ಮೊಬೈಲ್ ಡೇಟಾ ಬಳಕೆಯಲ್ಲಿ ಮಾತ್ರವೇ ಭಾರತ ನಂ.1: ಆದರೆ ಓಕ್ಲಾ ಬಿಚ್ಚಿಟ್ಟ ಸತ್ಯವೇ ಬೇರೆ..!
ದೇಶದಲ್ಲಿ 4G ಸೇವೆಯೂ ಆರಂಭವಾದ ಮೇಲೆ ಜಿಯೋ ಉಚಿತ ಸೇವೆ ಮತ್ತು ಇತರೆ ಕಂಪನಿಗಳಿಂದ ಕಡಿಮೆ ಬೆಲೆಗೆ ವೇಗದ ಡೇಟಾ ಬಳಕೆಗೆ ದೊರೆತ ಹಿನ್ನಲೆಯಲ್ಲಿ ತಿಂಗಳಿಗೆ ಒಂದು GB ಬಳಕೆ ಮಾಡುತ್ತಿದ್ದವರು ದಿನಕ್ಕೊಂದು GB ಡೇಟಾ ಸಾಲುತ್ತಿಲ್ಲ ಎನ್ನಲು ಶುರು ಮಾಡಿದರು. ಈ ಹಿನ್ನಲೆಯಲ್ಲಿ ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತ ನಂಬರ್ 1 ಪಟ್ಟ ಅಲಂಕರಿಸಿತ್ತು.

ಓದಿರಿ: ದಿನಕ್ಕೆ 1GB ಸಾಲುತ್ತಿಲ್ಲವೇ? ಏರ್‌ಟೆಲ್ ಹಾಗೂ ಜಿಯೋದಿಂದ ಪ್ರತಿನಿತ್ಯ 3.5 GB ಡೇಟಾ: ಪಡೆಯವುದು ಹೇಗೆ?
ಆದರೆ ಮೊಬೈಲ್ ಇಂಟರ್ನೆಟ್ ವೇಗದಲ್ಲಿ ಭಾರತಕ್ಕೆ ಸಿಕ್ಕಿರುವ 109ನೇ ಸ್ಥಾನ. ಅಲ್ಲದೇ ಫಿಕ್ಸ್ ಬಾಡ್ರ್ ಬ್ಯಾಂಡ್ ವೇಗದಲ್ಲಿ 76ನೇ ಸ್ಥಾನ ಲಭ್ಯವಾಗಿದೆ. ಈ ಕುರಿತು ವಿವಿಧ ದೇಶಗಳಲ್ಲಿ ಸಮೀಕ್ಷೆ ನಡೆಸಿರುವ ಸ್ಪೀಡ್ ಟೆಸ್ಟರ್ ಸಂಸ್ಥೆ ಈ ಮಾಹಿತಿಯನ್ನು ಬಹಿರಂಗ ಪಡಿಸಿದೆ ಎನ್ನಲಾಗಿದೆ.

ಭಾರತದಲ್ಲಿ ವೇಗ 8.80 Mbps:
ಭಾರತ ಮೊಬೈಲ್ ಡೇಟಾ ಬಳಕೆಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದರೂ ಸಹ ಸರಸರಿ ಮೊಬೈಲ್ ಡೇಟಾ ವೇಗದಲ್ಲಿ ತೀರ ಹಿಂದುಳಿದಿದೆ ಎನ್ನಲಾಗಿದೆ. ಭಾರತದಲ್ಲಿ ಸರಾಸರಿ ಮೊಬೈಲ್ ಡೇಟಾ ವೇಗ 8.80 Mbps ಮಾತ್ರವೇ ಆಗಿದೆ ಎಂದು ಒಕ್ಲಾ ತಿಳಿಸಿದೆ. ಆದರೆ ದಿನದಿಂದ ದಿನಕ್ಕೆ ಇದು ಹೆಚ್ಚಾಗುತ್ತಿದೆ.

ನಾರ್ವೆಗೆ ಮೊದಲ ಸ್ಥಾನ:
ನಾರ್ವೆ ಮೊಬೈಲ್ ಡೇಟಾ ವೇಗದಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದು, ಅಲ್ಲಿ ಮೊಬೈಲ್ ಡೇಟಾ ವೇಗ 62.66 Mbpsನಷ್ಟು ಇದೆ ಎನ್ನಲಾಗಿದೆ. ಅಲ್ಲದೇ ಬ್ರಾಡ್ ಬ್ಯಾಂಡ್ ಸರಾಸರಿ ವೇಗ 153.85 Mbpsನಷ್ಟಿದ್ದು, ಭಾರತದಲ್ಲಿ ಇಷ್ಟು ವೇಗ ಮುಂದಿನ ದಿನಗಳಲ್ಲಿ ಕಾಣುವ ಸಾಧ್ಯತೆ ಇದೆ ಆದರೂ ಸರಾಸರಿ ಇಷ್ಟು ಸಾಧ್ಯವಾಗುವುದಿಲ್ಲ.

ಬೆಳವಣಿಗೆ:
ಭಾರತೀಯ ಮಾರುಕಟ್ಟೆಯಲ್ಲಿ ಮೊಬೈಲ್ ಡೇಟಾ ಬಳಕೆಯೂ ಕಳೆದ ಒಂದು ವರ್ಷದಲ್ಲಿ ಏರಿಕೆಯನ್ನು ಕಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯನ್ನು ಕಾಣಲಿದೆ ಎನ್ನಲಾಗಿದೆ. ಮುಂದಿನ ವರ್ಷದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದಾಗಿದೆ.


Click it and Unblock the Notifications








