India

ನಿಮ್ಮ ಆಧಾರ್ ದುರುಪಯೋಗವಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ..?

|

ಆಧಾರ್ ಕಾರ್ಡ್ ಇಂದು ದೇಶದಲ್ಲಿ ಬಹು ಚರ್ಚಿತ ವಿಷಯವಾಗಿದ್ದು, ಭಾರತ ಸರಕಾರವು ದೇಶದ ಎಲ್ಲಾ ನಾಗರೀಕರು ಆಧಾರ್ ಕಾರ್ಡ್ ಹೊಂದುವುದನ್ನು ಕಡ್ಡಾಯ ಮಾಡಿರುವುದಲ್ಲದೇ ಸರಕಾರಿ ಸೇವೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಇರಲೇ ಬೇಕು ಎಂದಿದೆ. ಇಲ್ಲದೇ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಆಕೌಂಟ್ ನೊಂದಿಗೆ ಆಧಾರ್ ಲಿಂಕ್ ಮಾಡಲೇ ಬೇಕಾಗಿದೆ. ಅಲ್ಲದೇ ಶೀಘ್ರವೇ ಡ್ರೈವಿಂಗ್ ಲೈಸೆನ್ಸ್ ನೊಂದಿಗೂ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಿದೆ.

ನಿಮ್ಮ ಆಧಾರ್ ದುರುಪಯೋಗವಾಗಿದೆಯೇ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ..?

ಈ ರೀತಿಯಲ್ಲಿ ಎಲ್ಲಾ ಕಡೆಗಳಲ್ಲೂ ಆಧಾರ್ ಬಳಕೆ ಮಾಡಿಕೊಳ್ಳುತ್ತಿರುವದರಿಂದ ಆಧಾರ್ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿದ್ದು, ಅನೇಕ ಕಡೆಗಳಲ್ಲಿ ಆಧಾರ್ ಮಾಹಿತಿ ಸೋರಿಕೆಯಾಗಿರುವ ಪ್ರಕರಣಗಳು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಆಧಾರ್ ಕಾರ್ಡ್ ಬಳಕೆದಾರರಿಗೆ ಕೇಂದ್ರ ಸರಕಾರವೂ ಹೊಸದೊಂದು ಆಯ್ಕೆಯನ್ನು ನೀಡಿದ್ದು, ಕಳೆದ ಆರು ತಿಂಗಳಿನಲ್ಲಿ ತಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದನ್ನು ಚೆಕ್ ಮಾಡುವ ಅವಕಾಶ ಮಾಡಿಕೊಟ್ಟಿದೆ. ಇದರಲ್ಲಿ ಯಾವುದಾರು ಕಾರಣದಿಂದ ಆಧಾರ್ ಮಾಹಿತಿ ಮಿಸ್ ಯೂಸ್ ಆಗಿದ್ದರೆ ಆ ಕುರಿತು ದೂರು ಸಹ ದಾಖಲಿಸಬಹುದಾಗಿದೆ.

ಹಂತ 01:

ಹಂತ 01:

ಮೊದಲಿಗೆ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ನಿಮ್ಮ ಜೊತೆಗಿರಬೇಕು. ಕಾರಣ ನಿಮ್ಮ ನಂಬರ್ ಗೆ OTP ಬರಲಿದ್ದು, ಅದನ್ನು ಎಂಟ್ರಿ ಮಾಡಿದರೆ ಮಾತ್ರವೇ ನಿಮ್ಮ ಆಧಾರ್ ಹಿಸ್ಟರಿ ಕಾಣಿಸಿಕೊಳ್ಳಲಿದೆ.

ಹಂತ 02:

ಹಂತ 02:

ಗೂಗಲ್ ನಲ್ಲಿ resident.uidai.gov.in/notification-aadhaar ಎಂದು ಟೈಪ್ ಮಾಡಿ, ನಂತರದ ಸರ್ಚ್ ನಲ್ಲಿ ಬಂದ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.

ಹಂತ 03:

ಹಂತ 03:

ನಂತರದಲ್ಲಿ ಓಪನ್ ಆಗುವ ವೆಬ್ ಸೈಟಿನಲ್ಲಿ ನಿಮ್ಮ ಆಧಾರ ಕಾರ್ಡ್ ಸಂಖ್ಯೆಯನ್ನು ದಾಖಲಿಸಿರಿ, ಇದಾದ ನಂತರದಲ್ಲಿ ನಾಲ್ಕು ಅಂಕೆಗಳ ಸೆಕ್ಯೂರಿಟಿ ಕೋಡ್ ಅನ್ನು ದಾಖಲಿಸಿ OTP ಜನರೆಟ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 04:

ಹಂತ 04:

ನಿಮ್ಮ ನೊಂದಾಯಿತ ಮೊಬೈಲ್ ನಂಬರ್‌ ಗೆ OTP ಬರಲಿದೆ.

How to find out where you can get your Aadhaar card done (KANNADA)
ಹಂತ 05:

ಹಂತ 05:

ನಂತರ ಮತ್ತೊಂದು ಪೇಜ್ ಓಪನ್ ಆಗಲಿದ್ದು, ಅದರಲ್ಲಿ ನಿಮಗೆ ಯಾವ ಮಾಹಿತಿ ಬೇಕೆಂದು ಕೇಳುತ್ತದೆ ಮೊದಲ ಬಾಕ್ಸ್ ನಲ್ಲಿ ಆಲ್ ಸೆಲೆಕ್ಟ್ ಮಾಡಿಕೊಳ್ಳಿ, ನಂತರದಲ್ಲಿ ಎಷ್ಟು ದಿನಗಳ ಅವಧಿಯ ಮಾಹಿತಿ ಬೇಕು ಎನ್ನುವುದಕ್ಕೆ ಡೇಟ್ ಸೆಲೆಕ್ಟ್ ಮಾಡಿಕೊಳ್ಳಿ ಮತ್ತು ಎಷ್ಟು ದಾಖಲೆಗಳು ಬೇಕು ಎನ್ನುವ ಬಾಕ್ಸ್ ನಲ್ಲಿ 50 ಎಂದು ಸೆಲೆಕ್ಟ್ ಮಾಡಿ. ಕೊನೆಯಲ್ಲಿ OTP ದಾಖಲಿಸಿ ಸಬಿಟ್ ಬಟನ್ ಕ್ಲಿಕ್ ಮಾಡಿರಿ.

ಹಂತ 06:

ಹಂತ 06:

ಇದಾದ ನಂತರದಲ್ಲಿ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗಿದೆ ಎಂಬುದರ ಕುರಿತು ಸಂಫೂರ್ಣ ಮಾಹಿತಿಯೂ ನಿಮಗೆ ದೊರೆಯಲಿದೆ. ಇದರಲ್ಲಿ ಯಾವುದಾರರು ನಿಮ್ಮ ಗಮನಕ್ಕೆ ಬಾರೆದೆ ನಡೆದಿದ್ದರೇ ನೀವು ದೂರು ಸಹ ನೀಡಬಹುದಾಗಿದೆ.

Most Read Articles
Best Mobiles in India

English summary
where your Aadhaar card has been used in the last six months. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X