Subscribe to Gizbot

ಪೆಟ್ರೋಲ್ ಬೇಡವೇ ಬೇಡ ಈ ಸ್ಮಾರ್ಟ್‌ ಸ್ಕೂಟರ್ ಓಡಲು..! ವಿಶೇಷತೆ ಏನು..?

Written By:

ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಸುತ್ತಿರುವ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳು ಶೀಘ್ರವೇ ಮರೆಯಾಗಲಿದ್ದು, ಮುಂದಿನ 5 ವರ್ಷಗಳಲ್ಲಿ ರಸ್ತೆ ತುಂಬ ಎಲೆಕ್ಟ್ರಿಕ್ ವಾಹನಗಳೇ ತುಂಬಿರಲಿವೆ. ಇದಕ್ಕೆ ಸಾಕ್ಷಿಯಾಗಿ ಇಂದು ಭಾರತೀಯ ಮಾರುಕಟ್ಟೆಗೆ ಮೊದಲ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ 'ಪ್ಲೋ' ಲಾಂಚ್ ಆಗಿದ್ದು, ಬೇರೆಲ್ಲಾ ಸ್ಕೂಟರ್ ಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಲಿದೆ ಮತ್ತು ಭಿನ್ನವಾಗಿದೆ ಎನ್ನಲಾಗಿದೆ.

ಪೆಟ್ರೋಲ್ ಬೇಡವೇ ಬೇಡ ಈ ಸ್ಮಾರ್ಟ್‌ ಸ್ಕೂಟರ್ ಓಡಲು..! ವಿಶೇಷತೆ ಏನು..?

ಮೊನ್ನೆ ತಾನೇ TVS ಸ್ಮಾರ್ಟ್ ಸ್ಕೂಟರ್ ಲಾಂಚ್ ಮಾಡಿತ್ತು. ಇದೇ ಮಾದರಿಯಲ್ಲಿ ಟ್ವೆಂಟಿ ಟು ಮೋಟರ್ ಪ್ರೈವೆಟ್ ಲಿಮಿಟೆಡ್ ಕಂಪನಿಯೂ ಪ್ಲೋ ಹೆಸರಿನಲ್ಲಿ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. ಈ ಸ್ಮಾರ್ಟ್ ಸ್ಕೂಟರ್ ಕೃತಕ ಬುದ್ದಿ ಮತ್ತೆಯನ್ನು ಹೊಂದಿದ್ದು, ಫುಲ್ ಡಿಜಿಟಲ್ ರೀತಿಯಲ್ಲಿ ಕಾರ್ಯನಿರ್ಹಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಲೋ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್:

ಪ್ಲೋ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್:

ಡಿಸಿ ಮೋಟರ್ ನಲ್ಲಿ ಕಾರ್ಯನಿರ್ಹಿಸುವ ಈ ಪ್ಲೋ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಲಿಥಿಯಮ್ ಬ್ಯಾಟರಿಯನ್ನು ಕಾಣಬಹುದಾಗಿದ್ದು, 5 ಗಂಟೆಗಳ ಕಾಲ ಚಾರ್ಜ್ ಮಾಡಿದರೆ 80 KM ಸವಾರಿ ಮಾಡಬಹುದು ಎನ್ನಲಾಗಿದೆ. ಅದುವೇ 60 KM ವೇಗದಲ್ಲಿ ಸಾಗಬಹುದು. ಪೆಟ್ರೋಲ್ ಗೆ ಗುಡ್ ಬೈ ಹೇಳಬಹುದು.

ಎರಡು ಬ್ಯಾಟರಿ:

ಎರಡು ಬ್ಯಾಟರಿ:

ಇದಲ್ಲದೇ ಎರಡು ಆವೃತ್ತಿಯಲ್ಲಿ ಈ ಪ್ಲೋ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್‌ ದೊರೆಯಲಿದ್ದು, ಟಾಪ್ ಎಂಡ್ ಆವೃತ್ತಿಯಲ್ಲಿ ಎರಡು ಬ್ಯಾಟರಿಯನ್ನು ಕಾಣಬಹುದಾಗಿದೆ. ಗಾಡಿ ಡಿಕ್ಕಿಯಲ್ಲಿ ಎರಡು ಹೆಲ್ಮೆಟ್ ಇಡುವ ಜಾಗವನ್ನು ಮಾಡಿಕೊಡಲಾಗಿದೆ. ಅಲ್ಲದೇ ಇನ್ ಬಿಲ್ಟ್ ಮೊಬೈಲ್ ಚಾರ್ಜರ್ ಅನ್ನು ಕಾಣಬಹುದಾಗಿದ್ದು, ಸುಪರ್ ಸಸ್ಪೆಷನ್ ಹೊಂದಿದೆ.

ಟಚ್ ಡಿಸ್‌ಪ್ಲೇ:

ಟಚ್ ಡಿಸ್‌ಪ್ಲೇ:

ಈ ಪ್ಲೋ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಟಚ್ ಡಿಸ್‌ ಪ್ಲೇ ಯನ್ನು ಕಾಣಬಹುದಾಗಿದ್ದು, ಮೊಬೈಲ್ ಅಪ್ಲಿಕೇಷನ್ ಗಳನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಗಾಡಿಯನ್ನು ಸಂಫೂರ್ಣವಾಗಿ ಇದರಲ್ಲೇ ಕಂಟ್ರೋಲ್ ಮಾಡಬಹುದಾಗಿದೆ.

ಜಿಯೋಗ್ರಾಫಿಕ್:

ಜಿಯೋಗ್ರಾಫಿಕ್:

ಇದಲ್ಲದೇ ಈ ಸ್ಮಾರ್ಟ್ ಸ್ಕೂಟರ್ ನಲ್ಲಿ ಜಿಯೋಗ್ರಾಫಿಕಲ್ ಬೋಡರಿ ಆಯ್ಕೆಯನ್ನು ಸೇವ್ ಮಾಡಿಕೊಳ್ಳಬಹುದಾಗಿದ್ದು, ನಿಮ್ಮ ಜಿಯೋಗ್ರಾಫಿಕಲ್ ಬೋಡರಿಯನ್ನು ದಾಟಿದ ಸಂದರ್ಭದಲ್ಲಿ ಗಾಡಿ ನಿಮ್ಮನ್ನು ಎಚ್ಚರಿಸಲಿದೆ.

ರೆಡ್‌ಮಿ ನೋಟ್ 4 ನಲ್ಲಿರೋ ಈ ಫೀಚರ್ಸ್ ಯಾರೂ ಬಳಸುತ್ತಿಲ್ಲ.!!
ಮೈಲೆಜ್ ಬಗ್ಗೆಯೂ ಮಾಹಿತಿ:

ಮೈಲೆಜ್ ಬಗ್ಗೆಯೂ ಮಾಹಿತಿ:

ಇದಲ್ಲದೇ ಗಾಡಿಯೂ ತುಂಬು ದೂರಕ್ಕೆ ತೆಗೆದು ಕೊಂಡು ಹೋಗುವ ಸಂದರ್ಭದಲ್ಲಿ ಬ್ಯಾಟರಿ ಇನ್ನು ಎಷ್ಟು ದೂರ ಸಾಗಲಿದೆ ಎಂಬುದರ ಬಗ್ಗೆಯೂ ಬಳಕೆದಾರರಿಗೆ ಮಾಹಿತಿಯನ್ನು ನೀಡಲಿದೆ ಎನ್ನಲಾಗಿದೆ.

ಬೆಲೆ:

ಬೆಲೆ:

ಈ ಸಪ್ಲೋ ಸೂಪರ್ ಸ್ಮಾರ್ಟ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ.74,740 ಆಗಲಿದೆ ಎನ್ನಲಾಗಿದ್ದು, ಸುಮಾರು 50000 ಗಾಡಿ ಮಾತ್ರವೇ ಬಿಡುಗಡೆಯಾಗಲಿದ್ದು, ಬೇಡಿಕೆಯನ್ನು ಆಧರಿಸಿ ಪೂರೈಕೆಯನ್ನು ಮಾಡಲಾಗುವುದು ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಓಧಿರಿ: ನಿಮ್ಮ ಆಧಾರ್ ದುರುಪಯೋಗವಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ..?

English summary
India’s First AI-enabled Scooter FLOW launched. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot