Subscribe to Gizbot

ಐಡಿಯಾ'ದಿಂದ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳು: ಜಿಯೋಗೆ ಪ್ರತಿಕ್ರಿಯೆ

Written By:

ರಿಲಾಯನ್ಸ್ ಜಿಯೋ ಯಾವಾಗ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಆಫರ್‌ ಅನ್ನು ತನ್ನ ನೆಟ್‌ವರ್ಕ್‌ನಲ್ಲಿ ನೀಡಿತೋ, ಅಂದಿನಿಂದ ಇತರೆ ಟೆಲಿಕಾಂಗಳು ತಮ್ಮ ಸ್ಥಾನಿಕ ನಿಯಂತ್ರಣ ನಿಗ್ರಹಿಸಲು ಸಮಸ್ಯೆ ಎದುರಾಯಿತು. ಆದರೆ ಹಾಗಂತ ಇತರೆ ಟೆಲಿಕಾಂಗಳು ಸುಮ್ಮನೆ ಇರುತ್ತವೆಯೇ? ಖಂಡಿತ ಇಲ್ಲ. ಆದ್ರೆ ಆ ಸಾಲಿನಲ್ಲಿ ಮೊದಲು ಐಡಿಯಾ ಟೆಲಿಕಾಂ ಕಾಣಿಸಿಕೊಂಡಿದೆ. ಹೌದು ಐಡಿಯಾ ಟೆಲಿಕಾಂ ಆಪರೇಟರ್‌ ಮೊದಲ ಬಾರಿಗೆ ವಾಯ್ಸ್ ಟ್ಯಾರಿಫ್‌ ಅನ್ನು ಕಡಿತಗೊಳಿಸಿದ್ದು, ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳನ್ನು ನೀಡಿ ಜಿಯೋಗೆ ಪ್ರತಿಕ್ರಿಯೆ ನೀಡಿದೆ.

ನೀವು ಐಡಿಯಾ ಗ್ರಾಹಕರಾಗಿದ್ದಲ್ಲಿ, ನಿಮಗೆ ದೊರೆಯುವ ಅನ್‌ಲಿಮಿಟೆಡ್‌ ವಾಯ್ಸ್ ಕರೆ ಪ್ಯಾಕ್‌ಗಳ ಬಗ್ಗೆ ಲೇಖನದಲ್ಲಿ ಓದಿ ತಿಳಿಯಿರಿ. ಈ ಆಫರ್ ದೇಶದಾದ್ಯಂತ ಲಭ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಡಿಯಾ ಗ್ರಾಹಕರು

ಐಡಿಯಾ ಗ್ರಾಹಕರು

ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್‌ ಐಡಿಯಾ 176 ದಶಲಕ್ಷ ಗ್ರಾಹಕರನ್ನು ಹೊಂದಿದೆ. ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್‌ ಕರೆ ಆಫರ್‌ ಅನ್ನು ಪ್ರಸ್ತುತ ದರಕ್ಕಿಂತ ಕಡಿಮೆ ದರದಲ್ಲಿ ನೀಡುವ ಬಗ್ಗೆ ಸಂದೇಶಗಳನ್ನು ಕಳುಹಿಸಲು ಆರಂಭಿಸಿದೆ.

ಐಡಿಯಾದಿಂದ ಅಧಿಕೃತ ಘೋಷಣೆ

ಐಡಿಯಾದಿಂದ ಅಧಿಕೃತ ಘೋಷಣೆ

ಇದುವರೆಗೆ ಐಡಿಯಾ ಟೆಲಿಕಾಂ ಅಧಿಕೃತ ಘೋಷಣೆ ಹೊರಡಿಸಿಲ್ಲ. ಆದರೆ ಹಲವು ಗ್ರಾಹಕರು ತಾವು ಸಂದೇಶ ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಅಲ್ಲದೇ ಅವರನ್ನು ಸರಳವಾಗಿ ಅನ್‌ಲಿಮಿಟೆಡ್ ಕರೆ ಪ್ಯಾಕ್‌ಗಳನ್ನು ಸಬ್‌ಸ್ಕ್ರೈಬ್‌ ಮಾಡಿಕೊಳ್ಳಲು ಹೇಳಿದೆ.

 ಅನ್‌ಲಿಮಿಟೆಡ್‌ ಕರೆ ಆಫರ್‌

ಅನ್‌ಲಿಮಿಟೆಡ್‌ ಕರೆ ಆಫರ್‌

22 ಐಡಿಯಾ ಟೆಲಿಕಾಂ ವೃತ್ತಗಳಲ್ಲಿ, ಆದಿತ್ಯ ಬಿರ್ಲಾ ಮಾಲೀಕತ್ವದ ಟೆಲಿಕಾಂ ಆಪರೇಟರ್‌ ಹೆಚ್ಚು ವೃತ್ತಗಳಲ್ಲಿ ತನ್ನ ಗ್ರಾಹಕರಿಗೆ ಅನ್‌ಲಿಮಿಟೆಡ್‌ ನೆಟ್‌ ಕರೆ ಆಫರ್‌ ಅನ್ನು ರೂ 340-350 ಕ್ಕೆ ನೀಡುತ್ತಿದೆ. ಆದರೆ ಗ್ರಾಹಕರು ಶೇಕಡ 20 ರಷ್ಟು ಕಡಿಮೆ ಬೆಲೆಗೆ ಒಂದೇ ರೀತಿಯ ಬೆನಿಫಿಟ್‌ಗಳನ್ನು ರೂ. 299 ಕ್ಕೆ ಪಡೆಯಬಹುದು.

ಅನ್‌ಲಿಮಿಟೆಡ್‌ ಕರೆ ಆಫರ್‌

ಅನ್‌ಲಿಮಿಟೆಡ್‌ ಕರೆ ಆಫರ್‌

ಚಿತ್ರ ಗಮನಿಸಿ ನಿಮ್ಮ ವಾಯ್ಸ್ ಕರೆ ಪ್ಯಾಕ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾ ಬಳಕೆದಾರರಿಗೆಲ್ಲಾ ಗೊತ್ತೇ ಇದೆ. ಐಡಿಯಾ ಸಹ ಏರ್‌ಟೆಲ್‌ನಂತೆ ಅತ್ಯುತ್ತಮವಾದ 3G ಇಂಟರ್ನೆಟ್‌ ಸ್ಪೀಡ್‌ ಅನ್ನು ಭಾರತದಾದ್ಯಂತ ನೀಡುತ್ತಿದೆ ಎಂದು. ಆಂಡ್ರಾಯ್ಡ್‌ ಮೊಬೈಲ್‌ ಮತ್ತು ಪರ್ಸನಲ್‌ ಕಂಪ್ಯೂಟರ್‌ ಬಳಕೆದಾರರು ಉಚಿತವಾಗಿ ಇಂಟರ್ನೆಟ್‌ ಸೇವೆ ಪಡೆಯಬಹುದಾಗಿದೆ. ಮೊದಲು ನೀವು ಮಾಡಬೇಕಾದುದು ಹೊಸ apn (Access point name) ಅನ್ನು ತೆಗೆದುಕೊಳ್ಳಬೇಕಾಗಿದೆ. ನಂತರ ಏನು ಮಾಡಬೇಕು ಎಂದು ತಿಳಿಯಲು ಮುಂದಿನ ಸ್ಲೈಡರ್‌ ಓದಿರಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾದಲ್ಲಿ ಉಚಿತ ಇಂಟರ್ನೆಟ್‌ ಪಡೆಯಲು "Droid vpn android app" ಅನ್ನು ಗೂಗಲ್‌ ಪ್ಲೇ ಸ್ಟೋರ್‌'ನಿಂದ ಡೌನ್‌ಲೋಡ್‌ ಮಾಡಬೇಕು. ನಂತರ ನೀವು "Droid vpn android" ಅಪ್ಲಿಕೇಶನ್‌ನಲ್ಲಿ ನಿಮ್ಮ ಒಂದು ಖಾತೆಯನ್ನು ತೆರೆಯಿರಿ. "Droid vpn android app" ಇಲ್ಲಿ ಡೌನ್‌ಲೋಡ್‌ ಮಾಡಿ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾ ಸಿಮ್‌ ಬಳಕೆದಾರರು ನಾವು ಮೇಲೆ ತಿಳಿಸಿದ ವಿಧಾನ ಪಾಲಿಸಿದ ನಂತರ ಸರ್ವರ್‌ ಅನ್ನು ಇಂಟರ್ನೆಟ್‌ ಬಳಸಲು ಆರಂಭಿಸಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಏರ್‌ಟೆಲ್‌ ಬಳಕೆದಾರರಂತೆ ನೀವೂ ಸಹ.. * ಕಂಪ್ಯೂಟರ್‌ ಬಳಕೆದಾರು PD-Proxy Software ಅನ್ನು ಕಂಪ್ಯೂಟರ್‌ಗೆ ಡೌನ್‌ಲೋಡ್‌ ಮಾಡಿಕೊಳ್ಳಿ. ಇದು ಕೇವಲ 2MB ಇದ್ದು ಅಫೀಸಿಯಲ್‌ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ. * "PD-Proxy Software" ನಲ್ಲಿ ನಿಮ್ಮ ಯುಸರ್‌ನೇಮ್‌ ಮತ್ತು ಪಾಸ್‌ವರ್ಡ್‌ ನೀಡಿ ಖಾತೆ ತೆರೆಯಿರಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಕಂಪ್ಯೂಟರ್‌ನಲ್ಲಿ ಐಡಿಯಾ ಬಳಕೆದಾರರು ಮೇಲಿನ ವಿಧಾನ ಪಾಲಿಸಿದ ನಂತರ ನೆಟ್‌ ಬಳಸಲು ಸರ್ವರ್‌ ಅನ್ನು ಆರಂಭಿಸಿ. ಮೇಲೆ ತಿಳಿಸಿದ ಎಲ್ಲಾ ಟ್ರಿಕ್‌ ಸಹ ನಿಮಗೆ ಪ್ರತಿದಿನ ಕೇವಲ 100MB ಇಂಟರ್ನೆಟ್‌ ಅನ್ನು 3G/2G ಯಲ್ಲಿ ನೀಡುತ್ತದೆ. ಆದರೆ pd-proxy crack ,voucher codes and premium account ಸರ್ಚ್‌ ಮುಖಾಂತರ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡಬೇಡಿ.

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

ಐಡಿಯಾದಲ್ಲಿ ಉಚಿತ 3G ಇಂಟರ್ನೆಟ್‌ ಬಳಕೆ

* "Droid vpn android app" ಸ್ಥಳೀಯ ಇಂಟರ್ನೆಟ್ ನಿರ್ಬಂಧನೆಯನ್ನು ಅನ್‌ಬ್ಲಾಕ್‌ ಮಾಡುತ್ತದೆ. * ವೆಬ್‌ ಫಿಲ್ಟರಿಂಗ್ ಮಾಡುತ್ತದೆ * ಬೈಪಾಸ್‌ ಫೈಯರ್‌ವಾಲ್ಸ್‌ * ಇಂಟರ್ನೆಟ್ ಟ್ರ್ಯಾಫಿಕ್‌ ಅನ್ನು ಅನಾಮಧೇಯವಾಗಿ ಬ್ರೌಸ್‌ ಮಾಡುತ್ತದೆ. * ಕೆಲವೊಮ್ಮೆ "paid hotspots" ಉಚಿತವಾಗಿ ಕನೆಕ್ಟ್‌ ಮಾಡುತ್ತದೆ * ಇನ್ನು ಹೆಚ್ಚಿನ ಉಪಯೋಗ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ ಓದಿಕೊಳ್ಳಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea cellular slashes tariff of unlimited voice calling packs in response to Jio. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot