಡ್‌ಗಳಂತೆ ಮಾರುಕಟ್ಟೆಯನ್ನು ಭೇದಿಸಲು ಸಾಧ್ಯವಾಗಲಿಲ್ಲ. ಅಭಿವೃದ್ಧಿ ಹೊಂದುತ್ತಿರುವ ಸ್ಥಳೀಯ ಹ್ಯಾಂಡ್‌ಸೆಟ್ ಪರಿಸರ ವ್ಯವಸ್ಥೆಯೊಂದಿಗೆ, ಭವಿಷ್ಯದಲ್ಲಿ ಭಾರಿ ಯಶಸ್ಸನ್ನು ಸಾಧಿಸಬಹುದಾದ ಹೆಚ್ಚಿನ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಜನ್ಮ ನೀಡುವ ಸಾಮರ್ಥ್ಯವನ್ನು ಈ ಮೂಲಕ ಭಾರತ ತೋರಿಸಲು ಮುಂದಾಗಿದೆ.

Best Mobiles in India

English summary
Telecom Minister Ashwini Vaishnav said that own smartphone brand will be made in India. At this time it is known that we are going to create a complete handset ecosystem in the country.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+