Home
ಸುದ್ದಿಜಾಲ

ಭಾರತ ಸೇರಿದಂತೆ ಜಾಗತಿಕವಾಗಿ ಏಕಕಾಲಕ್ಕೆ 5G ಬಿಡುಗಡೆ

By Suneel

ಪ್ರಪಂಚದ ಇತರೆ ದೇಶಗಳು 5G ನೆಟ್‌ವರ್ಕ್‌ ಪಡೆದ ಸಂದರ್ಭದಲ್ಲೇ ಭಾರತವು ಸಹ 5G ನೆಟ್‌ವರ್ಕ್‌ ಪಡೆಯುತ್ತದೆ. ಭಾರತವು ಇಂಟರ್ನೆಟ್‌ ಯುಗಕ್ಕೆ ಕಾಲಿರಿಸಿದೆ ಎಂದು ಟೆಲಿಕಾಂ ಕಾರ್ಯದರ್ಶಿ 'ಜೆ ಎಸ್‌ ದೀಪಕ್‌' ರವರು ಹೇಳಿದ್ದಾರೆ.

ಭಾರತದ 2G ಯನ್ನು ಪ್ರಪಂಚದ ಇತರೆ ದೇಶಗಳಿಗಿಂತ 25 ವರ್ಷ ತಡವಾಗಿ ಪಡೆಯಿತು. 3G ಅನ್ನು ಅಮೆರಿಕ, ಯೂರೋಪ್‌ ದೇಶಗಳು ಪಡೆದ 10 ವರ್ಷಗಳ ನಂತರ ಪಡೆಯಿತು. 4G ನೆಟ್‌ವರ್ಕ್‌ ಅನ್ನು ಪ್ರಪಂಚದ ಇತರೆ ದೇಶಗಳು ಪಡೆದ ನಂತರದ 5 ವರ್ಷಗಳಲ್ಲಿ ಪಡೆಯಿತು. ಆದರೆ ಭಾರತವು 5G ನೆಟ್‌ವರ್ಕ್‌ ಅನ್ನು ಇತರೆ ದೇಶಗಳಂತೆ ಜಾಗತಿಕವಾಗಿ ಒಂದೇ ಸಂದರ್ಭದಲ್ಲಿ ಪಡೆಯುವ ನಿರೀಕ್ಷೆ ಇದೆ ಎಂದು ದೀಪಕ್‌'ರವರು ಹೇಳಿದ್ದಾರೆ. ಹೌದು, ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದಲ್ಲಿ ಓದಿರಿ.

ಐಡಿಯಾ'ದಿಂದ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ

 ಜೆ ಎಸ್‌ ದೀಪಕ್ ಹೇಳಿಕೆǃ

ಜೆ ಎಸ್‌ ದೀಪಕ್ ಹೇಳಿಕೆǃ

'ಪ್ರಪಂಚದಲ್ಲಿ 5G ಬಿಡುಗಡೆಯಾಗುವ ಏಕಕಾಲಕ್ಕೆ ಭಾರತವು ಸಹ 5G ಸೇವೆಯನ್ನು ಪಡೆಯುವ ಸಂಭವವಿದೆ. ಭಾರತವು ಸಹ ಇಂಟರ್ನೆಟ್ ಆಫ್‌ ಥಿಂಗ್ಸ್ ಚಟುವಟಿಕೆಗಳಲ್ಲಿ ಪ್ರಮುಖ ಬೆಳವಣಿಗೆ ಸಾಧಿಸಿದ್ದು, ಪ್ರಧಾನ ಸ್ಥಾನವನ್ನು ಪಡೆಯಲಿದೆ' ಎಂದು ಟೆಲಿಕಾಂ ಕಾರ್ಯದರ್ಶಿ 'ಜೆ ಎಸ್‌ ದೀಪಕ್‌' ಹೇಳಿದ್ದಾರೆ.

IoT ಇಂಡಿಯಾ ಕಾಂಗ್ರೆಸ್‌

IoT ಇಂಡಿಯಾ ಕಾಂಗ್ರೆಸ್‌

ಟೆಲಿಕಾಂ ಕಾರ್ಯದರ್ಶಿ 'ಜೆ ಎಸ್‌ ದೀಪಕ್‌'ರವರು 'ಇಂಟರ್ನೆಟ್‌ ಆಫ್‌ ಥಿಂಗ್ಸ್ (IoT) ಇಂಡಿಯಾ ಕಾಂಗ್ರೇಸ್'ನ ಮೊದಲ ಸಂಚಿಕೆಯನ್ನು ಉದ್ಘಾಟಿಸಿ, ಇಂಟರ್ನೆಟ್‌ ಸೇವೆಯಲ್ಲಿ ಉತ್ತಮ ಮೌಲ್ಯ ಸರಪಳಿ ಸಹಯೋಗವನ್ನು ಕಲ್ಪಸುವ ಗುರಿಹೊಂದಿರುವುದಾಗಿ ಹೇಳಿದರು.

IoT ನಿರೀಕ್ಷೆ

IoT ನಿರೀಕ್ಷೆ

IoT ಇನ್ನೂ 5-6 ವರ್ಷದೊಳಗೆ 50 ದಶಲಕ್ಷ ಡಿವೈಸ್‌ಗಳು ಸಂಪರ್ಕ ಹೊಂದುವ ಬಗ್ಗೆ ನಿರೀಕ್ಷೆ ಹೊಂದಿದೆ. ಇದರಿಂದ ಉದ್ಯಮ ಅವಕಾಶಗಳು ಭಾರತದಲ್ಲಿ ಹೆಚ್ಚಲಿವೆ.

ರವಿಶಂಕರ್‌ ಪ್ರಸಾದ್‌

ರವಿಶಂಕರ್‌ ಪ್ರಸಾದ್‌

ಇಂಡಿಯಾ ಕಾಂಗ್ರೆಸ್‌ ಕುರಿತು ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ 'ರವಿಶಂಕರ್ ಪ್ರಸಾದ್'ರವರು 'ಇಂಟರ್ನೆಟ್‌ ಆಫ್‌ ಥಿಂಗ್ಸ್ ಮಹತ್ವವಾಗಿದೆ. ಕಾರಣ ಡಿವೈಸ್‌ಗಳು ಇಂಟರ್ನೆಟ್ ಸಂಪರ್ಕ ಹೊಂದುವುದರಿಂದ ದಿನನಿತ್ಯದ ಕ್ರಮವನ್ನು ಮಾರ್ಪಡಿಸುತ್ತವೆ ಎಂದು ಹೇಳಿದ್ದಾರೆ.

ಇಂಟರ್ನೆಟ್‌ ಆಫ್‌ ಥಿಂಗ್ಸ್ ಯಾವುದಕ್ಕೆ ಮುಖ್ಯ

ಇಂಟರ್ನೆಟ್‌ ಆಫ್‌ ಥಿಂಗ್ಸ್ ಯಾವುದಕ್ಕೆ ಮುಖ್ಯ

'ಇಂಟರ್ನೆಟ್‌ ಆಫ್‌ ಥಿಂಗ್ಸ್', 'ಬಡವರಿಗೆ, ರೈತರಿಗೆ, ಆರೋಗ್ಯ ಪಾಲನೆಗೆ, ಶಿಕ್ಷಣ ಕ್ಷೇತ್ರಕ್ಕೆ, ಉತ್ತಮ ಜೀವನ ಮಟ್ಟಕ್ಕೆ ಮುಖ್ಯವಾಗಿದೆ ಎಂದು ಟೆಲಿಕಾಂ ಸಚಿವರು ಹೇಳಿದ್ದಾರೆ.

 ಟೆಲಿಕಾಂ ಸಚಿವಾಲಯ

ಟೆಲಿಕಾಂ ಸಚಿವಾಲಯ

ಟೆಲಿಕಾಂ ಸಚಿವಾಲಯವು ಮಷಿನ್‌ ಟು ಮಷಿನ್ (M2M) ರೋಡ್‌ಮ್ಯಾಪ್‌ ಸಿದ್ಧಪಡಿಸಿದ್ದು, ಇದು ಟೆಲಿಕಾಂ ನಿಯಂತ್ರಕರ ಕ್ರೋಡೀಕರಿಸುವ ಪ್ರಕ್ರಿಯೆಗೆ ಸಹಾಯಕವಾಗಲಿದೆ. ಇದರಿಂದ ತಯಾರಕ ಸಂಸ್ಥೆಗಳು ಮತ್ತು ಬಳಕೆದಾರರಿಗೂ ಸಹ ಲಾಭವಾಗುತ್ತದೆ.

KYC ನಿಯಮಗಳು

KYC ನಿಯಮಗಳು

ಇಂಟರ್ನೆಟ್‌ ಆಫ್‌ ಥಿಂಗ್ಸ್ ಬೆಳವಣಿಗೆ ಹಿನ್ನೆಲೆಯಲ್ಲಿ KYC ನಿಯಮಗಳು ಮತ್ತು 13 ಡಿಜಿಟ್ ನಂಬರ್ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

Best Mobiles in India

English summary
India may get 5G with the rest of the world. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+