ವಿಶ್ವದಲ್ಲೇ ಅತಿ ಹೆಚ್ಚು ಮೊಬೈಲ್ ಡೇಟಾ ಬಳಕೆ ಮಾಡುತ್ತಿದ್ದಾರೆ ಭಾರತೀಯರು!!
ವಿಶ್ವದಲ್ಲೇ ಅತಿ ಹೆಚ್ಚು ಡೇಟಾ ಬಳಕೆ ಮಾರುತ್ತಿರುವ ರಾಷ್ಟ್ರಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ ಎಂದು ಸ್ವೀಡಿಷ್ ಟೆಲಿಕಾಂ ಸಲಕರಣೆಗಳ ತಯಾರಕ ಕಂಪೆನಿ ಎರಿಕ್ಸನ್ ತಿಳಿಸಿದೆ. ಭಾರತದಲ್ಲಿ ತಿಂಗಳಿಗೆ ಸರಾಸರಿ 9.8 ಜಿಬಿ ಡೇಟಾ ಬಳಕೆಯಾಗುತ್ತಿದ್ದು, 2024 ರ ವೇಳೆಗೆ ಇದು 18 ಜಿಬಿಗೆ ದ್ವಿಗುಣಗೊಳ್ಳಲಿದೆ ಎಂದು ತಾನು ಪ್ರಕಟಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ.

ಇದೇ ಬುಧವಾರ ದಿ ಎರಿಕ್ಸನ್ ಮೊಬಿಲಿಟಿ ವರದಿ ಬಿಡುಗಡೆಯಾಗಿದ್ದು, ಜಿಯೋ ಪ್ರವೇಶದಿಂದ ಪ್ರಚೋದಿಸಲ್ಪಟ್ಟ ಭಾರತದ ಟೆಲಿಕಾಂನಲ್ಲಿ ಡೇಟಾ ಬಳಕೆ ಸ್ಫೋಟಗೊಂಡಿದೆ. ಸುಧಾರಿತ ಸ್ಮಾರ್ಟ್‌ಫೋನ್‌ಗಳು, ಕೈಗೆಟುಕುವ ಡೇಟಾ ಯೋಜನೆಗಳು ಹಾಗೂ ವೀಡಿಯೊ ವೀಕ್ಷಣೆ ತೀವ್ರ ಹೆಚ್ಚಳವು ಭಾರತದಲ್ಲಿ ಈ ಬೆಳವಣಿಗೆಯನ್ನು ಪ್ರೇರೇಪಿಸುತ್ತಿದೆ ಎಂದು ಎರಿಕ್ಸನ್ ಹೇಳಿದೆ.
2016 ರಲ್ಲಿ ಜಿಯೋ ಪ್ರವೇಶದ ನಂತರ ಇತರ ಎಲ್ಲ ಟೆಲಿಕಾಂ ಆಪರೇಟರ್‌ಗಳು ಅಗ್ಗದ ದರದಲ್ಲಿ ಡೇಟಾ ಯೋಜನೆಗಳನ್ನು ನೀಡುತ್ತಿವೆ. ಹಾಗಾಗಿ, ಹೆಚ್ಚಿನ ಭಾರತೀಯರು ವೀಡಿಯೊಗಳನ್ನು ಸ್ಟ್ರೀಮಿಂಗ್ ಮಾಡಲು ಸಮಯ ಕಳೆಯುವುದರಿಂದ ಮೊಬೈಲ್ ಡೇಟಾ ದಟ್ಟಣೆ ಬೆಳೆಯುತ್ತಿದೆ. 2024ರ ವೇಳೆಗೆ ಮೊಬೈಲ್ ದಟ್ಟಣೆ ಎರಡು ಪಟ್ಟು ಹೆಚ್ಚಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.

ತಿಂಗಳಿಗೆ ಒಟ್ಟು ಮೊಬೈಲ್ ಡೇಟಾ ದಟ್ಟಣೆ ಶೇ 23% ರಷ್ಟು ಬೆಳೆಯುತ್ತಿದೆ. 2018ರಲ್ಲಿ 4.6 ಎಕ್ಸಬೈಟ್‌ಗಳಿಂದ 2024ರಲ್ಲಿ 16 ಎಕ್ಸಬೈಟ್‌ಗಳಿಗೆ ಡೇಟಾ ಏರಿಕೆಯಾಗಲಿದೆ ಎಂದು ವರದಿ ಮುನ್ಸೂಚನೆ ನೀಡಿದೆ. ಇನ್ನು 2018ರಲ್ಲಿ ಭಾರತದಲ್ಲಿ ಸುಮಾರು 610 ಮಿಲಿಯನ್ ಸ್ಮಾರ್ಟ್‌ಫೋನ್ ಬಳಕೆದಾರರಿದ್ದು, 2024ರ ವೇಳೆಗೆ ಈ ಸಂಖ್ಯೆ 1.1 ಬಿಲಿಯನ್ ತಲುಪಲಿದೆ ಎಂದಿದೆ.
ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಭಾರತೀಯ ಸ್ಮಾರ್ಟ್‌ಫೋನ್ ಬಳಕೆದಾರರು ಭವಿಷ್ಯದ 5ಜಿ ಸೇವೆಗಳಿಗಾಗಿ ಹೆಚ್ಚು ಪಾವತಿಸಲು ಸಿದ್ಧರಿದ್ದಾರೆ ಎಂದು ವರದಿ ಹೇಳಿದೆ. ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಮಾರ್ಟ್ಫೋನ್ ಬಳಕೆದಾರರು ಭವಿಷ್ಯದ 5ಜಿಗಾಗಿ ತಮ್ಮ ಸರಾಸರಿ ಮಾಸಿಕ ಖರ್ಚುಗಿಂತ ಹೆಚ್ಚು ಹಣವನ್ನು ಪಾವತಿಸಲು ತಯಾರಾಗಿದ್ದಾರೆ ಎಂದು ಹೇಳಿದೆ.
ಓದಿರಿ: ಜಪಾನ್ ನಮಗಿಂತ ಹತ್ತಾರು ವರ್ಷಗಳ ಕಾಲ ಮುಂದಿದೆ ಅಂತ ಹೇಳೋದು ಇದಕ್ಕೆ!!


Click it and Unblock the Notifications








