Subscribe to Gizbot

ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗೆ ಆಂಡ್ರಾಯ್ಡ್‌ ಆಪ್‌

Posted By:

ಲೋಕಸಭಾ ಚುನಾವಣೆ ಇಂದಿನಿಂದ ಆರಂಭವಾಗಿದೆ. ಚುನಾವಣೆ 9 ಹಂತಗಳಲ್ಲಿ ನಡೆಯಲಿದ್ದು ಮೇ 12ಕ್ಕೆ ಮುಗಿಯಲಿದೆ. ಫಲಿತಾಂಶವು ಮೇ 16ರಂದು ಪ್ರಕಟವಾಗಲಿದೆ. ಈ ಸಂದರ್ಭದಲ್ಲಿ ಚುನಾವಣಾ ಆಸಕ್ತರಿಗಾಗಿ, ರಾಜಕೀಯ ಸುದ್ದಿಯನ್ನು ತಿಳಿಯಲು ಹೊಸ ಆಪ್‌ ಬಿಡುಗಡೆಯಾಗಿದೆ.

ರಾಜಕೀಯಕ್ಕೆ ಸಂಬಂಧಿಸಿದ ಕ್ಷಣದ ಮಾಹಿತಿಗಾಗಿ ಆಂಡ್ರಾಯ್ಡ್‌ ಪ್ಲೇ ಸ್ಟೋರ್‌ನಲ್ಲಿ 'VoteBox' ಹೆಸರಿನ ಆಪ್‌ ಲಗ್ಗೆ ಇಟ್ಟಿದೆ. ಅಪ್ಲಿಕೇಶನ್‌ 944 ಕೆಬಿ ಗಾತ್ರವನ್ನು ಹೊಂದಿದ್ದು ಆಂಡ್ರಾಯ್ಡ್‌ ಜಿಂಜರ್‌ ಬ್ರಿಡ್‌ ಸೇರಿದಂತೆ ನಂತರದ ಓಎಸ್‌‌ ಹೊಂದಿರುವ ಸಾಧನಗಳಿಗೆ ಈ ಆಪ್‌‌ ಬೆಂಬಲ ನೀಡುತ್ತದೆ.

ಆಪ್‌ನಲ್ಲಿ ಏನಿದೆ?

28 ರಾಜ್ಯಗಳ ಲೋಕಸಭಾ ಅಭ್ಯರ್ಥಿ‌ಗಳ ಹೆಸರು
ವಿವಿಧ ಪಕ್ಷಗಳ ಜಾಹೀರಾತುಗಳು
ಚುನಾವಣೆಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳು
ಚುನಾವಣಾ ಫಲಿತಾಂಶ (ಮೇ.16)ಸಂದರ್ಭದಲ್ಲಿ ಕ್ಷಣ ಕ್ಷಣದ ಮಾಹಿತಿ

ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್ಕಿಸಿ:VoteBox

ಇದನ್ನೂ ಓದಿ: 2014 ಲೋಕಸಭಾ ಚುನಾವಣೆ-ಉಪಯುಕ್ತ ಜಾಲತಾಣಗಳು

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಚುನಾವಣೆಯ ಕ್ಷಣ ಕ್ಷಣದ ಮಾಹಿತಿಗೆ ಆಂಡ್ರಾಯ್ಡ್‌ ಆಪ್‌
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot