Subscribe to Gizbot

ವಿಶ್ವದಲ್ಲಿಯೇ 2ನೇ ಅತಿ ಹೆಚ್ಚು ಮೊಬೈಲ್‌ ತಯಾರಿಕಾ ರಾಷ್ಟ್ರ ಭಾರತ!!

Written By:

ಭಾರತದ ಮೊಬೈಲ್ ಮಾರುಕಟ್ಟೆ ಕೇವಲ ಮೊಬೈಲ್ ಮಾರಾಟಕ್ಕೆ ಸೀಮಿತವಾಗಿರದೇ ಮೊಬೈಲ್‌ ತಯಾರಿಕೆಯಲ್ಲಿಯೂ ಭಾರೀ ಪ್ರಗತಿ ಸಾಧಿಸಿದೆ. ಮೊಬೈಲ್‌ ತಯಾರಿಕೆಯಲ್ಲಿ ಭಾರತವು ಹಲವು ರಾಷ್ಟ್ರಗಳನ್ನು ಹಿಂದಿಕ್ಕಿ ಈಗ ಚೀನಾ ನಂತರದ ಎರಡನೇ ಸ್ಥಾನಕ್ಕೆ ಏರಿದೆ ಎಂದು ದೇಶಿಯ ಮೊಬೈಲ್ ಸೇವಾ ಸಂಸ್ಥೆಯು (ಐಸಿಎ) ತಿಳಿಸಿದೆ.!

ಚೀನಾದ ರಾಷ್ಟ್ರೀಯ ಸಾಂಖ್ಯಿಕ ಮಂಡಳಿ ಮತ್ತು ವಿಯೆಟ್ನಾಂನ ಸಾಂಖ್ಯಿಕ ಕಚೇರಿಯ ದತ್ತಾಂಶ ಆಧರಿಸಿ ದೇಶಿಯ ಮೊಬೈಲ್ ಸೇವಾ ಸಂಸ್ಥೆ ಈ ಮಾಹಿತಿಯನ್ನು ಪ್ರಕಟಿಸಿದೆ. ಭಾರತವು ಬಹುದೊಡ್ಡ ಮೊಬೈಲ್ ಮಾರುಕಟ್ಟೆಯಾಗಿರುವುದರಿಂದ, ದೇಶದಲ್ಲಿ ತಯಾರಿಕೆ ಹೆಚ್ಚಳಗೊಂಡು ಮೊಬೈಲ್‌ಗಳ ಆಮದು ಪ್ರಮಾಣವೂ ಕಡಿಮೆಯಾಗಿದೆ ಎಂದು ಐಸಿಎ ಹೇಳಿದೆ .

ವಿಶ್ವದಲ್ಲಿಯೇ 2ನೇ ಅತಿ ಹೆಚ್ಚು ಮೊಬೈಲ್‌ ತಯಾರಿಕಾ ರಾಷ್ಟ್ರ ಭಾರತ!!

ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ಮತ್ತು ಐ.ಟಿ ಸಚಿವ ರವಿಶಂಕರ್‌ ಪ್ರಸಾದ್ ಅವರಿಗೆ ಮೊಬೈಲ್ ಸೇವಾ ಸಂಸ್ಥೆಯ ಅಧ್ಯಕ್ಷ ಪಂಕಜ್ ಮೊಹಿಂದ್ರೂ ಅವರು ಪತ್ರ ಬರೆದು ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ, ಐಸಿಎ ಅವಿರತ ಪರಿಶ್ರಮ ಮತ್ತು ವ್ಯವಸ್ಥಿತ ಪ್ರಯತ್ನಗಳಿಂದ ಮೊಬೈಲ್‌ ತಯಾರಿಕೆಯಲ್ಲಿ ಭಾರತವು ಮುಂಚೂಣಿಗೆ ಬಂದಿದೆ ಎಂದು ತಿಳಿಸಿದ್ದಾರೆ.

2017ರಲ್ಲಿಯೇ ಭಾರತವು ಮೊಬೈಲ್‌ ತಯಾರಿಕೆಯಲ್ಲಿ ವಿಯೆಟ್ನಾಂ ಹಿಂದಿಕ್ಕಿದೆ ಎಂದು ಪಂಕಜ್ ಮೊಹಿಂದ್ರೂ ಅವರು ತಿಳಿಸಿದ್ದು, 2014ರಲ್ಲಿ ದೇಶದಲ್ಲಿ ಮೊಬೈಲ್‌ಗಳ ತಯಾರಿಕೆಯು ಕೇವಲ 30 ಲಕ್ಷ ಇತ್ತು. ಆದರೆ, 2017ರಲ್ಲಿ ಇದು 1.10 ಕೋಟಿಗೆ ತಲುಪಿದೆ. 2019ರ ವೇಳೆಗೆ ದೇಶದಲ್ಲಿ ವರ್ಷಕ್ಕೆ 50 ಕೋಟಿಗಳಷ್ಟು ಮೊಬೈಲ್‌ ತಯಾರಿಕೆ ಗುರಿಯನ್ನು ಇಡಲಾಗಿದೆ ಎಂದಿದ್ದಾರೆ.

ವಿಶ್ವದಲ್ಲಿಯೇ 2ನೇ ಅತಿ ಹೆಚ್ಚು ಮೊಬೈಲ್‌ ತಯಾರಿಕಾ ರಾಷ್ಟ್ರ ಭಾರತ!!

2019ರ ವೇಳೆಗೆ 9.75 ಕೋಟಿ ಮೊತ್ತದ 12 ಕೋಟಿಗಳಷ್ಟು ಮೊಬೈಲ್‌ಗಳನ್ನು ರಫ್ತು ಮಾಡಲು ಹಾಗೂ 52 ಸಾವಿರ ಕೋಟಿಗಳಷ್ಟು ಮೊತ್ತದ ಬಿಡಿಭಾಗಗಳನ್ನು ತಯಾರಿಸಲೂ ಗುರಿ ನಿಗದಿಪಡಿಸಲಾಗಿದೆ. ಇದರಿಂದ 15 ಲಕ್ಷದಷ್ಟು ನೇರ ಮತ್ತು ಪರೋಕ್ಷ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಪಂಕಜ್ ಮೊಹಿಂದ್ರೂ ಅಭಿಪ್ರಾಯಪಟ್ಟಿದ್ದಾರೆ.

ಓದಿರಿ: ಕಂಪ್ಯೂಟರ್ ಡೆಡ್ ಆದರೆ ನಾವೇ ಸರಿಪಡಿಸಿಕೊಳ್ಳುವುದು ಹೇಗೆ?

English summary
India is now the second largest mobile phone producer in the world after China.to know more visit to kannada. gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot